Subscribe to Gizbot

ಶ್ಯೋಮಿಯ ರೆಡ್ಮೀ 2 ಫೋನ್ ಮಾರ್ಚ್ 24ರಿಂದ ಮಾರಾಟ

Written By:

ಚೀನಾದಲ್ಲಿ ರೆಡ್ಮೀ 2 ವನ್ನು ಲಾಂಚ್ ಮಾಡುವ ಮೂಲಕ ಶ್ಯೋಮಿ ಹೊಸ ವರ್ಷಕ್ಕೆ ಅದ್ಭುತ ಕೊಡುಗೆಯನ್ನೇ ನೀಡಿದೆ. ಭಾರತದಲ್ಲಿ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಅನ್ನು ಚೀನಾದ ಈ ಕಂಪೆನಿ ಇಂದು ಲಾಂಚ್ ಮಾಡಿದೆ. ಇದರ ಬೆಲೆ ರೂ 6,999 ಆಗಿದ್ದು, ಇದು ಬಿಳಿ ಮತ್ತು ಗ್ರೆ ಬಣ್ಣದಲ್ಲಿ ಲಭ್ಯವಾಗಲಿದೆ. ಬಿಳಿ ಆವೃತ್ತಿಯು ಮಾರ್ಚ್ 24 ರಂದು ಮಾರಾಟಕ್ಕೆ ತೊಡಗಲಿದ್ದು, ಪ್ರಥಮ ಸೇಲ್‌ನ ನೋಂದಣಿಯು ಇಂದು ಸಂಜೆ 6 ಕ್ಕೆ ಆರಂಭವಾಗಲಿದೆ.

ಶ್ಯೋಮಿಯ ರೆಡ್ಮೀ 2 ಫೋನ್ ಮಾರ್ಚ್ 24ರಿಂದ ಮಾರಾಟ

ರೆಡ್ಮೀ 2, 4.7 ಇಂಚಿನ ಎಚ್‌ಡಿ ಐಪಿಎಸ್ ಲ್ಯಾಮಿನೇಟೆಡ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಪಿಕ್ಸೆಲ್ ಡೆನ್ಸಿಟಿ 312ಪಿಪಿಐ ಆಗಿದೆ ಮತ್ತು ಅಸಾಹಿ ಡ್ರಾಗನ್ ಟ್ರೇಲ್ ಇದನ್ನು ಸಂರಕ್ಷಿಸುತ್ತಿದೆ. ಇದು 64 ಬಿಟ್ 1.2GHZ ಸ್ನ್ಯಾಪ್‌ಡ್ರಾಗನ್ 410 ಕ್ವಾಡ್ ಕೋರ್ ಪ್ರೊಸೆಸರ್ ಜೊತೆಗೆ ಬಂದಿದ್ದು ಇದನ್ನು ಅಡ್ರೆನೊ 306 ಜಿಪಿಯುನೊಂದಿಗೆ ಪೇರ್ ಮಾಡಲಾಗಿದೆ.

ಶ್ಯೋಮಿಯ ರೆಡ್ಮೀ 2 ಫೋನ್ ಮಾರ್ಚ್ 24ರಿಂದ ಮಾರಾಟ

ಇದು 1ಜಿಬಿ RAM ನೊಂದಿಗೆ ಬಂದಿದ್ದು, 8 ಜಿಬಿ ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಇದನ್ನು 32ಜಿಬಿಗೆ ವಿಸ್ತರಿಸಬಹುದಾಗಿದೆ. ಇನ್ನು ಫೋನ್‌ನ ರಿಯರ್ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಗಿದ್ದು ಮುಂಭಾಗ ಕ್ಯಾಮೆರಾ 2 ಮೆಗಾಪಿಕ್ಸೆಲ್ ಆಗಿದೆ. ಇನ್ನು ಫೋನ್‌ನ ಬ್ಯಾಟರಿ ಸಾಮರ್ಥ್ಯ 2,200mAh ಆಗಿದೆ. ಇನ್ನು ಡಿವೈಸ್ ಡ್ಯುಯಲ್ ಸಿಮ್ ಬೆಂಬಲದೊಂದಿಗೆ ಬಂದಿದ್ದು ವೈಫೈ, ಯುಎಸ್‌ಬಿ ಒಟಿಜಿ, ಬ್ಲ್ಯೂಟೂತ್ ಅನ್ನು ಫೋನ್‌ನಲ್ಲಿ ಕಾಣಬಹುದಾಗಿದೆ.

English summary
Xiaomi Redmi 2 launched in India for Rs 6,999 features HD display, 64-bit processor and LTE connectivity: Specifications and features.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot