ರಿಲಾಯನ್ಸ್‌ನಿಂದ 57 ರೂಗೆ 10 GB ಡಾಟಾ ಆಫರ್: ಇಂದೇ ಪಡೆಯಿರಿ!

By Suneel
|

ನೆನ್ನೆಯಷ್ಟೆ ಲೇಟೆಸ್ಟ್ ಟೆಲಿಕಾಂ ರಿಲಾಯನ್ಸ್ ಜಿಯೋ 4G ಯ 93 ರೂಗೆ 10GB ಡಾಟಾ ಆಫರ್ ಬಗ್ಗೆ ತಿಳಿಸಿದ್ದೆವು. ಅಲ್ಲದೇ ಏರ್‌ಸೆಲ್ ದುರ್ಗಾ ಪೂಜೆ ಪ್ರಯುಕ್ತ ನೀಡುತ್ತಿರುವ ಉಚಿತ ಡಾಟಾ ಮತ್ತು ವಾಯ್ಸ್ ಕರೆ ಆಫರ್‌ ಅನ್ನು ತಿಳಿಸಿದ್ದೆವು. ಈಗ ಮತ್ತೊಂದು ಆಫರ್‌ ಅನ್ನು ರಿಲಾಯನ್ಸ್ ಬಗ್ಗೆ ತಿಳಿಸುತ್ತಿದ್ದೇವೆ.

ಹೌದು, ರಿಲಾಯನ್ಸ್(Reliance) ಟೆಲಿಕಾಂ 2G ಬಳಕೆದಾರರಿಗೆ ಉತ್ತಮ ಆಫರ್‌ ನೀಡುತ್ತಿದ್ದು, ರಿಲಾಯನ್ಸ್ ಬಳಕೆದಾರರು 57 ರೂಗೆ 10GB 2G ಡಾಟಾವನ್ನು ಬಳಸಬಹುದಾಗಿದೆ. ಅಂದಹಾಗೆ ರೂ.57 ರೀಚಾರ್ಜ್‌ಗೆ 10GB 2G ಡಾಟಾ ಆಕ್ಟಿವೇಶನ್ ಆದ ನಂತರ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಆಫರ್‌ ಪಡೆಯಲು ರಿಲಾಯನ್ಸ್ ಬಳಕೆದಾರರು ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ.

ರಿಲಾಯನ್ಸ್ ಜಿಯೋ 4G ಸಿಮ್: 5 ಸಾಮಾನ್ಯ ಸಮಸ್ಯೆಗಳು ಮತ್ತು ಪರಿಹಾರಗಳು

 ussd ಕೋಡ್‌ ಡಯಲ್‌ ಮಾಡಿ

ussd ಕೋಡ್‌ ಡಯಲ್‌ ಮಾಡಿ

ಅತಿ ಕಡಿಮೆ ಬೆಲೆಯಲ್ಲಿ 10GB 2G ಡಾಟಾವನ್ನು ರಿಲಾಯನ್ಸ್ ಬಳಕೆದಾರರು ಪಡೆಯಲು ussd ಕೋಡ್‌ ಡಯಲ್‌ ಮಾಡಬೇಕು. *129# ಡಯಲ್‌ ಮಾಡಿ ಸಬ್‌ಸ್ಕ್ರೈಬ್ ಆಗಿ ಆಕರ್ಷಕ ಡಾಟಾ ಆಫರ್‌ ಪಡೆಯಿರಿ.

 ಸರಿಯಾದ ಪ್ಲಾನ್‌ ಆಯ್ಕೆಮಾಡಿ

ಸರಿಯಾದ ಪ್ಲಾನ್‌ ಆಯ್ಕೆಮಾಡಿ

ussd ಕೋಡ್‌ ಡಯಲ್‌ ಮಾಡಿದರೆ ಕೆಲವು ಆಪ್ಶನ್‌ಗಳ ಸಹಿತ ಮೆನು ಪಾಪಪ್ ಆಗುತ್ತದೆ. ಓಪನ್‌ ಆದ ಆಪ್ಶನ್‌ಗಳಲ್ಲಿ ನೀವು '3 super 10 GB Data offer' ಆಯ್ಕೆ ಮಾಡಿ OK ಬಟನ್‌ ಕ್ಲಿಕ್‌ ಮಾಡಿ.

ನಿಮ್ಮ ಆಕ್ಷನ್ ಖಚಿತ ಪಡಿಸಿ

ನಿಮ್ಮ ಆಕ್ಷನ್ ಖಚಿತ ಪಡಿಸಿ

10GB ಡಾಟಾ ಆಫರ್ ಆಯ್ಕೆ ಮಾಡಿದ ನಂತರ, 1 ಪ್ರೆಸ್‌ ಮಾಡುವ ಮುಖಾಂತರ ನಿಮ್ಮ ಆಕ್ಷನ್‌ ಅನ್ನು ಖಚಿತ ಪಡಿಸಬೇಕು. ನಂತರ ನಿಮ್ಮ ಪ್ಲಾನ್ ಆಕ್ಟಿವೇಟ್‌ ಆಗುತ್ತದೆ.

ನಿಮ್ಮ ಕನಿಷ್ಟ ಬ್ಯಾಲೆನ್ಸ್ 57 ರೂ ಇರಬೇಕು

ನಿಮ್ಮ ಕನಿಷ್ಟ ಬ್ಯಾಲೆನ್ಸ್ 57 ರೂ ಇರಬೇಕು

ರಿಲಾಯನ್ಸ್ 57 ರೂಗೆ 10GB 2G ಡಾಟಾವನ್ನು ನೀಡುತ್ತಿದೆ. ನಿಮ್ಮ ಮೇನ್ ಬ್ಯಾಲೆನ್ಸ್ ನಿಮಗೆ ಸೂಚನೆ ನೀಡದಂತೆ ಪ್ಲಾನ್‌ ಆಕ್ಟಿವೇಟ್‌ ಆದ ನಂತರ ಕಡಿತಗೊಳ್ಳುತ್ತದೆ. ಆದ್ದರಿಂದ ನೀವು ಡಾಟಾ ಆಫರ್‌ ಪಡೆಯಲು ನಿಮ್ಮ ಮೊಬೈಲ್‌ನಲ್ಲಿ ಕನಿಷ್ಟ ರೂ.57 ಬ್ಯಾಲೆನ್ಸ್ ಹೊಂದಿರಬೇಕು.

 ಆಫರ್ ಎಂಜಾಯ್‌ ಮಾಡಿ

ಆಫರ್ ಎಂಜಾಯ್‌ ಮಾಡಿ

ನಿಮ್ಮ ರಿಲಾಯನ್ಸ್ ನಂಬರ್‌ 10GB 2G ಡಾಟಾದೊಂದಿಗೆ ಕ್ರೆಡಿಟ್‌ ಆಗುತ್ತದೆ. ಈ ಡಾಟಾ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಅಂದಹಾಗೆ ರಿಲಾಯನ್ಸ್ ನೆಟ್‌ವರ್ಕ್‌ ಸಿಗ್ನಲ್‌ ಉತ್ತಮವಾಗಿದ್ದಲ್ಲಿ 2G ಡಾಟಾವು 3G ವೇಗದಲ್ಲಿ ಕನೆಕ್ಟ್‌ ಆಗುತ್ತದೆ.

Best Mobiles in India

English summary
You Can Enjoy 10 GB of Data from Reliance at Rs. 57. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X