ನ್ಯೂಟನ್‌ ಹೊಸ ಭಾಷೆ ಆವಿಷ್ಕಾರ ಮಾಡಲು ಪ್ರಯತ್ನಿಸಿದ್ದರು!!

  By Suneel
  |

  'ಸರ್ ಐಸಾಕ್‌ ನ್ಯೂಟನ್‌' ಇಂಗ್ಲೀಷ್‌ ಭೌತವಿಜ್ಞಾನಿ, ಗಣಿತಶಾಸ್ತ್ರಜ್ಞ ಮಾತ್ರವಲ್ಲದೇ, ವಿಜ್ಞಾನ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವಿ ವಿಜ್ಞಾನಿ ಎನಿಸಿಕೊಂಡವರು.

  ಗುರುತ್ವಾಕರ್ಷಣೆ ಚಲನೆ ನಿಯಮಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವಿವರಿಸಿ ಹಲವಾರು ಗರಿಗಳನ್ನು ಪಡೆದರು. ಅಲ್ಲದೇ ಕಲನಶಾಸ್ತ್ರ, ದೃಗ್ವಿಜ್ಞಾನ ಮತ್ತು ರಾಸಾಯನಿಕ ಪರಿವರ್ತನಾ ವಿಧಾನಗಳಿಗೆ ಸಂಬಂಧಿಸಿದಂತೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಅಂದಹಾಗೆ ಇಷ್ಟುದಿನ ರಹಸ್ಯವಾಗಿದ್ದ, 'ನ್ಯೂಟನ್‌'ರವರು ಸ್ವಯಂಕೃತವಾಗಿ ಹೊಸ ಭಾಷೆಯನ್ನು ಆವಿಷ್ಕಾರ ಮಾಡಲು ಪ್ರಯತ್ನಿಸಿದ್ದ ಕುತೂಹಲಕಾರಿ ಮಾಹಿತಿ ಈಗ ಹೊರಬಿದ್ದಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

  ಸ್ಲೈಡರ್‌ನಲ್ಲಿ ನ್ಯೂಟನ್‌'ರವರು ಆವಿಷ್ಕರಿಸಲು ಪ್ರಯತ್ನಿಸಿದ ಸಾರ್ವತ್ರಿಕ ಭಾಷೆಯ ಬಗ್ಗೆ ವೀಡಿಯೊ ನೋಡಲು ಮರೆಯದಿರಿ.

  ನೋಕಿಯಾ 1100; ಬ್ಯಾಕ್‌ ಟು ಸೇಲ್‌

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  1

  'ಐಸಾಕ್‌ ನ್ಯೂಟನ್‌' ವಿಜ್ಞಾನಿ, ವಿಜ್ಞಾನ ಕ್ಷೇತ್ರಕ್ಕೆ ಅವರ ಕೊಡುಗೆ ಏನು ಎಂಬುದನ್ನು ಎಲ್ಲರು ತಿಳಿದಿರಬಹುದು, ಆದರೆ ಯಾರಿಗೂ ತಿಳಿಯದ ಅವರ ಬಗೆಗಿನ ಅಚ್ಚರಿ ವಿಷಯ ಅಂದ್ರೆ ನ್ಯೂಟನ್‌'ರವರು ಸ್ವಯಂ ಆಗಿ ಹೊಸ ಭಾಷೆ ಆವಿಷ್ಕಾರ ಮಾಡಲು ಪ್ರಯತ್ನಿಸಿದ್ದರಂತೆ.

  2

  ನ್ಯೂಟನ್‌, ಗ್ರಹಿಸಲು ಸುಲಭವಾದ ಸಾರ್ವತ್ರಿಕ ಭಾಷೆ ಆವಿಷ್ಕರಿಸಲು ಆಸಕ್ತಿ ಹೊಂದಿದ್ದರು. ಕ್ರಮಬದ್ಧವಾದ ಫ್ಯಾಷನ್‌ ಅನುಸರಿಸಿ, ಕೇವಲ ಒಂದು ಪದ ಕೇಳಿದ್ರೆ ಅರ್ಥ ಗ್ರಹಿಸುವಂತಹ ಭಾಷೆಯನ್ನು ಕ್ರಿಯೇಟ್‌ ಮಾಡಲು ಪ್ರಯತ್ನಿಸುತ್ತಿದ್ದರು.

  3

  ನ್ಯೂಟನ್‌ ಪದಗಳ ವ್ಯತ್ಯಾಸ ಸೂಚಿಸಲು 'ಪೂರ್ವ ಪ್ರತ್ಯಯಗಳನ್ನು ಮತ್ತು ಉತ್ತರ ಪ್ರತ್ಯಯ (prefixes and suffixes)'ಗಳನ್ನುಬಳಸುತ್ತಿದ್ದರು.

  4

  ನ್ಯೂಟನ್ ರವರು ಪ್ರಾಥಮಿಕವಾಗಿ 'Temperature' ಪದಕ್ಕೆ 'Tor' ಎಂದು ಬಳಸುತ್ತಿದ್ದರು. ನಂತರ hot ಬದಲಿಗೆ 'owtor', warm ಅನ್ನು 'etor' ಎಂದು ಸೂಚಿಸುತ್ತಿದ್ದರು. ಇನ್ನೂ ವ್ಯತ್ಯಾಸವಾಗಿ 'cold' ಅನ್ನು 'aytor' ಎಂದು, ಅತಿ ಹೆಚ್ಚು ತಂಪಾದದನ್ನು (extremly cold) 'oytor' ಎಂದು ಸೂಚಿಸುತ್ತಿದ್ದರು.

  5

  ನ್ಯೂಟನ್‌'ರವರು ಹೊಸ ಭಾಷೆಯನ್ನು ಆವಿಷ್ಕಾರ ಮಾಡುವ ಚತುರರ ಗುಂಪು 'ConLangers'ನ ಒಬ್ಬರಾಗಿದ್ದರು.

  6

  ನ್ಯೂಟನ್‌'ರಂತಹ ಸುಪ್ರಸಿದ್ಧ ಭಾಷಾಶಾಸ್ತ್ರಜ್ಞರ ಸಮುದಾಯಕ್ಕೆ ಜೆ.ಆರ್.ಆರ್.ಟೊಕಿನ್ಸ್ ( ಲಾರ್ಡ್‌ ಆಫ್‌ ದಿ ರಿಂಗ್ಸ್'ಗೆ ಎಲ್‌ವಿಶ್‌ ಭಾಷೆ ಕಂಡುಹಿಡಿದವರು), ಡೇವಿಡ್‌ ಜೆ. ಪೀಟರ್ಸನ್ (ದೊಥ್ರಕಿ ಭಾಷೆಯನ್ನು ಗೇಮ್‌ ಆಫ್ ಥ್ರೋನ್‌ಗೆ ಕಂಡುಹಿಡಿದವರು), ಪಾಲ್‌ ಫ್ರಾಮ್ಮರ್‌ (ಅವತಾರ್‌ಗಾಗಿ ನವಿ ಭಾಷೆ ಕಂಡುಹಿಡಿದವರು), ಮಾರ್ಕ್‌ ಓಕ್ರಾಂಡ್‌ (ಸ್ಟಾರ್‌ ಟ್ರೆಕ್ III'ಗಾಗಿ ಕ್ಲಿನ್‌ಕಾಂಗ್‌ ಭಾಷೆ ಕಂಡುಹಿಡಿದವರು) ಸಹ ಸೇರುತ್ತಾರೆ.

  7

  ಹಿಂದಿನ ಸ್ಲೈಡರ್‌ನಲ್ಲಿ ತಿಳಿಸಿದ ಯಾವ ಭಾಷೆಯು ಸಹ ಸಾರ್ವತ್ರಿಕ ಭಾಷೆಯಾಗಿ ಹೊರಹೊಮ್ಮಲಿಲ್ಲ. ಆದರೆ ಆ ಭಾಷಾಶಾಸ್ತ್ರಜ್ಞರನ್ನು ಹಲವು ಅಭಿಮಾನಿಗಳು ಮಾತ್ರ ಹಿಂಭಾಲಿಸುತ್ತಿದ್ದಾರೆ.

  8

  ನ್ಯೂಟನ್‌ರ ಗುರುತ್ವ ಚಲನ ನಿಯಮಕ್ಕಿಂತ ಅವರು ಕೈಗೊಂಡ ಹೊಸ ಭಾಷೆಯ ಆವಿಷ್ಕಾರ ಹೆಚ್ಚು ಗಂಭೀರವಾಗಿತ್ತು ಎನ್ನಲಾಗಿದೆ. ನ್ಯೂಟನ್‌'ರವರು ಆವಿಷ್ಕರಿಸಲು ಪ್ರಯತ್ನಿಸಿದ ಸಾರ್ವತ್ರಿಕ ಭಾಷೆಯನ್ನು ಭಾಷಾಶಾಸ್ತ್ರಜ್ಞರಾದ ಅರಿಕ ಓಕ್‌ರೆಂಟ್‌ ಮತ್ತು ಸೀನ್‌ ಓ ನೇಲ್‌ ವಿವರಿಸಿರುವ ವೀಡಿಯೊವನ್ನು ಮುಂದಿನ ಸ್ಲೈಡರ್‌ನಲ್ಲಿ ನೋಡಿರಿ

  rn

  9

  ನ್ಯೂಟನ್‌'ರವರು ಆವಿಷ್ಕರಿಸಲು ಪ್ರಯತ್ನಿಸಿದ ಸಾರ್ವತ್ರಿಕ ಭಾಷೆಯ ವೀಡಿಯೊ ವಿಶ್ಲೇಷಣೆ.
  ವೀಡಿಯೊ ಕೃಪೆ: Arika Okrent

  ಗಿಜ್‌ಬಾಟ್‌

  ಉತ್ತರ ಕೊರಿಯಾ 21 ನ್ಯೂಕ್ಲಿಯಾರ್ ವೆಪನ್‌ ಹೊಂದಲಿದೆ; ಸ್ಕೆಚ್ ಏನು?

  'ಫಾದರ್ಸ್‌ ಡೇ' ಗೂಗಲ್‌ ಆಡ್‌; ನೋಡಿದ್ರೆ ನೀವು ಕಣ್ಣೀರ್‌ ಹಾಕ್ತೀರೀ..

  ಗಿಜ್‌ಬಾಟ್‌

  ಫೇಸ್‌ಬುಕ್‌

  ಕನ್ನಡ.ಗಿಜ್‌ಬಾಟ್‌.ಕಾಂ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

   

  Read more about:
  English summary
  You Won’t Believe That Isaac Newton Actually Tried To Invent A Language On His Own. Read more about this in kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more