ZEE5 ನಿಂದ ಟಿಕ್‌ಟಾಕ್ ಮಾದರಿಯ ಶಾರ್ಟ್‌ವಿಡಿಯೋ ಪ್ಲಾಟ್‌ಫಾರ್ಮ್‌ ಬಿಡುಗಡೆ!

|

ಕಳೆದ ಕೆಲವು ದಿನಗಳ ಹಿಂದೆ ZEE5 ಟಿಕ್‌ಟಾಕ್‌ ಅನ್ನೇ ಹೊಲುವ ಹೊಸ ವಿಡಿಯೋ ಪ್ಲಾಟ್‌ಫಾರ್ಮ್‌ ಅನ್ನು ಬಿಡುಗಡೆ ಮಾಡಲಿದೆ ಎಂದು ತಿಳಿಸಿದ್ದೇವು. ಅದರಂತೆ ಇದೀಗ ZEE5 ಹೈಫಿ ಆಪ್‌ ಅನ್ನು ಬಿಡುಗಡೆ ಮಾಡಿದೆ. ಇದು ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಂತಹ ಇನ್‌ಸ್ಟಾಲ್‌ ಪ್ಲೇಯರ್ಸ್‌ ಅನ್ನು ಒಳಗೊಂಡಿದೆ. ಸದ್ಯ ಭಾರತದಲ್ಲಿ ಟಿಕ್‌ಟಾಕ್‌ ಬ್ಯಾನ್‌ ಆಗಿದೆ ಇದಕ್ಕೆ ಪರ್ಯಾಯ ಆಪ್‌ಗಳಾಗಿ ಬೋಲೊ ಇಂಡಿಯಾ, ಚಿಂಗಾರಿ, ಮಿಟ್ರಾನ್, ಮತ್ತು ಶೇರ್‌ಚಾಟ್‌ ಮೊಜ್ ಅನ್ನು ಪರಿಚಯಿಸಲಾಗಿದೆ. ಈ ಆಪ್‌ಗಳಿಗೆ ಸ್ಪರ್ಧೆಯನ್ನು ಹೈಫಿ ನೀಡಲಿದೆ ಎನ್ನಲಾಗಿದೆ.

ZEE5 ಹೈಫಿ

ಹೌದು, ZEE5 ಹೈಫಿ ವಿಡಿಯೋ ಪ್ಲಾಟ್‌ಫಾರ್ಮ್‌ ಅನ್ನು ಬಿಡುಗಡೆ ಮಾಡಿದೆ. ಸದ್ಯ ಇದು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದೆ. ಆದಾಗ್ಯೂ, ಇದರ ಐಒಎಸ್ ಆವೃತ್ತಿಯು ಕಾರ್ಯನಿರ್ವಹಿಸುತ್ತಿದ್ದು, ನಂತರದ ಹಂತದಲ್ಲಿ ಎಲ್ಲರಿಗೂ ಲಭ್ಯವಾಗಲಿದೆ. ಇನ್ನು ಈ ಹೈಫಿಯಲ್ಲಿ ಮ್ಯೂಸಿಕ್‌ ಟ್ರ್ಯಾಕ್‌ಗಳು, ಫಿಲ್ಟರ್‌ಗಳು ಮತ್ತು ವಿಶ್ಯುಯಲ್‌ ಎಫೆಕ್ಟ್‌ ಜೊತೆಗೆ 90 ಸೆಕೆಂಡುಗಳವರೆಗೆ ವೀಡಿಯೊಗಳನ್ನು ರಚಿಸಲು ಹೈಪಿ ಬಳಕೆದಾರರನ್ನು ಅವಕಾಶ ನಿಡಲಿದೆ. ಸದ್ಯ ಹೈಫಿ ತನ್ನ ಹೊಸ ಬಳಕೆದಾರರನ್ನು ಆಕರ್ಷಿಸಲು ಪ್ರಾರಂಭಿಸಲು ಕಂಪನಿಯು 400 ಕ್ಕೂ ಹೆಚ್ಚು influencers on board ಅನ್ನು ಪರಿಚಯಿಸಿದೆ.

ಹೈಪಿ

ಹೈಪಿ ವಿಡಿಯೋ ಪ್ಲಾಟ್‌ಫಾರ್ಮ್‌ ನಲ್ಲಿನ ಅನುಭವವು ಇತರ ಶಾರ್ಟ್‌-ವೀಡಿಯೊ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿಗುವ ಅನುಭವದಂತೆಯೆ ಸಿಗಲಿದೆ. ಇದು ಥೇಟ್ ಟಿಕ್‌ಟಾಕ್‌ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ, ಅಲ್ಲದೆ ಇದು ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಇಷ್ಟವಾಗುವ ಅಥವಾ ಹಂಚಿಕೊಳ್ಳಬಹುದಾದ ನೂರಾರು ವೀಡಿಯೊಗಳ ಲಂಬ ಸ್ಕ್ರೋಲಿಂಗ್ ಅನ್ನು ಸಹ ನೀಡುತ್ತದೆ. ಇನ್ನು ಸಬ್ಜೆಕ್ಟ್‌ ಕ್ರಿಯೆಟರ್ಸ್‌ ತಮ್ಮ ವೀಡಿಯೊಗಳ ಬ್ಯಾಕ್‌ಗ್ರೌಂಡ್‌ನಲ್ಲಿ ಮ್ಯೂಸಿಕ್‌ ಟ್ರ್ಯಾಕ್‌ಗಳನ್ನು ಕೂಡ ಸೇರಿಸಬಹುದಾಗಿದೆ.

ZEE5

ಇದಲ್ಲದೆ ಕಥೆ ಹೇಳುವ ಮತ್ತು ಸೃಷ್ಟಿಸುವ ಶಕ್ತಿಯನ್ನ ನಾವು ಹೈಪಿ ಪ್ಲಾಟ್‌ಫಾರ್ಮ್‌ಗೆ ತರುತ್ತಿದ್ದೇವೆ ಎಂದು ZEE5 ತಿಳಿಸಿದೆ. ಅಲ್ಲದೆ ಇದು ಮಾರುಕಟ್ಟೆಯಲ್ಲಿನ ಯಾವುದೇ ಸ್ಪರ್ಧೆಯಿಂದ ಬಹಳ ವಿಶಿಷ್ಟವಾಗಿದೆ ಮತ್ತು ಭಿನ್ನವಾಗಿದೆ ಎಂದು ಹೇಳಲಾಗಿದೆ. ಇನ್ನು ಹೈಫಿ ಪ್ರಮುಖ ಸಾಕಷ್ಟು ವೈವಿಧ್ಯಮಯ ವಿಚಾರಗಳಿಗೆ ಪ್ರಾಮುಖ್ಯತೆಯನ್ನ ನೀಡಿದೆ. ವಿವಿದ ವಲಯದ ಜನರು, ಭೌಗೋಳಿಕತೆ ಮತ್ತು ದೇಶದಲ್ಲಿ ಇರುವ ವೈವಿಧ್ಯತೆಯನ್ನ ಇದು ಪ್ರತಿನಿಧಿಸಬಲ್ಲದೆ ಎಂದು ಹೇಳಲಾಗಿದೆ. ಇದು ZEE5 ಪ್ಲಾಟ್‌ಫಾರ್ಮ್ ಅನ್ನು ಇತರ ರೀತಿಯ ಕೊಡುಗೆಗಳಿಗಿಂತ ಸ್ವಲ್ಪ ಭಿನ್ನವಾಗಿಸುತ್ತದೆ.

ವಿಡಿಯೋ

ಇನ್ನು ಬಳಕೆದಾರರನ್ನು ತೆಗೆದುಹಾಕುವುದು ಅಥವಾ ನಿರ್ಬಂಧಿಸುವುದು ಮತ್ತು ಪ್ರಚೋದನಕಾರಿ ವಿಷಯ ಅಥವಾ ಸೂಕ್ತವಲ್ಲದ ವಿಷಯವನ್ನು ಹೊಂದಿರುವ ಕ್ರಿಯೆಟರ್ಸ್‌ಗಳನ್ನು ತೆಗೆದುಹಾಕುವುದಕ್ಕೆ ಸಹ ಇದರಲ್ಲಿ ಅವಕಾಶ ನೀಡಲಾಗಿದ್ದು, ಅಸಂಬದ್ದ ವಿಡಿಯೋಗಳಿಗೆ ಇದರಲ್ಲಿ ನಿರ್ಬಂದ ಹೇರಲಾಗಿದೆ. ಇದಕ್ಕಾಗಿ ಯಾವುದೇ ವಿಡಿಯೋ ಶೇರ್‌ ಆಗುವ ಮೊದಲು ಅದನ್ನು ಮಾಡರೇಟ್‌ ಮಾಡುವ ಸಿಸ್ಟಂ ಅನ್ನಿ ಇದರಲ್ಲಿ ನೀಡಲಾಗಿದೆ. ಇನ್ನು ಹೈಪಿಯ ಹಿಂದಿನ ವಿಷಯ ಮಾಡರೇಟರ್‌ಗಳು ಆಂತರಿಕ ಮತ್ತು ಮೂರನೇ ವ್ಯಕ್ತಿಗಳ ಮಿಶ್ರಣವಾಗಿದೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ AIಆಧಾರಿತ ಮಾಡರೇಶನ್ ಸಿಸ್ಟಮ್ ಅನ್ನು ಸಹ ವಿನ್ಯಾಸಗೊಳಿಸಿದೆ, ಇದು ಮಾಡರೇಟರ್‌ಗಳಿಗೆ ಸಹಾಯ ಮಾಡುತ್ತದೆ ಮತ್ತು ಪ್ಲಾಟ್‌ಫಾರ್ಮ್ ತನ್ನ ಕ್ರಿಯೆಟರ್ಸ್‌ನಿಂದ ಪಡೆಯುವ ಎಲ್ಲಾ ವೀಡಿಯೊಗಳಿಗೆ ವೇಗವಾಗಿ ಸಮಯವನ್ನು ನೀಡುತ್ತದೆ.

ZEE5

ಇದಲ್ಲದೆ, ZEE5 ಹೈಪಿ 18 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಕ್ರಿಯೆಟರ್ಸ್‌ ಅನ್ನು ಮಾತ್ರ ಅದರ ವೇದಿಕೆಯಲ್ಲಿ ಅನುಮತಿಸುತ್ತದೆ. ಆದಾಗ್ಯೂ, ಪ್ಲಾಟ್‌ಫಾರ್ಮ್‌ಗಳು ಸೃಷ್ಟಿಕರ್ತನನ್ನು ತಮ್ಮ ವಯಸ್ಸು ಅಥವಾ ಹುಟ್ಟಿದ ದಿನಾಂಕವನ್ನು ನಮೂದಿಸುವಂತೆ ಕೇಳುವ ಮೂಲ ವಯಸ್ಸಿನ ಪರಿಶೀಲನೆಯ ಹೊರತಾಗಿ, ಈ ನಿಯಮವನ್ನು ಹೇಗೆ ಜಾರಿಗೆ ತರಲು ಅದು ಯೋಜಿಸಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಹೊಸ ವಿಷಯವನ್ನು ಆಗಾಗ್ಗೆ ರಚಿಸಲು ಪ್ರಯತ್ನಿಸುವ ಸೃಷ್ಟಿಕರ್ತರಿಗೆ ಕೆಲವು ವ್ಯತ್ಯಾಸವನ್ನು ನೀಡಲು, ಹೈಪಿ ಪ್ರಮಾಣೀಕೃತ ಸೃಷ್ಟಿಕರ್ತರ ಮಾದರಿಯನ್ನು ಹೊಂದಿದೆ.

Best Mobiles in India

Read more about:
English summary
Zee5 HiPi has been launched as a new short-video platform that will join the growing list of TikTok-like offerings, including from the established players like Instagram and YouTube.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X