ಈ 10 ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಸಿಗುತ್ತಿದೆ MIUI 10 ಅಪ್‌ಡೇಟ್!

|

ಭಾರತದ ನಂಬರ್ ಒನ್ ಮೊಬೈಲ್ ಬ್ರ್ಯಾಂಡ್ ಕಂಪೆನಿ ಶಿಯೋಮಿ ತನ್ನ ಸ್ಮಾರ್ಟ್‌ಪೋನ್ ಬಳಕೆದಾರರಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ. ಶಿಯೋಮಿ ಸ್ಮಾರ್ಟ್‌ಪೋನ್‌ಗಳಿಗೆ MIUI 10 ಜಾಗತಿಕ ಬೀಟಾ ROM 8.7.5 ಅಪ್‌ಡೇಟ್ ಅನ್ನು ಶಿಯೋಮಿ ಬಿಡುಗಡೆ ಮಾಡಿದ್ದು, ಶಿಯೋಮಿಯ ಒಟ್ಟು ಹತ್ತು ಸ್ಮಾರ್ಟ್‌ಫೋನ್‌ಗಳಿಗಾಗಿ ಈ ಅಪ್‌ಡೇಟ್ ಬಿಡುಗಡೆಗೊಗೊಂಡಿದೆ

ಗೂಗಲ್ ಪ್ಲೇ ಸೇವೆಗಳ ಸಂಯೋಜನೆಯೊಂದಿಗೆ ಜಾಗತಿಕ ಶಿಯೋಮಿ ಬೀಟಾ ROM 8.7.5 ಅಪ್‌ಡೇಟ್ ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಸಿಗುತ್ತಿದೆ. ಶಿಯೋಮಿ MIUI 10 ಈ ವರೆಗೆ ಸಿಗುತ್ತಿರುವ ಶಿಯೋಮಿಯ ಅತಿದೊಡ್ಡ ತಂತ್ರಾಂಶ ಅಪ್‌ಡೇಟ್ ಆಗಿದ್ದು, ಈ ಅಪ್‌ಡೇಟ್‌ನಿಂದ ಶಿಯೋಮಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಹೆಚ್ಚಿನ ಸೇವೆಗಳು ಲಭ್ಯವಾಗುತ್ತಿದೆ.

ಈ 10 ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಸಿಗುತ್ತಿದೆ MIUI 10 ಅಪ್‌ಡೇಟ್!

ಹಾಗಾದರೆ, ವೇಗ ಮತ್ತು ಕಾರ್ಯಕ್ಷಮತೆ ಸುಧಾರಣೆ ಮತ್ತು ಸ್ಥಳೀಯ ಕ್ಯಾಮೆರಾ ಅಪ್ಲಿಕೇಶನ್‌ಗಳು ಸೇರಿದಂತೆ ಹಲವಾರು ವಿನ್ಯಾಸದ ಬದಲಾವಣೆಗಳನ್ನು ತರುತ್ತಿರುವ ಶಿಯೋಮಿ MIUI 10 ಅಪ್‌ಡೇಟ್ ವಿಶೇಷತೆಗಳು ಯಾವುವು? ಈ MIUI 10 ತಂತ್ರಾಂವನ್ನು ಅಪ್‌ಡೇಟ್ ಮಾಡಿಕೊಳ್ಳುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿಯನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಯಾವೆಲ್ಲಾ ಪೋನ್‌ಗಳಿಗೆ ಅಪ್‌ಡೇಟ್ ಲಭ್ಯ!

ಯಾವೆಲ್ಲಾ ಪೋನ್‌ಗಳಿಗೆ ಅಪ್‌ಡೇಟ್ ಲಭ್ಯ!

ಶಿಯೋಮಿ ಮಿ ಮಿಕ್ಸ್ 2, ಶಿಯೋಮಿ ಮಿಕ್ಸ್ 2 ಎಸ್, ಶಿಯೋಮಿ ರೆಡ್ಮಿ ಎಸ್ 2, ಶಿಯೋಮಿ ರೆಡ್ಮಿ ವೈ 2, ಶಿಯೋಮಿ ರೆಡ್ಮಿ ನೋಟ್ 5 ಪ್ರೊ, ಶಿಯೋಮಿ ರೆಡ್ಮಿ ನೋಟ್ 5, ಶಿಯೋಮಿ ಮಿ 6, ಮತ್ತು ಶಿಯೋಮಿ ಮಿ ನೋಟ್ 2 ಸೇರಿದಂತೆ ಒಟ್ಟು ಹತ್ತು ಶಿಯೋಮಿ ಸ್ಮಾರ್ಟ್‌ಪೋನ್‌ಗಳಿಗೆ MIUI 10 ಗ್ಲೋಬಲ್ ROM 8.7.5 ಅಪ್‌ಡೇಟ್ ಸಿಗುತ್ತಿದೆ.

MIUI 10 ಅಪ್‌ಡೇಟ್ ಪಡೆಯುವುದು ಹೇಗೆ?

MIUI 10 ಅಪ್‌ಡೇಟ್ ಪಡೆಯುವುದು ಹೇಗೆ?

MIUI 9 ಗ್ಲೋಬಲ್ ಬೀಟಾ ROM ಅನ್ನು ಈಗಾಗಲೇ ಚಾಲನೆ ಮಾಡುತ್ತಿರುವ ಶಿಯೋಮಿ ಸ್ಮಾರ್ಟ್‌ಫೋನ್ ಬಳಕೆದಾರರು, ಸ್ಮಾರ್ಟ್‌ಪೋನ್ 'ಸೆಟ್ಟಿಂಗ್ಸ್' ಮೆನು ಅಥವಾ ಅಪ್‌ಡೇಟ್ ಅಪ್ಲಿಕೇಶನ್ ಅನ್ನು ತೆರೆಯಬೇಕು. ಅಲ್ಲಿ ಕಾಣುವ 'ಸಿಸ್ಟಂ ನವೀಕರಣ' ಆಯ್ಕೆಯಲ್ಲಿ ಇತ್ತೀಚಿನ MIUI 10 ಗ್ಲೋಬಲ್ ROM 8.7.5 ಅಪ್‌ಡೇಟ್ ಇರುವ ಬಗ್ಗೆ ರೆಡ್‌ ಮಾರ್ಕ್ ಇರುವುದನ್ನು ಪರಿಶೀಲಿಸಬಹುದು.

MIUI 10 ಅತಿದೊಡ್ಡ ತಂತ್ರಾಂಶ!

MIUI 10 ಅತಿದೊಡ್ಡ ತಂತ್ರಾಂಶ!

ಇಲ್ಲಿಯವರೆಗೂ ಶಿಯೋಮಿ ನೀಡಿರುವ ಅಪ್‌ಡೆಟ್‌ಗಳಲ್ಲಿಯೇ ಈ MIUI 10 ಅತಿದೊಡ್ಡ ತಂತ್ರಾಂಶವಾಗಿದೆ. ವೇಗ ಮತ್ತು ಕಾರ್ಯಕ್ಷಮತೆ ಸುಧಾರಣೆ ಮತ್ತು ಸ್ಥಳೀಯ ಕ್ಯಾಮೆರಾ ಅಪ್ಲಿಕೇಶನ್ಗಾಗಿ AI- ಚಾಲಿತ ಪೋಟ್ರೇಟ್ ವೈಶಿಷ್ಟ್ಯವನ್ನು ಈ ಅಪ್‌ಡೇಟ್ ತರುತ್ತಿದೆ. ಈ ಆವೃತ್ತಿಯಲ್ಲಿ ಪೂರ್ಣ ಸ್ಕ್ರೀನ್ ಪ್ರದರ್ಶನವನ್ನು ಸಹ ಶಿಯೋಮಿ ಪರಿಚಯಿಸುತ್ತದೆ.

ಇರೆತೆ ಏನೆಲ್ಲಾ ಅಪ್‌ಡೇಟ್?

ಇರೆತೆ ಏನೆಲ್ಲಾ ಅಪ್‌ಡೇಟ್?

MIUI 10 ತಂತ್ರಾಂಶದಲ್ಲಿ ಹವಾಮಾನ ಮತ್ತು ಕ್ಯಾಲೆಂಡರ್‌ನಂತಹ ಹೊಸ ಸಿಸ್ಟಮ್ ಅಪ್ಲಿಕೇಶನ್ಗಳನ್ನು ಸಹ ಸೇರಿಸಲಾಗಿದೆ. ಅಧಿಸೂಚನೆಗಳು ಫಲಕವನ್ನು ನಿಯಂತ್ರಿಸುವ ನವೀಕೃತ 'Recents' ಮೆನು ಸಿಗುತ್ತಿದೆ. ಆಂಡ್ರಾಯ್ಡ್ ಓರಿಯೋ ಭಾಗವಾಗಿ ನವೀಕರಣದ ಭಾಗವಾಗಿ ಎಲ್ಡಿಎಸಿ ತಂತ್ರಜ್ಞಾನವು ಬ್ಲೂಟೂತ್ ಮೂಲಕ ಆಡಿಯೊ ಗುಣಮಟ್ಟವನ್ನು ಸುಧಾರಿಸುತ್ತದೆ .

ಇತರೆ ಫೋನ್‌ಗಳಿಗೆ ಯಾವಾಗ ಲಭ್ಯ?

ಇತರೆ ಫೋನ್‌ಗಳಿಗೆ ಯಾವಾಗ ಲಭ್ಯ?

ಒಟ್ಟು ಹತ್ತು ಶಿಯೋಮಿ ಸ್ಮಾರ್ಟ್‌ಪೋನ್‌ಗಳಿಗೆ MIUI 10 ಗ್ಲೋಬಲ್ ROM 8.7.5 ಅಪ್‌ಡೇಟ್ ಈಗ ಸಿಗುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಶಿಯೋಮಿ ಸಾಧನಗಳು ನವೀಕರಣವನ್ನು ಸ್ವೀಕರಿಸಲಿವೆ ಎಂದು ಕಂಪೆನಿ ತಿಳಿಸಿದೆ. MIUI 7,8 ಅಥವಾ 9 ಸ್ಥಿರ ಆವೃತ್ತಿ ಸ್ಮಾರ್ಟ್‌ಪೋನ್‌ಗಳನ್ನು ವೇಗದ ಬೂಟ್ ಮೂಲಕ ನೇರವಾಗಿ ನವೀಕರಿಸಬಹುದು ಎಂದು ಕಂಪೆನಿ ಹೇಳಿದೆ.

Best Mobiles in India

English summary
Xiaomi has started rolling out the MIUI 10 Global Beta ROM 8.7.5 for the first batch of devices.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X