Subscribe to Gizbot

6 ಲಕ್ಷ ಬೆಲೆಯ 'ಸೊಲರಿನ್' ಸ್ಮಾರ್ಟ್‌ಫೋನ್‌ ಶೀಘ್ರದಲ್ಲಿ ಲಾಂಚ್‌

Written By:

ಅಬ್ಬಬ್ಬಾ ಅಂದ್ರೆ ಅತಿ ಹೆಚ್ಚು ಬೆಲೆಯ ಸ್ಮಾರ್ಟ್‌ಫೋನ್‌ ಎಷ್ಟಿರಬಹುದು? ಬಹುಸಂಖ್ಯಾತರಿಗೆ ಗೊತ್ತಿಲ್ಲ. ಪರವಾಗಿಲ್ಲ. ಅತಿ ಹೆಚ್ಚು ಬೆಲೆಯ ಸ್ಮಾರ್ಟ್‌ಫೋನ್‌ ಎಂದರೆ ಗೂಗಲ್‌ನಲ್ಲಿ ಹುಡುಕಿದರೂ ಸಹ ಸಿಗುವುದು " 'ನ್ಯೂ ಇಂಪೋರ್ಟೆಡ್‌ ಎಚ್‌ಟಿಸಿ ರೂ 64,299', 'ನ್ಯೂ ಬ್ಲಾಕ್‌ಬೆರ್ರಿ ರೂ 52,190', ಮೈಕ್ರೋಸಾಫ್ಟ್‌ ಲೂಮಿಯಾ ರೂ 42,099'". ಸ್ಮಾರ್ಟ್‌ಫೋನ್ ಪ್ರಿಯರಿಗೆಲ್ಲಾ ಈಗೊಂದು ಅತ್ಯಂತ ಅಚ್ಚರಿ ಸುದ್ದಿ ಅಂದ್ರೆ ಈ ತಿಂಗಳಿನಲ್ಲಿ (ಮೇ 2016) ಪ್ರಪಂಚದ ಅತ್ಯಂತ ಹೆಚ್ಚು ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗುತ್ತಿದೆ. ಅಂದಹಾಗೆ ಅದರ ಬೆಲೆ ರೂ. 6 ಲಕ್ಷ. ಆ ಸ್ಮಾರ್ಟ್‌ಫೋನ್‌ ಯಾವುದು? ತಯಾರಿಸಿದ ದೇಶ ಯಾವುದು? ಫೀಚರ್‌ಗಳು ಏನು? ಇತ್ಯಾದಿ ಮಾಹಿತಿ ತಿಳಿಯಬೇಕೇ? ಹಾಗಾದ್ರೆ ಲೇಖನದ ಸ್ಲೈಡರ್‌ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೊಲರಿನ್‌ (Solarin)

1

ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಬೆಲೆಯ ಸ್ಮಾರ್ಟ್‌ಫೋನ್‌ ಹೆಸರು "ಸೊಲರಿನ್‌(Solarin)". ಈ ಸ್ಮಾರ್ಟ್‌ಫೋನ್‌ಗೆ ಹೆಸರು ನೀಡಿರುವುದು "Rolls Royce of smartphone".
ಚಿತ್ರ ಕೃಪೆ:sirin labs

ಸೊಲರಿನ್ ಸ್ಮಾರ್ಟ್‌ಫೋನ್‌ ತಯಾರಿ ಎಲ್ಲಿ?

2

ಇಸ್ರೇಲ್ ಮೂಲದ 'ಸಿರಿನ್ ಲ್ಯಾಬ್‌' ನಲ್ಲಿ ಈ ಸ್ಮಾರ್ಟ್‌ಫೋನ್‌ ಅನ್ನು ಅಭಿವೃದ್ದಿಪಡಿಸಲಾಗುತ್ತಿದ್ದು, ಇದೇ ತಿಂಗಳಲ್ಲಿ ( ಮೇ 2016) 'ಸೊಲರಿನ್‌' ಅನ್ನು ಬಿಡುಗಡೆಗೊಳಿಸಲಾಗುತ್ತಿದೆ. ಸೊಲರಿನ್‌ ಖರೀದಿ ಬೆಲೆ $10,000 (6,67,674 ರೂಪಾಯಿಗಳು) ಎನ್ನಲಾಗಿದೆ.

ವಿಶೇಷತೆ ಏನು?

3

'ಸೊಲರಿನ್‌' ಒಂದು ಫ್ಯಾನ್ಸಿ ಡಿವೈಸ್ ಆಗಿದ್ದು, "Rolls Royce of smartphone" ಹೆಸರು ನೀಡಿದೆ. ವಿಶೇಷ ಅಂದ್ರೆ ಅತಿ ಹೆಚ್ಚು ಪ್ರೈವೆಸಿ ಸೆಟ್ಟಿಂಗ್‌ಗಳನ್ನು ಹೊಂದಿದ್ದು ಅತ್ಯಾಧುನಿಕ ಮೊಬೈಲ್‌ ಆಗಿದೆ.

 ಇಸ್ರೇಲ್‌

4

'ಸೊಲರಿನ್‌' ಮೊಬೈಲ್‌ ಅಭಿವೃದ್ದಿಗೊಂಡಿದ್ದು ಅಮೇರಿಕ ಮತ್ತು ಚೀನಾದಲ್ಲಿ ಅಲ್ಲ. ಕಾರ್ನರ್‌ ದೇಶ ಇಸ್ರೇಲ್‌ನಲ್ಲಿ ಎಂಬುದು ನೆನಪಿರಲಿ. 'ಸಿರಿನ್‌ ಲ್ಯಾಬ್' ಪ್ರಕಾರ 'ಸೊಲರಿನ್‌ ಅತ್ಯಾಧುನಿಕ ಮೊಬೈಲ್ ಡಿವೈಸ್‌ ಆಗಿದ್ದು, ಅತಿ ಹೆಚ್ಚು ಗೌಪ್ಯತೆ ಸೆಟ್ಟಿಂಗ್‌ಗಳನ್ನು ಹೊಂದಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇತರೆ ಎಲ್ಲಾ ಮೊಬೈಲ್‌ಗಳಿಗಿಂತ ವೇಗವಾಗಿ ಆಪರೇಟ್‌ ಆಗಲಿದ್ದು, ಪ್ರಪಂಚದಾದ್ಯಂತದ ಉತ್ತಮ ವಸ್ತುಗಳಿಂದ ಅಭಿವೃದ್ದಿಗೊಳಿಸಲಾಗಿದೆ.

 ಲಂಡನ್‌ ರಿಟೇಲ್ ಶಾಪ್‌ಗೆ ಮೊದಲು

5

ಕಂಪನಿಯ ಮೊದಲ ಸ್ಮಾರ್ಟ್‌ಫೋನ್‌ ಅನ್ನು ಲಂಡನ್‌ನ ರಿಟೇಲ್‌ ಶಾಪ್‌ನಲ್ಲಿ ಲಾಂಚ್‌ ಮಾಡಲಾಗುತ್ತಿದೆಯಂತೆ ಎಂದು ಕಂಪನಿ ಪ್ರಕಾರ ಹೇಳಲಾಗಿದೆ. ಅತಿ ಹೆಚ್ಚು ಬೆಲೆಯ ಸ್ಮಾರ್ಟ್‌ಫೋನ್‌ ಇದೇ ಮೊದಲನೇಯದಲ್ಲ. 2006 ರಲ್ಲಿ ನೋಕಿಯಾ $310,000 ಬೆಲೆಗೆ "ಸಿಗ್ನೇಚರ್ ಕೋಬ್ರಾ", ಮತ್ತು 2011 ರಲ್ಲಿ $5,000 ಬೆಲೆಗೆ "ಕಾನ್‌ಸ್ಟೆಲೇಶನ್(Constellation)" ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿತ್ತು.

ನೋಕಿಯಾ

6

2012 ರಲ್ಲಿ ನೋಕಿಯಾ ಲಕ್ಸುರಿ ಪೋನ್ ಬ್ರ್ಯಾಂಡ್‌ ಮೇಕರ್‌ 'ವರ್ಟು(Vertu) ಅನ್ನು ಬಿಟ್ಟಿತು. ನೋಕಿಯಾ ವರ್ಟು ಅನ್ನು ಬಿಟ್ಟನಂತರ ವರ್ಟು ತನ್ನ 'ವರ್ಟು ಟಿ' ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ತಂದಿತು.

ಭಾರತದಲ್ಲಿ ಸ್ಮಾರ್ಟ್‌ಫೋನ್‌ ಬೆಲೆ ಎಷ್ಟು ಗೊತ್ತೇ?

7

'ಸೊಲರಿನ್' ಬೆಲೆ ಭಾರತದಲ್ಲಿ ರೂ. 6,49,990 ಎಂದು ಮಾಧ್ಯಮಗಳು ವರದಿ ಮಾಡಿವೆ. ಅಂದಹಾಗೆ ಸೊಲರಿನ್‌ ಸ್ಮಾರ್ಟ್‌ಪೋನ್‌ 184 ಪ್ರತ್ಯೇಕ ಭಾಗಗಳನ್ನು ಹೊಂದಿದೆ ಎಂದು ವರ್ಟು ಹೇಳಿದೆ.

 ಸೊಲರಿನ್‌ ಫೀಚರ್‌ಳೇನು?

8

* ಡ್ಯುಯಲ್‌ ಕೋರ್‌ 1.7GHz ಪ್ರೊಸೆಸರ್
* 1GB RAM
* 62GB ಆಂತರಿಕ ಸ್ಟೋರೇಜ್‌
* ಸೊಲರಿನ್‌ ಸ್ಮಾರ್ಟ್‌ಫೋನ್‌ ಬಾಡಿಯನ್ನು ಗ್ರೇಡ್‌ 5 ಟೈಟಾನಿಯಂನಿಂದ ತಯಾರಿಸಲಾಗಿದ್ದು, ಬ್ಯಾಂಗ್ ಮತ್ತು ಒಲುಫ್ಸೆನ್ ಸ್ಟೀರಿಯೋ ಸ್ಪೀಕರ್‌ಗಳನ್ನು ಸಹ ಹೊಂದಿದೆ. ಈ ಮೊಬೈಲ್ ಅನ್ನು ಸಾಮರ್ಥ್ಯ ಪರಿಶೀಲನೆಗೆ 4 ಬಾರಿ ಪರೀಕ್ಷೆ ನಡೆಸಲಾಗಿದೆ.

ಮಾರಾಟ

9

ಸಿರಿನ್‌ ಲ್ಯಾಬ್ಸ್‌ ಪ್ರಕಾರ ಹೈ-ಎಂಡ್‌ ಡಿವೈಸ್ ಆದ ಸೊಲರಿನ್‌ ಅನ್ನು ತನ್ನ ಇ-ಕಾಮರ್ಸ್ ಸೈಟ್‌ನಲ್ಲಿ ಮೊದಲು ಮಾರಾಟ ಮಾಡಲಿದ್ದು, ನಂತರ ಹೆಚ್ಚುವರಿ ರಿಟೇಲ್‌ ಸ್ಟೋರ್‌ಗಳನ್ನು ಯೂರೋಪ್‌ ಮತ್ತು ಉತ್ತರ ಅಮೇರಿಕದಲ್ಲಿ ಓಪನ್‌ ಮಾಡಲು ಯೋಜನೆ ರೂಪಿಸಲಾಗಿದೆ. ಶೀಘ್ರದಲ್ಲಿ ಏಷಿಯಾದಲ್ಲೂ ಸಹ ರಿಟೇಲ್‌ ಸ್ಟೋರ್‌ಗಳನ್ನು ಆರಂಭಿಸಲು ಕಂಪನಿ ಯೋಜಿಸಿದೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ನಾಸಾ ವಿಜ್ಞಾನಿಗಳಿಂದ ಮಂಗಳ ಗ್ರಹದಲ್ಲಿ ಆಮ್ಲಜನಕ ವಾತಾವರಣ ಪತ್ತೆ

ಲ್ಯಾಪ್‌ಟಾಪ್‌ ಬ್ಯಾಟರಿ ಲೈಫ್‌ ಹೆಚ್ಚಿಸಲು ಟಾಪ್‌ ಟಿಪ್ಸ್‌ಗಳು

ಇತಿಹಾಸದಲ್ಲಿದ್ದ ಪವರ್‌ಪುಲ್‌ ಟೆಕ್‌ ವೆಪನ್‌ಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Solarin, world’s most expensive smartphone to launch this month, Rs 6 lakhs. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot