ಮೈಸೂರಿನ 13 ಸ್ಥಳಗಳಿಗೆ ಬಿಎಸ್‌ಎನ್‌ಎಲ್ ವೈಫೈ

By Shwetha
|

ಇಂದಿನ ಆಧುನಿಕ ಜಗತ್ತಿನಲ್ಲಿ ಇಂಟರ್ನೆಟ್ ಸಂಪರ್ಕವು ನಮ್ಮನ್ನು ಟೆಕ್ ಲೋಕಕ್ಕೆ ಹೆಚ್ಚು ಹತ್ತಿರವಾಗಿಸುತ್ತಿದೆ ಮಾಹಿತಿ ಪಡೆಯುವಿಕೆ, ಹೊಸ ವಿಷಯಗಳ ಅನ್ವೇಷಣೆ, ಹೊಸ ಸ್ನೇಹಿತರ ಸಂಪರ್ಕ, ವಿಷಯದ ಬಗ್ಗೆ ಆಳವಾದ ಮಾಹಿತಿ ಹೀಗೆ ಒಂದಿಲ್ಲೊಂದು ರೀತಿಯಿಂದ ಇಂದಿನ ಇಂಟರ್ನೆಟ್ ಲೋಕ ನಮ್ಮನ್ನು ಜ್ಞಾನಿಗಳನ್ನಾಗಿಸುತ್ತಿದೆ. ಅಂತೆಯೇ ಸರಕಾರ, ಸಹಕಾರಿ ಸಂಸ್ಥೆಗಳು ಕೂಡ ಇಂಟರ್ನೆಟ್ ವ್ಯವಸ್ಥೆಯನ್ನು ಇನ್ನಷ್ಟು ಸರಳವಾಗಿಸುವ ಹಲವಾರು ಮಾರ್ಗೋಪಾಯಗಳನ್ನು ಜನಸಾಮಾನ್ಯರಿಗೆ ಒದಗಿಸುತ್ತಿದೆ.

ಓದಿರಿ: ನೀವು ಎಲ್ಲಿದ್ದರೂ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ?

ಅಂತಹುದೇ ಸವಲತ್ತು ವೈಫೈಯಿಂದ ನಮಗೆ ದೊರಕುತ್ತಿದೆ. ಹೆಚ್ಚಿನ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ವೈಫೈ ಸವಲತ್ತನ್ನು ಸರಕಾರ ಇಂದು ನೀಡುತ್ತಿದೆ. ಮೈಸೂರಿನ ಹದಿಮೂರು ಪ್ರದೇಶಗಳಲ್ಲಿ ಶೀಘ್ರದಲ್ಲೇ ಉಚಿತ ವೈಫೈ ಸವಲತ್ತನ್ನು ಒದಗಿಸಲಾಗುತ್ತಿದ್ದು ಇದರ ಹಿಂದೆ ಬಿಎಸ್‌ಎನ್‌ಎಲ್ ಕಾರ್ಯನಿರ್ವಹಿಸುತ್ತಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಕುರಿತು ಮತ್ತಷ್ಟು ಮಾಹಿತಿಗಳನ್ನು ಪಡೆದುಕೊಳ್ಳೋಣ.

112 ಸ್ಥಳ

112 ಸ್ಥಳ

ಈ ಸೇವೆಯನ್ನು ರಾಜ್ಯದ 112 ಸ್ಥಳಗಳಲ್ಲಿ ಈಗಾಗಲೇ ಲಾಂಚ್ ಮಾಡಲಾಗಿದ್ದು, ಪ್ರವಾಸೀ ಕೇಂದ್ರಗಳು ಮತ್ತು ಕಾಲೇಜುಗಳು ಇದರಲ್ಲಿ ಸೇರಿದೆ.

ಜನರ ಮತ್ತು ಸರಕಾರದ ನಡುವೆ ಉತ್ತಮ ಬಾಂಧವ್ಯ

ಜನರ ಮತ್ತು ಸರಕಾರದ ನಡುವೆ ಉತ್ತಮ ಬಾಂಧವ್ಯ

ಈ ವರ್ಷದ ಮಾರ್ಚ್ ಒಳಗಾಗಿ 5,631 ಗ್ರಾಮ ಪಂಚಾಯತ್‌ಗಳು ಇಂಟರ್ನೆಟ್ ಸೌಲಭ್ಯವನ್ನು ಪಡೆದುಕೊಳ್ಳಲಿದ್ದು, ಜನರ ಮತ್ತು ಸರಕಾರದ ನಡುವೆ ಉತ್ತಮ ಬಾಂಧವ್ಯವನ್ನು ಈ ವ್ಯವಸ್ಥೆ ಗಟ್ಟಿ ಮಾಡಲಿದೆ.

ಡಿಜಿಟಲ್ ಇಂಡಿಯಾ

ಡಿಜಿಟಲ್ ಇಂಡಿಯಾ

ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಈ ಯೋಜನೆಯನ್ನು ತೆಗೆದುಕೊಳ್ಳಲಾಗಿದ್ದು ಇನ್ನು ಕೇಂದ್ರದ ನೆರವನ್ನು ಈ ಯೋಜನೆಗೆ ಪಡೆದುಕೊಳ್ಳಬಹುದಾಗಿದೆ.

2260 ಜಿಪಿಎಸ್‌

2260 ಜಿಪಿಎಸ್‌

ಈಗಾಗಲೇ 2260 ಜಿಪಿಎಸ್‌ಗಳನ್ನು ಕವರ್ ಮಾಡಲಾಗಿದ್ದು ಮೈಸೂರು ವಲಯದಲ್ಲಿ ಮಾತ್ರವೇ 354 ಜಿಪಿಎಸ್‌ಗಳನ್ನು ಅಳವಡಿಸಲಾಗಿದೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳು ಇದರಲ್ಲಿ ಸೇರಿಕೊಂಡಿವೆ.

ವೈಫೈ ಸೌಲಭ್ಯ

ವೈಫೈ ಸೌಲಭ್ಯ

ಮೈಸುರು ಜೂ, ಅಂಬಾ ವಿಲಾಸಾ ಪ್ಯಾಲೇಸ್, ಡಿ ದೇವರಾಜ ಅರಸ್ ರೋಡ್, ಬಸ್ಸು ನಿಲ್ದಾಣ, ಲಾ ಕೋರ್ಟ್ಸ್ ಕಾಂಪ್ಲೆಕ್ಸ್ ವೈಫೈ ಸೌಲಭ್ಯಕ್ಕೆ ಆಯ್ಕೆಯಾಗಿರುವ ಪ್ರದೇಶಗಳಾಗಿವೆ.

ಯೋಜನೆಯ ಆರಂಭ

ಯೋಜನೆಯ ಆರಂಭ

ಯೋಜನೆಯ ಆರಂಭ ಎಂಬಂತೆ 11,000 ಕಿಮೀ ಕೇಬಲ್‌ಗಳನ್ನು ಅಳವಡಿಸಲಾಗಿದೆ ಇನ್ನುಳಿದಂತೆ 60,000 ಕೇಬಲ್‌ಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ ಎಂಬುದಾಗಿ ಮೈಸೂರು ಜಿಲ್ಲಾ ಟೆಲಿಕಾಮ್ ಮ್ಯಾನೇಜರ್ ಕೆ.ಎಲ್ ಜಯರಾಮ್ ತಿಳಿಸಿದ್ದಾರೆ.

ಜನರ ಬೇಡಿಕೆ

ಜನರ ಬೇಡಿಕೆ

ಜನರ ಬೇಡಿಕೆಯಂತೆ ಧ್ವನಿ ಸಂವಹನಕ್ಕೂ ಮಿಗಿಲಾಗಿ ಡೇಟಾ ಸಂವಹನಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದ್ದು ಬಿಎಸ್‌ಎನ್‌ಎಲ್ ಹೆಚ್ಚು ವೇಗದಲ್ಲಿ ಇಂಟರ್ನೆಟ್ ವ್ಯವಸ್ಥೆಯನ್ನು ನಾಗರೀಕರಿಗೆ ಒದಗಿಸುವ ಪಣ ತೊಟ್ಟಿದೆ ಎಂಬುದಾಗಿ ಜಯರಾಮ್ ಹೇಳಿಕೆ ನೀಡಿದ್ದಾರೆ.

10 ಶೇಕಡಾ

10 ಶೇಕಡಾ

ಸೆಲ್ಯುಲಾರ್ ಸರ್ವೀಸ್ ಮಾರುಕಟ್ಟೆ ಷೇರಿನಲ್ಲಿ 10 ಶೇಕಡಾವನ್ನು ಬಿಎಸ್ಎನ್ಎಲ್ ಪಡೆದುಕೊಂಡಿದ್ದು, ದೇಶಾದ್ಯಂತ ಮೂರನೇ ಸರ್ವೀಸ್ ಪ್ರೊವೈಡರ್ ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡಿದೆ.

Best Mobiles in India

English summary
With the increase in netizens, wi-fi services may be launched in prominent places, including tourist spots in Mysuru.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X