ಬ್ಯಾಂಕ್‌ ಹೆಸರಲ್ಲಿ ಬಂದ SMS ನಲ್ಲಿನ ಲಿಂಕ್‌ ಕ್ಲಿಕ್‌ ಮಾಡಿದ ಮಹಿಳೆ; ಮುಂದಾಗಿದ್ದೇನು?

|

ಸೈಬರ್‌ ಅಪರಾಧ ಪ್ರಕರಣಕ್ಕೆ ಕೊನೆ ಇಲ್ಲ ಎಂಬಂತಾಗಿದೆ. ಇದಕ್ಕೆ ನಿದರ್ಶನವಾಗಿ ಪ್ರತಿನಿತ್ಯವೂ ಹಲವು ಕಡೆ ವಿವಿಧ ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದರ ನಡುವೆ ಮಹಿಳೆಯೋರ್ವರು ತಮ್ಮ ಮೊಬೈಲ್‌ಗೆ ಬಂದ ಎಸ್‌ಎಮ್‌ಎಸ್‌ ನೋಡಿ ಗಾಬರಿಗೊಂಡಿದ್ದಾರೆ. ಹಾಗೆಯೇ ಈ ಮೂಲಕ ಕಿರಾತಕರ ಬಲೆಗೆ ಬಿದ್ದ ಮಹಿಳೆ ಕೂಡಿಟ್ಟಿದ್ದ ಹಣ ಕಳೆದುಕೊಂಡಿದ್ದಾರೆ.

ಬ್ಯಾಂಕ್‌ ಹೆಸರಲ್ಲಿ ಬಂದ ಎಸ್‌ಎಮ್‌ಎಸ್‌ನಲ್ಲಿನ ಲಿಂಕ್‌ ಕ್ಲಿಕ್‌ ಮಾಡಿದ ಮಹಿಳೆ!

ಹೌದು, ಅಮಾಯಕರು ಹಾಗೂ ಅನಕ್ಷರಸ್ಥರನ್ನೇ ಟಾರ್ಗೆಟ್‌ ಮಾಡಿ ಮೋಸ ಮಾಡುತ್ತಿರುವ ಸೈಬರ್‌ ಅಪರಾಧಿಗಳು ಇಲ್ಲೋರ್ವ ಮಹಿಳೆಗೆ ಬ್ಯಾಂಕ್‌ ಖಾತೆ ಹೆಸರಲ್ಲಿ ಪಂಗನಾಮ ಹಾಕಿದ್ದಾರೆ. ಹಾಗಿದ್ರೆ, ಯಾವ ರಾಜ್ಯದಲ್ಲಿ ಈ ಘಟನೆ ಜರುಗಿದೆ. ಇದರಿಂದ ನೀವು ಹೇಗೆ ಎಚ್ಚರಿಕೆ ವಹಿಸಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಸೈಬರ್‌ ಅಪರಾಧ ವಿಭಾಗವನ್ನು ಕಡಿಮೆ ಮಾಡಲು ಓಟಿಟಿ ಹಾಗೂ ಎರಡೂ ಹಂತದ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದರೂ ಸಹ ವಂಚಕರು ಇದ್ಯಾವುದಕ್ಕೂ ಜಗ್ಗದೆ ಸುಲಭವಾಗಿ ಜನರಿಂದ ಹಣ ದೋಚುತ್ತಿದ್ದಾರೆ. ಅದರಂತೆ ಗುರುಗ್ರಾಮ್‌ನ ಡಿಎಲ್‌ಎಫ್ ಹಂತ 5 ರ ನಿವಾಸಿ ಮಾಧ್ವಿ ದತ್ತಾ ಅವರಿಗೆ ಕಿರಾತಕರು 1 ಲಕ್ಷ ರೂಪಾಯಿ ವಂಚಿಸಿದ್ದಾರೆ.

ಏನೆಂದು ಮೆಸೆಜ್ ಬಂದಿತ್ತು?
ಸಂತ್ರಸ್ತೆ ಫೋನ್‌ಗೆ ಜನವರಿ 21 ರಂದು, ಆತ್ಮೀಯ ಬಳಕೆದಾರರೇ ಇಂದು ನಿಮ್ಮ ಎಚ್‌ಡಿಎಫ್‌ಸಿ ಖಾತೆಯನ್ನು ನಿರ್ಬಂಧಿಸಲಾಗುತ್ತದೆ, ಹೀಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಎಂದು ತಿಳಿಸಲಾಗಿತ್ತು. ಇದರಿಂದ ಬೆಚ್ಚಿದ ಮಹಿಳೆ ಹೇಗಾದರೂ ತನ್ನ ಅಕೌಂಟ್‌ ನಿರ್ಬಂಧ ಆಗುವುದನ್ನು ತಡೆಯಬೇಕು ಎಂದು ಆ ಲಿಂಕ್‌ ಕ್ಲಿಕ್ ಮಾಡಿದ್ದಾರೆ.

ಇನ್ನು ಬ್ಯಾಂಕ್ ನೋಟಿಫಿಕೇಶನ್ ಎಂದು ಭಾವಿಸಿ ಲಿಂಕ್‌ ಮಾಡಲಾದ ಕ್ಲಿಕ್ ಆಕೆಯನ್ನು ಯಾವುದೋ ಬೇರೆ ವೆಬ್‌ಪು ಟಕ್ಕೆ ಕರೆದೊಯ್ಯಲಾಗಿದೆ. ಅಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಮಹಿಳೆ ಫೀಡ್ ಮಾಡಿದ್ದಾರೆ. ಇದಾದ ನಂತರ ಪಾನ್‌ ಕಾರ್ಡ್‌ ಮತ್ತು ಮೊಬೈಲ್ ಲಿಂಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತಮ್ಮ ಫೋನ್‌ನಲ್ಲಿ ಸ್ವೀಕರಿಸಿದ ಓಟಿಪಿಯನ್ನೂ ನಮೂದಿಸಿದ್ದಾರೆ.

ಬ್ಯಾಂಕ್‌ ಹೆಸರಲ್ಲಿ ಬಂದ ಎಸ್‌ಎಮ್‌ಎಸ್‌ನಲ್ಲಿನ ಲಿಂಕ್‌ ಕ್ಲಿಕ್‌ ಮಾಡಿದ ಮಹಿಳೆ!

ಕೆಲವೇ ಕ್ಷಣದಲ್ಲಿ 1 ಲಕ್ಷ ರೂ. ಖಾತೆಯಿಂದ ಕಾಣೆ..
ಓಟಿಪಿ ನಮೂದಿಸಿದ ಕೆಲವೇ ನಿಮಿಷಗಳಲ್ಲಿ ಆಕೆಯ ಖಾತೆಯಿಂದ 1 ಲಕ್ಷ ರೂ. ಇಲ್ಲದಂತೆ ಆಗಿದೆ. ಇದರಿಂದ ಮತ್ತೆ ಶಾಕ್‌ಗೆ ಒಳಗಾದ ಮಹಿಳೆ ತಾವು ಮೋಸಹೋಗಿದ್ದೇವೆ ಎಂದು ಅರಿತುಕೊಂಡಿದ್ದಾರೆ. ನಾನು ಓಟಿಪಿ ನಮೂದಿಸಿದ ತಕ್ಷಣ ನನ್ನ ಖಾತೆಯಿಂದ 1 ಲಕ್ಷ ಕಡಿತಗೊಂಡಿದೆ. ಇದಾದ ತಕ್ಷಣ ಸೈಬರ್ ಸಹಾಯವಾಣಿ 1930 ಗೆ ಹಲವಾರು ಬಾರಿ ಕರೆ ಮಾಡಿದರೂ ಸಂಪರ್ಕ ಸಿಗಲಿಲ್ಲ. ಅಂತಿಮವಾಗಿ ಸೈಬರ್ ಪೋರ್ಟಲ್‌ಗೆ ತೆರಳಿ ದೂರು ದಾಖಲಿಸಿದ್ದೇವೆ ಎಂದು ದತ್ತಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಬ್ಯಾಂಕ್ ಎಸ್‌ಎಮ್‌ಎಸ್‌ ಹಗರಣ ಎಂದರೇನು?
ಬ್ಯಾಂಕ್ ಎಸ್‌ಎಮ್‌ಎಸ್‌ ವಂಚನೆಗಳಲ್ಲಿ ಸಾಮಾನ್ಯವಾಗಿ ಸ್ಕ್ಯಾಮರ್‌ಗಳು ಬ್ಯಾಂಕ್‌ಗಳು ಕಳುಹಿಸುವ ರೀತಿಯಲ್ಲಿಯೇ ನಕಲಿ ಸಂದೇಶಗಳನ್ನು ಕಳುಹಿಸುತ್ತಾರೆ. ನಂತರ ಖಾತೆ ವಿವರಗಳು, ಓಟಿಪಿ ಗಳು ಮತ್ತು ಗುರುತಿನ ಸಂಖ್ಯೆಗಳಂತಹ ವೈಯಕ್ತಿಕ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಈ ಮೂಲಕ ನೀವೇನಾದರೂ ಅವರು ಕೇಳಿದ್ದನ್ನೆಲ್ಲಾ ಭರ್ತಿ ಮಾಡಿದರೆ ನಿಮ್ಮ ಖಾತೆಯ ಹಣ ಗೋವಿಂದನ ಪಾಲು ಎಂದು ಸುಮ್ಮನಿರಬೇಕಷ್ಟೆ.

ಬ್ಯಾಂಕ್‌ ಹೆಸರಲ್ಲಿ ಬಂದ ಎಸ್‌ಎಮ್‌ಎಸ್‌ನಲ್ಲಿನ ಲಿಂಕ್‌ ಕ್ಲಿಕ್‌ ಮಾಡಿದ ಮಹಿಳೆ!
ಆನ್‌ಲೈನ್ ವಂಚನೆಗಳಿಂದ ಎಚ್ಚರವಾಗಿರಲು ಈ ಕೆಲಸ ಮಾಡಿ..
  • -ಓಟಿಪಿ, ಬ್ಯಾಂಕ್ ವಿವರಗಳು, ಮೊಬೈಲ್ ಸಂಖ್ಯೆ ಮತ್ತು ಮುಂತಾದ ವೈಯಕ್ತಿಕ ಮಾಹಿತಿಯನ್ನು ನಿಮಗೆ ಅನುಮಾನ ಬಂದ ಅಥವಾ ಅನುಮಾನಾಸ್ಪದ ಸಂಖ್ಯೆಯೊಂದಿಗೆ ಎಸ್‌ಎಮ್‌ಎಸ್‌ ಅಥವಾ ಕರೆ ಮೂಲಕ ಮಾಹಿತಿ ನೀಡಬೇಡಿ.
  • -ನಿಮ್ಮ ಯುಪಿಐ ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಫೋನ್‌ಗಾಗಿ ಸ್ಟ್ರಾಂಗ್‌ ಪಾಸ್‌ವರ್ಡ್‌ಗಳನ್ನು ಬಳಕೆ ಮಾಡಿ, ಜೊತೆಗೆ ಇವುಗಳನ್ನು ನಿಯಮಿತವಾಗಿ ಬದಲಾಯಿಸುತ್ತಾ ಇರಿ.
  • -ಯಾವುದೇ ಎಸ್‌ಎಮ್‌ಎಸ್‌ ಬಂದರೂ ಅದು ಮೂಲವನ್ನು ಕಂಡುಕೊಳ್ಳಿ. ಈ ವೇಳೆ ನಿಮಗೆ ಬ್ಯಾಂಕ್‌ ನಿಂದ ಈ ರೀತಿಯ ಸಂದೇಶಗಳು ಏನಾದರೂ ಬಂದಲ್ಲಿ ಮೊದಲು ಬ್ಯಾಂಕ್‌ ಮ್ಯಾನೇಜರ್‌ ಅಥವಾ ಸಹಾಯವಾಣಿ ಮೂಲಕ ಸಂಬಂಧಿಸಿದವರಿಗೆ ಮಾಹಿತಿ ನೀಡಿ.
  • -ಎಸ್ಎಮ್‌ಎಸ್‌ ಮೂಲಕ ಬಂದ ಲಿಂಕ್‌ಗಳು ಹಾಗೂ ಮೆಸೆಜಿಂಗ್‌ ಆಪ್‌ಗಳಲ್ಲಿ ಅದರಲ್ಲೂ ವಾಟ್ಸಾಪ್‌ ನಲ್ಲಿ ಬರುವ ಈ ರೀತಿಯ ಲಿಂಕ್‌ಗಳನ್ನು ಕ್ಲಿಕ್‌ ಮಾಡುವುದಕ್ಕೆ ಹೋಗಬೇಡಿ.
  • -ಆನ್‌ಲೈನ್ ಬ್ಯಾಂಕಿಂಗ್‌ ವ್ಯವಹಾರದಲ್ಲಿ ಕಡ್ಡಾಯವಾಗಿ ಎರಡು ಅಂಶದ ದೃಢೀಕರಣವನ್ನು ಸಕ್ರಿಯಗೊಳಿಸಿ. ಈ ಮೂಲಕ ನಿಮ್ಮ ಖಾತೆಯನ್ನು ಪ್ರವೇಶಿಸಲು ನೀವು ಪಾಸ್‌ವರ್ಡ್ ಮತ್ತು ಓಟಿಪಿ ಅನ್ನು ನಮೂದಿಸಬೇಕಾಗುತ್ತದೆ. ನಂತರ ನಿಮ್ಮ ಬಯೋಮೆಟ್ರಿಕ್‌ಗಳನ್ನು ಎರಡನೇ ಪಾಸ್‌ವರ್ಡ್‌ ಆಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.
  • -ನಿಮ್ಮ ಮೊಬೈಲ್‌ಗೆ ಬರುವ ಯಾವುದೇ ಸಂಶಯಾಸ್ಪದ ಎಸ್ಎಮ್‌ಎಸ್‌ ಬಗ್ಗೆ ತಕ್ಷಣವೇ ನಿಮ್ಮ ಬ್ಯಾಂಕ್‌ಗೆ ವರದಿ ಮಾಡಿ. ಈ ಮೂಲಕ ಯಾವಾಗಲೂ ಜಾಗರೂಕರಾಗಿರಿ ಹಾಗೂ ಇತರರಿಗೂ ಸಾಧ್ಯವಾದಷ್ಟು ಜಾಗೃತಿಯಿಂದ ಇರಲು ಹೇಳಿ. ಇದರಿಂದ ಯಾವುದೇ ವಂಚಕರು ನಿಮಗೆ ಮೋಸ ಮಾಡಲು ಸಾಧ್ಯ ಇರುವುದಿಲ್ಲ.
Best Mobiles in India

English summary
A woman from Gurugram fell victim to a bank SMS scam. Fraudsters are sending SMS posing as banks. details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X