ನೀತಿ ಉಲ್ಲಂಘನೆ; ನೀಲಿಚಿತ್ರದ ಚಾನಲ್‌ ನಿಷೇಧಿಸಿದ ಯೂಟ್ಯೂಬ್!

|

ಯೂಟ್ಯೂಬ್‌ ಮಾಹಿತಿ ಹಾಗೂ ಮನರಂಜನೆ ನೀಡುವ ಪ್ರಮುಖ ಪ್ಲಾಟ್‌ಫಾರ್ಮ್‌ ಆಗಿದ್ದು, ಅದರಲ್ಲೂ ಈಗಂತೂ ಬಹುಪಾಲು ಮಂದಿ ಯೂಟ್ಯೂಬ್‌ನಿಂದಲೇ ಹೆಚ್ಚು ಮುನ್ನೆಲೆಗೆ ಬರುತ್ತಿದ್ದಾರೆ. ಇದರ ನಡುವೆ ಯೂಟ್ಯೂಬ್ ಸಹ ಕೆಲವು ನೀತಿ ನಿಯಮಗಳನ್ನು ರೂಪಿಸಿ ಬಳಕೆದಾರರಿಗೆ ಹಾಗೂ ವೀಕ್ಷಕರಿಗೆ ಅನುವು ಮಾಡಿಕೊಡುತ್ತಿದ್ದು, ಯಾರು ಇದರ ನೀತಿಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೋ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುತ್ತಿದೆ.

ಯೂಟ್ಯೂಬ್‌

ಹೌದು, ಯೂಟ್ಯೂಬ್‌ನ ನೀತಿಗಳ ವಿರುದ್ಧ ಇರುವ ಅದೆಷ್ಟೋ ಚಾನಲ್‌ಗಳನ್ನು ಈಗಾಗಲೇ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಲಾಗಿದೆ. ಇದರ ನಡುವೆ ಈಗ ವಯಸ್ಕರ ವೆಬ್‌ಸೈಟ್‌ವೊಂದರ ವಿರುದ್ಧ ಯೂಟ್ಯೂಬ್‌ ಕಠಿಣ ಕ್ರಮ ತೆಗೆದುಕೊಂಡಿದೆ. ಹಲವು ಬಾರಿ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಚಾನಲ್ ಖಾತೆಯನ್ನು ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಲಾಗಿದ್ದು, ಯೂಟ್ಯೂಬ್‌ನಲ್ಲಿ ಅನುಮತಿಸದ ಕಂಟೆಂಟ್‌ ಅನ್ನು ಹಾಕಿ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಈ ಕ್ರಮ ಜರುಗಿಸಲಾಗಿದೆ ಎಂದು ಗೂಗಲ್‌ ಮಾಲೀಕತ್ವದ ಕಂಪೆನಿ ಯೂಟ್ಯೂಬ್‌ ಹೇಳಿದೆ.

ಈ ಚಾನಲ್ ಮಾಡಿದ್ದಾದರೂ ಏನು?

ಈ ಚಾನಲ್ ಮಾಡಿದ್ದಾದರೂ ಏನು?

ನೀಲಿಚಿತ್ರದ ಯೂಟ್ಯೂಬ್ ಚಾನಲ್ 2014 ರಿಂದ ಅಸ್ತಿತ್ವದಲ್ಲಿದೆ. ಈ ಚಾನಲ್‌ 900,000 ಚಂದಾದಾರರನ್ನು ಹೊಂದಿದ್ದು, ಜನಪ್ರಿಯ ವಯಸ್ಕ ಮನರಂಜನಾ ನೆಟ್‌ವರ್ಕ್ ಮತ್ತು ಅದರ ಪ್ರದರ್ಶಕರನ್ನು ಉತ್ತೇಜಿಸುವ ಉದ್ದೇಶದಿಂದ ಇಲ್ಲಿ ವಿಡಿಯೋಗಳನ್ನು ಪೋಸ್ಟ್‌ ಮಾಡುತ್ತಿತ್ತು. ಇದರಲ್ಲಿ ಮಾಡೆಲ್ಸ್, ಪೋರ್ನ್‌ಹಬ್ ಲಿಟರಸಿ 101 ನಂತಹ ಸರಣಿಗಳನ್ನು ಇದು ಒಳಗೊಂಡಿತ್ತು. ಹಾಗೆಯೇ ವೆಬ್‌ಸೈಟ್‌ನ ಕೆಲವು ಲಿಂಕ್‌ಗಳನ್ನು ಇಲ್ಲಿ ನೀಡಲಾಗುತ್ತಿತ್ತು. ಜೊತೆಗೆ ವೀಕ್ಷಕರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಎಂಬುದನ್ನು ಸೂಚಿಸಲು ಚಾನೆಲ್ ತನ್ನ ವಿಡಿಯೋಗಳ ಮೇಲೆ ವಯಸ್ಸಿನ ನಿರ್ಬಂಧವನ್ನು ಸಹ ಉಲ್ಲೇಖಿಸುತ್ತಿತ್ತು. ಆದರೆ, ಇನ್ಮುಂದೆ ಯೂಟ್ಯೂಬ್‌ ನಲ್ಲಿ ಈ ಚಾನಲ್‌ ಕಾಣಿಸಿಕೊಳ್ಳುವುದಿಲ್ಲ. ಹಾಗೆಯೇ ಇದರಲ್ಲಿನ ಈ URL 404 ದೋಷವನ್ನು ತೋರಿಸುತ್ತಿದೆ.

ಮಾರ್ಗಸೂಚಿ

ಹಲವು ರೀತಿಯ ಪರಿಶೀಲನೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಮತ್ತು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದು ಕಂಡುಬಂದ ನಂತರ ಆ ಅಧಿಕೃತ ಚಾನಲ್ ಅನ್ನು ಲಾಕ್ ಮಾಡಲಾಗಿದೆ ಎಂದು ಯೂಟ್ಯೂಬ್‌ ವಕ್ತಾರ ಜ್ಯಾಕ್ ಮ್ಯಾಲೋನ್ ಮಾಹಿತಿ ನೀಡಿದ್ದಾರೆ.

ಯೂಟ್ಯೂಬ್‌

ಯೂಟ್ಯೂಬ್‌ನ ಯಾವುದೇ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸದಂತೆ ಖಚಿತಪಡಿಸಿಕೊಳ್ಳಲು ನಾವು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳುತ್ತೇವೆ. ಯೂಟ್ಯೂಬ್‌ನ ಈ ನಿಷೇಧವು ವಯಸ್ಕರ ವಿಷಯದ ವಿರುದ್ಧ ಇರುವ ತಾರತಮ್ಯದ ಇತ್ತೀಚಿನ ಉದಾಹರಣೆಯಾಗಿದೆ ಎಂದು ನೀಲಿಚಿತ್ರದ ಚಾನಲ್‌ ಯೂಟ್ಯೂಬ್‌ ವಿರುದ್ಧ ಬೇಸರ ಹೊರಹಾಕಿದೆ.

ಚಾನಲ್‌

ಈ ರೀತಿಯ ಚಾನಲ್‌ ಅನ್ನು ಲಾಕ್ ಮಾಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇದೇ ರೀತಿಯ ಹಲವಾರು ಚಾನಲ್‌ ವಿರುದ್ಧ ಯೂಟ್ಯೂಬ್‌ ಕಠಿಣ ಕ್ರಮ ತೆಗೆದುಕೊಂಡಿದೆ. ಅದರಂತೆ ಕೆಲವು ತಿಂಗಳುಗಳ ಹಿಂದೆ ಇನ್‌ಸ್ಟಾಗ್ರಾಮ್‌ ಕೂಡ ಈ ಈ ವೆಬ್‌ಸೈಟ್‌ನ ಖಾತೆಯನ್ನು ಶಾಶ್ವತವಾಗಿ ಲಾಕ್ ಮಾಡಿದ್ದು, ಯೂಟ್ಯೂಬ್ ನೀಡಿದ ಕಾರಣವನ್ನೇ ಇನ್‌ಸ್ಟಾಗ್ರಾಮ್‌ ಸಹ ನೀಡಿತ್ತು.

ಲೈಂಗಿಕ

ನಗ್ನತೆ, ವಯಸ್ಕರ ವಿಷಯ ಮತ್ತು ಲೈಂಗಿಕ ವಿಜ್ಞಾಪನೆಗಳಿಗಾಗಿ ಈ ವೆಬ್‌ಸೈಟ್‌ನ ಖಾತೆಯನ್ನು ಇನ್‌ಸ್ಟಾಗ್ರಾಮ್‌ ನಿಷೇಧಿಸಿದೆ. ಇನ್‌ಸ್ಟಾಗ್ರಾಮ್‌ನ ಮಾಲೀಕರಾದ ಮೆಟಾ ಸಂಸ್ಥೆಯು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಹಲವಾರು ಎಚ್ಚರಿಕೆಗಳ ಹೊರತಾಗಿಯೂ ಇನ್‌ಸ್ಟಾಗ್ರಾಮ್‌ ನ ನೀತಿಗಳ ವಿರುದ್ಧ ಕಾರ್ಯನಿರ್ವಹಿಸುವುದನ್ನು ಆ ವೆಬ್‌ಸೈಟ್‌ ಮುಂದುವರೆಸಿತ್ತು. ಜನರನ್ನು ಇನ್‌ಸ್ಟಾಗ್ರಾಮ್‌ ನಿಂದ ತನ್ನ್ ವೆಬ್‌ಸೈಟ್‌ಗೆ ಕರೆದೊಯ್ಯಲು ಲಿಂಕ್‌ಗಳನ್ನು ಒದಗಿಸುತ್ತಿತ್ತು ಎಂದು ತಿಳಿಸಿದೆ.

ವೆಬ್‌ಸೈಟ್‌

ಇನ್ನು ಈ ನಿಷೇಧಕ್ಕೆ ಒಳಪಟ್ಟ ವೆಬ್‌ಸೈಟ್‌ ವಿಶ್ವದ ಪ್ರಮುಖ ಅಶ್ಲೀಲ ವಿಡಿಯೋ ಸೈಟ್ ಆಗಿದ್ದು, ಪ್ರಪಂಚದಾದ್ಯಂತ ಅನೇಕ ಅಭಿಮಾನಿಗಳು ಮತ್ತು ವೀಕ್ಷಕರನ್ನು ಹೊಂದಿದೆ. ಇದರಲ್ಲಿ ಪ್ರೀಮಿಯಂ ಸದಸ್ಯರು ಉಚಿತ ಸದಸ್ಯರನ್ನು ಹೊಂದಿದ್ದು, ಭಾರತದಲ್ಲಿಯೂ ಈ ವೆಬ್‌ಸೈಟ್‌ ಅನ್ನು ಹಲವಾರು ಜನರು ವೀಕ್ಷಣೆ ಮಾಡುತ್ತಾರೆ ಎಂದು ತಿಳಿದುಬಂದಿದೆ.

Best Mobiles in India

English summary
YouTube has effectively banned this site channel, do you know why? .

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X