ಫೇಸ್‌ಬುಕ್ ಬಳಸಿ ಚೆನ್ನೈಗೆ ಆಸರೆಯಾದ ಬೆಂಗಳೂರ ಹುಡುಗ

By Shwetha
|

ಚೆನ್ನೈಯಲ್ಲಿ ನಡೆದ ಜಲಪ್ರವಾಹ ದುರಂತ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಜಲಾವೃತಗೊಂಡಿರುವ ಅವರುಗಳ ಜೀವನ ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ಬೇರೆ ಬೇರೆ ದೇಶಗಳಿಂದ ಸಹಾಯ ಇವರನ್ನು ಹುಡುಕೊಂಡು ಬರುತ್ತಿದೆ ಅಂತೆಯೇ ಸಾಮಾಜಿಕ ತಾಣ ಕೂಡ ಚೆನ್ನೈ ಜನರ ಪಾಲಿಗೆ ಅಭಯಹಸ್ತವನ್ನು ಚಾಚಿದೆ.

ಓದಿರಿ:ಎಚ್ಚರ! ನಿಮ್ಮ ಫೇಸ್‌ಬುಕ್‌ ಮೇಲು ಹದ್ದಿನ ಕಣ್ಣು

ಸಿಲಿಕಾನ್ ಸಿಟಿ ಬೆಂಗಳೂರು ಕೂಡ ತನ್ನ ನೆರೆಯ ಚೆನ್ನೈಗೆ ಮುಕ್ತ ಹಸ್ತದಿಂದ ಸಹಾಯವನ್ನು ಮಾಡುತ್ತಿದೆ. ಐಟಿ ಬಿಟಿ ಕಂಪೆನಿಗಳು, ಸಣ್ಣ ಸಣ್ಣ ಸಂಸ್ಥೆಗಳು, ಶಾಲಾ ಕಾಲೇಜು ಸಮೂಹ ಸಂಸ್ಥೆಗಳು ಹೀಗೆ ತಮ್ಮಿಂದ ಸಾಧ್ಯವಾದಷ್ಟು ಸಹಾಯವನ್ನು ಚೆನ್ನೈ ನಿರಾಶ್ರಿತರಿಗಾಗಿ ಮಾಡುತ್ತಿದ್ದಾರೆ. ಆದರೆ ಇಂದಿನ ಲೇಖನದಲ್ಲಿ ಬೆಂಗಳೂರಿನ ನಿವಾಸಿಯೊಬ್ಬರು ಚೆನ್ನೈ ನೆರೆಗೆ ವಿಭಿನ್ನ ರೀತಿಯಲ್ಲಿ ತಮ್ಮ ಸಹಾಯ ಹಸ್ತವನ್ನು ಚಾಚಿದ್ದು ಅದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.

ಬೆಂಗಳೂರಿನ ನಿವಾಸಿ

ಬೆಂಗಳೂರಿನ ನಿವಾಸಿ

ಬೆಂಗಳೂರಿನ ನಿವಾಸಿಯಾಗಿರುವ ರಾಮ್ ಕಶ್ಯಪ್ ಧೈರ್ಯದಿಂದ ಮುನ್ನುಗ್ಗಿ ಚೆನ್ನೈಗೆ ನೆರವನ್ನು ನೀಡಿದ್ದಾರೆ. ಬೆಂಗಳೂರು ಮತ್ತು ಚೆನ್ನೈ ನಡುವೆ ನೆರವಿನ ಕೊಂಡಿಯಂತೆ ಪಾತ್ರವಹಿಸುವ ಹೊಣೆಗಾರಿಕೆಯ ಕೆಲಸವನ್ನು ಇವರು ಹೊತ್ತಿದ್ದಾರೆ.

ತಮ್ಮ ಪ್ರಥಮ ಪ್ರವಾಸ

ತಮ್ಮ ಪ್ರಥಮ ಪ್ರವಾಸ

ತಮ್ಮ ಪ್ರಥಮ ಪ್ರವಾಸವನ್ನು ಡಿಸೆಂಬರ್ 3 ರಿಂದ ಆರಂಭಿಸಿದ ಇವರು ಆಹಾರ ಸಾಮಾಗ್ರಿಗಳು, ಪೇಪರ್ ಕಪ್‌ಗಳು, ಪಾತ್ರೆಗಳು, ರೈನ್ ಕೋಟ್, ಕೊಡೆ ಮೊದಲಾದವನ್ನು ಸಂಗ್ರಹಿಸಿಕೊಂಡು ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ. ರಾಮ್ ಈ ವಸ್ತುಗಳ ಸಂಗ್ರಹಕ್ಕಾಗಿ ತಮ್ಮ ಫೇಸ್‌ಬುಕ್ ಅನ್ನು ಬಳಸಿಕೊಂಡಿದ್ದು ಅದರಲ್ಲಿ ಪೋಸ್ಟ್‌ಗಳನ್ನು ದಾಖಲಿಸುವ ಮೂಲಕ ಜನರನ್ನು ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.

14 ಸ್ಥಳ

14 ಸ್ಥಳ

ತಮ್ಮ ಸ್ನೇಹಿತರ ಜೊತೆಗೂಡಿ 14 ಸ್ಥಳಗಳನ್ನು ಬೆಂಗಳೂರಿನಲ್ಲಿ ನಿಗದಿಪಡಿಸಿ ದಾನಿಗಳಿಗೆ ತಮ್ಮಿಂದಾದ ಸಹಾಯವನ್ನು ಈ ಸ್ಥಳಗಳಿಗೆ ನೀಡುವುದಕ್ಕೆ ನೆರವಾಗಿ ಚೆನ್ನೈ ಸಹಾಯದ ಅಭಿಯಾನವನ್ನು ಆರಂಭಿಸಿದ್ದಾರೆ.

ಸಂಗ್ರಹಣೆ

ಸಂಗ್ರಹಣೆ

ತಮ್ಮ ಸಂಗ್ರಹಣೆ ತಾವು ಯೋಜಿಸಿರುವ ಮಟ್ಟವನ್ನು ತಲುಪಿತ್ತಿದೆ ಎಂಬುದನ್ನು ಅರಿತ ಕೂಡಲೇ ಇವರು ಚೆನ್ನೈಗೆ ಹೋಗುವ ಪ್ರಯಾಣವನ್ನು ಆರಂಭಿಸಿದ್ದು ಫೇಸ್‌ಬುಕ್‌ನಲ್ಲಿ ಇದನ್ನು ಕುರಿತು ವಿವರವಾಗಿ ದಾಖಲಿಸುತ್ತಿದ್ದರು.

ಫೇಸ್‌ಬುಕ್ ಪೋಸ್ಟ್

ಫೇಸ್‌ಬುಕ್ ಪೋಸ್ಟ್

ಇವರ ಫೇಸ್‌ಬುಕ್ ಪೋಸ್ಟ್ 1,200 ಗಿಂತಲೂ ಹೆಚ್ಚಿನ ಬೆಂಗಳೂರು ವಾಸಿಗಳನ್ನು ತಲುಪಿದೆ ಅಂತೆಯೇ 250 ಕ್ಕಿಂತಲೂ ಹೆಚ್ಚಿನ ದಾನಿಗಳು ಮತ್ತು ಸ್ವಯಂಸೇವಕರು ಇವರ ನೆರವಿಗಾಗಿ ಧಾವಿಸಿ ಇವರೊಂದಿಗೆ ಚೆನ್ನೈ ಸಂತ್ರಸ್ಥರಿಗೆ ನೆರವಾಗುವ ಕಾಯಕದಲ್ಲಿ ಕೈ ಜೋಡಿಸಿದ್ದಾರೆ.

ಫೇಸ್‌ಬುಕ್ ಶೇರ್‌

ಫೇಸ್‌ಬುಕ್ ಶೇರ್‌

1500 ಕರೆಗಳು, 2500 ಫೇಸ್‌ಬುಕ್ ಶೇರ್‌ಗಳು ಮತ್ತು ನೂರಕ್ಕಿಂತಲೂ ಹೆಚ್ಚಿನ ದಾನಿಗಳನ್ನು ಫೇಸ್‌ಬುಕ್ ದಯಪಾಲಿಸಿರುವುದಾಗಿ ರಾಮ್ ಬರೆದುಕೊಂಡಿದ್ದಾರೆ.

ಯಶಸ್ವಿಯಾಗಿ ತಲುಪಿಸಿದ್ದಾರೆ

ಯಶಸ್ವಿಯಾಗಿ ತಲುಪಿಸಿದ್ದಾರೆ

ಚೆನ್ನೈಗೆ ಈ ಎಲ್ಲಾ ವಸ್ತುಗಳನ್ನು ಇವರು ಯಶಸ್ವಿಯಾಗಿ ತಲುಪಿಸಿದ್ದಾರೆ. ಅದನ್ನು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು ಬೆಂಗಳೂರಿನ ಮಾನವೀಯ ಹೃದಯಕ್ಕೆ ನಾನು ತಲೆಬಾಗುತ್ತಿದ್ದೇನೆ ಎಂಬುದಾಗಿ ವಾಲ್‌ನಲ್ಲಿ ಬರೆದುಕೊಂಡಿದ್ದಾರೆ.

ಬ್ಯಾಂಕ್ ಖಾತೆ ವಿವರ

ಬ್ಯಾಂಕ್ ಖಾತೆ ವಿವರ

ತಮ್ಮ ಬ್ಯಾಂಕ್ ಖಾತೆ ವಿವರಗಳ ಮಾಹಿತಿಯನ್ನು ಫೇಸ್‌ಬುಕ್‌ನಲ್ಲಿ ರಾಮ್ ಪೋಸ್ಟ್ ಮಾಡಿದ್ದು, ನೆರವನ್ನು ನೀಡುವವರು ಈ ಖಾತೆಯನ್ನು ಬಳಸಿಕೊಂಡು ಧನ ಸಹಾಯನ್ನು ಮಾಡಬಹುದಾಗಿದೆ.

Best Mobiles in India

English summary
While people stranded in Chennai are helping each other as much as they can, good Samaritans in other parts of the country are also trying to help the city in their own ways. Ram Kashyap, a resident of Bangalore, is one among them, and he is doing something that not many would dare to do.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X