ಶೀಘ್ರವೇ ಟ್ವಿಟರ್‌ನಲ್ಲಿ ಕ್ರಿಪ್ಟೋಕರೆಸ್ಸಿ ಆಡ್‌ಗಳು ಬ್ಯಾನ್‌: ಕಾರಣ...!

|

ಸದ್ಯ ಜಾಗತೀಕ ಮಾರುಕಟ್ಟೆಯಲ್ಲಿ ಕ್ರಿಪ್ಟೋಕರೆಸ್ಸಿ ಹೆಚ್ಚಿನ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲಿಯೂ ಬಿಟ್ ಕಾಯಿನ್ ಮೌಲ್ಯವೂ ಒಂದೇ ಸಮನೆ ಏರಿಕೆಯಾಗಿದ್ದು ಹೆಚ್ಚಿನ ಜನರು ಕ್ರಿಪ್ಟೋಕರೆಸ್ಸಿ ಕಡೆಗೆ ಒಲವು ತೋರಿಸಲು ಕಾರಣವಾಗಿತ್ತು. ಇದನ್ನು ಬಂಡವಾಳ ಮಾಡಿಕೊಂಡ ಹಲವು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಇಂಟರ್ನೆಟ್‌ನಲ್ಲಿ ವ್ಯಾಪಕವಾಗಿ ಕ್ರಿಪ್ಟೋಕರೆಸ್ಸಿ ಹೆಸರಿನಲ್ಲಿ ಮೋಸ ಮಾಡಲು ಶುರು ಮಾಡಿಕೊಂಡಿದ್ದಾರೆ.

ಶೀಘ್ರವೇ ಟ್ವಿಟರ್‌ನಲ್ಲಿ ಕ್ರಿಪ್ಟೋಕರೆಸ್ಸಿ ಆಡ್‌ಗಳು ಬ್ಯಾನ್‌: ಕಾರಣ...!

ಇಂಟರ್ನೆಟ್ ಬಳಕೆದಾರರನ್ನು ಕ್ರಿಪ್ಟೋಕರೆಸ್ಸಿ ಕಡೆಗೆ ಆಕರ್ಷಿಸಲು ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳಲು ಮುಂದಾದ ಹಿನ್ನಲೆಯಲ್ಲಿ ಗೂಗಲ್ ಮತ್ತು ಫೇಸ್‌ಬುಕ್ ಕ್ರಿಪ್ಟೋಕರೆಸ್ಸಿಗೆ ಸಂಬಂಧಿಸಿದ ಜಾಹಿರಾತುಗಳನ್ನು ನಿರ್ಭಂಧಿಸಲು ಮುಂದಾದವು, ಇದೇ ಮಾರ್ಗದಲ್ಲಿ ನಡೆಯಲು ಮೈಕ್ರೊ ಬ್ಲಾಗಿಂಗ್ ತಾಣ ಟ್ವಿಟರ್ ಮುಂದಾಗಿದೆ.

Twitter Shortcut ಕೀಗಳನ್ನು ಬಳಸುವುದು ಟ್ವಿಟ್ಟಿಗರ ಮೂಲ ಲಕ್ಷಣಗಳಲ್ಲೊಂದು!!

ಜಾಗತಿಕವಾಗಿ ಮತ್ತು ನಮ್ಮ ದೇಶದಲ್ಲಿ ಕ್ರಿಪ್ಟೋಕರೆಸ್ಸಿಗೆ ಯಾವುದೇ ಮಾನ್ಯತೆಯನ್ನು ನೀಡಿಲ್ಲ. ಈ ಹಿನ್ನಲೆಯಲ್ಲಿ ಇವುಗಳ ಮೇಲೆ ಹೂಡಿಕೆ ಮಾಡುವುದು ಅಪಾಯವೇ ಸರಿ. ಇದಲ್ಲದೇ ಈ ಬಾರಿ ಬಜೆಟ್‌ನಲ್ಲಿ ಕ್ರಿಪ್ಟೋಕರೆಸ್ಸಿಗೆ ಯಾವುದೇ ಮಾನ್ಯತೆಯನ್ನು ನೀಡುವುದಿಲ್ಲ ಎಂದು ಭಾರತ ಸರಕಾರವು ತಿಳಿಸಿದೆ..

ಶೀಘ್ರವೇ ಟ್ವಿಟರ್‌ನಲ್ಲಿ ಕ್ರಿಪ್ಟೋಕರೆಸ್ಸಿ ಆಡ್‌ಗಳು ಬ್ಯಾನ್‌: ಕಾರಣ...!

2018ರ ಆರಂಭದಲ್ಲಿಯೇ ಫೇಸ್‌ಬುಕ್ ತನ್ನ ತಾಣದಲ್ಲಿ ಕ್ರಿಪ್ಟೋಕರೆಸ್ಸಿ ಸಂಬಂಧಿತ ಆಡ್ ಗಳನ್ನು ಪ್ರಸಾರ ಮಾಡುವುದನ್ನು ನಿರ್ಬಂಧಿಸಿತ್ತು. ಇದಾದ ನಂತರದಲ್ಲಿ ಕಳೆದ ವಾರ ಗೂಗಲ್ ಸಹ ಕ್ರಿಪ್ಟೋಕರೆಸ್ಸಿ ಸಂಬಂಧಿತ ಜಾಹಿರಾತುಗಳಿಗೆ ನಿರ್ಬಂಧ ವಿಧಿಸಿತ್ತು. ಈ ಹಿನ್ನಲೆಯಲ್ಲಿ ಟ್ವಿಟರ್ ಸಹ ಕ್ರಿಪ್ಟೋಕರೆಸ್ಸಿ ಜಾಹಿರಾತುಗಳನ್ನು ನಿರ್ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕಾಗಿಯೇ ಯೋಜನೆಯೊಂದನ್ನು ರೂಪಿಸುತ್ತಿದೆ.

ಇನ್ನು ಎರಡು ವಾರದಲ್ಲಿ ಟ್ಚಿಟರ್ ತನ್ನ ತಾಣದಲ್ಲಿ ಕ್ರಿಪ್ಟೋಕರೆಸ್ಸಿ ಜಾಹಿರಾತುಗಳಿಗೆ ನಿರ್ಭಂದಿಸಲಿದೆ ಎನ್ನುವ ಮಾಹಿತಿ ದೊರೆತಿದೆ. ಕಾರಣ ದಿನದಿಂದ ದಿನಕ್ಕೆ ಕ್ರಿಪ್ಟೋಕರೆಸ್ಸಿ ಸ್ಕ್ಯಾಮ್‌ಗಳು ಹೆಚ್ಚಾಗುತ್ತಿದ್ದು, ಬಳಕೆದಾರರು ಮೋಸ ಹೋಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನಲೆಯಲ್ಲಿ ತಮ್ಮ ಬಳಕೆದಾರರನ್ನು ಮೊಸ ಹೋಗದಂತೆ ತಡೆಯಲು ಈ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳು ಮುಂದಾಗುತ್ತಿದೆ ಎನ್ನಲಾಗಿದೆ.

Best Mobiles in India

English summary
Twitter is reportedly planning to ban cryptocurrency ads. to konw more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X