ಶಿಯೋಮಿ ಫೋನ್‌ಗಳಿಗೆ ಅತೀ ದೊಡ್ಡ ಡಿಸ್ಕೌಂಟ್‌; ಸದ್ಯದಲ್ಲೇ ಆಫರ್ ಮುಕ್ತಾಯ!

|

ಶಿಯೋಮಿ ದೇಶಿಯ ಮಾರುಕಟ್ಟೆಯಲ್ಲಿ ಹಲವು ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅವುಗಳಲ್ಲಿ ಬಜೆಟ್‌ ದರದ ಫೋನ್‌ಗಳು ಹೆಚ್ಚಿನ ಗಮನ ಸೆಳೆದಿವೆ. ಹಾಗೆಯೇ ಶಿಯೋಮಿ ಇಂಡಿಯಾ ಸಂಸ್ಥೆಯು ತನ್ನ 8 ನೇ ವಾರ್ಷಿಕೋತ್ಸವದ ವಿಶೇಷ ಸಂದರ್ಭವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಸಂಸ್ಥೆಯು ತನ್ನ ಸ್ಮಾರ್ಟ್‌ಫೋನ್‌ ಗಳು, ಸ್ಮಾರ್ಟ್‌ವಾಚ್‌ಗಳು, ಸ್ಮಾರ್ಟ್ ಟಿವಿಗಳು, ಆಡಿಯೋ ಸೇರಿದಂತೆ ಕೆಲವು ಜನಪ್ರಿಯ ಉತ್ಪನ್ನಗಳ ಮೇಲೆ ದೊಡ್ಡ ರಿಯಾಯಿತಿಗಳನ್ನು ನೀಡುತ್ತಿದೆ.

ಶಿಯೋಮಿಯ

ಹೌದು, ಶಿಯೋಮಿ ಸಂಸ್ಥೆಯು 8 ನೇ ವಾರ್ಷಿಕೋತ್ಸವದ ಪ್ರಯುಕ್ತ ಭರ್ಜರಿ ಕೊಡುಗೆಗಳನ್ನು ನೀಡುತ್ತದೆ. ಇನ್ನು ಶಿಯೋಮಿಯ ಈ ಸೇಲ್‌ ಇದೇ ಜುಲೈ 8 ರಿಂದ ಜುಲೈ 13, 2022 ರ ವರೆಗೂ ನಡೆಯುತ್ತದೆ. ಈ ವಿಶೇಷ ಮಾರಾಟ ಮೇಳದಲ್ಲಿ ಗ್ರಾಹಕರು ಶಿಯೋಮಿ ಸ್ಮಾರ್ಟ್‌ಫೋನ್‌ಗಳನ್ನು ಹಾಗೂ ಇತರೆ ಸ್ಮಾರ್ಟ್‌ ಉತ್ಪನ್ನಗಳನ್ನು ಭಾರಿ ರಿಯಾಯಿತಿಯಲ್ಲಿ ನೀಡುವ ಖರೀದಿಸಬಹುದಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.

ಶಿಯೋಮಿ ಫೋನ್‌ಗಳಿಗೆ ರಿಯಾಯಿತಿ

ಶಿಯೋಮಿ ಫೋನ್‌ಗಳಿಗೆ ರಿಯಾಯಿತಿ

ಶಿಯೋಮಿ 11i (8GB RAM + 128GB) ಸ್ಟೋರೇಜ್‌ ವೇರಿಯಂಟ್‌ 5000ರೂ, ರಿಯಾಯಿತಿ ಪಡೆದಿದ್ದು, ಸದ್ಯ 26,999ರೂ. ಗಳ ಬೆಲೆಯಲ್ಲಿ ದೊರೆಯುತ್ತದೆ. ಇನ್ನು ಶಿಯೋಮಿಯ ಶಿಯೋಮಿ 11i ಹೈಪರ್‌ಚಾರ್ಜ್‌ (12GB RAM + 256GB) ಸ್ಟೋರೇಜ್‌ ವೇರಿಯಂಟ್‌ 5000ರೂ, ರಿಯಾಯಿತಿ ಪಡೆದಿದ್ದು, ಸದ್ಯ 28,999ರೂ. ಗಳ ಬೆಲೆಯಲ್ಲಿ ದೊರೆಯುತ್ತದೆ.

ರೆಡ್ಮಿ ಫೋನ್‌ಗಳಿಗೆ ಡಿಸ್ಕೌಂಟ್‌

ರೆಡ್ಮಿ ಫೋನ್‌ಗಳಿಗೆ ಡಿಸ್ಕೌಂಟ್‌

ರೆಡ್ಮಿ 9A (3GB RAM + 32GB) ಸ್ಟೋರೇಜ್‌ ವೇರಿಯಂಟ್‌ ಫೋನ್‌ 1,700ರೂ, ಡಿಸ್ಕೌಂಟ್‌ ಪಡೆದಿದ್ದು, 7,799ರೂ. ಗಳಿಗೆ ಲಭ್ಯವಾಗಲಿದೆ. ಅದೇ ರೀತಿ ರೆಡ್ಮಿ 10A (4GB RAM + 64GB) ಸ್ಟೋರೇಜ್‌ ವೇರಿಯಂಟ್‌ ಫೋನ್‌ 3,000ರೂ, ಡಿಸ್ಕೌಂಟ್‌ ಪಡೆದಿದ್ದು, 8,999ರೂ. ಗಳಿಗೆ ಲಭ್ಯವಾಗಲಿದೆ. ಹಾಗೆಯೇ ರೆಡ್ಮಿ ನೋಟ್ 11 ಪ್ರೊ +5G (8GB RAM + 128GB) ಸ್ಟೋರೇಜ್‌ ವೇರಿಯಂಟ್‌ 4,000ರೂ, ರಿಯಾಯಿತಿ ಪಡೆದಿದ್ದು, ಸದ್ಯ 22,999ರೂ. ಗಳ ಬೆಲೆಯಲ್ಲಿ ದೊರೆಯುತ್ತದೆ.

ಲ್ಯಾಪ್‌ಟಾಪ್‌ ಮತ್ತು ಸ್ಮಾರ್ಟ್‌ಟಿವಿಗಳಿಗೂ ಭರ್ಜರಿ ರಿಯಾಯಿತಿ

ಲ್ಯಾಪ್‌ಟಾಪ್‌ ಮತ್ತು ಸ್ಮಾರ್ಟ್‌ಟಿವಿಗಳಿಗೂ ಭರ್ಜರಿ ರಿಯಾಯಿತಿ

ಶಿಯೋಮಿ ವಾರ್ಷಿಕೋತ್ಸವದ ಪ್ರಯುಕ್ತ ಸಂಸ್ಥೆಯ ಆಯ್ದ ಲ್ಯಾಪ್‌ಟಾಪ್‌ ಮತ್ತು ಸ್ಮಾರ್ಟ್‌ಟಿವಿ ಗಳಿಗೂ ಭರ್ಜರಿ ರಿಯಾಯಿತಿ ಪಡೆದಿವೆ. ಶಿಯೋಮಿ OLED 55 ಟಿವಿ, ರೆಡ್ಮಿ i3, ರೆಡ್ಮಿ 15 ಪ್ರೊ ಲ್ಯಾಪ್‌ಟಾಪ್‌ಗಳು ಆಕರ್ಷಕ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿವೆ. ಇತ್ತೀಚಿನ ಶಿಯೋಮಿ 12 ಪ್ರೊ ಫೋನ್ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಶಿಯೋಮಿ 12 ಪ್ರೊ ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಶಿಯೋಮಿ 12 ಪ್ರೊ ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಶಿಯೋಮಿ 12 ಪ್ರೊ ಸ್ಮಾರ್ಟ್‌ಫೋನ್‌ 6.72 ಇಂಚಿನ WQHD+ E5 ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,440 x 3,200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಈ ಡಿಸ್‌ಪ್ಲೇ 1Hz ಮತ್ತು 120Hz ನಡುವಿನ ರಿಫ್ರೆಶ್‌ ರೇಟ್‌ ಬೆಂಬಲಿಸಲಿದೆ. ಇದು 1,500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ ಪ್ರೊಟೆಕ್ಷನ್‌ ಅನ್ನು ಒಳಗೊಂಡಿದೆ.

ಶಿಯೋಮಿ 12 ಪ್ರೊ ಪ್ರೊಸೆಸರ್‌ ಯಾವುದು?

ಶಿಯೋಮಿ 12 ಪ್ರೊ ಪ್ರೊಸೆಸರ್‌ ಯಾವುದು?

ಶಿಯೋಮಿ 12 ಪ್ರೊ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್‌ ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 12 ಅನ್ನು MIUI 13 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಹಾಗೂ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಆಯ್ಕೆಗಳನ್ನು ಇದು ಒಳಗೊಂಡಿದೆ.

ಶಿಯೋಮಿ 12 ಪ್ರೊ ಕ್ಯಾಮೆರಾ ವಿಶೇಷ

ಶಿಯೋಮಿ 12 ಪ್ರೊ ಕ್ಯಾಮೆರಾ ವಿಶೇಷ

ಶಿಯೋಮಿ 12 ಪ್ರೊ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX707 ಸೆನ್ಸಾರ್‌ ಅನ್ನು ಹೊಂದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಅನ್ನು ಬೆಂಬಲಿಸುವ f/1.8 ಲೆನ್ಸ್‌ ಹೊಂದಿದೆ. ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು ಮೂರನೇ ಕ್ಯಾಮೆತಾ 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ ಅನ್ನು ಸಹ ಒಳಗೊಂಡಿದೆ. ಇನ್ನು ರಿಯರ್‌ ಕ್ಯಾಮೆರಾ 24fps ಫ್ರೇಮ್ ರೇಟ್‌ನಲ್ಲಿ 8K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ.

ಶಿಯೋಮಿ 12 ಪ್ರೊ ಬ್ಯಾಟರಿ ಮತ್ತು ಇತರೆ

ಶಿಯೋಮಿ 12 ಪ್ರೊ ಬ್ಯಾಟರಿ ಮತ್ತು ಇತರೆ

ಶಿಯೋಮಿ 12 ಪ್ರೊ ಸ್ಮಾರ್ಟ್‌ಫೋನ್‌ 4,600 mAh ಲಿ-ಪಾಲಿಮರ್‌ ಬ್ಯಾಟರಿಯನ್ನು ಹೊಂದಿದೆ. ಇದು 120W ಶಿಯೋಮಿ ಹೈಪರ್‌ ಚಾರ್ಜ್ ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ ಕ್ವಿಕ್ ಚಾರ್ಜ್ 4, ಕ್ವಿಕ್ ಚಾರ್ಜ್ 3+ ಮತ್ತು ಪವರ್ ಡೆಲಿವರಿ 3.0 ಚಾರ್ಜಿಂಗ್ ಮಾನದಂಡಗಳನ್ನು ಸಹ ಬೆಂಬಲಿಸುತ್ತದೆ. ಇದಲ್ಲದೆ, ಇದು 50W ವೈರ್‌ಲೆಸ್ ಟರ್ಬೊ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ v5.2, GPS/ A-GPS/ NavIC, ಇನ್ಫ್ರಾರೆಡ್ (IR) ಬ್ಲಾಸ್ಟರ್, NFC, ಮತ್ತು USB ಟೈಪ್ C ಪೋರ್ಟ್ ಬೆಂಬಲಿಸಲಿದೆ.

ಶಿಯೋಮಿ 12 ಪ್ರೊ ಮೆಮೊರಿ ಮತ್ತು ಕಲರ್ ಆಯ್ಕೆ

ಶಿಯೋಮಿ 12 ಪ್ರೊ ಮೆಮೊರಿ ಮತ್ತು ಕಲರ್ ಆಯ್ಕೆ

ಭಾರತದಲ್ಲಿ ಶಿಯೋಮಿ 12 ಪ್ರೊ ಸ್ಮಾರ್ಟ್‌ಫೋನ್‌ ಬೇಸ್‌ ಮಾಡೆಲ್‌ 8 GB RAM ಮತ್ತು 256 GB ಹಾಗೂ 12 GB RAM ಮತ್ತು 256 GB ರೂಪಾಂತರದ ಆಯ್ಕೆ ಪಡೆದಿದೆ. ಇನ್ನು ಈ ಫೋನ್‌ ಕೌಚರ್ ಬ್ಲೂ, ನಾಯ್ರ್ ಬ್ಲಾಕ್ ಮತ್ತು ಒಪೆರಾ ಮೌವ್ ಬಣ್ಣಗಳ ಆಯ್ಕೆಯಲ್ಲಿ ಬರಲಿದೆ.

Best Mobiles in India

English summary
Xiaomi Offering Super Big Price Cuts on Products on 8th Anniversary in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X