ವರ್ಕ್‌ ಫ್ರಂ ಹೋಮ್ ಮಾಡುವಾಗ ವಾಟ್ಸಪ್‌ನಲ್ಲಿ ಈ ತಪ್ಪುಗಳನ್ನು ಮಾಡಬೇಡಿ!

|

ಕೊರೊನಾ ವೈರಸ್ ಸಾಂಕ್ರಾಮಿಕ ನಿಯಂತ್ರಿಸುವುದಕ್ಕಾಗಿ ಕೇಂದ್ರ ಸರ್ಕಾರ 21 ದಿನಗಳ ಲಾಕ್‌ಡೌನ್ ಜಾರಿ ಮಾಡಿದೆ. ಈ ನಿಟ್ಟಿನಲ್ಲಿ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಿದೆ. ಹೀಗಾಗಿ ಅನೇಕ ನೌಕರರು ಸದ್ಯ ವರ್ಕ್ ಫ್ರಂ ಹೋಮ್‌ಗೆ ರೂಢಿ ಆಗಿದ್ದಾರೆ. ವಾಟ್ಸಪ್‌, ಜೂಮ್ ಆಪ್‌ ಸೇರಿದಂತೆ ಹಲವು ಅಪ್ಲಿಕೇಶನ್‌ಗಳು ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಮ್‌ ಮಾಡಲು ನೆರವಾಗಿವೆ.

ವರ್ಕ್ ಫ್ರಂ ಹೋಮ್‌

ಹೌದು, ವರ್ಕ್ ಫ್ರಂ ಹೋಮ್‌ ಮಾಡುವ ಉದ್ಯೋಗಿಗಳಿಗೆ ಕೆಲವು ಆಪ್‌ಗಳು ಅವರ ಕಛೇರಿಯ ಸಹದ್ಯೋಗಿಗಳೊಂದಿಗೆ ಕೆಲಸದ ಬಗ್ಗೆ ಸಂವಹನ ನಡೆಸಲು ನೆರವಾಗಿವೆ. ಉದ್ಯೋಗಿಗಳು ಲ್ಯಾಪ್‌ಟಾಪ್‌ನಲ್ಲಿ ಕಾರ್ಯನಿರ್ವಹಿಸುವಾಗ ಜೊತೆ ಜೊತೆಗೆ ವಾಟ್ಸಪ್‌, ಫೇಸ್‌ಬುಕ್‌, ಟ್ವಿಟ್ಟರ್ ಸೇರಿದಂತೆ ಇತರೆ ಕೆಲವು ಸಾಮಾಜಿಕ ತಾಣಗಳ ಬಳಕೆ ಸಹ ಮಾಡುತ್ತಿರುತ್ತಾರೆ. ಹೀಗೆ ಕೆಲಸದ ವೇಳೆ ಸೋಶಿಯಲ್ ಆಪ್ ಬಳಕೆ ಮಾಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ.

ಫೋಟೊ ಶೇರ್ ಮಾಡಬೇಡಿ

ಫೋಟೊ ಶೇರ್ ಮಾಡಬೇಡಿ

ವರ್ಕ್ ಫ್ರಮ್ ಹೋಮ್ ಮಾಡುವಾಗ ನೀವು ವರ್ಕ್ ಮಾಡುವ ಸ್ಥಳದ ಫೋಟೊ, ಲ್ಯಾಪ್‌ಟ್ಯಾಪ್‌ ಯಾವುದೇ ಫೋಟೊ ಸೆರೆ ಹಿಡಿದು ವಾಟ್ಸಪ್‌, ಫೇಸ್‌ಬುಕ್‌ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲೇಬೇಡಿ. ಏಕೆಂದರೇ ಕೆಲಸ ಮಾಡುವಾಗ ಲ್ಯಾಪ್‌ಟ್ಯಾಪ್‌ನಲ್ಲಿ ಕಛೇರಿಯ ಮಾಹಿತಿ ತೆರೆದಿರುತ್ತಿರಿ, ನಿಮ್ಮ ಅರಿವಿಲ್ಲದೇ ಹಾಗೆಯೇ ಫೋಟೊ ಕ್ಲಿಕ್ಕಿಸಿ ಸಾಮಾಜಿಕ ತಾಣಗಳಲ್ಲಿ ಶೇರ್ ಮಾಡುವ ಸಾಧ್ಯತೆ ಇರುತ್ತದೆ. ಕಛೇರಿ ಮಾಹಿತಿಗಳ ಗೌಪ್ಯತೆ ಕಾಪಾಡುವುದು ಮುಖ್ಯ.

ನಕಲಿ ಸುದ್ದಿ ಫಾರ್ವರ್ಡ್ ಮಾಡಬೇಡಿ

ನಕಲಿ ಸುದ್ದಿ ಫಾರ್ವರ್ಡ್ ಮಾಡಬೇಡಿ

ವಾಟ್ಸಪ್‌, ಫೇಸ್‌ಬುಕ್‌ ತಾಣಗಳಲ್ಲಿ ಅನೇಕ ಸುದ್ದಿಗಳು ಹರಿದಾಡುತ್ತಿರುತ್ತವೆ. ನಿಮಗೆ ಬರುವ ಸುದ್ದಿಗಳ ನಿಜಾಂಶ ಅರಿಯದೇ ಸ್ನೇಹಿತರಿಗೆ ಹಾಗೂ ಗ್ರೂಪ್‌ಗಳಿಗೆ ಫಾರ್ವರ್ಡ್‌ ಮಾಡಬೇಡಿ. ಏಕೆಂದರೇ ವಾಟ್ಸಪ್‌ನಲ್ಲಿ ಬರುವ ಅನೇಕ ಸುದ್ದಿಗಳು ಸತ್ಯಾಂಶಕ್ಕೆ ದೂರವಾದವಾಗಿರುತ್ತವೆ. ಅದರಲ್ಲಿಯೂ ಹೆಚ್ಚು ಫಾರ್ವರ್ಡ್ ಆಗಿರುವ ಮೆಸೆಜ್ ನಿಜಾಂಶ ಅರಿಯದೆ ಶೇರ್ ಮಾಡಬೇಡಿ.

ಕಂಪನಿ ಮಾಹಿತಿ ಶೇರ್ ಮಾಡಬೇಡಿ

ಕಂಪನಿ ಮಾಹಿತಿ ಶೇರ್ ಮಾಡಬೇಡಿ

ಕಂಪನಿಯ ಎಚ್‌ಆರ್‌ಗಳಿಂದ ಬರುವ ಇ-ಮೇಲ್‌ಗಳು, ಸಂಸ್ಥೆಯ ಪಾಲಿಸಿ, ಸಂಸ್ಥೆಗೆ ಸಂಬಂಧಪಟ್ಟ ಮಾಹಿತಿಗಳನ್ನು ವಾಟ್ಸಪ್‌, ಫೇಸ್‌ಬುಕ್ ಸೇರಿದಂತೆ ಯಾವುದೇ ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳಬೇಡಿ. ಗೌಪ್ಯತೆ ಕಾಪಾಡಿ.

ಅನಿಸಿಕೆ ಶೇರ್ ಮಾಡುವಾಗ ಎಚ್ಚರವಹಿಸಿ

ಅನಿಸಿಕೆ ಶೇರ್ ಮಾಡುವಾಗ ಎಚ್ಚರವಹಿಸಿ

ನಿಮ್ಮ ಫೇಸ್‌ಬುಕ್ ಮತ್ತು ಟ್ವಿಟರ್‌ ಖಾತೆಯಲ್ಲಿ ನಿಮ್ಮ ಸಹದ್ಯೋಗಿಗಳು ಸ್ನೇಹಿತರಾಗಿರುತ್ತಾರೆ. ವರ್ಕ್ ಫ್ರಂ ಹೋಮ್ ಮಾಡುವಾಗ ಕೆಲಸದ ಅವಧಿಯಲ್ಲಿ ಹಾಗೂ ಕೆಲಸದ ಕುರಿತಾಗಿ ಏನನ್ನೂ ಪೋಸ್ಟ್ ಮಾಡಬೇಡಿ. ಕಮೆಂಟ್ ಮಾಡುವಾಗ ಪದಗಳ ಬಳಕೆಯಲ್ಲಿ ಹಿಡಿತವಿರಲಿ. ಇದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆಬಾರದಿರಲಿ.

ಕೋವಿಡ್-19 ಬಗ್ಗೆ ತಪ್ಪು ಮಾಹಿತಿ ಶೇರ್ ಮಾಡಬೇಡಿ

ಕೋವಿಡ್-19 ಬಗ್ಗೆ ತಪ್ಪು ಮಾಹಿತಿ ಶೇರ್ ಮಾಡಬೇಡಿ

ಕೊರೊನಾ ವೈರಸ್ ಸಾಂಕ್ರಾಮಿಕಕ್ಕೆ ಸಂಬಂಧಿಸ ತಪ್ಪು ಸುದ್ದಿಗಳನ್ನು, ಕೋವಿಡ್-19 ಔಷಧಿಗಳ ಮಾಹಿತಿ ಬಗ್ಗೆ, ಕೊರೊನಾ ವೈರಸ್‌ ಬಗ್ಗೆ ಭೀತಿ ಮೂಡಿಸುವ ಹಾಗೂ ತಪ್ಪು ದಾರಿಗೆ ಪ್ರಚೋದನೆ ನೀಡುವ ವಿಡಿಯೊಗಳನ್ನು ವಾಟ್ಸಪ್‌ ಹಾಗೂ ಫೇಸ್‌ಬುಕ್, ಟ್ವಿಟರ್‌ನಲ್ಲಿ ಹಂಚಿಕೊಳ್ಳಬೇಡಿ

Best Mobiles in India

English summary
While spending some time on WhatsApp, Facebook and Twitter may be fine during your work hours at home, these are the 5 mistakes you must avoid.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X