ಶಿಯೋಮಿಯಿಂದ ವರ್ಷದ ಅತ್ಯಂತ ಬಿಗ್ ಡಿಸ್ಕೌಂಟ್‌!..ಇಂಥಾ ಚಾನ್ಸ್‌ ಕಳೆದುಕೊಳ್ಳಬೇಡಿ!

|

ಜನಪ್ರಿಯ ಶಿಯೋಮಿ ಸಂಸ್ಥೆಯು ಇದೀಗ ತನ್ನ ವರ್ಷಾಂತ್ಯದ ಸೇಲ್‌ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅದಕ್ಕೆ 'ನಂ. 1 ಮಿ ಫ್ಯಾನ್ ಫೆಸ್ಟಿವಲ್' (No. 1 Mi Fan Festival) ಎಂದು ಘೋಷಿಸಿದೆ. ಈ ಸೇಲ್‌ನಲ್ಲಿ ಸಂಸ್ಥೆಯ ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ಮತ್ತು ಇತರೆ ಉತ್ಪನ್ನಗಳಿಗೆ ಆಕರ್ಷಕ ರಿಯಾಯಿತಿಗಳನ್ನು ತಿಳಿಸಿದೆ. ಇನ್ನು ಗ್ರಾಹಕರು ಮಿ ಆನ್‌ಲೈನ್ ಸ್ಟೋರ್‌ನಲ್ಲಿ ಫೋನ್‌ಗಳನ್ನು ಖರೀದಿಸಬಹುದಾಗಿದೆ.

ಭಾರತದಲ್ಲಿ

ಹೌದು, ಶಿಯೋಮಿ ಸಂಸ್ಥೆಯು ಆಯೋಜಿಸಿರುವ 'ನಂ. 1 ಮಿ ಫ್ಯಾನ್ ಫೆಸ್ಟಿವಲ್' (No. 1 Mi Fan Festival) ಕಾರ್ಯಕ್ರಮ ಭಾರತದಲ್ಲಿ ಈಗ ಚಾಲ್ತಿ ಇದೆ. ಈ ಮಾರಾಟವು ಇದೇ ಡಿಸೆಂಬರ್ 21 ರ ವರೆಗೆ ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ ಗ್ರಾಹಕರು ಶಿಯೋಮಿಯ ಕೆಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳನ್ನು ಭಾರೀ ಡಿಸ್ಕೌಂಟ್‌ ದರದಲ್ಲಿ ಖರೀದಿಸಬಹುದಾಗಿದೆ. ಮುಖ್ಯವಾಗಿ ರೆಡ್ಮಿ K50i ಮತ್ತು ಶಿಯೋಮಿ 12 ಪ್ರೊ ಫೋನ್‌ಗಳು ಹೆಚ್ಚಿನ ಆಫರ್‌ ಪಡೆದಿವೆ.

ಪಡೆಯಬಹುದಾಗಿದ್ದು

ರೆಡ್ಮಿ K50i ಫೋನ್ 6GB RAM + 128GB ಸ್ಟೋರೇಜ್ 23,999ರೂ. ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಅದೇ ರೀತಿ 8GB RAM + 256GB ಸ್ಟೋರೇಜ್ ಫೋನ್ 26,999ರೂ. ದರದಲ್ಲಿ ಲಭ್ಯವಿದೆ. ಇನ್ನು ಗ್ರಾಹಕರು ಎಚ್‌ಡಿಎಫ್‌ಸಿ ಅಥವಾ ಎಸ್‌ಬಿಐ ಕಾರ್ಡ್‌ ಮೂಲಕ ಖರೀದಿಸಿದರೆ, 3,000 ರೂ.ಗಳನ್ನು ಪಡೆಯಬಹುದಾಗಿದ್ದು, ಆಗ ಈ ಫೋನ್‌ಗಳು ಕ್ರಮವಾಗಿ 20,999ರೂ ಮತ್ತು 23,999ರೂ. ಗಳಿಗೆ ಖರೀದಿಸಬಹುದಾಗಿದೆ.

ವೇರಿಯಂಟ್‌

ಹಾಗೆಯೇ ಶಿಯೋಮಿ 12 ಪ್ರೊ ಫೋನ್‌ 8GB RAM + 256GB ವೇರಿಯಂಟ್‌ 55,999ರೂ. ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದ್ದು, 12GB RAM + 256GB ವೇರಿಯಂಟ್‌ 59,999ರೂ. ಗಳ ಆಫರ್ ಬೆಲೆ ಹೊಂದಿದೆ. ಇನ್ನು ಬ್ಯಾಂಕ್‌ ಕೊಡುಗೆಯಲ್ಲಿ ಸುಮಾರು 8,000ರೂ. ಗಳ ವರೆಗೂ ರಿಯಾಯಿತಿ ಪಡೆಯಬಹುದಾಗಿದೆ. ಹಾಗಾದರೆ ರೆಡ್ಮಿ K50i ಫೋನಿನ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ K50i: ಡಿಸ್‌ಪ್ಲೇ ರಚನೆ

ರೆಡ್ಮಿ K50i: ಡಿಸ್‌ಪ್ಲೇ ರಚನೆ

ರೆಡ್ಮಿ K50i ಸ್ಮಾರ್ಟ್‌ಫೋನ್ 6.6 ಇಂಚಿನ ಐಪಿಎಸ್‌ ಎಲ್‌ಸಿಡಿ ಮಾದರಿಯ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಫೋನ್ 20.5:9 ರಚನೆಯನ್ನು ಹೊಂದಿದ್ದು, ಫೋನಿನ ಮೇಲ್ಭಾಗದ ಮಧ್ಯದಲ್ಲಿ ಪಂಚ್‌ಹೋಲ್‌ ರಚನೆ ಇದೆ. ಜೊತೆಗೆ 144Hz ರಿಫ್ರೇಶ್‌ ರೇಟ್‌ ಅನ್ನು ಒಳಗೊಂಡಿದ್ದು, ಡಾಲ್ಬಿ ವಿಷನ್ ಮತ್ತು HDR10 ಸಪೋರ್ಟ್‌ ಸಹ ಪಡೆದಿದೆ.

ರೆಡ್ಮಿ K50i: ಪ್ರೊಸೆಸರ್‌ ಬಲ

ರೆಡ್ಮಿ K50i: ಪ್ರೊಸೆಸರ್‌ ಬಲ

ರೆಡ್ಮಿ K50i ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್‌ ಡೈಮೆನ್ಸಿಟಿ 8100 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಓಎಸ್‌ ಬೆಂಬಲ ಪಡೆದಿದೆ. ಇದರೊಂದಿಗೆ ಈ ಫೋನ್ ಎರಡು ವೇರಿಯಂಟ್‌ ಮಾಡೆಲ್‌ಗಳಲ್ಲಿ ಕಾಣಿಸಿಕೊಂಡಿದೆ. ಅವುಗಳು ಕ್ರಮವಾಗಿ 8GB + 256GB ಮತ್ತು 6GB RAM + 128GB ಸ್ಟೋರೇಜ್‌ ವೇರಿಯಂಟ್‌ ಆಗಿವೆ.

ರೆಡ್ಮಿ K50i: ಕ್ಯಾಮೆರಾ ಸೆನ್ಸಾರ್

ರೆಡ್ಮಿ K50i: ಕ್ಯಾಮೆರಾ ಸೆನ್ಸಾರ್

ರೆಡ್ಮಿ K50i ಸ್ಮಾರ್ಟ್‌ಫೋನ್ ಟ್ರಿಪಲ್‌ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 64 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಹಾಗೆಯೇ ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸಲ್‌ ಸೆನ್ಸಾರ್‌ ಹೊಂದಿದ್ದು, ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ.

ರೆಡ್ಮಿ K50i: ಬ್ಯಾಟರಿ ಪವರ್‌

ರೆಡ್ಮಿ K50i: ಬ್ಯಾಟರಿ ಪವರ್‌

ರೆಡ್ಮಿ K50i ಸ್ಮಾರ್ಟ್‌ಫೋನ್ 5,080mAh ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 67W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಪಡೆದಿದೆ. ಅಲ್ಲದೇ IP53 ರೇಟಿಂಗ್, ಡಾಲ್ಬಿ ಅಟ್ಮೋಸ್‌, X-Axis ಮೋಟಾರ್, 12 5G ಬ್ಯಾಂಡ್‌ಗಳು, Wi-Fi 6, 3.5mm ಹೆಡ್‌ಫೋನ್ ಜ್ಯಾಕ್, ಬ್ಲೂಟೂತ್ ಜೊತೆಗೆ ಡ್ಯುಯಲ್ ಸ್ಪೀಕರ್‌ಗಳನ್ನು ಒಳಗೊಂಡಿದೆ.

Best Mobiles in India

English summary
Xiaomi 12 Pro, Redmi K50i available at big discount in India: Prices, offers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X