ಜೂಮ್‌ ಆಪ್‌ಗೆ ಸೆಡ್ಡು ಹೊಡೆಯುವ ಹೆಜ್ಜೆ ಇಟ್ಟ ಗೂಗಲ್!

|

ವಿಸ್ತರಿಸುತ್ತ ಸಾಗಿರುವ ಮಹಾಮಾರಿ ಕೊರೊನಾ ವೈರಸ್‌ ಸರಪಳಿ ತುಂಡರಿಸಲು ಸರ್ಕಾರ ಲಾಕ್‌ಡೌನ್ ಮುಂದುವರೆಸಿದೆ. ಈ ಅವಧಿಯಲ್ಲಿ ಬಹುತೇಕ ಐಟಿ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಸೂಚಿಸಿವೆ. ಹಾಗೂ ಶಿಕ್ಷಣ ಸಂಸ್ಥೆಗಳ ಆನ್‌ಲೈನ್ ತರಗತಿಗಳನ್ನು ನಡೆಸುತ್ತಿವೆ. ಇವೆಲ್ಲದಕ್ಕೂ ವಿಡಿಯೊ ಕಾಲಿಂಗ್ ಆಪ್‌ಗಳು ತಳಹದಿಯಾಗಿವೆ. ಈ ನಿಟ್ಟಿನಲ್ಲಿ ಚೀನಾ ಮೂಲದ ಜೂಮ್ ಆಪ್‌ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದ್ರೆ ಇದೀಗ ಟೆಕ್ ದಿಗ್ಗಜ ಗೂಗಲ್ ಜೂಮ್‌ ಆಪ್ ಓಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಟೆಕ್ ದೊಡ್ಡಣ್ಣ

ಹೌದು, ಟೆಕ್ ದೊಡ್ಡಣ್ಣ ಎಂದೆನಿಸಿಕೊಂಡಿರುವ ಗೂಗಲ್‌ ಹಲವು ಸೇವೆಗಳನ್ನು ಈಗಾಗಲೆ ಪರಿಚಯಿಸಿದೆ. ಅವುಗಳಲ್ಲಿ ಸಂಸ್ಥೆಯ ಗೂಗಲ್ ಮೀಟ್, google duo ವಿಡಿಯೊ ಕಾಲಿಂಗ್ ಆಪ್‌ ಸಹ ಸೇರಿವೆ. ಆದ್ರಎ ಈಗ ಗೂಗಲ್ ತನ್ನ ಮೀಟ್ ಆಪ್‌ನಲ್ಲಿ ಅಪ್‌ಡೇಟ್ ಮಾಡಿದ್ದು, ನೂತನ ಫೀಚರ್ಸ್‌ ಸೇರಿಸಿದೆ. ಈ ಮೂಲಕ ಸದ್ಯ ಈ ಲಾಕ್‌ಡೌನ್‌ ಟೈಮ್‌ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಜೂಮ್‌ ಆಪ್‌ಗೆ ಪ್ರಬಲ ಪೈಪೋಟಿ ನೀಡುವುದಕ್ಕೆ ಮುಂದಾಗಿದೆ.

ವಿಡಿಯೊ ಕಾನ್ಫರೆನ್ಸ್

ಐಟಿ ಸಂಸ್ಥೆಗಳು ತಮ್ಮ ಉದ್ಯೋಗಿಗಳೊಡನೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಆನ್‌ಲೈನ್ ಮೀಟಿಂಗ್ ನಡೆಸಲು ಹಾಗೂ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸಲು ಸದ್ಯ ಜೂಮ್ ಆಪ್‌ ಅನ್ನೇ ಹೆಚ್ಚಾಗಿ ಬಳಕೆ ಮಾಡುತ್ತಿದ್ದರೆ. ಗೌಪ್ಯತೆಯ ದೃಷ್ಟಿಯಿಂದ ಜೂಮ್ ಆಪ್ ಸುರಕ್ಷಿತವಲ್ಲ ಎಂದು ಇತ್ತೀಚಿಗಷ್ಟೆ ಕೇಂದ್ರ ಸರ್ಕಾರ ಹೇಳಿದೆ. ಈ ನಡುವೆ ಗೂಗಲ್ ತನ್ನ ಮೀಟ್ ಆಪ್ ಅಪ್‌ಡೇಟ್ ಮಾಡಿದ್ದು, ಜೂಮ್‌ಗೆ ಪರ್ಯಾಯ ಆಪ್‌ ಆಗಿ ಗುರುತಿಸಿಕೊಳ್ಳವತ್ತ ಹೆಜ್ಜೆ ಇಟ್ಟಿದೆ. ಗೂಗಲ್ ಮೀಟ್ ಆಪ್‌ನ ಕೆಲವು ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ.

ಕ್ರೋಮ್‌ ಟ್ಯಾಬ್‌

ಕ್ರೋಮ್‌ ಟ್ಯಾಬ್‌

ಗೂಗಲ್ ಮೀಟ್ ಆಪ್‌ನಲ್ಲಿ ಕ್ರೋಮ್‌ ಟ್ಯಾಬ್ ಆಯ್ಕೆ ಸೇರಿಸಿದೆ. ಗ್ರೂಪ್ ವಿಡಿಯೊ ಕರೆಯ ವೇಳೆ ಪೂರ್ಣ ಸ್ಕ್ರೀನ್ ಶೇರ್ ಮಾಡುವ ಬದಲಾಗಿ ಕ್ರೋಮ್ ಟ್ಯಾಬ್ ಆಯ್ಕೆಯನ್ನು ಶೇರ್ ಮಾಡಬಹುದಾಗಿದೆ. ಅತ್ಯುತ್ತಮ ಕ್ವಾಲಿಟಿಯ ವಿಡಿಯೊ-ಆಡಿಯೊ ಸೌಲಭ್ಯದ ಆಯ್ಕೆಯು ಇದ್ದು, ಮೀಟಿಂಗ್ ವೇಳೆ ವಿಡಿಯೊ ವೀಕ್ಷಿಸುವವರಿಗೆ ಹೈ ಕ್ಲಾಸ್‌ ಕ್ವಾಲಿಟಿಯ ವಿಡಿಯೊ ಉತ್ತಮ ಅನಿಸಲಿದೆ.

16 ವಿಡಿಯೊ ಚಾಟ್‌ ಪಾರ್ಟಿಸಿಪೆಂಟ್

16 ವಿಡಿಯೊ ಚಾಟ್‌ ಪಾರ್ಟಿಸಿಪೆಂಟ್

ಗೂಗಲ್ ತನ್ನ ಮೀಟ್ ಆಪ್‌ನಲ್ಲಿ ಇದೀಗ tiled layout ಮಿತಿಯಲ್ಲಿ ಏರಿಕೆ ಮಾಡಿದೆ. ಆನ್‌ಲೈನ್ ಗ್ರೂಪ್‌ ವಿಡಿಯೊ ಮೀಟಿಂಗ್ ವೇಳೆ ಈ ಮೊದಲು tiled layoutನಲ್ಲಿ ನಾಲ್ಕು ಸದಸ್ಯರ ಭಾಗವಹಿಸುವಿಕೆ ಕಾಣಿಸುವ ಆಯ್ಕೆ ಇತ್ತು. ಆದ್ರೆ ಇದೀಗ tiled layout 16 ಸದಸ್ಯರ ಭಾಗವಹಿಸುವಿಕೆಯನ್ನು ತೋರಿಸುತ್ತದೆ. ಮೀಟಿಂಗ್‌ನಲ್ಲಿ ಅಧಿಕ ಸದಸ್ಯರು ಭಾಗವಹಿಸುವ ಪ್ರಕ್ರಿಯೆಯಲ್ಲಿ ಇನ್ನಷ್ಟು ಸುಧಾರಣೆ ತರುವುದಿದೆ ಎಂದು ಗೂಗಲ್ ಹೇಳಿದೆ.

ಲೊ-ಲೈಟ್ ಮೋಡ್

ಲೊ-ಲೈಟ್ ಮೋಡ್

ಮೀಟ್ ಆಪ್‌ನಲ್ಲಿ ಲೊ-ಲೈಟ್ ಮೋಡ್ ಆಯ್ಕೆಯನ್ನು ಪರಿಚಯಿಸಲಾಗಿದೆ. ಈ ಆಯ್ಕೆಯು AI ತಂತ್ರಜ್ಞಾನವನ್ನು ಪಡೆದಿದ್ದು, ಸ್ವಯಂಚಾಲಿತವಾಗಿ ಸಬ್‌-ಆಪ್ಟಿಮಲ್ ಲೈಟಿಂಗ್ ವ್ಯವಸ್ಥೆಯಲ್ಲಿ ಇತರೆ ಭಾಗವಹಿಸಿದವರಿಗೂ ಮೀಟಿಂಗ್‌ನ ವ್ಯಕ್ತಿ ಗೋಚರವಾಗುಂತೆ ಮಾಡುತ್ತದೆ. ಈ ಆಯ್ಕೆ ಸದ್ಯ ಮೊಬೈಲ್ ಬಳಕೆದಾರರಿಗೆ ಲಭ್ಯವಾಗಿದ್ದು, ವೆಬ್‌ ಆವೃತ್ತಿಯಲ್ಲಿಯೂ ಸೇರಲಿದೆ.

ನಾಯಿಸ್‌ ಕ್ಯಾನ್ಸಲೇಶನ್

ನಾಯಿಸ್‌ ಕ್ಯಾನ್ಸಲೇಶನ್

ಗೂಗಲ್ ಮೀಟ್ ಆಪ್‌ನಲ್ಲಿ ನಾಯಿಸ್‌ ಕ್ಯಾನ್ಸಲೇಶನ್ ಆಯ್ಕೆಯು ಗೂಗಲ್ ಸೇರ್ಪಡೆ ಮಾಡಿದೆ. ಮೀಟಿಂಗ್ ನಡೆಯುವ ವೇಳೆ ಅನಗತ್ಯ ಕಿರಿ ಕಿರಿ ಎನಿಸುವ ಬ್ಯಾಕ್‌ಗ್ರೌಂಡ್‌ ಶಬ್ದಗಳನ್ನು ತಡೆಯುವ/ಫಿಲ್ಟರ್ ಮಾಡುವ ಕೆಲಸವನ್ನು ಈ ಆಯ್ಕೆಯು ಮಾಡುತ್ತದೆ.

Most Read Articles
Best Mobiles in India

English summary
Google added new features in Google Meet app.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X