Subscribe to Gizbot

ಅಬ್ಬಾಬ್ಬಾ ಈ ಫೀಚರ್ ಫೋನ್‌ಗೆ ರೂ 22,000 ಬೆಲೆಯೇ?

Written By:

ಸಾಧಾರಣ ಫೀಚರ್ ಫೋನ್‌ಗೆ ರೂ 22,000 ತೆತ್ತು ಕೊಳ್ಳುವುದು ಎಂದರೆ ನಿಮ್ಮ ಹುಬ್ಬೇರುವುದು ಖಂಡಿತ. ಹೌದು ನೀವು ನಂಬಲೇಬೇಕಾದ ಸಂಗತಿಯೊಂದು ನಮ್ಮ ಇಂದಿನ ಲೇಖನದಲ್ಲಿದೆ. ಫೋನ್ ಹೆಸರು Punkt MP01 ಎಂದಾಗಿದ್ದು ಕಂಪೆನಿ ವೆಬ್‌ಸೈಟ್ ಹೇಳುವಂತೆ ಫೋನ್ ದುಬಾರಿಯಾಗಿದ್ದರೂ ಬಳಕೆದಾರರ ಆಕಾಂಕ್ಷೆಗಳನ್ನು ಸಫಲಗೊಳಿಸುವಂತಿದೆ ಎಂದಾಗಿದೆ.

ಓದಿರಿ: ಹಶ್ ಇದ್ದರೆ ಫೋನ್ ಬ್ಯಾಟರಿ ಖಾಲಿಯಾಗುತ್ತದೆ ಎಂಬ ಭಯ ಬೇಡ!!!

ಈ ಫೋನ್ ಬಳಸಿ ನಿಮಗೆ ಕರೆಮಾಡಬಹುದು, ಸಂದೇಶ ಕಳುಹಿಸಬಹುದು ಎಂದು ಮುಂತಾದ ಆಮಿಷಗಳನ್ನು ಒಡ್ಡುತ್ತಾ ಕಂಪೆನಿ ಮೊಬೈಲ್ ಅನ್ನು ಕೊಂಡಾಡುತ್ತಿದೆ. ಆದರೆ ಫೀಚರ್ ಫೋನ್‌ಗೆ ರೂ 22,000 ವನ್ನು ಪಾತಿಸಬೇಕೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದ್ದರೆ ಫೋನ್‌ಗೆ ಏನಾದರೂ ಪ್ರತ್ಯೇಕ ವಿಶೇಷತೆ ಇರುವುದು ಕಡ್ಡಾಯ ಅಲ್ಲವೇ? ಬನ್ನಿ ಇದರ ವಿಶೇಷತೆಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೋನೋಕ್ರೊಮಾಟಿಕ್ ಡಿಸ್‌ಪ್ಲೇ

ಮೋನೋಕ್ರೊಮಾಟಿಕ್ ಡಿಸ್‌ಪ್ಲೇ

ಫೋನ್ ಮೋನೋಕ್ರೊಮಾಟಿಕ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಸಣ್ಣ ಸ್ಕ್ರೀನ್ ಇದ ಹೊಂದಿದೆ. ಇನ್ನು ದೀರ್ಘವಾದ ಬ್ಯಾಟರಿ ಜೀವಿತವಿದೆ. ಇನ್ನು ಸೌಂಡ್ ಅಂತೂ ಅಬ್ಬರದ್ದಾಗಿದೆ ಎಂಬುದು ವೆಬ್‌ಸೈಟ್ ಹೇಳಿಕೆಯಾಗಿದೆ.

ಗೋರಿಲ್ಲಾ ಗ್ಲಾಸ್

ಗೋರಿಲ್ಲಾ ಗ್ಲಾಸ್

ಇನ್ನು ಫೋನ್ ಪರದೆಯನ್ನು ಗೋರಿಲ್ಲಾ ಗ್ಲಾಸ್ ಸ್ಕ್ರೀನ್‌ನಿಂದ ಸಿದ್ಧಪಡಿಸಲಾಗಿದೆ ಆದ್ದರಿಂದಲೇ ರೂ 22,000 ಬೆಲೆಯನ್ನು ಈ ಡಿವೈಸ್‌ಗೆ ನೀವು ತೆರಬೇಕಾಗುತ್ತದೆ.

ಕೋರ್ಡ್‌ಲೆಸ್ ಫೋನ್‌

ಕೋರ್ಡ್‌ಲೆಸ್ ಫೋನ್‌

Punkt MP01 ಡಿವೈಸ್ ಕೋರ್ಡ್‌ಲೆಸ್ ಫೋನ್‌ಗಳಂತೆಯೇ ಕಾಣುತ್ತಿದೆ ಮತ್ತು ಪೂರ್ವ 2000 ಸಿರೀಸ್ ಫೋನ್‌ಗಳ ಒನಪು ಕೂಡ ಇದಕ್ಕಿದೆ. ಅಂತೂ ಇದನ್ನು ಫೀಚರ್ ಫೋನ್ ಎಂಬುದಾಗಿ ಕರೆಯುವುದು ಸಾಧ್ಯವಿಲ್ಲದ ಮಾತಾಗಿದೆ.

ನಿಮಗಾಗಿ ಮಾಡುತ್ತದೆ

ನಿಮಗಾಗಿ ಮಾಡುತ್ತದೆ

ಇನ್ನುಳಿದ ಫೀಚರ್ ಫೋನ್‌ಗಳು ನಿರ್ವಹಿಸುವಂತಹ ಕಾರ್ಯವನ್ನೇ Punkt MP01 ಡಿವೈಸ್ ಕೂಡ ಮಾಡುತ್ತಿದ್ದು ಮ್ಯೂಸಿಕ್ ಪ್ಲೇ ಮಾಡುವುದು, ಕ್ಯಾಲ್ಕುಲೇಟರ್‌ನಂತೆ ಕೆಲಸ ಮಾಡುವುದು, ಚಿತ್ರಗಳನ್ನು ತೆಗೆಯುವುದು ಹೀಗೆ ಇನ್ನಷ್ಟನ್ನು ಇದು ನಿಮಗಾಗಿ ಮಾಡುತ್ತದೆ.

ಅನಗತ್ಯ ಅಪ್ಲಿಕೇಶನ್‌

ಅನಗತ್ಯ ಅಪ್ಲಿಕೇಶನ್‌

ಇನ್ನು ಅನಗತ್ಯ ಅಪ್ಲಿಕೇಶನ್‌ಗಳನ್ನು ಇದು ನಿವಾರಿಸುತ್ತದೆ. ಇನ್ನು ಡೇಟಾ ಮತ್ತು ವೈಫೈ ಕೂಡ ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಉಬರ್‌ಗೆ ಕರೆ

ಉಬರ್‌ಗೆ ಕರೆ

ನಿಮಗೆ ಬೇಕೆಂದಾಗ ಇದನ್ನು ಬಳಸಿ ಉಬರ್‌ಗೆ ಕರೆಮಾಡಬಹುದು ಮತ್ತು ನಿಮ್ಮ ಕ್ಯಾಲೆಂಡರ್‌ಗಳನ್ನು ಡಿವೈಸ್‌ಗಳಾದ್ಯಂತ ಸಿಂಕ್ ಕೂಡ ಮಾಡಬಹುದಾಗಿದೆ.

ವ್ಯಯಿಸುವುದು ದಂಡ

ವ್ಯಯಿಸುವುದು ದಂಡ

ಇಂತಹ ಫೀಚರ್ ಫೋನ್‌ಗೆ ರೂ 22,000 ವನ್ನು ವ್ಯಯಿಸುವುದು ದಂಡ ಎಂಬ ಭಾವನೆ ನಿಮಗಿದ್ದಲ್ಲಿ ಮೋಟೋ ರಜಾರ್ ಅನ್ನು ನಿಮಗೆ ಖರೀದಿಸಬಹುದು. ಇದರ ಅರ್ಧ ಬೆಲೆಗೆ ಈ ಡಿವೈಸ್ ಅನ್ನು ನಿಮಗೆ ಖರೀದಿಸಬಹುದು.

ಹೆಚ್ಚು ಪ್ರತ್ಯೇಕ

ಹೆಚ್ಚು ಪ್ರತ್ಯೇಕ

ಇನ್ನು ಬೇಸಿಕ್ ಫೋನ್ ನಿಮಗೆ ಅಗತ್ಯ ಎಂದಾದಲ್ಲಿ ರೂ 1,000 ಕ್ಕಿಂತ ಕಡಿಮೆ ಬೆಲೆಗೆ ಇಂತಹ ಫೋನ್‌ಗಳನ್ನು ಖರೀದಿಸಬಹುದಾಗಿದೆ. ಇನ್ನು Punkt MP01 ಡಿವೈಸ್ ವೆಬ್‌ಸೈಟ್ ಹೇಳುವಂತೆ ಫೀಚರ್ ಫೋನ್ ಆದರೂ ಇತರ ಡಿವೈಸ್‌ಗಳಿಗಿಂತಲೂ ಹೆಚ್ಚು ಪ್ರತ್ಯೇಕವಾಗಿದೆ ಎಂಬುದು ಇದರ ಬಲವಾದ ನಂಬಿಕೆಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Design is important, and being distraction-free, even more so. There are so many different apps that are constantly competing for our attention that actually getting anything done at all can be a challenge, and the Punkt MP01 mobile phone purports itself to be the answer to this huge problem.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot