ಸದ್ಯದಲ್ಲೇ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಳ್ಳಲಿದೆ ಹೊಸ ಫೀಚರ್!

|

ಫೇಸ್‌ಬುಕ್ ತನ್ನ ಒಡೆತನದಲ್ಲಿರುವ ಇನ್‌ಸ್ಟಾಗ್ರಾಂ ಮತ್ತು ವಾಟ್ಸಪ್‌ ಸಾಮಾಜಿಕ ತಾಣಗಳಲ್ಲಿ ಹಲವು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಮುಖ್ಯವಾಗಿ ಫೇಸ್‌ಬುಕ್ ಸ್ಟೋರಿಸ್‌ ಸೌಲಭ್ಯವು ಸಾಕಷ್ಟು ಬಳಕೆದಾರರನ್ನು ಆಕರ್ಷಿಸಿದ್ದು, ಸದ್ಯ ಟ್ರೆಂಡಿಂಗ್‌ನಲ್ಲಿದೆ. ಹಾಗೆಯೇ ಫೇಸ್‌ಬುಕ್ ಇನ್‌ಸ್ಟಾಗ್ರಾಂ ಆಪ್‌ನಲ್ಲಿಯು ಸಹ ಸ್ಟೋರಿಸ್‌ ಆಯ್ಕೆಯನ್ನು ನೀಡಿದೆ. ಆದ್ರೆ ಇದೀಗ ಹೊಸದಾಗಿ ಮತ್ತೊಂದು ಫೀಚರ್‌ ಪರಿಚಯಿಸಲು ಮುಂದಾಗಿದೆ.

 ಫೇಸ್‌ಬುಕ್

ಹೌದು, ಸಾಮಾಜಿಕ ಜಾಲತಾಣಗಳ ದೈತ್ಯ ಫೇಸ್‌ಬುಕ್ ಇದೀಗ ಸ್ಟೋರಿಸ್‌ಗೆ ಸಂಬಂಧಿಸಿದ ಹೊಸ ಫೀಚರ್ ಬಿಡುಗಡೆಗೆ ಸಜ್ಜಾಗುತ್ತಿದೆ. ಬಳಕೆದಾರರು ಫೇಸ್‌ಬುಕ್‌ನಲ್ಲಿ ಹಾಕಿದ ಸ್ಟೋರಿಯನ್ನು ಫೇಸ್‌ಬುಕ್‌ನಿಂದ ಇನ್‌ಸ್ಟಾಗ್ರಾಂ ಪೋಸ್ಟ್‌ ಮಾಡುವ ಆಯ್ಕೆಯನ್ನು ಪರಿಚಯಿಸಲಿದೆ. ಫೇಸ್‌ಬುಕ್ ಈಗಾಗಲೇ ಒಂದು ತಾಣದಿಂದ ಮತ್ತೊಂದು ತಾಣಕ್ಕೆ ಸ್ಟೋರಿಸ್‌ ಪೋಸ್ಟ್‌ ಮಾಡುವ ಸೌಲಭ್ಯ ಪರಿಚಯಿಸಿದೆ. ಅದರ ಮುಂದುವರಿದ ಹಂತವಾಗಿ ಈಗ ಫೇಸ್‌ಬುಕ್‌ನಿಂದ ಇನ್‌ಸ್ಟಾಗ್ರಾಂಗೆ ಫೋಸ್ಟ್ ಮಾಡುವ ಆಯ್ಕೆ ನೀಡಲಿದೆ.

ಕ್ರಾಸ್‌ ಪೋಸ್ಟಿಂಗ್ ಫೀಚರ್‌

ಫೇಸ್‌ಬುಕ್ ಹೊಸ ಕ್ರಾಸ್‌ ಪೋಸ್ಟಿಂಗ್ ಫೀಚರ್‌ ಅನ್ನು ಅಧಿಕೃತವಾಗಿ ಪ್ರಾಯೋಗಿಕ ಪರೀಕ್ಷಾ ಹಂತ ನಡೆಸಿದೆ. ಹಾಗೂ ಈ ಹೊಸ ಆಯ್ಕೆಯು ಇನ್ನು ಬೀಟಾ ಆವೃತ್ತಿಯಲ್ಲಿದೆ. ಅಂದಹಾಗೆ ಈ ಆಯ್ಕೆಯು ಭಿನ್ನ ಪ್ಲಾಟ್‌ಫಾರ್ಮ್ ಗಳಲ್ಲಿ ಸ್ಟೋರಿ ಗಳನ್ನು ಫೋಸ್ಟ್‌ ಮಾಡಲು ಬಳಕೆದಾರರಿಗೆ ನೆರವಾಗಲಿದೆ. ಇನ್ನು ಇನ್‌ಸ್ಟಾಗ್ರಾಂ ಬಳಕೆದಾರರು ಇನ್‌ಸ್ಟಾಗ್ರಾಂ ಸ್ಟೋರಿಯನ್ನು ನೇರವಾಗಿ ಫೇಸ್‌ಬುಕ್‌ಗೆ ಫೋಸ್ಟ್‌ ಮಾಡುವ ಸೌಲಭ್ಯವು ಈಗಾಗಲೇ ಬಳಕೆಯಲ್ಲಿದೆ.

ವಾಟ್ಸಪ್‌ ಸ್ಟೇಟಸ್‌

ಹಾಗೆಯೇ ಫೇಸ್‌ಬುಕ್ ಇತ್ತೀಚಿಗೆ ವಾಟ್ಸಪ್‌ ಸ್ಟೇಟಸ್‌ಗಳನ್ನು ನೇರವಾಗಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ತಾಣಗಳಿಗೆ ಶೇರ್ ಮಾಡುವ ಸೌಲಭ್ಯವನ್ನು ಪರಿಚಯಿಸಿತ್ತು. ವಾಟ್ಸಪ್‌ ಸ್ಟೇಟಸ್‌ ಇಡುವ ಆಯ್ಕೆ ಹೆಚ್ಚು ಜನಪ್ರಿಯತೆ ಪಡೆದಿದ್ದು, ವಾಟ್ಸಪ್‌ನ ಸ್ಟೇಟಸ್‌ ಅನ್ನು ನೇರವಾಗಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಸೋಶಿಯಲ್ ತಾಣಗಳಲ್ಲಿ ಹಂಚಿಕೊಳ್ಳುವ ಸೌಲಭ್ಯವನ್ನು ಪರಿಚಯಿಸಿತು.

ಫೋಟೊ, ವಿಡಿಯೊ

ಬಳಕೆದಾರರು ಫೇಸ್‌ಬುಕ್‌ನ ಸ್ಟೋರಿಸ್ ಆಯ್ಕೆಯಲ್ಲಿ ಫೋಟೊ, ವಿಡಿಯೊ ಅಥವಾ ಲಿಂಕ್ ಪೋಸ್ಟ್‌ ಮಾಡಬಹುದಾಗಿದೆ. ಸ್ಟೋರಿಸ್‌ನಲ್ಲಿ ಫೋಸ್ಟ್‌ ಮಾಡಿದ ಫೋಟೊ/ವಿಡಿಯೊ 24 ಗಂಟೆಗಳ ಅವಧಿ ಮಾತ್ರ ಕಾಣಿಸಿಕೊಳ್ಳಲಿದೆ. ಆನಂತರ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುತ್ತದೆ. ಹಾಗೂ ಆ ಅವಧಿಯೊಳಗೆ ಬಳಕೆದಾರರು ಡಿಲೀಟ್ ಕೂಡಾ ಮಾಡಬಹುದಾಗಿದೆ.

Most Read Articles
Best Mobiles in India

English summary
New report has suggested that Facebook users may be able to post their Stories on Instagram.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X