ಫ್ಲಿಪ್‌ಕಾರ್ಟ್‌ನ ಈ ಆಫರ್‌ ಮಿಸ್‌ ಮಾಡ್ಕೋಬೇಡಿ; ಪೊಕೊ ಫೋನ್‌ ಅನ್ನು ಉಚಿತವಾಗಿ ಪಡೆಯಬಹುದು!?

|

ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳಲ್ಲಿ ಪೊಕೊ ಕೂಡ ಒಂದಾಗಿದೆ. ದಿನದಿಂದ ದಿನಕ್ಕೆ ಗ್ರಾಹಕರ ಬೇಡಿಕೆ ಹೆಚ್ಚಾಗುತ್ತಿದ್ದು, ಕೈಗೆಟಕುವ ದರದಲ್ಲಿ ಸ್ಮಾರ್ಟ್‌ಫೋನ್‌ ಪರಿಚಯಿಸುತ್ತಿರುವ ಈ ಪೊಕೊ ವಿವಿಧ ರೀತಿಯ ಫೀಚರ್ಸ್‌ಗಳನ್ನು ಬಳಕೆದಾರರಿಗೆ ಈಗಾಗಲೇ ಪರಿಚಯಿಸಿದೆ. ಇದರ ನಡವೆಯೇ ಪ್ರಮುಖ ಇ- ಕಾಮರ್ಸ್‌ ತಾಣಗಳಲ್ಲಿ ಒಂದಾದ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್‌ ಅನ್ನು ಭಾರೀ ಡಿಸ್ಕೌಂಟ್‌ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು, ಕೆಲವರಂತೂ ಒಂದು ರೂ. ಸಹ ನೀಡದೆ ಉಚಿತವಾಗಿ ಈ ಫೋನ್‌ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಸ್ಮಾರ್ಟ್‌ಫೋನ್

ಹೌದು, ಒಂದೆಡೆ ಸ್ಮಾರ್ಟ್‌ಫೋನ್ ಕಂಪೆನಿಗಳು ವಿವಿಧ ಫೀಚರ್ಸ್‌ ಪರಿಚಯಿಸಿ ಪೈಪೋಟಿ ನಡೆಸುತ್ತಿದ್ದರೆ ಮತ್ತೊಂದೆಡೆ ಆನ್‌ಲೈನ್ ಮಾರಾಟದ ಪ್ಲಾಟ್‌ಫಾರ್ಮ್‌ಗಳು ಸ್ಮಾರ್ಟ್‌ಫೋನ್ ಸೇರಿದಂತೆ ಇತರೆ ಗ್ಯಾಜೆಟ್‌ಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ನೀಡುತ್ತಿವೆ. ಅದರಲ್ಲೂ ಭಾರತದಲ್ಲಿ ಪ್ರಮುಖ ಇ-ಕಾಮರ್ಸ್‌ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಸ್ಪರ್ಧಾತ್ಮಕ ರೀತಿಯಲ್ಲಿ ರಿಯಾಯಿತಿ ನೀಡುತ್ತಿದ್ದು, ಇದರ ನಡುವೆ ಒಂದು ಹೆಜ್ಜೆ ಮುಂದೆ ಹೋಗಿರುವ ಫ್ಲಿಪ್‌ಕಾರ್ಟ್ ಪೊಕೊ (POCO C31) ಸ್ಮಾರ್ಟ್‌ಫೋನ್ ಅನ್ನು ಉಚಿತವಾಗಿ ಪಡೆಯುವ ಅವಕಾಶ ನೀಡಿದೆ. ಹಾಗಿದ್ರೆ, ಈ ಫೋನ್‌ ಅನ್ನು ಉಚಿತವಾಗಿ ಪಡೆಯುವುದು ಹೇಗೆ?, ಇದರ ಸಾಮಾನ್ಯ ಹಾಗೂ ಆಫರ್‌ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

41 %  ರಿಯಾಯಿತಿ

41 % ರಿಯಾಯಿತಿ

ಪೊಕೊ C31 ಸ್ಮಾರ್ಟ್‌ಫೋನ್ ಸಾಮಾನ್ಯ ದರ 10,999 ರೂ. ಗಳಾಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ 41 % ರಿಯಾಯಿತಿ ಪಡೆದ ನಂತರ ಇದಕ್ಕೆ 6,499 ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಅಂದರೆ ನೀವು 10,999 ರೂ. ಮೌಲ್ಯದ ಸ್ಮಾರ್ಟ್‌ಫೋನ್‌ ಅನ್ನು ಕೇವಲ 6,499 ರೂ. ಗಳಿಗೆ ಕೊಂಡುಕೊಳ್ಳಬಹುದು. ಈ ಮೂಲಕ ನೀವು 4,500 ರೂ. ಗಳನ್ನು ಉಳಿಕೆ ಮಾಡಬಹುದಾಗಿದೆ. ಅದಾಗ್ಯೂ ಇನ್ನೂ ಹೆಚ್ಚಿನ ಆಫರ್‌ ಅನ್ನು ಫ್ಲಿಪ್‌ಕಾರ್ಟ್‌ ನೀಡಿದೆ.

ಹೆಚ್ಚುವರಿ ರಿಯಾಯಿತಿ ಏನು?

ಹೆಚ್ಚುವರಿ ರಿಯಾಯಿತಿ ಏನು?

ಪೊಕೊ ಸ್ಮಾರ್ಟ್‌ಫೋನ್ ಆಫರ್‌ ಬೆಲೆ ಫ್ಲಿಪ್‌ಕಾರ್ಟ್‌ನಲ್ಲಿ 6,499 ರೂ. ಆಗಿದ್ದು, ಇನ್ನೂ ಸಹ ಕಡಿಮೆ ಬೆಲೆಗೆ ಹೇಗೆ ಖರೀದಿ ಮಾಡಬೇಕು ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ ನೋಡಿ. ನೀವು ಐಡಿಎಫ್‌ಎಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಹೊಂದಿದ್ದರೆ ಈ ಆಫರ್‌ ಮೇಲೆ ಹೆಚ್ಚುವರಿ 10% ರಿಯಾಯಿತಿ ಪಡೆಯಬಹುದಾಗಿದೆ.

ವಿನಿಮಯ ಕೊಡುಗೆ

ವಿನಿಮಯ ಕೊಡುಗೆ

10% ರಿಯಾಯಿತಿ ಪಡೆದ ನಂತರ ಉಚಿತವಾಗಿ ಈ ಫೋನ್‌ ನಿಮ್ಮ ಕೈ ಸೇರಬೇಕಾದರೆ ವಿನಿಮಯ ಆಫರ್‌ ವಿಭಾಗಕ್ಕೆ ಬರಬೇಕಾಗುತ್ತದೆ. ಅಂದರೆ ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ ಅನ್ನು ವಿನಿಮಯ ಮಾಡಿಕೊಂಡರೆ ಈ ಫೋನ್‌ನಲ್ಲಿ ಸುಮಾರು 5,950 ರೂ. ಗಳ ವರೆಗೆ ಉಳಿಸಬಹುದು. ಈ ಮೂಲಕ ಈ ಫೋನ್ ಅನ್ನು ಯಾವುದೇ ಹಣವಿಲ್ಲದೆ ಉಚಿತವಾಗಿ ಖರೀದಿಸಬಹುದಾಗಿದೆ. ಪ್ರಮುಖ ವಿಷಯ ಎಂದರೆ ವಿನಿಮಯ ಕೊಡುಗೆಯಲ್ಲಿ ನೀವು ವಿನಿಮಯ ಮಾಡಲು ಮುಂದಾಗಿರುವ ಸ್ಮಾರ್ಟ್‌ಫೋನ್‌ನ ಸ್ಟೇಟಸ್‌ ಹೇಗಿದೆ ಎಂಬುದರ ಮೇಲೆ ಬೆಲೆ ನಿಗದಿಯಾಗುತ್ತದೆ.

ಫೋನ್ ಫೀಚರ್ಸ್‌ ಏನು?

ಫೋನ್ ಫೀಚರ್ಸ್‌ ಏನು?

ಈ ಸ್ಮಾರ್ಟ್‌ಫೋನ್‌ 720 x 1600 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.53 ಇಂಚಿನ ಹೆಚ್‌ಡಿ ಪ್ಲಸ್‌ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಇದು ವಾಟರ್‌ಡ್ರಾಪ್ ಶೈಲಿಯ ನಾಚ್ ಮತ್ತು TUV ರೈನ್‌ಲ್ಯಾಂಡ್ ಲೋ ಬ್ಲೂ ಲೈಟ್ ಪ್ರಮಾಣೀಕರಣದೊಂದಿಗೆ 20:9 ಆಕಾರ ಅನುಪಾತವನ್ನು ಹೊಂದಿದೆ. ಹಾಗೆಯೇ ಈ ಫೋನ್‌ ಮೀಡಿಯಾ ಟೆಕ್‌ ಹಿಲಿಯೋ G35 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, ಮೀಸಲಾದ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ 512 GB ವರೆಗೆ ಸ್ಟೋರೇಜ್‌ ಹೆಚ್ಚಿಗೆ ಮಾಡಿಕೊಳ್ಳಬಹುದು.

ಡ್ಯುಯಲ್‌

ಪೊಕೊ C31 ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, 13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಇದೆ. ಹಾಗೆಯೇ ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಪಡೆದುಕೊಂಡಿದೆ. ಇದರೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಎರಡು ದಿನಗಳವರೆಗೆ ಬ್ಯಾಕ್‌ಅಪ್‌ ನೀಡಲಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಗ್ರೇ ಮತ್ತು ರಾಯಲ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

Best Mobiles in India

English summary
you Can buy POCO C31 smartphone on Flipkart for free.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X