ಶಿಯೋಮಿ ಸ್ಮಾರ್ಟ್‌ ಬ್ಯಾಂಡ್‌ 7 ಲಾಂಚ್; ಫೀಚರ್ಸ್‌ ಏನು?..ಬೆಲೆ ಎಷ್ಟು?

|

ಜನಪ್ರಿಯ ಶಿಯೋಮಿ ಕಂಪೆನಿ ಹೊಸ ಶಿಯೋಮಿ ಮಿ ಸ್ಮಾರ್ಟ್‌ ಬ್ಯಾಂಡ್‌ 7 ಡಿವೈಸ್‌ ಅನ್ನು ಬಿಡುಗಡೆ ಮಾಡಿದೆ. ಮಿ ಸ್ಮಾರ್ಟ್‌ ಬ್ಯಾಂಡ್ 6 ಡಿವೈಸ್‌ನ ಮುಂದುವರಿದ ಭಾಗವಾಗಿದ್ದು, ಹಲವು ಅಪ್‌ಡೇಟ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಹೊಸ ಡಿವೈಸ್‌ ಹಿಂದಿನ ಡಿವೈಸ್‌ಗಳಿಗಿಂತ ಅಪ್‌ಗ್ರೇಡ್‌ ಆಗಿದ್ದು, ಆಲ್‌ವೇಸ್‌ ಆನ್‌ ಡಿಸ್‌ಪ್ಲೇ, SpO2 ಫೀಚರ್ಸ್‌ಗಳನ್ನು ಒಳಗೊಂಡು ಫಿಟ್ನೆಸ್‌ ಪ್ರಿಯರ ಗಮನ ಸೆಳೆದಿದೆ.

ಮಾನಿಟರಿಂಗ್

ಹೌದು, ಶಿಯೋಮಿ ತನ್ನ ಹೊಸ ಶಿಯೋಮಿ ಮಿ ಸ್ಮಾರ್ಟ್‌ ಬ್ಯಾಂಡ್‌ 7 ಡಿವೈಸ್‌ ಅನ್ನು ಇತ್ತೀಚಿಗೆ ಚೀನಾದಲ್ಲಿ ಅನಾವರಣ ಮಾಡಿತ್ತು, ಇದೀಗ ಗ್ಲೋಬಲ್‌ ಲಾಂಚ್ ಮಾಡಿದೆ. ಈ ಡಿವೈಸ್ ಸುಮಾರು 110 ಸ್ಪೋರ್ಟ್ಸ್‌ ಮೋಡ್‌ಗಳ ಆಯ್ಕೆಯನ್ನು ಒಳಗೊಂಡಿದೆ. 24×7 ಹಾರ್ಟ್‌ ರೇಟ್‌ ಮಾನಿಟರಿಂಗ್ ಸೌಲಭ್ಯ ಪಡೆದಿದ್ದು, ಜೊತೆಗೆ ಸಿಂಗಲ್‌ ಚಾರ್ಜ್‌ನಲ್ಲಿ 14 ದಿನಗಳ ಬ್ಯಾಟರಿ ಬ್ಯಾಕ್ಅಪ್‌ ಅನ್ನು ಒಳಗೊಂಡಿದೆ. ಹಾಗಾದರೇ ಮಿ ಸ್ಮಾರ್ಟ್‌ ಬ್ಯಾಂಡ್‌ 7 ಡಿವೈಸ್‌ನ ಇತರೆ ಫೀಚರ್ಸ್‌ಗಳೇನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸ

ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸ

ಶಿಯೋಮಿ ಮಿ ಸ್ಮಾರ್ಟ್‌ ಬ್ಯಾಂಡ್‌ 7 ಡಿವೈಸ್‌ 490 × 192 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 1.62 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಇದು ಆಲ್‌ವೇಸ್‌ ಆನ್‌ ಮಾದರಿಯ ಡಿಸ್‌ಪ್ಲೇ ಆಗಿದೆ. ಈ ಹಿಂದಿನ ಮಿ ಸ್ಮಾರ್ಟ್ ಬ್ಯಾಂಡ್ 6 ಡಿವೈಸ್‌ 152 x 486 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 1.56 ಇಂಚಿನ ಡಿಸ್‌ಪ್ಲೇ ಹೊಂದಿತ್ತು. ಬ್ಯಾಂಡ್ 6 ಡಿವೈಸ್‌ಗೆ ಹೋಲಿಸಿದರೆ, ಇದು ಮೂಲತಃ 25 ಶೇಕಡಾ ಹೆಚ್ಚಿದ ಗೋಚರತೆಯನ್ನು ನೀಡುತ್ತದೆ.

SpO2 ಸೌಲಭ್ಯ

SpO2 ಸೌಲಭ್ಯ

ಶಿಯೋಮಿ ಮಿ ಸ್ಮಾರ್ಟ್‌ ಬ್ಯಾಂಡ್‌ 7 ಡಿವೈಸ್‌ ಹೊಸ VO2 ಗರಿಷ್ಠ ವೃತ್ತಿಪರ ತಾಲೀಮು ವಿಶ್ಲೇಷಣೆಯನ್ನು ಹೊಂದಿದೆ. ಇದು ವ್ಯಾಯಾಮದ ಸಮಯದಲ್ಲಿ ಬಳಸಬಹುದಾದ ಗರಿಷ್ಠ ಪ್ರಮಾಣದ ಆಮ್ಲಜನಕವನ್ನು ಅಳೆಯುತ್ತದೆ. ಶಿಯೋಮಿ ಸ್ಮಾರ್ಟ್ ಬ್ಯಾಂಡ್ 7 ನಿದ್ರೆಯ ಟ್ರ್ಯಾಕಿಂಗ್ ಮತ್ತು SpO2 ಸೌಲಭ್ಯ ಹಾಗೂ 24×7 ಹೃದಯ ಬಡಿತದ ಮಾನಿಟರಿಂಗ್ ಅನ್ನು ಸಹ ಒದಗಿಸುತ್ತದೆ. ಇದರೊಂದಿಗೆ ಒಟ್ಟು 110 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳ ಆಯ್ಕೆಯನ್ನು ಒಳಗೊಂಡಿದೆ.

ಫಿಟ್ನೆಸ್‌ ಫೀಚರ್ಸ್‌

ಫಿಟ್ನೆಸ್‌ ಫೀಚರ್ಸ್‌

ಶಿಯೋಮಿ ಮಿ ಸ್ಮಾರ್ಟ್‌ ಬ್ಯಾಂಡ್‌ 7 ಡಿವೈಸ್‌ನಲ್ಲಿ ಬಳಕೆದಾರರು 100 ಕ್ಕೂ ಅಧಿಕ ವಾಚ್ ಫೇಸ್‌ಗಳ ಆಯ್ಕೆ ಪಡೆಯುತ್ತಾರೆ. ಈ ಸಾಧನವು ಧೂಳು ಮತ್ತು ನೀರಿನ ಪ್ರತಿರೋಧದ ವಿರುದ್ಧ ರಕ್ಷಣೆಗಾಗಿ 5ATM ನಿರ್ಮಾಣವನ್ನು ಸಹ ಒಳಗೊಂಡಿದೆ. ಹೊರಾಂಗಣ ಓಟ, ವಾಕಿಂಗ್, ಟ್ರೆಡ್‌ಮಿಲ್, ರೋಯಿಂಗ್ ಮೆಷಿನ್ ಮತ್ತು ಎಲಿಪ್ಟಿಕಲ್‌ನಂತಹ ಐದು ಸ್ವಯಂ-ಪತ್ತೆ ಹಚ್ಚುವಿಕೆಯ ಫಿಟ್‌ನೆಸ್ ಮಾದರಿಗಳನ್ನು ಬಳಕೆದಾರರು ಪಡೆಯಬಹುದು.

ಕನೆಕ್ಟಿವಿಟಿ ಆಯ್ಕೆ

ಕನೆಕ್ಟಿವಿಟಿ ಆಯ್ಕೆ

ಇನ್ನು ಈ ಶಿಯೋಮಿ ಸ್ಮಾರ್ಟ್ ಬ್ಯಾಂಡ್ 7 ಡಿವೈಸ್‌ ಮಾತ್ರೆ ಆಕಾರದ ರಚನೆಯನ್ನು ಪಡೆದಿದೆ. ಹಾಗೆಯೇ ಮಿ ಸ್ಮಾರ್ಟ್ ಬ್ಯಾಂಡ್ 7 ಸಾಧನವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಮತ್ತು ಐಫೋನ್‌ ಈ ಎರಡರಲ್ಲಿಯು ಕಾರ್ಯನಿರ್ವಹಿಸುತ್ತದೆ. ಬಳಕೆದಾರರು ಸಂಪರ್ಕಕ್ಕಾಗಿ ಬ್ಲೂಟೂತ್ 5.2 ಅನ್ನು ಬಳಸಬಹುದು. ಮಿ ಫಿಟ್ನೆಸ್‌ (Mi Fitness) ಅಪ್ಲಿಕೇಶನ್‌ನೊಂದಿಗೆ ಬಳಕೆದಾರರು ಸಾಧನವನ್ನು ನಿರ್ವಹಿಸಬಹುದು ಮತ್ತು ಫಿಟ್‌ನೆಸ್ ಮೆಟ್ರಿಕ್‌ಗಳನ್ನು ಚೆಕ್‌ ಮಾಡಬಹುದು.

ಬ್ಯಾಟರಿ ಬ್ಯಾಕ್‌ಅಪ್‌ ಮತ್ತು ಕಲರ್‌

ಬ್ಯಾಟರಿ ಬ್ಯಾಕ್‌ಅಪ್‌ ಮತ್ತು ಕಲರ್‌

ಶಿಯೋಮಿ ಮಿ ಸ್ಮಾರ್ಟ್‌ ಬ್ಯಾಂಡ್‌ 7 ಡಿವೈಸ್‌ ಒಂದೇ ಚಾರ್ಜ್‌ನಲ್ಲಿ 14 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಈ ಸ್ಮಾರ್ಟ್ ಬ್ಯಾಂಡ್ ಎರಡು-ಪಿನ್ ಮ್ಯಾಗ್ನೆಟಿಕ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಈ ಹೊಸ ಬ್ಯಾಂಡ್ ನಾಲ್ಕು ಬಣ್ಣದ ಆಯ್ಕೆಗಳನ್ನು ಒಳಗೊಂದಿದೆ. ಅವುಗಳು ಕ್ರಮವಾಗಿ ಕಿತ್ತಳೆ, ಕಪ್ಪು, ನಿಯಾನ್ ಹಸಿರು ಮತ್ತು ನೀಲಿ.

ಬೆಲೆ ಎಷ್ಟು?

ಬೆಲೆ ಎಷ್ಟು?

ಯುರೋಪ್‌ನಲ್ಲಿ ಬಿಡುಗಡೆ ಆಗಿರುವ ಶಿಯೋಮಿ ಮಿ ಸ್ಮಾರ್ಟ್‌ ಬ್ಯಾಂಡ್‌ 7 ಡಿವೈಸ್‌ NFC ಅಲ್ಲದ ರೂಪಾಂತರವನ್ನು €59.99 (ಭಾರತದಲ್ಲಿ ಅಂದಾಜು 4950ರೂ. ಎನ್ನಲಾಗಿದೆ) ಗೆ ಬಿಡುಗಡೆ ಮಾಡಲಾಗಿದೆ. ಇತರೆ ಕೆಲವು ಅತ್ಯುತ್ತಮ ಫಿಟ್ನೆಸ್‌ ಬ್ಯಾಂಡ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ ಬ್ಯಾಂಡ್ ಪ್ರೊ

ರೆಡ್ಮಿ ಬ್ಯಾಂಡ್ ಪ್ರೊ

ರೆಡ್ಮಿ ಬ್ಯಾಂಡ್ ಪ್ರೊ ಫಿಟ್ನೆಸ್ ಬ್ಯಾಂಡ್ ಸ್ಟ್ಯಾಂಡರ್ಡ್ ಫಿಟ್ನೆಸ್ ಬ್ಯಾಂಡ್ ವಿನ್ಯಾಸವನ್ನು ಹೊಂದಿದೆ. ಈ ಫಿಟ್ನೆಸ್‌ ಬ್ಯಾಂಡ್‌ 1.47 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 450 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇನ್ನು ಈ ಬ್ಯಾಂಡ್ PPG ಹಾರ್ಟ್‌ಬೀಟ್‌ ಸೆನ್ಸಾರ್‌, ಲೈಟ್‌ ಸೆನ್ಸಾರ್‌, ವಾಟರ್‌ ಪ್ರೂಪ್‌ ಬಾಡಿ, 14 ದಿನದ ಬ್ಯಾಟರಿ ಬಾಳಿಕೆಯನ್ನು ಸಹ ನೀಡಲಿದೆ. ಇದು ಆಕರ್ಷಕ ಫೀಚರ್ಸ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಹೆಚ್ಚಿನ ಜನರನ್ನು ಆಕರ್ಷಿಸಿದೆ.

ನಾಯ್ಸ್‌ HRX X-Fit 1

ನಾಯ್ಸ್‌ HRX X-Fit 1

ನಾಯ್ಸ್‌ HRX X-Fit 1 ಫಿಟ್‌ನೆಸ್ ಬ್ಯಾಂಡ್ 5,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಬ್ಯಾಂಡ್‌ಗಳಲ್ಲಿ ಒಂದಾಗಿದೆ. ಇದು ಫಿಟ್ನೆಸ್‌ ಬ್ಯಾಂಡ್‌ ವಿನ್ಯಾಸವನ್ನು ಹೊಂದಿರುವ ಸ್ಮಾರ್ಟ್‌ವಾಚ್‌ ಆಗಿದೆ. ಈ ಫಿಟ್ನೆಸ್‌ ಬ್ಯಾಂಡ್‌ 360x400 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದ 1.52 ಇಂಚಿನ ಟ್ರೂವ್ಯೂ IPS LCD ಡಿಸ್‌ಪ್ಲೇ ಹೊಂದಿದೆ. ಇದು ಯಾವಾಗಲೂ ಆನ್ ಆಗಿರುವ SpO2 ಮಾನಿಟರ್, 24x7 ಮಾನಿಟರಿಂಗ್‌ ಹೊಂದಿರುವ ಹಾರ್ಟ್‌ಬೀಟ್‌ ಸೆನ್ಸಾರ್‌, ಸ್ಟ್ರೆಸ್‌ ಮಾನಿಟರ್, ವಾಟರ್‌ ಪ್ರೂಫ್‌ ಬಾಡಿ ಮತ್ತು 10 ದಿನಗಳ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ.

ಹುವಾವೇ ಬ್ಯಾಂಡ್ 6

ಹುವಾವೇ ಬ್ಯಾಂಡ್ 6

ಹುವಾವೇ ಬ್ಯಾಂಡ್‌ 6 ಹಲವು ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿರುವ ಬ್ಯಾಂಡ್‌ ಆಗಿದೆ. ಈ ಫಿಟ್ನೆಸ್‌ ಬ್ಯಾಂಡ್‌ ಬ್ಲಡ್‌ ಆಕ್ಸಿಜನ್‌ ಮಾನಿಟರ್, ಹಾರ್ಟ್‌ಬೀಟ್‌ ಸೆನ್ಸಾರ್‌, ಸ್ಲಿಪಿಂಗ್‌ ಮಾನಿಟರ್‌, ಲೈಪ್‌ಸ್ಟೈಲ್‌ ಮಾನಿಟರ್ ನಂತಹ ಫೀಚರ್ಸ್‌ಗಳನ್ನು ಹೊಂದಿದೆ. ಇನ್ನು ಈ ಬ್ಯಾಂಡ್‌ 1.47 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಬ್ಯಾಂಡ್‌ ಹುವಾವೇ ಹೆಲ್ತ್‌ ಅಪ್ಲಿಕೇಶನ್ ಮೂಲಕ ಬೆಂಬಲಿಸಲಿದೆ.

Best Mobiles in India

English summary
Xiaomi Smart Band 7 With SpO2 Feature Launched: Price, Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X