ಅಂತೂ ಬಿಡುಗಡೆಗೊಂಡ ವಿಶ್ವದ ಅತ್ಯಂತ ದುಬಾರಿ ಫೋನ್ ಸೊಲರಿನ್

By Shwetha
|

ಇಸ್ರೇಲ್‌ನ ಸ್ಟಾರ್ಟಪ್ ಕಂಪೆನಿ ಸಿರಿನ್ ಲ್ಯಾಬ್ಸ್ ಅಧಿಕೃತವಾಗಿ ತನ್ನ ದುಬಾರಿ ಫೋನ್ ಸೊಲರಿನ್ (Solarin) ಅನ್ನು ಬಿಡುಗಡೆ ಮಾಡಿದ್ದು ಇದರ ಬೆಲೆ $14,000 (ಒಂಬತ್ತು ಲಕ್ಷ ರೂಪಾಯಿಗಿಂತಲೂ ಹೆಚ್ಚು) ಆಗಿದೆ. ಈ ಆಂಡ್ರಾಯ್ಡ್ ಫೋನ್ ಚಿಪ್ ಟು ಚಿಪ್ 256 ಎನ್‌ಕ್ರಪ್ಶನ್ ಅನ್ನು ಪಡೆದುಕೊಂಡಿದ್ದು ಸಂವಹನವನ್ನು ಸುಭದ್ರವಾಗಿ ಸಂರಕ್ಷಿಸುವ ಅಂಶಗಳನ್ನು ಒಳಗೊಂಡಿದೆ.

ಓದಿರಿ: 6 ಲಕ್ಷ ಬೆಲೆಯ 'ಸೊಲರಿನ್' ಸ್ಮಾರ್ಟ್‌ಫೋನ್‌ ಶೀಘ್ರದಲ್ಲಿ ಲಾಂಚ್‌

ಸ್ಮಾರ್ಟ್‌ಫೋನ್‌ಗಳ ರಾಲ್ಸ್ ರಾಯ್ಸ್ ಎಂದೇ ಕರೆಯಿಸಿಕೊಂಡಿರುವ ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ದೈಹಿಕ ಭದ್ರತೆಯ ಅಂಶವನ್ನು ಹೊಂದಿದ್ದು ಲಂಡನ್‌ನ ಈವೆಂಟ್ ಒಂದರಲ್ಲಿ ಬಿಡುಗಡೆಯನ್ನು ಕಂಡುಕೊಂಡಿದೆ.

#1

#1

ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 810 ಪ್ರೊಸೆಸರ್ ಅನ್ನು ಇದು ಒಳಗೊಂಡಿದ್ದು ವೈಫೈ ಸಂಪರ್ಕವನ್ನು ಹೊಂದಿದೆ. 23.8 ಎಮ್‌ಪಿ ರಿಯರ್ ಕ್ಯಾಮೆರಾ ಇದರಲ್ಲಿದ್ದು 5.5 ಇಂಚಿನ ಎಲ್‌ಇಡಿ 2 ಕೆ ರೆಸಲ್ಯೂಶನ್ ಸ್ಕ್ರೀನ್ ಅನ್ನು ಇದು ಪಡೆದುಕೊಂಡಿದೆ.

#2

#2

ಹೆಚ್ಚು ಸುಧಾರಿತ ಗೌಪ್ಯತಾ ತಂತ್ರಜ್ಞಾನವನ್ನು ಸೊಲಾರಿನ್ ನೀಡುತ್ತಿದ್ದು ಹೊರಗಡೆ ಪ್ರಸ್ತುತ ಲಭ್ಯವಿಲ್ಲ. ಕಮ್ಯೂನಿಕೇಶನ್ ಸೆಕ್ಯುರಿಟಿ ಸಂಸ್ಥೆ ಕೂಲ್ ಸ್ಪ್ಯಾನ್‌ನೊಂದಿಗೆ ಸಿರಿನ್ ಲ್ಯಾಬ್ ಹೊಂದಾಣಿಕೆಯನ್ನು ಮಾಡಿಕೊಂಡಿದೆ.

#3

#3

ಹೆಚ್ಚು ಗೌಪ್ಯತಾ ಸೆಟ್ಟಿಂಗ್‌ಗಳನ್ನು ಒಳಗೊಂಡಿರುವ ಅಂತೆಯೇ ಇತರ ಡಿವೈಸ್‌ಗಳಿಗಿಂತ ಹೆಚ್ಚು ವೇಗವಾಗಿ ಕಾರ್ಯನಿರ್ವಹಿಸುವ ಫೋನ್ ಅನ್ನು ರಚಿಸುವ ನಿಟ್ಟಿನಲ್ಲಿತ್ತು ಅದೂ ಕೂಡ ವಿಶ್ವದಲ್ಲಿ ದೊರಕುವ ಉತ್ತಮ ಸಾಮಾಗ್ರಿಗಳನ್ನು ಬಳಸಿಕೊಂಡು ಈ ಡಿವೈಸ್ ಅನ್ನು ಕಂಪೆನಿ ತಯಾರು ಮಾಡಿದೆ.

#4

#4

ಸೈಬರ್ ದಾಳಿಗಳು ಈಗ ಹೆಚ್ಚು ಸಾಮಾನ್ಯವಾಗಿದ್ದು, ಸೊಲರಿನ್ ಫೋನ್‌ನಲ್ಲಿ ಅದನ್ನು ತಡೆಯುವ ಎಲ್ಲಾ ಅಂಶಗಳನ್ನು ಅಳವಡಿಸಲಾಗಿದೆ. ಅಂತೂ ದುಬಾರಿ ಫೋನ್ ಹೆಚ್ಚು ವೈಶಿಷ್ಟ್ಯಗಳನ್ನು ಪಡೆದುಕೊಂಡು ವಿಶ್ವದಲ್ಲೇ ಅದ್ವಿತೀಯ ಎಂದೆನಿಸಲಿದೆ.

#5

#5

ವೈಭವೋಪೇತ ಫೋನ್‌ಗಳ ಲಾಂಚ್ ಇದು ಮೊದಲನೆಯದೇನಲ್ಲ. 2006 ರಲ್ಲಿ ನೋಕಿಯಾ $310,000 ಬೆಲೆಯ 'ಸಿಗ್ನೇಚರ್ ಕೋಬ್ರಾ' ವನ್ನು ಲಾಂಚ್ ಮಾಡಿತ್ತು. ಅಂತೆಯೇ 2011 ರಲ್ಲಿ $5,000 ಬೆಲೆಯ 'ಕಾನ್ಸಟಲೇಶನ್' ಡಿವೈಸ್ ಅನ್ನು ಲಾಂಚ್ ಮಾಡಿತ್ತು.

#6

#6

2012 ರಲ್ಲಿ ನೋಕಿಯಾವನ್ನು ಹಿಂದಿಕ್ಕಿದ ವರ್ಚ್ಯು ಕಂಪೆನಿ ತನ್ನ ಪ್ರಥಮ ಆಂಡ್ರಾಯ್ಡ್ ಡಿವೈಸ್ ವರ್ಚ್ಯು ಟಿಐ ಅನ್ನು ಬಿಡುಗಡೆ ಮಾಡಿತು. ಮಾಧ್ಯಮ ವರದಿಯಂತೆ ಭಾರತದಲ್ಲಿ ಈ ಡಿವೈಸ್ ಬೆಲೆ ರೂ 6,49,990 ಆಗಿದ್ದು ಡ್ಯುಯಲ್ ಕೋರ್ 1.7GHZ ಪ್ರೊಸೆಸರ್ ಜೊತೆಗೆ 1ಜಿಬಿ RAM ಮತ್ತು 64 ಜಿಬಿ ಆಂತರಿಕ ಸಂಗ್ರಹವನ್ನು ಪಡೆದುಕೊಂಡಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಸ್ಮಾರ್ಟ್‌ಫೋನ್‌ನಿಂದ ಕ್ಯಾನ್ಸರ್ ಅಧ್ಯಯನಗಳಿಂದ ಸಾಬೀತು</a><br /><a href=ಚಾರ್ಜರ್, ಕರೆಂಟ್ ಜಂಜಾಟವಿಲ್ಲದೆಯೇ ಫೋನ್ ಚಾರ್ಜ್ ಮಾಡುವುದು ಹೇಗೆ?
'ಕಪ್ಪು ಕುಳಿ' ಬಗೆಗಿನ ಅದ್ಭುತ ಸತ್ಯಾಂಶಗಳು" title="ಸ್ಮಾರ್ಟ್‌ಫೋನ್‌ನಿಂದ ಕ್ಯಾನ್ಸರ್ ಅಧ್ಯಯನಗಳಿಂದ ಸಾಬೀತು
ಚಾರ್ಜರ್, ಕರೆಂಟ್ ಜಂಜಾಟವಿಲ್ಲದೆಯೇ ಫೋನ್ ಚಾರ್ಜ್ ಮಾಡುವುದು ಹೇಗೆ?
'ಕಪ್ಪು ಕುಳಿ' ಬಗೆಗಿನ ಅದ್ಭುತ ಸತ್ಯಾಂಶಗಳು" loading="lazy" width="100" height="56" />ಸ್ಮಾರ್ಟ್‌ಫೋನ್‌ನಿಂದ ಕ್ಯಾನ್ಸರ್ ಅಧ್ಯಯನಗಳಿಂದ ಸಾಬೀತು
ಚಾರ್ಜರ್, ಕರೆಂಟ್ ಜಂಜಾಟವಿಲ್ಲದೆಯೇ ಫೋನ್ ಚಾರ್ಜ್ ಮಾಡುವುದು ಹೇಗೆ?
'ಕಪ್ಪು ಕುಳಿ' ಬಗೆಗಿನ ಅದ್ಭುತ ಸತ್ಯಾಂಶಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
Bringing speculations to an end, Israeli start-up Sirin Labs has officially unveiled its high-end $14,000 (over Rs 9 lakh) Android smartphone that promises chip-to-chip 256-bit encryption similar to what the military uses to protect communications..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X