ಕಡಿಮೆ ಬೆಲೆಗೆ 'ರೆಡ್ಮಿ' ಸ್ಮಾರ್ಟ್‌ಫೋನ್ ಜೇಬಿಗಿಳಿಸಲು ಇದುವೇ ಸಕಾಲ!

|

ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಚೀನಾ ಮೂಲದ ಶಿಯೋಮಿ ಸಂಸ್ಥೆಯ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು ಸಿಕ್ಕಾಗು ಸದ್ದುಮಾಡಿವೆ. ಶಿಯೋಮಿ ಕಂಪನಿ ಈಗ ಮಿ ಸೂಪರ್ ಸೇಲ್ ಆಯೋಜಿಸಿದ್ದು, ಈ ಅವಧಿಯಲ್ಲಿಗ ಕಂಪನಿಯ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿಗೆ ಬಿಗ್ ಡಿಸ್ಕೌಂಟ್‌ ಲಭ್ಯವಿದೆ. ಹೀಗಾಗಿ ಶಿಯೋಮಿ ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಇದುವೇ ಗೋಲ್ಡನ್ ಟೈಮ್.

ಶಿಯೋಮಿ ಕಂಪನಿ

ಹೌದು, ಶಿಯೋಮಿ ಕಂಪನಿಯು ಇದೀಗ 'ಮಿ ಸೂಪರ್ ಸೇಲ್' ಮೇಳವನ್ನು ಆಯೋಜಿಸಿದೆ. ಮೂರು ದಿನಗಳ ಕಾಲ ನಡೆಯುವ ಈ ಸೇಲ್ ಮೇಳವು ಇಂದು ಆರಂಭವಾಗಿದ್ದು, ಇದೇ ನವೆಂಬರ್ 28ರ ವರೆಗೂ ಇರಲಿದೆ. ಈ ಸೀಮಿತ ಅವಧಿಯ ಕೊಡುಗೆಯಲ್ಲಿ ರೆಡ್ಮಿ ನೋಟ್‌ 7S, ರೆಡ್ಮಿ ನೋಟ್ 7 ಸರಣಿ, ರೆಡ್ಮಿ ಕೆ20 ಪ್ರೊ, ರೆಡ್ಮಿ 7A, ರೆಡ್ಮಿ Y3, ರೆಡ್ಮಿ ಗೋ ಸೇರಿದಂತೆ ಫೊಕೊ ಎಫ್‌ 1 ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಯಲ್ಲಿ ಲಭ್ಯ ಇವೆ. ಹಾಗಾದರೇ ಶಿಯೋಮಿ ಮಿ ಸೂಪರ್ ಸೇಲ್ ಮೇಳದಲ್ಲಿ ಡಿಸ್ಕೌಂಟ್‌ ಪಡೆದಿರುವ ಸ್ಮಾರ್ಟ್‌ಫೋನ್‌ ಬೆಲೆ ಎಷ್ಟು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ರೆಡ್ಮಿ ನೋಟ್ 7 ಪ್ರೊ

ರೆಡ್ಮಿ ನೋಟ್ 7 ಪ್ರೊ

ಶಿಯೋಮಿಯ ಜನಪ್ರಿಯ ರೆಡ್ಮಿ ನೋಟ್ 7 ಪ್ರೊ ಸ್ಮಾರ್ಟ್‌ಫೋನ್ ಇದೀಗ 'ಮಿ ಸೂಪರ್ ಸೇಲ್' ಮೇಳದಲ್ಲಿ ಬರೊಬ್ಬರಿ 4,000ರೂ.ಗಳ ಇಳಿಕೆ ಕಂಡಿದೆ. ಈ ಸ್ಮಾರ್ಟ್‌ಫೋನ್ 48ಎಂಪಿ ಸೆನ್ಸಾರ್ ಕ್ಯಾಮೆರಾ, 4,000mAh ಬ್ಯಾಟರಿ ಬಾಳಿಕೆ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಸದ್ಯ 'ಮಿ ಸೂಪರ್ ಸೇಲ್‌ ಮೇಳ'ದಲ್ಲಿ ಬೇಸ್‌ ವೇರಿಯಂಟ್‌ 11,999ರೂ.ಗಳಿಗೆ ಲಭ್ಯವಾಗಲಿದೆ.

ರೆಡ್ಮಿ ಕೆ20 ಮತ್ತು ರೆಡ್ಮಿ ಕೆ20 ಪ್ರೊ

ರೆಡ್ಮಿ ಕೆ20 ಮತ್ತು ರೆಡ್ಮಿ ಕೆ20 ಪ್ರೊ

ರೆಡ್ಮಿ ಕೆ20 ಮತ್ತು ರೆಡ್ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್‌ಗಳು ಶಿಯೋಮಿಯ ಫ್ಲ್ಯಾಗ್‌ಶಿಫ್ ಫೋನ್‌ಗಳಾಗಿದ್ದು, ಮಿ ಸೂಪರ್‌ ಸೇಲ್‌ನಲ್ಲಿ ಉತ್ತಮ ಡಿಸ್ಕಂಟ್‌ ಪಡೆದಿವೆ. ರೆಡ್ಮಿ ಕೆ20 ಸ್ಮಾರ್ಟ್‌ಫೋನ್ 3,000ರೂ.ರಿಯಾಯಿತಿ ಪಡೆದಿದ್ದು, 19,999ರೂ.ಗಳಿಗೆ ಲಭ್ಯವಿದೆ. ಹಾಗೆಯೇ ರೆಡ್ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್ 3,000ರೂ.ರಿಯಾಯಿತಿ ಪಡೆದಿದ್ದು, 25,999ರೂ.ಗಳಿಗೆ ಸಿಗಲಿದೆ.

ರೆಡ್ಮಿ ನೋಟ್ 7S ಮತ್ತು ರೆಡ್ಮಿ 7

ರೆಡ್ಮಿ ನೋಟ್ 7S ಮತ್ತು ರೆಡ್ಮಿ 7

'ಮಿ ಸೂಪರ್ ಸೇಲ್' ಮೇಳದಲ್ಲಿ 'ರೆಡ್ಮಿ ನೋಟ್ 7S' ಮತ್ತು 'ರೆಡ್ಮಿ 7' ಈ ಎರಡು ಸ್ಮಾರ್ಟ್‌ಫೋನ್‌ಗಳು ಸಹ ರಿಯಾಯಿತಿ ಪಡೆದಿವೆ. ಅವುಗಳಲ್ಲಿ 'ರೆಡ್ಮಿ ನೋಟ್ 7S' ಸ್ಮಾರ್ಟ್‌ಫೋನ್ 8,999ರೂ.ಗಳಿಗೆ ಲಭ್ಯ ಇದೆ. ಹಾಗೂ ರೆಡ್ಮಿ 7 ಫೋನ್ 6,999ರೂ.ಗಳಿಗೆ ಸಿಗಲಿದೆ.

ರೆಡ್ಮಿ Y3 ಮತ್ತು ರೆಡ್ಮಿ ಗೋ

ರೆಡ್ಮಿ Y3 ಮತ್ತು ರೆಡ್ಮಿ ಗೋ

ರೆಡ್ಮಿ Y3 ಮತ್ತು ರೆಡ್ಮಿ ಗೋ ಈ ಎರಡು ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಲೆವೆಲ್ ಮಾದರಿಯ ಫೋನ್‌ಗಳಾಗಿವೆ. ಪ್ರಸ್ತುತ ಚಾಲ್ತಿ ಇರುವ 'ಮಿ ಸೂಪರ್ ಸೇಲ್' ಮೇಳದಲ್ಲಿ ರೆಡ್ಮಿ Y3 7,999ರೂ,ಗಳಿಗೆ ಸಿಗಲಿದೆ. ಅದೇ ರೀತಿ ರೆಡ್ಮಿ ಗೋ ಸ್ಮಾರ್ಟ್‌ಫೋನ್ 4,499ರೂ.ಗಳಿಗೆ ಲಭ್ಯ ಇದೆ.

ರೆಡ್ಮಿ 7A ಮತ್ತು ಫೊಕೊ ಎಫ್‌1

ರೆಡ್ಮಿ 7A ಮತ್ತು ಫೊಕೊ ಎಫ್‌1

ಶಿಯೋಮಿ ಕಂಪನಿಯ ರೆಡ್ಮಿ 7A ಮತ್ತು ಫೊಕೊ ಎಫ್‌1 ಸ್ಮಾರ್ಟ್‌ಫೋನ್‌ಗಳು ಜನಪ್ರಿಯ ಫೋನ್‌ ಲಿಸ್ಟ್‌ನಲ್ಲಿ ಗುರುತಿಸಿಕೊಂಡಿದ್ದು, ಇದೀಗ ಡಿಸ್ಕೌಂಟ್‌ ದರದಲ್ಲಿ ಸಿಗುತ್ತಿವೆ. ರೆಡ್ಮಿ 7A ಸ್ಮಾರ್ಟ್‌ಫೋನ್ 5,499ರೂ.ಗಳಿಗೆ ಲಭ್ಯ ಇದೆ. ಹಾಗೆಯೇ ಫೊಕೊ ಎಫ್‌ 1 ಫೋನ್ 14,999ರೂ.ಗಳಿಗೆ ಸಿಗಲಿದೆ.

Most Read Articles
Best Mobiles in India

English summary
Xiaomi is back with yet another edition of the Mi Super Sale. The latest edition of Mi Super Sale is now live. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X