Subscribe to Gizbot

4100mAh ಬ್ಯಾಟರಿಯುಳ್ಳ ರೆಡ್ಮೀ 3ಎಸ್ ಸ್ಮಾರ್ಟ್‌ಫೋನ್ ಲಾಂಚ್

Written By:

ಎಮ್ ಐ ಮ್ಯಾಕ್ಸ್‌ನ ಲಾಂಚ್ ಬೆನ್ನಲ್ಲೇ, ಶ್ಯೋಮಿಯು ರೆಡ್ಮೀ 3ಎಸ್ ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ತರುವ ಪ್ರಯತ್ನದಲ್ಲಿದೆ. ಚೀನಾದಲ್ಲಿ ಸ್ಮಾರ್ಟ್‌ಫೋನ್ ಕಳೆದ ತಿಂಗಳಷ್ಟೇ ಲಾಂಚ್ ಆಗಿದ್ದು ಮೆಟಲ್ ಬಾಡಿ ಮತ್ತು 4100mAh ಬ್ಯಾಟರಿಯನ್ನು ಹೊಂದಿದೆ.

ಓದಿರಿ: ಆಂಡ್ರಾಯ್ಡ್ ಫೋನ್‌ನ ವೇಗವನ್ನು ದುಪ್ಪಟ್ಟುಗೊಳಿಸುವುದು ಹೇಗೆ?

ಫೋನ್‌ನ ವಿ‍ಶೇಷತೆಗಳನ್ನು ನೋಡುವುದಾದರೆ, ಸ್ಮಾರ್ಟ್‌ಫೋನ್ 5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ರೆಸಲ್ಯೂಶನ್ 1280x720 ಪಿಕ್ಸೆಲ್‌ಗಳನ್ನು ಪಡೆದುಕೊಂಡಿದೆ. ಫೋನ್ ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 430 ಪ್ರೊಸೆಸರ್ ಅನ್ನು ಹೊಂದಿದ್ದು ಅಡ್ರೆನೊ 505 ಜಿಪಿಯುವನ್ನು ಪಡೆದುಕೊಂಡಿದೆ.

4100mAh ಬ್ಯಾಟರಿಯುಳ್ಳ ರೆಡ್ಮೀ 3ಎಸ್ ಸ್ಮಾರ್ಟ್‌ಫೋನ್ ಲಾಂಚ್

ರೆಡ್ಮೀ 3 ಯು ಎರಡು ಆವೃತ್ತಿಗಳಲ್ಲಿ ಬಂದಿದ್ದು, 2 ಜಿಬಿ RAM 16 ಜಿಬಿ ಸಂಗ್ರಹವನ್ನು ಪಡೆದುಕೊಂಡಿದ್ದರೆ 3ಜಿಬಿ RAM ಉಳ್ಳ ಸ್ಮಾರ್ಟ್‌ಫೋನ್ 32 ಜಿಬಿ ಮೆಮೊರಿಯನ್ನು ಹೊಂದಿದೆ. ಮೈಕ್ರೊ ಎಸ್‌ಡಿ ಕಾರ್ಡ್ ಬಳಸಿ ಇದನ್ನು 128 ಜಿಬಿಗೆ ವಿಸ್ತರಿಸಬಹುದಾಗಿದೆ.

ಇನ್ನು ಫೋನ್‌ನ ಕ್ಯಾಮೆರಾದತ್ತ ಗಮನಹರಿಸಿದರೆ ಡಿವೈಸ್ 13 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಹೊಂದಿದ್ದರೆ, ಮುಂಭಾಗದಲ್ಲಿ 5 ಎಮ್‌ಪಿ ಕ್ಯಾಮೆರಾ ಇದೆ. ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ ಇಲ್ಲಿದೆ.

ಓದಿರಿ: ನಿಮ್ಮ ಸ್ಮಾರ್ಟ್‌ಫೋನ್ ಸರ್ವ ಸಮಸ್ಯೆಗೆ ಗೂಗಲ್ ಪರಿಹಾರ

ರೆಡ್ಮೀ 3 ಎಸ್ ಸ್ಮಾರ್ಟ್‌ಫೋನ್‌ನಲ್ಲಿ 4ಜಿ LTE, ವೈ-ಫೈ 802.11 b/g/n, ಬ್ಲ್ಯೂಟೂತ್ 4.1, GPS + GLONASS, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಫೋನ್ 4100mAh ಬ್ಯಾಟರಿಯನ್ನು ಪಡೆದುಕೊಂಡಿದೆ.

ಶ್ಯೋಮಿ ರೆಡ್ಮೀ 3 ಎಸ್ ನಿಮಗೆ ಗಾಢ ಕಂದು, ಸಿಲ್ವರ್ ಮತ್ತು ಚಿನ್ನದ ಬಣ್ಣಗಳಲ್ಲಿ ದೊರೆಯಲಿದೆ. ಸ್ಮಾರ್ಟ್‌ಫೋನ್ ಕುರಿತ ಇನ್ನಷ್ಟು ಮಾಹಿತಿಗಳನ್ನು ಮುಂಬರುವ ದಿನಗಳಲ್ಲಿ ನಾವು ಅಪ್‌ಡೇಟ್ ಮಾಡಲಿದ್ದೇವೆ.

English summary
Following the launch of Mi Max, Xiaomi is planning to launch is Redmi 3s smartphone in the Indian market soon. This smartphone was launched in China last month with metal body and 4100mAh battery.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot