ಪ್ರಪಂಚದ ಅತಿವೇಗದ ಭಾರತೀಯ ಮಾರಣಾಂತಿಕ ಕ್ಷಿಪಣಿಯ ವಿಶೇಷತೆಗಳು

Written By:

ಭಾರತೀಯ ಮೂಲದ ಪ್ರಪಂಚದ ಅತಿವೇಗದ ಯುದ್ಧ ಕ್ಷಿಪಣಿ "ಬ್ರಹ್ಮೋಸ್‌(BrahMos)". ಬ್ರಹ್ಮೋಸ್‌ ಅತಿವೇಗದ ಮಾರಣಾಂತಿಕ ಕ್ಷಿಪಣಿ ಎಂದು ಸಹ ಪ್ರಖ್ಯಾತವಾಗಿದೆ. ಭಾರತ ಅತ್ಯಾಧುನಿಕ ಟೆಕ್ನಾಲಜಿ ಆಧಾರಿತವಾಗಿ ರಷ್ಯಾದೊಂದಿಗೆ ಜೊತೆಗೂಡಿ ಅಭಿವೃದಿಪಡಿಸಿರುವ ಮಾರಣಾಂತಿಕ ಅತಿವೇಗದ ಯುದ್ಧ ಕ್ಷಿಪಣಿ "ಬ್ರಹ್ಮೋಸ್‌" ಅನ್ನು ಶೀಘ್ರದಲ್ಲಿ ಭಾರತ ತನ್ನ ಮಿತ್ರ ರಾಷ್ಟ್ರಗಳಿಗೆ ಮಾರಾಟ ಮಾಡಲಿದೆ. ಖರೀದಿಸುವ ಪಟ್ಟಿಯಲ್ಲಿ ಯುನೆಟೆಡ್‌ ಅರಬ್‌ ಎಮಿರೇಟ್ಸ್‌, ದಕ್ಷಿಣ ಆಫ್ರಿಕಾ ಮತ್ತು ಚಿಲಿ ಮುಂದಿನ ಸಾಲಿನಲ್ಲಿವೆ.

'ಕಪ್ಪು ಕುಳಿ' ಬಗೆಗಿನ ಅದ್ಭುತ ಸತ್ಯಾಂಶಗಳು

ಅತಿವೇಗದ "ಬ್ರಹ್ನೋಸ್" ಯುದ್ಧ ಕ್ಷಿಪಣಿಯ ಸೇವೆಯನ್ನು ಈಗಾಗಲೇ ಭಾರತೀಯ ಸೇನೆ, ಭಾರತೀಯ ನೌಕಾಪಡೆ, ಭಾರತೀಯ ವಾಯುಪಡೆಯಲ್ಲಿ ಪಡೆದುಕೊಳ್ಳಲಾಗಿದೆ. ಮಿತ್ರರಾಷ್ಟ್ರಗಳಿಗೆ ಮಾರಾಟವಾಗುತ್ತಿರುವ "ಬ್ರಹ್ಮೋಸ್‌" ಕ್ಷಿಪಣಿ ಬಗ್ಗೆ ಭಾರತೀಯರು ತಿಳಿಯಲೇಬೇಕಾದ ಕೆಲವು ಕುತೂಹಲಕಾರಿ ಮಾಹಿತಿಗಳಿವೆ. ಆ ಮಾಹಿತಿಗಳನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಸಂಶೋಧಕರಿಂದ ವಾಸಿಸಲು ಯೋಗ್ಯವಾದ ಗ್ರಹ ಪತ್ತೆ: 'Kepler 62f'

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ರಹ್ಮೋಸ್‌

1

ರಷ್ಯಾದೊಂದಿಗೆ ಭಾರತ ಜೊತೆಗೂಡಿ ಅಭಿವೃದ್ದಿ ಪಡಿಸಿದ 'ಬ್ರಹ್ಮೋಸ್‌" ಪ್ರಪಂಚದ ಪ್ರಬಲ ಅತಿವೇಗದ ಕ್ಷಿಪಣಿಯಾಗಿದೆ. ಭಾರತೀಯ ಶಸ್ತ್ರಾಸ್ತ್ರ ಸೇನಾ ಪಡೆಗಳ ಸೇವೆಯಲ್ಲಿ ಬಹುಮುಖ ಶಸ್ತ್ರಾಸ್ತ್ರಗಳನ್ನು ಹೊಂದಿದೆ.
ಚಿತ್ರ ಕೃಪೆ:Wikimedia Commons

ಅತಿವೇಗದ ಕ್ಷಿಪಣಿ

2

"ಬ್ರಹ್ಮೋಸ್" ಶಬ್ಧಕ್ಕಿಂತ ಮೂರು ಪಟ್ಟು ವೇಗದಲ್ಲಿ ಹಾರುತ್ತದೆ. ಪ್ರಪಂಚದಲ್ಲಿ 'ಬ್ರಹ್ಮೋಸ್‌ ಹಾರುವ ವೇಗದಲ್ಲಿ ಹಾರುವ ಯಾವುದೇ ಇತರೆ ಕ್ಷಿಪಣಿಗಳಿಲ್ಲ.
ಚಿತ್ರ ಕೃಪೆ:Wikimedia Commons

ಯಾವುದೇ ಕ್ಷಿಪಣಿಗಳು ಹಿಡಿಯಲು ಸಾಧ್ಯವಿಲ್ಲ

3

ಬ್ರಹ್ಮೋಸ್ ಮಾರಣಾಂತಿಕ ಕ್ಷಿಪಣಿಯಾಗಿದ್ದು, ವಿರೋಧಿ ಕ್ಷಿಪಣಿಗಳು ಯುದ್ಧದಲ್ಲಿ ಅದನ್ನು ಹಿಡಿಯಲು ಸಾಧ್ಯವಿಲ್ಲ. ಬ್ರಹ್ಮೋಸ್‌ ವೇಗದಿಂದ ಚಲನ ಶಕ್ತಿ ಹೆಚ್ಚುವುದರಿಂದ ತನ್ನ ಗುರಿ ತಲುಪಲು ಸಾಧ್ಯವಿದೆ.
ಚಿತ್ರ ಕೃಪೆ:Wikimedia Commons

ಬಹುಮುಖ ಸಾಮರ್ಥ್ಯ

4

ಬ್ರಹ್ಮೋಸ್' ಅನ್ನು ಭೂಮಿ ಮೇಲೆ,, ನೌಕಾ ಹಡಗುಗಳಲ್ಲಿ, ವಾಯುಪಡೆಯಲ್ಲಿ ಲಾಂಚ್‌ ಮಾಡಬಹುದಾಗಿದೆ. ಭಾರತದ ವಾಯುಪಡೆ ಮುಂದಿನ ದಿನಗಳಲ್ಲಿ 40 Sukhoi-30MKi ಏರ್‌ ಪ್ರಾಬಲ್ಯದ ಫೈಟರ್‌ಗಳನ್ನು ಲಾಂಚ್‌ ಮಾಡಲು ಉದ್ದೇಶಿಸಿದೆ.

ನೀರಿನೊಳಗೆ ಲಾಂಚ್

5

ಬ್ರಹ್ಮೋಸ್ ಅನ್ನು ನೀರಿನೊಳಗೂ ಸಹ ಲಾಂಚ್‌ ಮಾಡಬಹುದಾದ ಸಾಮರ್ಥ್ಯವನ್ನು ಪರೀಕ್ಷಿಸಲಾಗಿದೆ. ಆದ್ದರಿಂದ ಭಾರತದ ಭವಿಷ್ಯದ ಜಲಾಂತರ್ಗಾಮಿಗಳು ಇದನ್ನು ಹೊಂದಲಿವೆ.
ಚಿತ್ರ ಕೃಪೆ:Shiv Aroor

ಅತ್ಯಂತ ನಿಖರವಾದ ಕ್ಷಿಪಣಿ

6

ನಗರ ಪ್ರದೇಶದ ಅತಿಹೆಚ್ಚು ಕಟ್ಟಡಗಳನ್ನು ಹೊಂದಿರುವ ಗುಂಪುಗಳ ನಡುವೆಯು ಸಹ ಗುರಿಹೊಂದಿದ ಪ್ರದೇಶಕ್ಕೆ ಕ್ಷಿಪಣಿಯನ್ನು ಲಾಂಚ್‌ ಮಾಡಬಹುದು ಎಂಬುದನ್ನು ಪರೀಕ್ಷಿಸಿ ತಿಳಿಯಲಾಗಿದೆ. ಶಬ್ಧವೇಗಾತೀತ ವೇಗದಲ್ಲಿ ನಡೆಸಲು ಇರುವ ಏಕೈಕ ಕ್ಷಿಪಣಿ ಇದಾಗಿದೆ.

Mach 2.8 ವೇಗ

7

Block-III ಕ್ಷಿಪಣಿ Mach 2.8 ವೇಗದಲ್ಲಿ ಚಲಿಸುತ್ತಿದ್ದರೂ ಸಹ ಟಾರ್ಗೆಟ್‌ ಹೊಂದಿದ ವಿರೋಧಿ ಕ್ಷಿಪಣಿ ಮೇಲೆ ಮೇಲಿನಿಂದ ಹಾರಲಿದೆ. ಇದರಿಂದ ವಿರೋಧಿ ಕ್ಷಿಪಣಿಗಳು ಜಿಯೋಗ್ರಫಿಕಲ್‌ ಫೀಚರ್‌ನಿಂದ ತಪ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ.

ಹಲವು ಪರೀಕ್ಷೆಗಳು

8

ಹಲವು ಪರೀಕ್ಷೆಗಳಲ್ಲಿ 290 km ಗಿಂತ ಹೆಚ್ಚು ಹೊಡೆಯುವ ಟಾರ್ಗೆಟ್‌ನಲ್ಲಿ ಹಾರಿದೆ, ಅದು 5 ಮೀಟರ್‌ಗಿಂತ ಹೆಚ್ಚು ಗಾತ್ರ ಇರಲಿಲ್ಲ. ಅದು ಸ್ನಿಪ್ಪರ್‌ ಶಾಟ್‌ ರೀತಿಯಲ್ಲಿತ್ತು.

 ಮಾರಣಾಂತಿಕ

9

ಮುಂದಿನ ಪೀಳಿಗೆಯ ಕ್ಷಿಪಣಿ, ಬ್ರಹ್ಮೋಸ್‌- II ಪ್ರಸ್ತುತಕ್ಕಿಂತ ವೇಗವಾಗಿ ಹಾರಲಿದೆ. ಇದು ಹೈಪರ್‌ಸಾನಿಕ್‌ ವೇಗದಲ್ಲಿ ಹಾರುವ ಸಾಮರ್ಥ್ಯಹೊಂದಿದೆ. 7 ಪಟ್ಟು ಧ್ವನಿವೇಗಾತೀತವಾಗಿ ಹಾರಲಿದೆ. ಬ್ರಹ್ಮೋಸ್‌- II ಅನ್ನು ನಿಲ್ಲಿಸಲು ಸಾಧ್ಯವಾಗದಂತೆ ಅಭಿವೃದ್ದಿಪಡಿಸಲಿದ್ದು, ಇದಕ್ಕಿಂತ ಮೊದಲು 'ಬ್ರಹ್ಮೋಸ್‌-ಎಂ" ಎಂಬ ಸ್ಮಾಲರ್‌ ವರ್ಸನ್‌ ಕ್ಷಿಪಣಿಯನ್ನು ಅಭಿವೃದ್ದಿಪಡಿಸಲಾಗುತ್ತಿದೆಯಂತೆ.

rn

10

ಬ್ರಹ್ಮೋಸ್‌ ಮಾರಣಾಂತಿಕ ಕ್ಷಿಪಣಿಯ ಅತಿವೇಗ ಹೇಗಿದೆ ಎಂದು ವೀಡಿಯೋ ನೋಡಿ.
ವೀಡಿಯೋ ಕೃಪೆ: Indian Armed Forces

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Here's All You Need To Know About The Deadliest Cruise Missile In The World BrahMos. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot