Subscribe to Gizbot

ಮೈಕ್ರೋಸಾಫ್ಟ್‌ನೊಂದಿಗೆ ಕೈ ಜೋಡಿಸಿದ ಶಿಯೋಮಿ: ಶೀಘ್ರವೇ ವಿಂಡೋಸ್ ಫೋನ್ ಬಿಡುಗಡೆ..!

Written By:

ಚೀನಾ ಮೂಲದ ಎಲೆಕ್ಟ್ರಾನಿಕ್ ವಸ್ತುಗಳ ತಯಾರಕ ಕಂಪನಿ ಶಿಯೋಮಿ, ಭಾರತ ಸೇರಿದಂತೆ ವಿವಿಧ ಕಡೆಗಳಲ್ಲಿ ಈಗಾಗಲೇ ತನ್ನ ಯಶಸ್ವಿ ಪರೀಕ್ಷೆಯನ್ನು ಮುಗಿಸಿದ್ದು, ದೊಡ್ಡ ಮಟ್ಟದ ಯಶಸ್ಸು ಸಾಧಿಸಿದೆ. ಅಲ್ಲದೇ ಈಗಾಗಲೇ ಮಾರುಕಟ್ಟೆಯಲ್ಲಿ ತಳವೂರಿಸಿರುವ ಹಲವು ದೈತ್ಯ ಕಂಪನಿಗಳಿಗೆ ಸೆಡ್ಡು ಹೊಡೆದು ತನ್ನದೇ ಸಾಮ್ರಾಜ್ಯವನ್ನು ಕಟ್ಟಲು ಮುಂದಾಗಿದೆ. ಇದೇ ಸಂದರ್ಭದಲ್ಲಿ ಹೊಸದೊಂದು ಸುದ್ದಿ ಲಭ್ಯವಾಗಿದೆ.

ಮೈಕ್ರೋಸಾಫ್ಟ್‌ನೊಂದಿಗೆ ಕೈ ಜೋಡಿಸಿದ ಶಿಯೋಮಿ: ಶೀಘ್ರವೇ ವಿಂಡೋಸ್ ಫೋನ್ ಬಿಡುಗಡೆ..

ಶಿಯೋಮಿ ಕಂಪನಿಯೂ ಸಾಫ್ಟ್‌ವೇರ್ ದೈತ್ಯ ಮೈಕ್ರೊಸಾಫ್ಟ್ ಕಂಪನಿಯೊಂದಿಗೆ ಒಪ್ಪಂದನವನ್ನು ಮಾಡಿಕೊಂಡಿದೆ ಎನ್ನಲಾಗಿದೆ. ಈಗಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ ನಷ್ಟವನ್ನು ಅನುಭವವಿಸಿರುವ ಮೈಕ್ರೊಸಾಫ್ಟ್ ಮತ್ತೊಮ್ಮೆ ಹೊಸ ಪ್ರಯತ್ಮಕ್ಕಾಗಿ ಶಿಯೋಮಿಯೊಂದಿಗೆ ಕೈ ಜೋಡಿಸಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ ಸ್ಪೀಕರ್:

ಸ್ಮಾರ್ಟ್‌ ಸ್ಪೀಕರ್:

ಈಗಾಗಲೇ ಮಾರುಕಟ್ಟೆಯಲ್ಲಿ ಆಪಲ್, ಅಮೆಜಾನ್ ಮತ್ತು ಗೂಗಲ್ ಕಂಪನಿಗಳು ತಮ್ಮದೇ ಸ್ಮಾರ್ಟ್‌ ಸ್ಪೀಕರ್ ಮತ್ತು ವಾಯ್ಸ್ ಅಸಿಸ್ಟೆಂಟ್ ಗಳನ್ನು ಹೊಂದಿವೆ. ಇದೆ ಹಿನ್ನಲೆಯಲ್ಲಿ ಕೃತಕ ಬುದ್ದಿ ಮತ್ತೆಯನ್ನು ಹೊಂದಿರುವ ಸ್ಮಾರ್ಟ್‌ ಸ್ಪೀಕರ್ ಬಿಡುಗಡೆ ಮಾಡಲು ಮುಂದಾಗಿರುವ ಶಿಯೋಮಿ ಮೈಕ್ರೊಸಾಫ್ಟ್ ವಾಯ್ಸ್ ಅಸಿಸ್ಟೆಂಟ್ ಕರೊಟನಾವನ್ನು ಬಳಕೆ ಮಾಡಿಕೊಳ್ಳಲಿದೆ.

ಮೈಕ್ರೊಸಾಫ್ಟ್ ಕೃತಕ ಬುದ್ದಿ ಮತ್ತೆ:

ಮೈಕ್ರೊಸಾಫ್ಟ್ ಕೃತಕ ಬುದ್ದಿ ಮತ್ತೆ:

ಇದಲ್ಲದೇ ಮೈಕ್ರೊಸಾಫ್ಟ್ ಅಭಿವೃದ್ಧಿ ಪಡಿಸಿರುವ ಕೃತಕ ಬುದ್ಧಿ ಯನ್ನು ಶಿಯೋಮಿಯೂ ಬಳಕೆಮಾಡಿಕೊಳ್ಳಲಿದೆ ಎನ್ನಲಾಗಿದೆ. ಇದರಿಂದಾಗಿ ಶಿಯೋಮಿ ಹಲವು ಡಿವೈಸ್ ಗಳನ್ನು ನಿರ್ಮಾಣ ಮಾಡಲಿದೆ.

ಕ್ಲೌಡ್ ಕಂಪ್ಯೂಟರ್:

ಕ್ಲೌಡ್ ಕಂಪ್ಯೂಟರ್:

ಇದಲ್ಲದೇ ಈ ಎರಡು ಕಂಪನಿಗಳು ಸೇರಿಕೊಂಡು ಒಂದಾಗಿ ಕ್ಲೌಡ್ ಕಂಪ್ಯೂಟರ್ ಸೇವೆಯನ್ನು ಉತ್ತಮ ಪಡಿಸಲಿವೆ ಎನ್ನಲಾಗಿದೆ. ಅಲ್ಲದೇ ವಿಂಡೋಸ್ ಬಳಕೆ ಮಾಡಿಕೊಂಡು ಲ್ಯಾಪ್ ಟಾಪ್‌ಗಳನ್ನು ಶಿಯೋಮಿ ನಿರ್ಮಿಸಲಿದೆ ಎನ್ನಲಾಗಿದೆ.

ಹೊಸ ಸ್ಮಾರ್ಟ್‌ಫೋನ್:

ಹೊಸ ಸ್ಮಾರ್ಟ್‌ಫೋನ್:

ಇದಲ್ಲದೇ ಮೈಕ್ರೋಸಾಫ್ಟ್ ಮತ್ತು ಶಿಯೋಮಿ ಒಂದಾಗಿ ಹೊಸದೊಂದು ಸ್ಮಾರ್ಟ್‌ಫೋನ್ ಅನ್ನು ನಿರ್ಮಿಸಲಿದೆ. ಶಿಯೋಮಿ ಆಂಡ್ರಾಯ್ಡ್ ಫೋನಿನೊಂದಿಗೆ ವಿಂಡೋಸ್ ಪೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ದಿನಕ್ಕೊಂದು GB ಡೇಟಾ ಸಲುತ್ತಿಲ್ಲವೇ..? ವೊಡಾಫೋನ್‌ನಿಂದ ದಿನಕ್ಕೆ 4.5GB ಡೇಟಾ..!

English summary
Xiaomi, Microsoft Join Hands to Develop AI-Powered Smartphones, Speakers. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot