Subscribe to Gizbot

ವಿಡಿಯೋ ನೋಡುವ ವಿಧಾನವನ್ನೇ ಬದಲಾಯಿಸಲಿದೆ ಯುಟ್ಯೂಬ್‌ನ ಹೊಸ ಆಯ್ಕೆ..!

Written By:

ಭಾರತದಲ್ಲಿ ಅತೀ ಕಡಿಮೆ ಬೆಲೆಗೆ ಡೇಟಾ ಸೇವೆಯೂ ಲಭ್ಯವಾಗಿರುವ ಹಿನ್ನಲೆಯಲ್ಲಿ ಯುಟ್ಯೂಬ್ ಬಳಕೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಹೀಗಾಗಿ ಯೂಟ್ಯೂಬ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಆಯ್ಕೆಗಳನ್ನು ನೀಡಲು ಮುಂದಾಗಿದೆ. ಈ ಮೂಲಕ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಮತ್ತು ವಿಡಿಯೋ ನೋಡುವ ಅವಧಿಯನ್ನು ಅಧಿಕವಾಗಿಸಲು ಮುಂದಾಗಿದೆ. ಈ ಬಾರಿ ಮೊಬೈಲ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಳ್ಳುವ ಬದಲಾಗಿ ಡೆಸ್ಕ್‌ಟಾಪ್ ಬಳಕೆದಾರರಿಗೆ ಹೊಸ ಮಾದರಿಯ ಸೇವೆಯನ್ನು ನೀಡಲು ಯೂಟ್ಯೂಬ್ ಯೋಜನೆಯನ್ನು ರೂಪಿಸಿದೆ.

ವಿಡಿಯೋ ನೋಡುವ ವಿಧಾನವನ್ನೇ ಬದಲಾಯಿಸಲಿದೆ ಯುಟ್ಯೂಬ್‌ನ ಹೊಸ ಆಯ್ಕೆ..!

ವಾಟ್ಸ್‌ಆಪ್ ಈ ಹಿಂದೆ ನೀಡಿದ್ದ ಪಿಚ್ಚರ್ ಇನ್ ಪಿಚ್ಚರ್ ಮಾದರಿಯಲ್ಲಿಯೇ ಡೆಸ್ಕ್‌ಟಾಪ್ ಬಳಕೆದಾರರಿಗೆ ಯೂಟ್ಯೂಬ್ ಪಿಚ್ಚರ್ ಇನ್ ಪಿಚ್ಚರ್ ಆಯ್ಕೆಯನ್ನು ನೀಡಲು ಪರೀಕ್ಷೆಯನ್ನು ನಡೆಸಿದೆ. ಇದು ಬಳಕೆದಾರರಿಗೆ ವಿಡಿಯೋವನ್ನು ನೋಡುತ್ತಲೇ ಬೇರೆ ಕಾರ್ಯವನ್ನು ಮಾಡಲು ಅವಕಾಶವನ್ನು ಮಾಡಿಕೊಡಲಿದೆ. ಈ ಹೊಸ ಆಯ್ಕೆಯೂ ಬಳಕೆದಾರರಿಗೆ ಹೊಸ ಮಾದರಿಯ ವಿಡಿಯೋ ನೋಡುವ ಅನುಭವನ್ನು ನೀಡಲಿದೆ.

ಓದಿರಿ: ಶೀಘ್ರವೇ ಟ್ವಿಟರ್‌ನಲ್ಲಿ ಕ್ರಿಪ್ಟೋಕರೆಸ್ಸಿ ಆಡ್‌ಗಳು ಬ್ಯಾನ್‌: ಕಾರಣ...!

ಸದ್ಯ ಯೂಟ್ಯೂಬ್‌ ನೀಡುತ್ತಿರುವ ಪಿಚ್ಚರ್ ಇನ್ ಪಿಚ್ಚರ್ ಸೇವೆಯೂ ಕ್ರೋಮ್ ಮತ್ತು ಸಫಾರಿ ಬ್ರೌಸರ್‌ನಲ್ಲಿ ಮಾತ್ರವೇ ಮೊದಲಿಗೆ ಕಾಣಿಸಿಕೊಳ್ಳಲಿದ್ದು, ಇದಾದ ನಂತರದಲ್ಲಿ ಬೇರೆ ಬ್ರೌಸರ್‌ಗಳಲ್ಲಿ ಈ ಸೇವೆಯನ್ನು ಕಾಣುವ ಸಾಧ್ಯತೆ ಇದೆ. ಈ ಹೊಸ ಆಯ್ಕೆಯೂ ಯೂಟ್ಯೂಬ್ ವಿಡಿಯೋ ನೋಡುವ ವಿಧಾನವನ್ನು ಬದಲಾವಣೆ ಮಾಡಲಿದೆ ಎಂದರೆ ತಪ್ಪಾಗುವುದಿಲ್ಲ.

ವಿಡಿಯೋ ನೋಡುವ ವಿಧಾನವನ್ನೇ ಬದಲಾಯಿಸಲಿದೆ ಯುಟ್ಯೂಬ್‌ನ ಹೊಸ ಆಯ್ಕೆ..!

ಪಿಚ್ಚರ್ ಇನ್ ಪಿಚ್ಚರ್ ಆಯ್ಕೆಯಲ್ಲಿ ಬಳಕೆದಾರರು ವಿಡಿಯೋ ಸೈಜ್ ಅನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದ್ದು, ಬಳಕೆದಾರರಿಗೆ ವಿಡಿಯೋವನ್ನು ಪಾಸ್ ಮಾಡುವ ಇಲ್ಲವೇ ಫಾರ್ವಡ್ ಮಾಡುವ ಅವಕಾಶವನ್ನು ಇದರಲ್ಲಿ ಮಾಡಿಕೊಡಲಾಗುತ್ತಿದೆ ಎನ್ನುವ ಮಾತು ಕೇಳಿಬಂದಿದೆ.

ಓದಿರಿ: ಇತಿಹಾಸವನ್ನು ಬದಲಾಯಿಸಲಿದೆ ಒಪ್ಪೋ F7: ಸೆಲ್ಫಿ ಕ್ಯಾಮೆರಾಕ್ಕಾಗಿಯೇ ನಿರ್ಮಾಣವಾದ ಸ್ಮಾರ್ಟ್‌ಫೋನ್ ಇದು.!

Aadhaar-ಬಾಂಕ್ ಲಿಂಕ್ ಆಗಿದೆಯೇ-ಇಲ್ಲವೇ ಚೆಕ್‌ ಮಾಡಿ..!

ಸದ್ಯ ಡೆಸ್ಕ್‌ಟಾಪ್‌ನಲ್ಲಿ ಹೆಚ್ಚು ಮಂದಿ ಯೂಟ್ಯೂಬ್‌ ವಿಡಿಯೋವನ್ನು ನೋಡುವರಿದ್ದು, ಬಳಕೆದಾರರಿಗೆ ಉತ್ತಮ ಅನುಭವನ್ನು ನೀಡುವ ಸಲುವಾಗಿಯೇ ಈ ಹೊಸ ಆಯ್ಕೆಯನ್ನು ಯೂಟ್ಯೂಬ್ ವಿನ್ಯಾಸವನ್ನು ಮಾಡಿದೆ. ಒಂದು ಕೆಲಸವನ್ನು ಮಾಡುತ್ತಲೇ ಸಣ್ಣ ವಿಂಡೋದಲ್ಲಿ ವಿಡಿಯೋವೊಂದನ್ನು ನೋಡಲು ಅವಕಾಶ ದಿಂದಾಗಿ ಯೂಟ್ಯೂಬ್ ಬಳಕೆಯೂ ಹೆಚ್ಚಾಗಲಿದೆ.

English summary
YouTube Testing Picture-in-Picture Mode for Desktop. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot