ಯೂಟ್ಯೂಬ್‌ನಲ್ಲಿ 'ಗೋ ಲೈವ್ ಟುಗೆದರ್' ಫೀಚರ್ಸ್‌ ; ಅರ್ಹ ಕ್ರಿಯೇಟರ್ಸ್‌ಗೆ ಲಭ್ಯ

|

ಗೂಗಲ್‌ನ ಪ್ರಮುಖ ಆಪ್‌ಗಳಲ್ಲಿ ಒಂದಾದ ಯೂಟ್ಯೂಬ್ ಬಳಕೆದಾರರಿಗೆ ಅನುಕೂಲ ಆಗುವ ಹಲವಾರು ಫೀಚರ್ಸ್‌ಗಳನ್ನು ಕಾಲಕಾಲಕ್ಕೆ ಪರಿಚಯಿಸುತ್ತಾ ಬರುತ್ತಿದೆ. ಇದರ ನಡುವೆ ಈಗ ಮತ್ತೊಂದು ಫೀಚರ್ಸ್‌ ಬಗ್ಗೆ ಘೋಷಣೆ ಮಾಡಿದ್ದು, ಈ ಫೀಚರ್ಸ್‌ಮೂಲಕ ಕ್ರಿಯೇಟರ್ಸ್‌ ಯೂಟ್ಯೂಬ್‌ನಲ್ಲಿ ಇನ್ನಷ್ಟು ಹೊಸ ಅನುಭವ ಪಡೆಯಲು ಸಹಕಾರಿಯಾಗಿದೆ.

ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್

ಹೌದು, ಪ್ರಮುಖ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿರುವ ಯೂಟ್ಯೂಬ್‌ನಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಆಂಬಿಯಂಟ್‌ ಮೋಡ್‌ ಪರಿಚಯಿಸಲಾಗಿತ್ತು. ಇದೀಗ 'ಗೋ ಲೈವ್ ಟುಗೆದರ್' ಎಂಬ ಹೊಸ ಫೀಚರ್ಸ್‌ ಬಳಕೆದಾರರಿಗೆ ಲಭ್ಯವಾಗಲಿದೆ. ಈ ಫೀಚರ್ಸ್‌ ಮೂಲಕ ಅರ್ಹ ವಿಡಿಯೋ ಕ್ರಿಯೇಟರ್ಸ್‌ ಲೈವ್ ಸ್ಟ್ರೀಮ್ ಮಾಡುವ ಉದ್ದೇಶದಿಂದ ಪ್ರಮುಖ ಅತಿಥಿಗಳನ್ನು ಆಹ್ವಾನಿಸಲು ಅವಕಾಶ ಕಲ್ಪಿಸಲಾಗಿದೆ.

ವಿಡಿಯೋ

ಈ ಫೀಚರ್ಸ್‌ ಅನ್ನು ವಿಡಿಯೋ ಕ್ರಿಯೇಟರ್ಸ್‌ಗಳ ಆಯ್ದ ಗುಂಪಿಗೆ ವಿಸ್ತರಿಸಲಾಗುತ್ತಿದೆ. ಶೀಘ್ರದಲ್ಲಿಯೇ ಹೆಚ್ಚಿನ ಕ್ರಿಯೇಟರ್ಸ್‌ 'ಲೈವ್ ಟುಗೆದರ್' ಫೀಚರ್ಸ್‌ ಬಳಸಲು ಅವಕಾಶ ಪಡೆಯಬಹುದು ಎಂದು ನಾವು ಭಾವಿಸುತ್ತೇವೆ ಎಂದು ಯೂಟ್ಯೂಬ್ ತನ್ನ ಬ್ಲಾಗ್‌ಪೋಸ್ಟ್‌ನಲ್ಲಿ ಉಲ್ಲೇಖಿಸಿದೆ. ಪ್ರಮುಖ ವಿಷಯ ಎಂದರೆ ಯೂಟ್ಯೂಬ್‌ ಲೈವ್‌ ಅನ್ನು ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಬಳಕೆ ಮಾಡಲು ಅವಕಾಶ ಇಲ್ಲ. ಬದಲಾಗಿ ಕ್ರಿಯೇಟರ್ಸ್‌ ತಮ್ಮ ಫೋನ್‌ ಮೂಲಕ ಈ ಫೀಚರ್ಸ್‌ ಬಳಕೆ ಮಾಡಬಹುದಾಗಿದೆ.

ವೆಬ್‌ ಬ್ರೌಸರ್‌ ಬಳಕೆ

ವೆಬ್‌ ಬ್ರೌಸರ್‌ ಬಳಕೆ

ಈ 'ಗೋ ಲೈವ್ ಟುಗೆದರ್' ಫೀಚರ್ಸ್‌ ಅನ್ನು ಬಳಕೆ ಮಾಡಿಕೊಂಡು ಅತಿಥಿಗಳ ಜೊತೆ ಲೈವ್‌ ಮಾಡುವುದು ಸರಳ ಮಾರ್ಗವಾಗಿದೆ. ಇದರಲ್ಲಿ ಕ್ರಿಯೇಟರ್ಸ್‌ ಅತಿಥಿಯೊಂದಿಗೆ ಲೈವ್‌ ಸ್ಟ್ರೀಮ್ ಅನ್ನು ನಿಗದಿಪಡಿಸಲು ವೆಬ್‌ ಬ್ರೌಸರ್‌ ಬಳಕೆ ಮಾಡಬಹುದಾಗಿದೆ. ಆದರೆ ಇದಾದ ನಂತರದ ಪ್ರಕ್ರಿಯೆ 'ಗೋ ಲೈವ್ ಟುಗೆದರ್' ಫೀಚರ್ಸ್‌ ಗೆ ಬಂದಾಗ ಮಾತ್ರ ಇಬ್ಬರೂ ಸ್ಮಾರ್ಟ್‌ಫೋನ್‌ ಬಳಕೆ ಮಾಡಬೇಕಿದೆ.

ಏಕಕಾಲದಲ್ಲಿ ಒಬ್ಬರಿಗೆ ಅವಕಾಶ

ಏಕಕಾಲದಲ್ಲಿ ಒಬ್ಬರಿಗೆ ಅವಕಾಶ

ಈ ಫೀಚರ್ಸ್‌ನಲ್ಲಿ ಕ್ರಿಯೇಟರ್ಸ್‌ ತಮ್ಮ ಲೈವ್ ಸ್ಟ್ರೀಮ್‌ನಲ್ಲಿ ಇರುವ ಅತಿಥಿಗಳನ್ನು ಬದಲಾಯಿಸಬಹುದು. ವಿಷಯ ಏನೆಂದರೆ ಏಕಕಾಲದಲ್ಲಿ ಒಬ್ಬ ವ್ಯಕ್ತಿಯ ಜೊತೆಗೆ ಮಾತ್ರ ಲೈವ್‌ ಮಾಡಬಹುದಾದ ಅವಕಾಶ ನೀಡಿರುವ ಕಾರಣ ಉಳಿದಂತೆ ಇತರೆ ಅತಿಥಿಗಳನ್ನು ಆಹ್ವಾನಿಸಿದ ನಂತರ ಅವರ ಸ್ಟ್ರೀಮ್ ಫೀಡ್ ಫೋನ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ನಂತರ ಪ್ರಸ್ತುಇರುವ ಅತಿಥಿ ಜೊತೆಗೆ ಲೈವ್‌ ನಿಸ್ಕ್ರಿಯಗೊಳಿಸಿ ಹೊಸ ಅತಿಥಿಯನ್ನು ಸೇರಿಸಿಕೊಳ್ಳಬಹುದು ಎಂದು ಈ ಬಗ್ಗೆ ಕಂಪೆನಿ ತನ್ನ ಬ್ಲಾಗ್‌ಪೋಸ್ಟ್‌ನಲ್ಲಿ ಬರೆದುಕೊಂಡಿದೆ.

ಎಲ್ಲದಕ್ಕೂ ಹೋಸ್ಟ್ ಚಾನಲ್ ಜವಾಬ್ದಾರಿ

ಎಲ್ಲದಕ್ಕೂ ಹೋಸ್ಟ್ ಚಾನಲ್ ಜವಾಬ್ದಾರಿ

ಈ ಫೀಚರ್ಸ್‌ನಲ್ಲಿ ಕೆಲವು ನೀತಿ ನಿಯಮಗಳನ್ನು ರೂಪಿಸಲಾಗಿದೆ. ಹಾಗೆಯೇ ಸಮುದಾಯ ಮಾರ್ಗಸೂಚಿಗಳು, ಹಕ್ಕುಸ್ವಾಮ್ಯ ನೀತಿ ಮತ್ತು ಎಲ್ಲಾ ಇತರ ಅನ್ವಯವಾಗುವ ನೀತಿಗಳನ್ನು ಒಳಗೊಂಡಂತೆ ಹೋಸ್ಟ್ ಚಾನಲ್ ಜವಾಬ್ದಾರಿ ವಹಿಸಬೇಕಿದೆ ಎಂದು ಯೂಟ್ಯೂಬ್‌ ತಿಳಿಸಿದೆ. ಈ ಫೀಚರ್ಸ್‌ನಲ್ಲಿ ಆಹ್ವಾನಿಸುವ ಅತಿಥಿಯ ಹೇಳಿಕೆಗಳು, ವಿಷಯಗಳು ಎಲ್ಲವೂ ಸಹ ಹೋಸ್ಟ್ ಚಾನಲ್ ಮೇಲೆಯೇ ಇರುತ್ತದೆ. ಈ ಕಾರಣಕ್ಕೆ ಎಚ್ಚರಿಕೆಯಿಂದ ಈ ಫೀಚರ್ಸ್‌ ಬಳಸಬಹುದು ಎಂದು ತಿಳಿಸಿದೆ.

ಪ್ರೈಮ್‌ಟೈಮ್ ಚಾನಲ್ಸ್

ಪ್ರೈಮ್‌ಟೈಮ್ ಚಾನಲ್ಸ್

ಯೂಟ್ಯೂಬ್ ಕೆಲ ದಿನಗಳ ಹಿಂದೆ 'ಪ್ರೈಮ್‌ಟೈಮ್ ಚಾನಲ್ಸ್' ಎಂಬ ಹೊಸ ಫೀಚರ್ಸ್‌ ಅನ್ನು ಸಹ ಪರಿಚಯಿಸಿದೆ. ಇದು ಬಳಕೆದಾರರು ತಮ್ಮ ನೆಚ್ಚಿನ ಟಿವಿ ಶೋಗಳು, ಚಲನಚಿತ್ರಗಳು ಮತ್ತು ಕ್ರೀಡೆಗಳನ್ನು ನೇರವಾಗಿ ಅಪ್ಲಿಕೇಶನ್‌ನಲ್ಲಿ ಸ್ಟ್ರೀಮಿಂಗ್ ಸೇವೆಗಳಿಂದ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿ 30 ಕ್ಕೂ ಹೆಚ್ಚು ಚಾನಲ್‌ಗಳನ್ನು ಖರೀದಿಸಬಹುದಾಗಿದೆ.

ಮೇನ್‌ಪೇಜ್‌

ಈ ಫೀಚರ್ಸ್‌ನಲ್ಲಿ ಬಳಕೆದಾರರಿಗೆ ಅನುಕೂಲ ಆಗುವ ಹಾಗೆ ಮೇನ್‌ಪೇಜ್‌ನಲ್ಲಿ ಕ್ಯುರೇಟೆಡ್ ಟ್ರೇಲರ್‌ಗಳೊಂದಿಗೆ ದೃಶ್ಯಗಳು ಕಾಣಿಸಿಕೊಳ್ಳುತ್ತವೆ. ಹಾಗೆಯೇ ಇದಕ್ಕೆ ಸಂಬಂಧಿಸಿದ ಪ್ರದರ್ಶನದ ವಿಡಿಯೋಗಳು ಸಹ ಡಿಸ್‌ಪ್ಲೇ ಆಗಲಿದ್ದು, ವೀಕ್ಷಕರಿಗೆ ಹೆಚ್ಚಿನ ಮಾಹಿತಿ ದೊರಕಲಿದೆ. ಈ ಪ್ರೈಮ್‌ಟೈಮ್ ಚಾನೆಲ್‌ಗಳ ಆರಂಭಿಕ ಆವೃತ್ತಿಯನ್ನು ಯುಎಸ್‌ನಲ್ಲಿ ಮಾತ್ರ ಪರಿಚಯಿಸಲಾಗಿದ್ದು, ಮುಂದಿನ ಹಂತದಲ್ಲಿ ಜಾಗತಿಕವಾಗಿ ಪರಿಚಯಿಸಲಾಗುವುದು ಎಂದು ತಿಳಿದುಬಂದಿದೆ.

Best Mobiles in India

English summary
YouTube has already introduced several features. In between now it has introduced new features called Go Live Together.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X