ಯೂಟ್ಯೂಬ್‌ ಪ್ಲಾಟ್‌ಫಾರ್ಮ್‌ನಲ್ಲಿ ಇನ್ನು 'ಸೂಪರ್‌ ಥ್ಯಾಂಕ್ಸ್‌' ಫೀಚರ್!

|

ಜನಪ್ರಿಯ ವಿಡಿಯೊ ಪ್ಲಾಟ್‌ಫಾರ್ಮ್ ಆಗಿರುವ ಗೂಗಲ್ ಮಾಲೀಕತ್ವದ ಯೂಟ್ಯೂಬ್ ಈಗಾಗಲೇ ಬಳಕೆದಾರರಿಗೆ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸದಾ ಅಪ್‌ಡೇಟ್‌ನಲ್ಲಿರುವ ಯೂಟ್ಯೂಬ್ ಇದೀಗ ಹೊಸದೊಂದು ಫೀಚರ್ಸ್‌ ಅಳವಡಿಸಲು ಮುಂದಾಗಿದೆ. ಈ ಫೀಚರ್‌ ಯೂಟ್ಯೂಬ್ ಕ್ರಿಯೆಟರ್ಸ್‌ಗಳಿಗೆ ವೀಕ್ಷಕರೊಂದಿಗೆ ಕನೆಕ್ಟಿವಿಟಿ ಬಲಪಡಿಸಲು ಅವಕಾಶ ನೀಡುವ ಜೊತೆಗೆ ಹಣ ಗಳಿಸಲು ಪೂರಕ ಎನ್ನಲಾಗಿದೆ.

ಸೂಪರ್

ಹೌದು, ಯೂಟ್ಯೂಬ್ ಪ್ಲಾಟ್‌ಫಾರ್ಮ್ ಈಗ 'ಸೂಪರ್ ಥ್ಯಾಂಕ್ಸ್' ಎಂಬ ಹೊಸ ಫೀಚರ್ ಹೊರತರಲು ಪ್ರಾರಂಭಿಸಿದೆ. ಈ ಫೀಚರ್ ಬಳಕೆದಾರರು ತಮ್ಮ ನೆಚ್ಚಿನ ಕ್ರಿಯೆಟರ್ಸ್‌ಗಳ ವೇದಿಕೆಯಲ್ಲಿ ಟಿಪ್ ಮಾಡಲು ಅನುಮತಿಸುತ್ತದೆ. ಈ ಹೊಸ ಫೀಚರ್ ಕ್ರಿಯೆಟರ್ಸ್‌ಗಳಿಗೆ ಹಣ ಸಂಪಾದಿಸಲು ಮತ್ತೊಂದು ಮಾರ್ಗವನ್ನು ನೀಡುತ್ತದೆ. ಅಲ್ಲದೇ ವೀಕ್ಷಕರೊಂದಿಗೆ ಸಂಬಂಧವನ್ನು ಬಲಪಡಿಸಲು ಸಹ ಅವಕಾಶ ನೀಡುತ್ತದೆ.

ಯೂಟ್ಯೂಬ್

ಅಭಿಮಾನಿಗಳು ತಮ್ಮ ನೆಚ್ಚಿನ ಯೂಟ್ಯೂಬ್ ಚಾನೆಲ್‌ಗಳಿಗೆ ಬೆಂಬಲವನ್ನು ತೋರಿಸಲು ಅನುವು ಮಾಡಿಕೊಡುವ ಚಪ್ಪಾಳೆ ವೈಶಿಷ್ಟ್ಯವನ್ನು ನಾವು ಇತ್ತೀಚೆಗೆ ಪ್ರಯೋಗಿಸುತ್ತಿದ್ದೇವೆ ಎಂದು ಕಂಪನಿ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ. ಕ್ರಿಯೆಟರ್ಸ್‌ ಪ್ರತಿಕ್ರಿಯೆಯ ಆಧಾರದ ಮೇಲೆ, ಇದು ಇನ್ನೂ ಹೆಚ್ಚಿನ ವೀಕ್ಷಕರು ಮತ್ತು ಕ್ರಿಯೆಟರ್ಸ್‌ಗಳಿಗೆ ವಿಸ್ತರಿಸುತ್ತಿದೆ ಎಂದು ಹಂಚಿಕೊಳ್ಳಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಅದು ಹೊಸ ಹೆಸರಿನೊಂದಿಗೆ Super Thanks - ಸೂಪರ್ ಥ್ಯಾಂಕ್ಸ್‌ ಫೀಚರ್ ಅದು ಸೇರಿಸಲಾಗಿದೆ.

ಬೋನಸ್

ಯೂಟ್ಯೂಬ್ ವೀಡಿಯೊಗಳನ್ನು ನೋಡುವ ಅಭಿಮಾನಿಗಳು ತಮ್ಮ ಧನ್ಯಾವಾದಗಳನ್ನು ವ್ಯಕ್ತಪಡಿಸಲು ಮತ್ತು ಬೆಂಬಲವನ್ನು ತೋರಿಸಲು ಈಗ ಸೂಪರ್ ಥ್ಯಾಂಕ್ಸ್‌ ಫೀಚರ್ ಖರೀದಿಸಬಹುದು. ಅವರು ಅನಿಮೇಟೆಡ್ GIF ಅನ್ನು ನೋಡುತ್ತಾರೆ ಮತ್ತು ಹೆಚ್ಚುವರಿ ಬೋನಸ್ ಆಗಿ, ಅವರ ಖರೀದಿಯನ್ನು ಹೈಲೈಟ್ ಮಾಡಲು ವಿಶಿಷ್ಟವಾದ, ವರ್ಣಮಯವಾದ ಪ್ರತಿಕ್ರಿಯೆಯನ್ನು ಪಡೆಯುತ್ತಾರೆ. ಯಾವ ಕ್ರಿಯೆಟರ್ಸ್‌ ಪ್ರತಿಕ್ರಿಯಿಸಬಹುದು. ಸೂಪರ್ ಥ್ಯಾಂಕ್ಸ್‌ ಪ್ರಸ್ತುತ $ 50 ಇದ್ದು, ಭಾರತೀಯ ಕರೆನ್ಸಿ ಪ್ರಕಾರ 2ರೂ. ಸಮಾನ ಎಂದು ಹೇಳಲಾಗಿದೆ. ನಡುವಿನ ನಾಲ್ಕು ಬೆಲೆಯಲ್ಲಿ ಲಭ್ಯವಿದೆ.

ಚಾಟ್

ಸೂಪರ್ ಚಾಟ್ ಮತ್ತು ಸೂಪರ್ ಸ್ಟಿಕ್ಕರ್‌ಗಳಂತೆಯೇ, ಸೂಪರ್ ಥ್ಯಾಂಕ್ಸ್ ಕ್ರಿಯೆಟರ್ಸ್‌ಗಳಿಗೆ ಡಬಲ್ ಡ್ಯೂಟಿ ಮಾಡುತ್ತದೆ - (ಸೂಪರ್) ಅಭಿಮಾನಿಗಳೊಂದಿಗೆ ಅವರ ಸಂಪರ್ಕವನ್ನು ಅರ್ಥಪೂರ್ಣವಾಗಿರಿಸಿಕೊಳ್ಳುತ್ತದೆ ಮತ್ತು ಹಣ ಗಳಿಸುವ ಹೊಸ ಮಾರ್ಗವನ್ನು ಸಹ ನೀಡುತ್ತದೆ. ಸೂಪರ್ ಥ್ಯಾಂಕ್ಸ್ ಪ್ರಸ್ತುತ ಬೀಟಾದಲ್ಲಿದ್ದು, ಸಾವಿರಾರು ಹಣಗಳಿಸುವ ಕ್ರಿಯೆಟರ್ಸ್‌ಗಳಿಗೆ ಲಭ್ಯವಿದೆ. ಆಂಡ್ರಾಯ್ಡ್ ಮತ್ತು ಐಒಎಸ್ - ಡೆಸ್ಕ್‌ಟಾಪ್ ಮತ್ತು ಮೊಬೈಲ್ ಸಾಧನಗಳಲ್ಲಿ 68 ದೇಶಗಳಲ್ಲಿನ ಕ್ರಿಯೆಟರ್ಸ್‌ ಮತ್ತು ವೀಕ್ಷಕರಿಗೆ ಈ ವೈಶಿಷ್ಟ್ಯ ಲಭ್ಯವಿದೆ.

Most Read Articles
Best Mobiles in India

English summary
YouTube has started rolling out a new tool called "Super Thanks" that will let users tip their favourite creators on the platform.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X