Subscribe to Gizbot

ಫಸ್ಟ್ ಸೇಲ್ ನಲ್ಲಿ ರೆಡ್ ಮಿ 5A ಸೋಲ್ಡ್ ಔಟ್: ಮುಂದಿನ ಸೇಲ್.?

Written By: Lekhaka

ರೆಡ್ ಮಿ 5A ಸ್ಮಾರ್ಟ್ ಫೋನ್ ಬೇಡಿಕೆ ಅತ್ಯಧಿಕವಾಗಿರುವ ಹಿನ್ನಲೆಯಲ್ಲಿ ಇದೇ ತಿಂಗಳು ಅಂದರೆ ಡಿಸೆಂಬರ್ 14ರಂದು ಮತ್ತೆ ಫ್ಲಿಪ್ ಕಾರ್ಟ್ ಮತ್ತು ಮಿ. ಕಾಮ್ ನಲ್ಲಿ ಈ ಫೋನ್ ಸೇಲ್ ಆರಂಭವಾಗಲಿದೆ. ಮೊದಲನೆ ಸೇಲ್ ನಲ್ಲಿ ಸ್ಮಾರ್ಟ್ ಫೋನ್ ಖರೀದಿಸಲು ಸಾಧ್ಯವಾಗದೆ ಇರವವರು ಸೆಕೆಂಡ್ ಸೇಲ್ ನಲ್ಲಿ ಕೊಳ್ಳಲು ಪ್ರಯತ್ನಿಸಬಹುದು.

ಫಸ್ಟ್ ಸೇಲ್ ನಲ್ಲಿ ರೆಡ್ ಮಿ 5A ಸೋಲ್ಡ್ ಔಟ್: ಮುಂದಿನ ಸೇಲ್.?

ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್ ಫೋನ್ ಮೂಲಕವೇ ಗ್ರಾಹಕರ ಮನದಲ್ಲಿ ಸ್ಥಾನ ಪಡೆದುಕೊಂಡಿರುವ ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಕ ಕಂಪನಿ ಶಿಯೋಮಿ ಬಿಡುಗಡೆ ಮಾಡಿದ್ದ ರೆಡ್ ಮಿ 5A ಸ್ಮಾರ್ಟ್ ಫೋನ್ ಸಹ ಮತ್ತೊಂದು ದಾಖಲೆಗೆ ಸಾಕ್ಷಿಯಾಗಿದ್ದು, ಮೊದಲ ಫ್ಲಾಷ್ ಸೇಲ್ ಸೋಲ್ಡ್ ಔಟ್ ಆಗಿದೆ.

ನವೆಂಬರ್ 30 ರಂದು ಲಾಂಚ್ ಆಗಿದ್ದ ರೆಡ್ ಮಿ 5A ಸ್ಮಾರ್ಟ್ ಫೋನ್ ಡಿಸೆಂಬರ್ 7 ರಂದು ಮೊದಲ ಬಾರಿಗೆ ಮಿ.ಕಾಮ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ಕಾಣಿಸಿಕೊಂಡಿತ್ತು. ರೂ. 4999ಕ್ಕೆ ಮಾರಾಟವಾಗುತ್ತಿದ್ದ ಈ ಸ್ಮಾರ್ಟ್ ಫೋನ್ ಅನ್ನು ಕೊಳ್ಳಲು ಗ್ರಾಹಕರು ಮುಗಿ ಬಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮತ್ತೊಮ್ಮೆ ಈ ಸ್ಮಾರ್ಟ್ ಫೋನ್ ಸೇಲ್ ನಲ್ಲಿ ಕಾಣಿಸಿಕೊಳ್ಳಲಿದೆ.

ರೆಡ್ ಮಿ 5A ಸ್ಮಾರ್ಟ್ ಫೋನ್ ಬೇಡಿಕೆ ಅತ್ಯಧಿಕವಾಗಿರುವ ಹಿನ್ನಲೆಯಲ್ಲಿ ಇದೇ ತಿಂಗಳು ಅಂದರೆ ಡಿಸೆಂಬರ್ 14ರಂದು ಮತ್ತೆ ಫ್ಲಿಪ್ ಕಾರ್ಟ್ ಮತ್ತು ಮಿ. ಕಾಮ್ ನಲ್ಲಿ ಈ ಫೋನ್ ಸೇಲ್ ಆರಂಭವಾಗಲಿದೆ. ಮೊದಲನೆ ಸೇಲ್ ನಲ್ಲಿ ಸ್ಮಾರ್ಟ್ ಫೋನ್ ಖರೀದಿಸಲು ಸಾಧ್ಯವಾಗದೆ ಇರವವರು ಸೆಕೆಂಡ್ ಸೇಲ್ ನಲ್ಲಿ ಕೊಳ್ಳಲು ಪ್ರಯತ್ನಿಸಬಹುದು.

ಇದಲ್ಲದೇ ಈ ಸ್ಮಾರ್ಟ್ ಫೋನ್ ಶೀಘ್ರವೇ ಆಫ್ ಲೈನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, ಅತೀ ಕಡಿಮೆ ಬೆಲೆ ಮಾರಾಟವಾಗುತ್ತಿರುವ ಈ ಸ್ಮಾರ್ಟ್ ಫೋನ್ ಹೊಸ ಮಾರುಕಟ್ಟೆಯಲ್ಲಿ ಹೊಸ ದಾಖಲೆಯನ್ನು ನಿರ್ಮಿಸುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದೆ.

ಆಪಲ್ ನಿಂದ ಶೀಘ್ರವೇ ಕಡಿಮೆ ಬೆಲೆ ಐಪ್ಯಾಡ್ ಲಾಂಚ್

ಎರಡು ಆವೃತ್ತಿಯಲ್ಲಿ ಕಾಣಿಸಿಕೊಂಡಿರುವ ರೆಡ್ ಮಿ 5A ಸ್ಮಾರ್ಟ್ ಫೋನ್, 2GB RAM ಮತ್ತು 16GB ಇಂಟರ್ನಲ್ ಮೆಮೊರಿಯ ಒಂದು ಆವೃತ್ತಿ ಹಾಗೆಯೇ, 3GB RAM ಮತ್ತು 32GB ಇಂಟರ್ನಲ್ ಮೆಮೊರಿಯ ಮತ್ತೊಂದು ಆವೃತ್ತೊ ದೊರೆಯಲಿದೆ. ಈ ಎರಡು ಫೋನ್ ಗಳು ಕ್ರಮವಾಗಿ ರೂ. 5999 ಮತ್ತು ರೂ.6999ಗೆ ದೊರೆಯಲಿದೆ. ಆದರೆ ಶಿಯೋಮಿ 2GB RAM ಮತ್ತು 16GB ಇಂಟರ್ನಲ್ ಮೆಮೋರಿ ಆವೃತ್ತಿಯ ಮೇಲೆ ರೂ. 1000 ಡಿಸ್ಕೌಂಟ್ ನೀಡುತ್ತಿದೆ.

English summary
Xiaomi Redmi 5A has gone out of stock during the first flash sale and the second one is slated to happen on December 14.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot