Subscribe to Gizbot

ಯೂಟ್ಯೂಬ್ ಕಚೇರಿಯಲ್ಲಿ ಶೂಟೌಟ್!..ಊಹಿಸಲಾಗದ ದುರಂತ ಎಂದು 'ಸುಂದರ್ ಪಿಚೈ' ಭಾವುಕ!

Written By:

ಕ್ಯಾಲಿಫೋರ್ನಿಯಾದ ಸ್ಯಾನ್‌ಬರ್ನೋದಲ್ಲಿರುವ ಗೂಗಲ್ ಒಡೆತನದ ಯೂಟ್ಯೂಬ್ ಪ್ರಧಾನ ಕಚೇರಿ ಮೇಲೆ ಮುಸುಕುಧಾರಿ ಮಹಿಳೆಯೊರ್ವರು ಗುಂಡಿನ ದಾಳಿ ನಡೆಸಿದ ಘಟನೆಯನ್ನು ಗೂಗಲ್ ಸಿಇಒ ಸುಂದರ್ ಪಿಚೈ ವಿಷಾದಿಸಿದ್ದಾರೆ. ಘಟನೆಯ ಬಗ್ಗೆ ಯೂಟ್ಯೂಬ್ ಸಿಬ್ಬಂದಿಗಳಿಗೆ ಇ-ಮೇಲ್ ಮೂಲಕ ಪತ್ರ ಬರೆದು ಸಾಂತ್ವಾನ ಹೇಳಿದ್ದಾರೆ.

ಯೂಟ್ಯೂಬ್ ಕಚೇರಿಯಲ್ಲಿ ನಡೆದಿರುವ ಗುಂಡಿನ ದಾಳಿ ಊಹಿಸಲಾಗದ ದುರಂತ ಎಂದು ಸುಂದರ್ ಪಿಚೈ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಸಿದಂತೆ ಸಿಬ್ಬಂದಿಗಳಿಗೆ ಪತ್ರ ಬರೆದಿರುವ ಸುಂದರ್ ಅವರು, ಗುಂಡಿನ ದಾಳಿ ವೇಳೆ ಜನರನ್ನು ರಕ್ಷಣೆ ಮಾಡಲು ಭದ್ರತಾ ಸಿಬ್ಬಂದಿಗಳ ಕಾರ್ಯಾಚರಣೆಗೆ ಬೆಂಬಲ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಯೂಟ್ಯೂಬ್ ಕಚೇರಿಯಲ್ಲಿ ಶೂಟೌಟ್!..ಊಹಿಸಲಾಗದ ದುರಂತ ಎಂದು 'ಸುಂದರ್ ಪಿಚೈ' ಭಾವುಕ!

ಕಚೇರಿಯಲ್ಲಿ ನಡೆದಿರುವ ಗುಂಡಿನ ದಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 4 ಜನರು ಗಾಯಗೊಂಡಿದ್ದು, ಪ್ರಸ್ತುತ ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಇನ್ನು ಘಟನೆಯ ನಂತರ ಗೂಗಲ್‌ನ ಅಧಿಕಾರಿಗಳು ಸಕ್ರಿಯವಾಗಿ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿರುವುದಾಗಿ ಪತ್ರದ ಮುಖೇನ ತಿಳಿಸಿದ್ದಾರೆ.

ರಾತ್ರಿ 12.45ರ ಸುಮಾರಿಗೆ ಸ್ಯಾನ್‌ಬರ್ನೋದಲ್ಲಿರುವ ಯೂಟ್ಯೂಬ್ ಕಚೇರಿ ಒಳ ಪ್ರವೇಶಿಸಿದ ಮಹಿಳೆಯೋರ್ವಳು ಏಕಾಏಕಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾಳೆ ಎನ್ನಲಾಗಿದೆ. ದಾಳಿ ನಡೆಸಿದ್ದ ಮಹಿಳೆಯನ್ನು ನಸೀಮ್ ಅಘ್ದಾಮ್ ಎಂದು ಗುರ್ತಿಸಲಾಗಿದ್ದು, ಭದ್ರತಾ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಮಹಿಳೆ ಕೂಡ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾಳೆ.

ಇನ್ನು ಈ ಘಟನೆಯ ನಂತರ ಮುಂದಿನ ದಿನಗಳಲ್ಲಿ ಇಂತಹ ಊಹಿಸಲಾಗದ ದುರಂತಗಳು ಸಂಭವಿಸಿದಾಗ ಗೂಗಲ್ ಕುಟುಂಬದಲ್ಲಿ ಪ್ರತೀಯೊಬ್ಬರಿಗೂ ನಮ್ಮ ಬೆಂಬಲ ಇರಲಿದೆ ಎಂದು ಸುಂದರ್ ಪಿಚೈ ತಿಳಿಸಿದ್ದಾರೆ. ಇಂತಹ ಅಮಾನುಷ ಕೃತ್ಯಗಳನ್ನು ಜರುಗದಂತೆ ತಡೆಯುವುದು ಪ್ರತಿಯೋರ್ವರ ಕರ್ತವ್ಯ ಕೂಡ ಎಂದು ಅವರು ಎಚ್ಚರಿಸಿದ್ದಾರೆ.

ಓದಿರಿ: ಭಾರತದಲ್ಲಿಂದು ಬಿಡುಗಡೆಯಾಯ್ತು "ನೋಕಿಯಾ 8 ಸಿರೊಕೊ"!..ಬೆಲೆ ಮತ್ತು ಫೀಚರ್ಸ್ ಕಂಪ್ಲೀಟ್ ಡೀಟೆಲ್ಸ್!!

English summary
In the email, Pichai called the incident in which four people were wounded an "unimaginable tragedy". to know more visi to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot