Subscribe to Gizbot

ವಿಶ್ವದಲ್ಲೇ ಬಳಕೆದಾರರಿಗೆ ವಾಟ್ಸಾಪ್ ಅತಿಮೆಚ್ಚು: ಇಲ್ಲಿದೆ ಕಾರಣ

Written By:

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗಾಗಿ ವಾಟ್ಸಾಪ್ ಇತ್ತೀಚೆಗೆ ತಾನೇ ಹೊಸ ಹೊಸ ಫೀಚರ್ ಅನ್ನು ಬಿಡುಗಡೆ ಮಾಡಿದೆ. ಈ ಅಪ್‌ಡೇಟ್‌ಗಳು ಇನ್ನೂ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿಲ್ಲ ಅದಾಗ್ಯೂ ಕಂಪೆನಿಯ ವೆಬ್‌ಸೈಟ್‌ನಲ್ಲಿ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು

ಓದಿರಿ: ವಾಟ್ಸಾಪ್‌ನಲ್ಲಿ ಸಂಪರ್ಕ ನಿರ್ಬಂಧಿಸಲು ಇಲ್ಲಿದೆ ಟ್ರಿಕ್ಸ್

ಇಂದಿನ ಲೇಖನದಲ್ಲಿ ಅತಿ ಪ್ರಮುಖವಾಗಿರುವ ಆ ವೈಶಿಷ್ಟ್ಯತೆಗಳು ಏನು ಎಂಬುದನ್ನು ನೀವು ನೋಡಲಿರುವಿರಿ ಈ ಹೊಸ ಅಪ್‌ಡೇಟ್‌ಗಳು ಖಂಡಿತ ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದೆನಿಸಿದ್ದು ವಾಟ್ಸಾಪ್ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸುವಲ್ಲಿ ಇದು ನೆರವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅನ್‌ರೀಡ್‌ನಂತೆ ಮಾರ್ಕ್ ಮಾಡುವುದು
  

ಮುಂಬರಲಿರುವ ಹೊಸ ಅಪ್‌ಡೇಟ್ ಪ್ರಕಾರ, ಆಂಡ್ರಾಯ್ಡ್ ಬಳಕೆದಾರರು ಸಂದೇಶಗಳನ್ನು ಓದಿದ ನಂತರವೂ ಅವನ್ನು ಮಾರ್ಕ್ ಮಾಡಲು ಸಾಧ್ಯವಾಗುತ್ತದೆ. ನೀವು ಸಂದೇಶವನ್ನು ಓದದೇ ಇದ್ದರೂ ನಿಮಗೆ ಕಳುಹಿಸಿರುವವರಿಗೆ ನೀವು ಸಂದೇಶವನ್ನು ಓದಿದ್ದೀರಿ ಎಂಬುದೇ ತಿಳಿಯುತ್ತದೆ.

ಕಸ್ಟಮ್ ಅಧಿಸೂಚನೆಗಳು
  

ವಾಟ್ಸಾಪ್ ಬಹಳಷ್ಟು ಕಸ್ಟಮ್ ಅಧಿಸೂಚನೆಗಳನ್ನು ನಿಮ್ಮ ಮುಂದೆ ತರಲಿದೆ. ಸಂಪರ್ಕಕ್ಕಾಗಿ ನಿರ್ದಿಷ್ಟ ರಿಂಗ್‌ಟೋನ್ ಅನ್ನು ನೀವು ಹೊಂದಿಸಿದಲ್ಲಿ, ನಿಮ್ಮ ಪ್ಲೇಲಿಸ್ಟ್‌ನಿಂದ ಯಾವುದೇ ಹಾಡನ್ನು ನಿಮಗೆ ಆಯ್ಕೆಮಾಡಬಹುದು. ಇದರಿಂದ ಆ ನಿರ್ದಿಷ್ಟ ವ್ಯಕ್ತಿಯಿಂದಲೇ ನಿಮಗೆ ಕರೆ ಇಲ್ಲವೇ ಸಂದೇಶ ಬಂದಿದೆ ಎಂಬುದು ತಿಳಿಯುತ್ತದೆ.

ಇಂಡಿವಿಶುವಲ್ ಸಂಪರ್ಕಗಳನ್ನು ಮ್ಯೂಟ್ ಮಾಡುವುದು
  

ಪ್ರಸ್ತುತ ನೀವು ಬಹು ಗುಂಪುಗಳನ್ನು ಮಾತ್ರ ಮ್ಯೂಟ್ ಮಾಡಬಹುದು. ಅದರೆ ಮುಂದಿನ ನವೀಕರಣದಲ್ಲಿ ವೈಯಕ್ತಿಕ ಸಂಪರ್ಕಗಳನ್ನು ನಿಮಗೆ ಮ್ಯೂಟ್ ಮಾಡಬಹುದಾಗಿದೆ. ನಿಮ್ಮ ಸಂಪರ್ಕ ಪಟ್ಟಿಯಲ್ಲಿರುವ ಯಾವುದೇ ವ್ಯಕ್ತಿಯನ್ನು ನಿಮಗೆ ಮ್ಯೂಟ್ ಮಾಡಬೇಕು ಎಂದಾದಲ್ಲಿ, ಅಬೌಟ್ ಮೆನುವಿನಲ್ಲಿ ಮ್ಯೂಟ್ ಬಾರ್ ಪರಿಶೀಲಿಸಿ.

ವಾಟ್ಸಾಪ್ ಕರೆಗಳಲ್ಲಿ ಕಡಿಮೆ ಡೇಟಾ ಬಳಕೆ
  

ಹೆಚ್ಚಿನ ವಾಟ್ಸಾಪ್ ಕರೆಗಳು ಮತ್ತು ಡೇಟಾ ಬಳಕೆಯನ್ನು ಮಿತಿಗೊಳಿಸಬೇಕು ಎಂದಾದಲ್ಲಿ, ಆ ಉದ್ದೇಶಕ್ಕಾಗಿ ವಾಟ್ಸಾಪ್ ಹೊಸ ಆಯ್ಕೆಯನ್ನು ಅಪ್ಲಿಕೇಶನ್‌ನಲ್ಲಿ ಸೇರಿಸಿದೆ. ಕರೆಗಳು ಮತ್ತು ಚಾಟ್ ಮೆನು ಸೆಟ್ಟಿಂಗ್ಸ್‌ನಲ್ಲಿ ಸ್ಕ್ರಾಲ್‌ನ ಕೆಳಭಾಗದಲ್ಲಿ ಲೊ ಡೇಟಾ ಯೂಸೇಜ್ ಎಂಬ ಹೊಸ ಆಯ್ಕೆಯನ್ನು ನಿಮಗೆ ಕಾಣಬಹುದು.

ಗೂಗಲ್ ಡ್ರೈವ್ ಇಂಟಿಗ್ರೇಶನ್
  

ನಿಮ್ಮೆಲ್ಲಾ ಗೂಗಲ್ ಖಾತೆಗಳನ್ನು ಬ್ಯಾಕಪ್ ಮಾಡುವ ಹೊಸ ವೈಶಿಷ್ಟ್ಯತೆ ವಾಟ್ಸಾಪ್‌ನಲ್ಲಿ ಬರಲಿದೆ. ಸೆಟ್ಟಿಂಗ್ಸ್‌ನಲ್ಲಿ ಖಾತೆ ಆಯ್ಕೆಗೆ ಹೋಗಿ ಮತ್ತು ನೆಟ್‌ವರ್ಕ್ ಮೆನು ಬಳಕೆ ಆಯ್ಕೆಗಳನ್ನು ನೀವು ಕಾಣುತ್ತೀರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Here we can learn some updates from whatsapp which have been rolled out newly.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot