ವಿಜ್ಞಾನಿಗಳು ವಿವರಿಸಲಾಗದ 7 ಬಾಹ್ಯಾಕಾಶ ರಹಸ್ಯ ಮಾಹಿತಿಗಳು!

Written By:

ಸಂಶಯವಿಲ್ಲದೇ ಒಪ್ಪಿಕೊಳ್ಳಬಹುದಾದ ವಿಷಯ ಅಂದ್ರೆ ಬ್ರಹ್ಮಾಂಡ(ಬಾಹ್ಯಾಕಾಶ)ವು ಸಂಪೂರ್ಣವಾಗಿ ರಹಸ್ಯಗಳನ್ನು ಹೊಂದಿದೆ ಎಂಬುದನ್ನ. ಅದಕ್ಕೆ ಕಾರಣಗಳನ್ನು ಹುಡುಕಿ ಹೊರಟಂತೆಲ್ಲಾ ಚಂದ್ರ ಮತ್ತು ಮಂಗಳ ಗ್ರಹಗಳಲ್ಲೇ ಹೆಚ್ಚಿನ ರಹಸ್ಯ ವಿಷಯಗಳು ಸಿಗುತ್ತದೆ.

ನಾಸಾ 1977 ರಲ್ಲಿ ಸೌರಮಂಡಲ ತನಿಖೆಗಾಗಿ ಲಾಂಚ್ ಮಾಡಿದ 'ವೊಯೊಗರ್ 1' ಸೌರ ಮಂಡಲದಿಂದಲೇ ಹೊರಗೆ ಹೋಯಿತು. ನಂತರದಲ್ಲಿ ಅದರ ಹಲವು ಸ್ಫೋಟಗೊಂಡ ವಸ್ತುಗಳನ್ನು ಟೆಲಿಸ್ಕೋಪ್‌ನಿಂದ ನೋಡಿ ಮಾಹಿತಿ ತಿಳಿಯಲಾಯಿತು.

ಅಂದಹಾಗೆ ಸ್ಪೇಸ್‌ನ ಹಲವು ಪ್ರಖ್ಯಾತ ರಹಸ್ಯಗಳಲ್ಲಿ "ಮಂಗಳ ಗ್ರಹದಲ್ಲಿನ ಮುಖಗಳು, Black Knight Satellite, ಯುಎಫ್‌ಓ'ಗಳನ್ನು ಬಗೆಹರಿಸಲಾಗಿದೆ. ಆದರೆ ಸ್ಪೇಸ್‌ ಇನ್ನೂ ಹಲವು ರಹಸ್ಯಗಳನ್ನು ಒಳಗೊಂಡಿದ್ದು, ವಿಜ್ಞಾನಿಗಳು ಸಹ ಈ ರಹಸ್ಯಗಳ ಬಗ್ಗೆ ಯಾವುದೇ ವಿವರಣೆಯನ್ನು ನೀಡಿಲ್ಲ. ಅಂತಹ 7 ಬಾಹ್ಯಾಕಾಶ ರಹಸ್ಯಗಳ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ಗಳಲ್ಲಿ ಓದಿರಿ.

ತಂತ್ರಜ್ಞಾನ ಲೋಕಕ್ಕೆ ಅಬ್ದುಲ್ ಕಲಾಂ ಕೊಡುಗೆ ಏನು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಲಾಕ್‌ ಹೋಲ್‌ (ಕಪ್ಪು ಕುಳಿ)

ಬ್ಲಾಕ್‌ ಹೋಲ್‌ (ಕಪ್ಪು ಕುಳಿ)

ಕಪ್ಪು ಕುಳಿಯು ಅಂತಿಮವಾದ ಕಾಸ್ಮಿಕ್ ಸುಳಿಯ ಪ್ರದೇಶ. ಬೃಹತ್‌ ನಕ್ಷತ್ರ ಸ್ಫೋಟದಿಂದ ನಿರ್ಮಾಣವಾಗಿರುವ ಬ್ಲಾಕ್‌ ಹೋಲ್ ಇಂದು ಕೇವಲ ಒಂದು ಸಣ್ಣ ಪ್ರಮಾಣದ ಬೆಳಕನ್ನು ಸಹ ತನ್ನ ಗುರುತ್ವ ಬಲದಿಂದ ಬಿಟ್ಟುಕೊಡುವುದಿಲ್ಲ. ಆದರೆ ಕಪ್ಪು ಕುಳಿ ಸುಳಿಗೆ ಸಿಕ್ಕ ವಸ್ತುಗಳು ನಂತರದಲ್ಲಿ ಎಲ್ಲಿಗೆ ಹೋಗುತ್ತವೆ ಎಂಬುದನ್ನು ಟೆಲಿಸ್ಕೋಪ್ ಬಳಸಿಯು ಸಹ ನೋಡಲು ಸಾಧ್ಯವಾಗಿಲ್ಲ.

 ದೈತ್ಯ ಶೂನ್ಯ

ದೈತ್ಯ ಶೂನ್ಯ

ಬ್ಲಾಕ್‌ ಹೋಲ್‌ ಅಲ್ಲ. ದೈತ್ಯ ಶೂನ್ಯವು ಸ್ಪೇಸ್‌ ನಲ್ಲಿನ ಕುಳಿಯು ಅಲ್ಲ. ಅಲ್ಲದೇ ಕಪ್ಪು ಎಂಬ ಮಾಹಿತಿಯಲ್ಲೂ ಸಹ ಶೂನ್ಯವಾಗಿದೆ. ಆದರೆ ಬೆಳಕು ದೈತ್ಯ ಶೂನ್ಯದಿಂದ ರವಾನೆಯಾಗುತ್ತಿದೆ. ವಿಜ್ಞಾನಿಗಳು ದೈತ್ಯ ಶೂನ್ಯವು ಡಾರ್ಕ್‌ ಎನರ್ಜಿ ಹೊಂದಿರುವುದಾಗಿ ಹೇಳಿದ್ದಾರೆ. ಅಂದಾಜಿನ ಪ್ರಕಾರ ದೈತ್ಯ ಶೂನ್ಯವು ಸ್ಪೇಸ್‌ನಲ್ಲಿ ಒಂದು ಮಾತ್ರವಲ್ಲದೇ 1.3 ಶತಕೋಟಿ ಜ್ಯೋತಿವರ್ಷಗಳ ವ್ಯಾಸ ಹೊಂದಿದೆ.

ಕಪ್ಪು ಚುಕ್ಕೆ (ಡಾರ್ಕ್‌ ಮ್ಯಾಟರ್‌)

ಕಪ್ಪು ಚುಕ್ಕೆ (ಡಾರ್ಕ್‌ ಮ್ಯಾಟರ್‌)

ಕಪ್ಪು ಚುಕ್ಕೆಯು ಇಂದಿಗೂ ರಹಸ್ಯ, ಆದರೆ ಖಗೋಳ ವಿಜ್ಞಾನಿಗಳು ಶೇಕಡ 27 ರಷ್ಟು ಬ್ರಹ್ಮಾಂಡವು ಕಪ್ಪು ಚುಕ್ಕೆ ಹೊಂದಿರುವ ಬಗ್ಗೆ ವಿವರಿಸಲು ಮುಂದಾಗಿದ್ದಾರೆ. ಆದರೆ ಕಪ್ಪು ಚುಕ್ಕೆಗಳು ಕಪ್ಪು ಕುಳಿಯಿಂದ ಮಾತ್ರ ಉದ್ಭವವಾಗಿಲ್ಲ.

ಕಪ್ಪು ಶಕ್ತಿ (ಡಾರ್ಕ್‌ ಎನರ್ಜಿ)

ಕಪ್ಪು ಶಕ್ತಿ (ಡಾರ್ಕ್‌ ಎನರ್ಜಿ)

ಕಪ್ಪು ಚುಕ್ಕೆ ಬಗೆಗಿನ ಆಧಾರ 27 ಶೇಕಡ ಇದ್ದರೆ , ಕಾಸ್ಮಿಕ್ ಮೈಕ್ರೋವೇವ್ ಬ್ಯಾಗ್ರೌಂಡ್‌ನಿಂದ ಬರುವ ಕಪ್ಪು ಶಕ್ತಿಯು ಶೇಕಡ 68 ನಮ್ಮ ಸುತ್ತಮುತ್ತಲು ಇದ್ದು, ಉಷ್ಣ ವಿಕಿರಣ ಜಲಜನಕ ಪರಮಾಣು ಮೊದಲು ರೂಪುಗೊಂಡ ನಂತರ ಶೀಘ್ರದಲ್ಲೇ ಹೆಚ್ಚಿದೆ.

ದಿ ಗ್ರೇಟ್‌ ಅಟ್ರ್ಯಾಕ್ಟರ್‌

ದಿ ಗ್ರೇಟ್‌ ಅಟ್ರ್ಯಾಕ್ಟರ್‌

ಅಂದಹಾಗೆ 220 ದಶಲಕ್ಷ ಜ್ಯೋತಿವರ್ಷಗಳ ದೂರದಲ್ಲಿ ನಮ್ಮ ಗೆಲಾಕ್ಸಿಯನ್ನು ಹತ್ತಿರಕ್ಕೆ ಡ್ರ್ಯಾಗ್‌ ಮಾಡುತ್ತಿರುವ 'ದಿ ಗ್ರೇಟ್‌ ಅಟ್ರ್ಯಾಕ್ಟರ್'‌ ಇದೆ. ಸಂಪೂರ್ಣ ಬ್ರಹ್ಮಾಂಡವು ವಿಸ್ತರಣೆಗೊಳ್ಳುತ್ತಿದ್ದು, ನಮ್ಮ ಗೆಲಾಕ್ಸಿಯು ಚಲಿಸುತ್ತಿರುವ ಅರಿವು ಮೂಡಿಸಿದೆ. ಆದರೆ ಅದರ ದಿಕ್ಕಿನಲ್ಲಿ ಮಾತ್ರ ಅಲ್ಲ. ಇದನ್ನು ಗ್ರೇಟ್‌ ಅಟ್ರ್ಯಾಕ್ಟರ್‌ ಎಂದು ಹೆಸರಿಸಲಾಗಿದೆ.

ಶನಿಯ ನಿಗೂಢ ಚಂದ್ರ

ಶನಿಯ ನಿಗೂಢ ಚಂದ್ರ

ದೀಘ್ರ ಸಮಯಗಳ ನಂತರ ಶನಿ ಗ್ರಹವು ಒಂದು ಸಣ್ಣ ರಹಸ್ಯ ಚಂದ್ರನನ್ನು ಹೊಂದಿದೆ. ಇದನ್ನು 'ಪೆಗ್ಗೀ' ಎಂದು ಹೆಸರಿಸಲಾಗಿದೆ. ಅಂದಹಾಗೆ ಇದನ್ನು ನಾಸಾದ ಕ್ಯಾಸ್ಸಿನಿ 2013 ರಲ್ಲಿ ಶನಿಯ ರಿಂಗ್ಸ್‌ ಅನ್ನು ಸ್ನಾಪ್‌ಶಾಟ್‌ ತೆಗೆದಿದೆ. ಇದನ್ನು ಖಗೋಳಶಾಸ್ತ್ರಜ್ಞರು ಸಣ್ಣ ಚಂದ್ರ ರೂಪುಗೊಳ್ಳುತ್ತಿದೆ ಎಂದು ನಂಬಿದ್ದಾರೆ.

"ಟಾಬ್ಬಿ ಸ್ಟಾರ್," KIC 8462852

'KIC 8462852' ನಕ್ಷತ್ರವು ಕೇವಲ ಲವಲವಿಕೆಯಿಂದಲ್ಲದೇ ಚಿರಸ್ಮರಣೀಯ ಹೆಸರು ಹೊಂದಿದೆ. ಅಲ್ಲದೇ ಪರಿಹರಿಸಲು ಸಾಧ್ಯವಾಗ ಅಸಂಗತತೆ ಹೊಂದಿದ್ದು, 1,500 ಜ್ಯೋತಿವರ್ಷಗಳ ದೂರದಲ್ಲಿದೆ. ಈ ನಕ್ಷತ್ರಕ್ಕೆ "ಟಾಬ್ಬಿ ಸ್ಟಾರ್‌" ಎಂದು ಹಸ ಹೆಸರಿಸಲಾಗಿದೆ. ಖಗೋಳ ವಿಜ್ಞಾನಿಗಳು ಇದರ ಬಗ್ಗೆಯು ಸಹ ಹಲವು ಸಂಶಯಗಳನ್ನು ವಿವರಿಸುವಲ್ಲಿ ಹೊಂದಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
7 space mysteries that scientists can't explain. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot