ಕ್ಯಾ|ಸೌರಭ್‌ ಕಾಲಿಯಾ ಕೊಂದದ್ದು ನಾನೇ:ಪಾಕ್‌ ಸೈನಿಕ

Posted By:

ಕಾರ್ಗಿ‌ಲ್‌ ಯುದ್ದದ ವೇಳೆ ಭಾರತೀಯ ಯೋಧ ಕ್ಯಾ|ಸೌರಭ್‌ ಕಾಲಿಯಾ ಕೊಂದದ್ದು ನಾನೇ ಎಂದು ಪಾಕಿಸ್ತಾನ ಸೈನಿಕನೊಬ್ಬ ಸ್ಪೋಟಕ ಹೇಳಿಕೆ ನೀಡಿರುವ ವೀಡಿಯೋ ಈಗ ಇಂಟರ್‌ನೆಟ್‌‌ ವೈರಲ್‌ ಆಗಿದ್ದು ಜನರು ಇಗ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡತೊಡಗಿದ್ದಾರೆ.

1999ರ ಕಾರ್ಗಿಲ್‌ ಯುದ್ದದ ಸಂದರ್ಭದಲ್ಲಿ ಕ್ಯಾ|ಸೌರಭ್‌ ಕಾಲಿಯಾ ಮತ್ತು ಐವರು ಭಾರತೀಯ ಯೋಧರನ್ನು ಪಾಕಿಸ್ತಾನಿ ಸೈನಿಕರು ಕೊಂದು, ಶವವನ್ನು ವಿರೂಪಗೊಳಿಸಿದ್ದರು. ಈ ಹೇಯ ಕೃತ್ಯವನ್ನು ಭಾರತ ಪ್ರತಿಭಟಿಸಿ ಖಂಡಿಸಿದ್ದಕ್ಕೆ ಪಾಕಿಸ್ತಾನ ಸೇನೆ '' ಕ್ಯಾ|ಸೌರಭ್‌ ಕಾಲಿಯಾ ಕೊಂದದ್ದು ನಾವಲ್ಲ. ಕಾರ್ಗಿಲ್‌ನ ಕೆಟ್ಟ ಕಾಲಿಯಾ ಹವಾಮಾನಕ್ಕೆ ಸತ್ತಿರಬಹುದು'' ಎಂದು ಉಡಾಫೆ ಹೇಳಿಕೆ ನೀಡಿತ್ತು.ಆದರೆ ಈಗ ಪಾಕ್‌ ಸೈನಿಕನೇ ಸೌರಭ್‌ ಕಾಲಿಯಾ ಕೊಂದ್ದು ನಾನೇ ಎಂದು ಹೇಳುವುದರೊಂದಿಗೆ ಪಾಕ್‌ನ ನಿಜಬಣ್ಣ ಪ್ರಪಂಚಕ್ಕೆ ಗೊತ್ತಾಗಿದೆ.

ಈಗ ಕಾರ್ಗಿಲ್‌ ಸೈನಿಕರನ್ನು ಪಾಕಿಸ್ತಾನದ ಸೇನೆ ಸನ್ಮಾನಿಸುವ ವೀಡಿಯೋ ಯೂ ಟ್ಯೂಬ್‌ನಲ್ಲಿ ಪ್ರತ್ಯಕ್ಷವಾಗಿದ್ದು, ಇದರಲ್ಲಿ ಗುಲೇ ಖಾಂದಾನ್‌ ಎನ್ನುವ ಪಾಕಿಸ್ತಾನಿ ಸೈನಿಕ ಕಾಲಿಯಾ ಮತ್ತು ಇತರ ಐವರನ್ನು ತಾನು ಹೇಗೆ ಕೊಂದಿದ್ದೇನೆ ಎನ್ನುವುದನ್ನು ವಿವರಿಸಿದ್ದಾನೆ.

ಯುದ್ದ ಆರಂಭವಾಗುವ ಮೊದಲು ಕಾರ್ಗಿ‌ಲ್‌ ಪ್ರದೇಶದಲ್ಲಿ ಪಾಕ್‌ ಯೋಧರು ನಮ್ಮ ಜಾಗಕ್ಕೆ ಅತಿಕ್ರಮವಾಗಿ ಒಳ ನುಗ್ಗಿದ್ದಾರೆ ಎಂದು ಮೊದಲು ಸೈನ್ಯದ ಪ್ರಮುಖರಿಗೆ ತಿಳಿಸಿದ ಯೋಧ ಸೌರಭ್‌ ಕಾಲಿಯಾ.ನಂತರ ಕಾಲಿಯಾ ಜೊತೆ ಐವರು ಸೈನಿಕರನ್ನು ಆಪಹರಿಸಿ ಪಾಕ್‌ ಸೇನೆ ಕೊಂದು, ಸಿಗರೇಟಿನಿಂದ ಸುಟ್ಟು ವಿರೂಪಗೊಳಿಸಿದ ಶವವನ್ನು ಭಾರತೀಯ ಸೇನೆಗೆ ಕಳುಹಿಸಿ ಕೊಟ್ಟಿತ್ತು.

ಇದನ್ನೂ ಓದಿ: ಫೋನ್‌ ಟ್ಯಾಪಿಂಗ್‌ ಯಾಕೆ ? ಹೇಗೆ ? ಯಾರು ಮಾಡಬಹುದು?

<center><center><center><iframe width="420" height="315" src="//www.youtube.com/embed/D8ZAQOdIZUA" frameborder="0" allowfullscreen></iframe></center></center></center>

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot