ಗೂಗಲ್‌ನಿಂದ ಹೊಸ ಸೇವೆ: ಮೊಬೈಲ್‌ ರೀಚಾರ್ಜ್ ಈಗ ಅತೀ ಸುಲಭ!

|

ಮೊಬೈಲ್‌ ನಂಬರ್ ರೀಚಾರ್ಜ್ ಮಾಡಿಸಲು ನೀವಿನ್ನೂ ಯಾವುದೇ ರೀಚಾರ್ಜ್ ಶಾಪ್‌ಗೆ ಹೋಗಬೇಕಿಲ್ಲ. ಹಾಗೆಯೇ ರೀಚಾರ್ಜ್ ಮಾಡಲು ಗೂಗಲ್ ಪೇ, ಫೋನ್ ಪೇ, ಪೇಟಿಎಮ್ ಮತ್ತು ಇತರೆ ಯಾವುದೇ ಅಪ್ಲಿಕೇಶನ್ ಮೊರೆ ಹೋಗುವ ಅವಶ್ಯಕತೆ ಇಲ್ಲ. ಮತ್ತೆ ಎಲ್ಲಿ ಮೊಬೈಲ್ ರೀಚಾರ್ಜ್ ಮಾಡಿಸಿಕೊಳ್ಳಬೇಕು ಅಂತಾ ಕೇಳ್ತಿರಾ?, ಅದಕ್ಕಾಗಿಯೇ ಟೆಕ್ ದೈತ್ಯ ಗೂಗಲ್ ನೂತನ ಸೌಲಭ್ಯವನ್ನು ಪರಿಚಯಿಸಿದೆ.

ಮೊಬೈಲ್ ನಂಬರ್ ರೀಚಾರ್ಜ್

ಹೌದು, ಗೂಗಲ್ ಸಂಸ್ಥೆಯು ಇದೀಗ ಹೊಸದಾಗಿ ಮೊಬೈಲ್ ನಂಬರ್ ರೀಚಾರ್ಜ್ ಸೇವೆಯನ್ನು ಪರಿಚಯಿಸಿದ್ದು, ಬಳಕೆದಾರರು ಗೂಗಲ್‌ ಸರ್ಚ್‌ನಲ್ಲಿಯೇ ಪ್ರೀಪೇಡ್‌ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಆಂಡ್ರಾಯ್ಡ್‌ ಬಳಕೆದಾರರು ತಮ್ಮ ಮೊಬೈಲ್ ನಂಬರ್ ರೀಚಾರ್ಜ್ ಮಾಡಿಕೊಳ್ಳುವ ಜೊತೆಗೆ ಅವರ ಕುಟುಂಬದವರ ಮತ್ತು ಸ್ನೇಹಿತರ ಪ್ರೀಪೇಡ್‌ ಮೊಬೈಲ್ ನಂಬರ್‌ಗಳಿಗೂ ಸಹ ರೀಚಾರ್ಜ್ ಮಾಡಬಹುದಾದ ಅವಕಾಶ ನೀಡಲಾಗುತ್ತದೆ.

ಒಂದೇ ಸೂರಿನಲ್ಲಿ ಲಭ್ಯ

ಒಂದೇ ಸೂರಿನಲ್ಲಿ ಲಭ್ಯ

ಗೂಗಲ್‌ನ ಈ ಹೊಸ ರೀಚಾರ್ಜ್ ಸೇವೆಯಲ್ಲಿ ಏರ್‌ಟೆಲ್, ವೊಡಾಫೋನ್, ಜಿಯೋ, ಬಿಎಸ್‌ಎನ್ಎಲ್ ಟೆಲಿಕಾಂಗಳ ಮೊಬೈಲ್ ರೀಚಾರ್ಜ್ ಒಂದೇ ಸೂರಿನಡಿ ಲಭ್ಯ. ಹೀಗಾಗಿ ಯಾವುದೇ ಟೆಲಿಕಾಂ ಬಳಕೆದಾರರು ಅವರ ಪ್ರೀಪೇಡ್‌ ಮೊಬೈಲ್‌ ನಂಬರ್‌ಗೆ ಸುಲಭವಾಗಿ ಗೂಗಲ್ ಸರ್ಚ್‌ನಲ್ಲಿಯೇ ರೀಚಾರ್ಜ್ ಮಾಡಿಕೊಳ್ಳಬಹುದು. ಈ ಸೇವೆಯಿಂದ ರೀಚಾರ್ಜ್ ಮಾಡಲು ಇತರೆ ಅಪ್ಲಿಕೇಶನ್ ತೆರೆಯುವ ಅಗತ್ಯ ಇರುವುದಿಲ್ಲ.

ಈ ಸೇವೆಯ ಪ್ರಯೋಜನಗಳೆನು

ಈ ಸೇವೆಯ ಪ್ರಯೋಜನಗಳೆನು

ಗೂಗಲ್‌ನ ಪ್ರೀಪೇಡ್‌ ಮೊಬೈಲ್ ರೀಚಾರ್ಜ್ ಸೇವೆಯಲ್ಲಿ ಬಳಕೆದಾರರಿಗೆ ಕೆಲವು ಪ್ರಯೋಜನಗಳು ದೊರೆಯಲಿವೆ. ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ಎಲ್ಲ ನೆಟವರ್ಕ ರೀಚಾರ್ಜ್ ಅವಕಾಶ, ಪ್ರೀಪೇಡ್‌ ಪ್ಲ್ಯಾನ್‌ಗಳ ಹೋಲಿಕೆ ಮತ್ತು ಇತರೆ ರೀಚಾರ್ಜ್ ಸೈಟ್‌ಗಳಲ್ಲಿ ಯಾವ ಆಫರ್ ಇದೆ ಎನ್ನುವ ಮಾಹಿತಿ ಸಿಗುತ್ತದೆ. ಹಾಗೆಯೇ ರೀಚಾರ್ಜ್ ಮಾಡುವ ಮುನ್ನ ಇತರೆ ಬೆಸ್ಟ್‌ ಪ್ಲ್ಯಾನ್‌ಗಳೊಂದಿಗೆ ಹೋಲಿಕೆ ಮಾಡಬಹುದು.

ಯಾವಾಗ ಈ ಸೇವೆ ಲಭ್ಯ

ಯಾವಾಗ ಈ ಸೇವೆ ಲಭ್ಯ

ಗೂಗಲ್‌ನ ಸಂಸ್ಥೆಯು ತನ್ನ ಸರ್ಚ್ ವಿಭಾಗದಲ್ಲಿ ಪರಿಚಯಿಸಿರುವ 'ಪ್ರೀಪೇಡ್‌ ಮೊಬೈಲ್ ರೀಚಾರ್ಜ್' ಸೇವೆಯು ಆಂಡ್ರಾಯ್ಡ್ ಓಎಸ್‌ ಬಳಕೆದಾರರಿಗೆ ಲಭ್ಯವಾಗಲಿದೆ. ಇನ್ನು ಈ ಹೊಸ ಸೇವೆಯು ಸದ್ಯದಲ್ಲಿಯೇ ಆಂಡ್ರಾಯ್ಡ್ ಓಎಸ್‌ ಆಧಾರಿತ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಈ ಸೇವೆ ಅಳವಡಿಕೆಯ ನಂತರ ಇನ್ನಷ್ಟು ಪೇಮೆಂಟ್ ಮತ್ತು ರೀಚಾರ್ಜ್ ಸೌಲಭ್ಯಗಳನ್ನು ಪರಿಚಯಿಸುವ ಯೋಜನೆ ಹಾಕಿಕೊಂಡಿದೆ.

Best Mobiles in India

English summary
Google has introduced mobile recharge facility for prepaid users in Search in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X