Subscribe to Gizbot

ನಿಮ್ಮ ಸ್ಮಾರ್ಟ್‌ಫೋನ್ ಸರ್ವ ಸಮಸ್ಯೆಗೆ ಗೂಗಲ್ ಪರಿಹಾರ

Written By:

ಹೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನು ನೀವು ಖರೀದಿಸುವಾಗ ಬಳಕೆದಾರ ಮಾರ್ಗದರ್ಶಿಯನ್ನು ಪಡೆದುಕೊಂಡಿರುತ್ತದೆ ಇದು ಡಿವೈಸ್ ಅನ್ನು ಮಾಡಬೇಕು ಎಂಬುದರ ಸೂಚನೆಗಳನ್ನು ನೀಡುತ್ತದೆ. ಆದರೆ ಆಪರೇಟಿಂಗ್ ಸಿಸ್ಟಮ್‌ನಿಂದ ಹೆಚ್ಚಿನದನ್ನು ಹೇಗೆ ಪಡೆದುಕೊಳ್ಳಬೇಕು ಎಂಬಂತಹ ಸೂಚನೆಗಳನ್ನು ಇದು ಪಡೆದುಕೊಂಡಿರುವುದಿಲ್ಲ.

ಓದಿರಿ: ಎಚ್ಚರ: ಸ್ಮಾರ್ಟ್‌ಫೋನ್ ಸ್ಫೋಟಕ್ಕೆ ಕಾರಣಗಳೇನು?

ಇದಕ್ಕೆಂದೇ ಗೂಗಲ್ ಕೆಲವೊಂದು ಯೋಜನೆಗಳನ್ನು ಖುದ್ದಾಗಿ ತೆಗೆದುಕೊಂಡಿದ್ದು, ಇದು ಆಂಡ್ರಾಯ್ಡ್ ಬಳಕೆದಾರರಿಗೆ ಸಹಾಯ ಮಾಡುವುದಕ್ಕೆ ಮುಂದಾಗಿದೆ. ಆಂಡ್ರಾಯ್ಡ್‌ಗಾಗಿ ವಿಶೇಷ ಟಿಪ್ಸ್ ಏಂಡ್ ಟ್ರಿಕ್ಸ್ ವೆಬ್‌ಸೈಟ್ ಅನ್ನು ಇದು ಸ್ಥಾಪನೆ ಮಾಡಿದ್ದು ಇಲ್ಲಿ ನಿಮ್ಮ ಫೋನ್ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೌಪ್ಯತೆ ಮತ್ತು ಭದ್ರತೆ

ಗೌಪ್ಯತೆ ಮತ್ತು ಭದ್ರತೆ

ಈ ಉಪ ವಿಭಾಗದಲ್ಲಿ, ನಿಮ್ಮ ಕಳೆದು ಹೋದ ಫೋನ್ ಅನ್ನು ಲಾಕ್ ಮಾಡುವುದು ಮತ್ತು ಲೊಕೇಟ್ ಮಾಡುವುದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಲೊಕೇಶನ್ ಸೆಟ್ಟಿಂಗ್ಸ್, ಕಂಟ್ರೋಲ್ ಅಪ್ಲಿಕೇಶನ್ ಅನುಮತಿಗಳು, ಫೋಟೋಗಳನ್ನು ಹಂಚಿಕೊಳ್ಳುವುದು, ಫಿಂಗರ್ ಪ್ರಿಂಟ್ ಹೊಂದಿಸುವುದು, ಕಳೆದು ಹೋದ ಫೋನ್ ಅನ್ನು ಭದ್ರಪಡಿಸುವುದು ಮೊದಲಾದವುಗಳನ್ನು ನಡೆಸಿಕೊಳ್ಳಬಹುದಾಗಿದೆ.

ಕ್ಯಾಮೆರಾ ಮತ್ತು ಫೋಟೋಗಳು

ಕ್ಯಾಮೆರಾ ಮತ್ತು ಫೋಟೋಗಳು

ಎಲ್ಲಿಯಾದರೂ, ಗ್ಯಾಲರಿಯನ್ನು ಬಳಸಿಕೊಳ್ಳುವಲ್ಲಿ ನಿಮಗೆ ತೊಂದರೆಯಾಯಿತು ಎಂದಾದಲ್ಲಿ ಆಂಡ್ರಾಯ್ಡ್ ಟಿಪ್ಸ್ ಮತ್ತು ಟ್ರಿಕ್ಸ್ ಸಬ್ ಸೆಕ್ಶನ್‌ನ ಬಳಕೆಯನ್ನು ಮಾಡಿಕೊಳ್ಳಬಹುದಾಗಿದೆ. ಫೋಟೋಗಳೆಲ್ಲವನ್ನೂ ವೀಕ್ಷಿಸುವುದು ಹೇಗೆ, ಸಂಪೂರ್ಣ ಸ್ಕೈಲೈನ್ ಅನ್ನು ಕ್ಯಾಪ್ಚರ್ ಮಾಡುವುದು, ಫೋಟೋಗಳನ್ನು ಕಂಡುಕೊಳ್ಳುವುದು, ಗೂಗಲ್ ಫೋಟೋಗಳೊಂದಿಗೆ ಚಲನ ಚಿತ್ರಗಳನ್ನು ರಚಿಸುವುದು, ಜಿಫ್ಟ್ ಇನ್ನಷ್ಟನ್ನು ನಿಮಗೆ ಸಿದ್ಧಪಡಿಸಿಕೊಳ್ಳಬಹುದಾಗಿದೆ.

ಕಸ್ಟಮೈಸೇಶನ್

ಕಸ್ಟಮೈಸೇಶನ್

ಉಪ ವಿಭಾಗವನ್ನು ಬಳಸಿಕೊಂಡು, ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಕಸ್ಟಮೈಸ್ ಮಾಡುವುದು ಹೇಗೆ ಎಂಬುದರ ಇನ್‌ಪುಟ್‌ಗಳನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ನಿಮ್ಮ ಸ್ಮಾರ್ಟ್‌ಫೋನ್ ಅನ್ನೇ ಅನನ್ಯಗೊಳಿಸಬಹುದಾದ ಮಾರ್ಗಗಳನ್ನು ನಿಮಗಿಲ್ಲಿ ಪಡೆದುಕೊಳ್ಳಬಹುದು. ವಿಡ್ಜೆಟ್‌ಗಳೊಂದಿಗೆ ಹೋಮ್ ಸ್ಕ್ರೀನ್ ಅನ್ನು ಕಸ್ಟಮೈಸ್ ಮಾಡುವ ವಿಧಾನವನ್ನು ನಿಮಗಿಲ್ಲಿ ದೊರಕಲಿದ್ದು ಅಪ್ಲಿಕೇಶನ್ ತೆರೆಯದೇ ಈ ಕಾರ್ಯವನ್ನು ಸಾಧಿಸಿಕೊಳ್ಳಬಹುದಾಗಿದೆ.

ಸೆಟ್ಟಿಂಗ್ಸ್

ಸೆಟ್ಟಿಂಗ್ಸ್

ಸೆಟ್ಟಿಂಗ್ ಉಪವಿಭಾಗದಡಿಯಲ್ಲಿ, ಅಲರಾಮ್‌ಗಳನ್ನು ರಿಕರಿಂಗ್ ಮಾಡುವುದು ಹೇಗೆ ಎಂಬುದರ ಸಲಹೆಗಳನ್ನು ಪಡೆದುಕೊಳ್ಳಬಹುದಾಗಿದ್ದು, ಫ್ಲ್ಯಾಶ್ ಲೈಟ್ ಅನ್ನು ತ್ವರಿತವಾಗಿ ಕಂಡುಕೊಳ್ಳಬಹುದಾಗಿದೆ. ಬೇಕಾಗಿರುವ ಸಂಪರ್ಕಗಳನ್ನು ವೇಗವಾಗಿ ಹಂಚಿಕೊಂಡು ಬಣ್ಣಗಳ ಹೊಂದಿಸುವಿಕೆಯನ್ನು ಬೇಕಾದಂತೆ ಮಾಡಿಕೊಳ್ಳಬಹುದಾಗಿದೆ.

ಹೆಚ್ಚಿನ ಅಪ್ಲಿಕೇಶನ್‌ಗಳು

ಹೆಚ್ಚಿನ ಅಪ್ಲಿಕೇಶನ್‌ಗಳು

ಇಲ್ಲಿ, ಗೂಗಲ್ ನೌ ಕಾರ್ಡ್‌ಗಳನ್ನು ಬಳಸಿಕೊಂಡು ಹವಾಮಾನ ಅಧಿಸೂಚನೆಗಳನ್ನು ಪಡೆಯಬಹುದು. ಸ್ವಯಂಚಾಲಿತ ಅಪ್‌ಡೇಟ್‌ಗಳನ್ನು ಬೇರೆ ಬೇರೆ ಅಂಶಗಳಿಗೆ ಪಡೆದುಕೊಳ್ಳಲಿರುವಿರಿ, ರಿಯಲ್ ಟೈಮ್ ನೋಟಿಫಿಕೇಶನ್ ಅನ್ನು ಕಂಡುಕೊಳ್ಳಬಹುದು. ನಿಮ್ಮ ಡೇಟಾ ಸಿಂಕ್ ಆಗಿ ಇರಿಸಿಕೊಳ್ಳಬಹುದು, ಸ್ನೇಹಿತರೊಂದಿಗೆ ಕ್ಯಾಲೆಂಡರ್ ಹಂಚಿಕೊಳ್ಳಬಹುದು

ಬ್ಯಾಟರಿ

ಬ್ಯಾಟರಿ

ನಿಮ್ಮ ಆಂಡ್ರಾಯ್ಡ್ ಫೋನ್‌ನ ಬ್ಯಾಟರಿ ದೀರ್ಘತೆಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದರ ಸಲಹೆಯನ್ನು ಈ ವಿಭಾಗದಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಬ್ಯಾಟರಿ ಸೇವರಿ ಮೋಡ್‌ನಿಂದ ಪ್ರಯೋಜವನ್ನು ಪಡೆಯುವುದು, ಫಾಸ್ಟ್ ಚಾರ್ಜಿಂಗ್ ಫೀಚರ್ ಅನ್ನು ಬಳಸುವುದು, ಬ್ಯಾಟರಿ ಉಳಿಸುವುದು ಹೇಗೆ ಮೊದಲಾದ ವಿವರಗಳು ದೊರೆಯಲಿದೆ.

ಧ್ವನಿ

ಧ್ವನಿ

ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಧ್ವನಿಯಿಂದ ನಿಯಂತ್ರಿಸುವುದು ಹೇಗೆ ಎಂಬುದರ ಮಾರ್ಗದರ್ಶವನ್ನು ಪಡೆದುಕೊಳ್ಳಬಹುದಾಗಿದೆ. ವಾಯ್ಸ್ ಸರ್ಚ್ ಅನ್ನು ಹೊಂದಿಸುವ ಸೂಚನೆಗಳು, ವಾಯ್ಸ್ ಬಳಸಿ ಉಚಿತ ಟೆಕ್ಸ್ಟಿಂಗ್, ಗೂಗಲ್‌ನಲ್ಲಿ ಪ್ರಶ್ನೆಗಳನ್ನು ಕೇಳುವುದು, ನಿಮ್ಮ ಧ್ವನಿ ನ್ಯಾವಿಗೇಟ್ ಮಾಡುವುದು ಹೀಗೆ ಬಹಳಷ್ಟನ್ನು ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Check out the sub-sections that this new Android Tips and Tricks section includes and how it can be useful in providing step-by-step instructions.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot