ಕನ್ನಡ ಭಾಷೆ ಹುಟ್ಟಿದ್ದು 4,500 ವರ್ಷಗಳ ಹಿಂದೆಯಂತೆ!..ಅಧ್ಯಯನ ವರದಿ!!

  ದ್ರಾವಿಡ ಇತಿಹಾಸವನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ದ್ರಾವಿಡ ಭಾಷಾವೃಕ್ಷವನ್ನು ಪುನರ್‌ ನಿರ್ಮಿಸಿ, ದ್ರಾವಿಡ ಭಾಷೆಗಳು 4,500 ವರ್ಷಗಳಷ್ಟು ಹಳೆಯದಾಗಿದೆ ಎಂಬ ಅಚ್ಚರಿಯ ಫಲಿತಾಂಶವನ್ನು ಅಧ್ಯಯನವೊಂದು ನೀಡಿದೆ. ಆಧುನಿಕ ತಂತ್ರಜ್ಞಾನದ ಸಹಾಯದಿಂದ ನೆದರ್ಲೆಂಡ್‌ನ 'ಮ್ಯಾಕ್ಸ್ ಪ್ಲ್ಯಾಂಕ್ ಮನೋವೈಜ್ಞಾನಿಕ ಭಾಷಾಶಾಸ್ತ್ರ' ಸಂಸ್ಥೆಯ ಸಂಶೋಧಕರು ನಡೆಸಿದ ಒಂದು ಅಧ್ಯಯನದಲ್ಲಿ ಅಚ್ಚರಿಯ ಫಲಿತಾಂಶವನ್ನು ಹೊರಗೆಡವಿದ್ದಾರೆ.

  ಹೌದು, ಇಲ್ಲಿಯವರೆಗೆ, ದ್ರಾವಿಡರ ಮೂಲ ಮತ್ತು ದೇಶದಾದ್ಯಂತ ಅವರ ಪ್ರಸರಣದ ಬಗ್ಗೆ ಹೆಚ್ಚು ತಿಳಿದಿಲ್ಲ. ಈಗ, ದ್ರಾವಿಡ ಭಾಷಾ ಕುಟುಂಬವು, ವಿಶ್ವದ ಪ್ರಾಥಮಿಕ ಭಾಷಾ ಕುಟುಂಬಗಳಲ್ಲಿ ಒಂದಾಗಿದೆ. ದ್ರಾವಿಡ ಭಾಷಾ ಕುಟುಂಬದ ಕೆಲವು ಭಾಷೆಗಳು ಸುಮಾರು 2000 ವರ್ಷಗಳ ಹಿಂದೆಯೇ ಬರೆಯಲ್ಪಟ್ಟಿವೆ. ಇದು ದಕ್ಷಿಣ, ಮಧ್ಯ ಮತ್ತು ಉತ್ತರ ಭಾರತದ ಸುಮಾರು 20 ಕೋಟಿ ಜನರು ಮಾತನಾಡುವ 80 ಭಾಷೆಗಳನ್ನು ಹೊಂದಿದೆ ಎಂದು ಈ ಅಧ್ಯಯನದಲ್ಲಿ ತಿಳಿದುಬಂದಿದೆ.

  ಕನ್ನಡ ಭಾಷೆ ಹುಟ್ಟಿದ್ದು 4,500 ವರ್ಷಗಳ ಹಿಂದೆಯಂತೆ!..ಅಧ್ಯಯನ ವರದಿ!!

  ಶ್ರವ್ಯ ಮತ್ತು ಲಿಖಿತ ದಾಖಲೆಗಳನ್ನು ಅಂತರರಾಷ್ಟ್ರೀಯ ಫೋನೆಟಿಕ್ ಅಕ್ಷರಕ್ಕೆ ನಕಲು ಮಾಡಿದ ನಂತರ, 'ದ್ರಾವಿಡ ವ್ಯುತ್ಪತ್ತಿಶಾಸ್ತ್ರ ನಿಘಂಟ'ನ್ನು ಬಳಸಿ ಪ್ರತಿಕ್ರಿಯೆಗಳನ್ನು ತೌಲನಿಕವಾಗಿ ಕೋಡಿಂಗ್ ಮಾಡಲಾಗಿದೆ. ಅತ್ಯುತ್ತಮ ಮಾಹಿತಿ ಬೆಂಬಲಿತ ವಿಶ್ಲೇಷಣೆಯ ಆಧಾರದ ಮೇಲೆ ನಡೆದ ಸಂಶೋಧನೆ ಇದಾಗಿದೆ. ದ್ರಾವಿಡ ಭಾಷಾ ಕುಟುಂಬವನ್ನು 4,500 ವರ್ಷಗಳ ಹಿಂದಕ್ಕೆ ಕರೆದೊಯ್ದು ನಿಲ್ಲಿಸಿದ ಕೀರ್ತಿಗೆ ಈ ಅಧ್ಯಯನ ಪಾತ್ರವಾಗಿದೆ.

  ಈ ಸಂಶೋಧನೆಯ ಮಾಹಿತಿಯು ನಿಖರವಾಗಿ ಪುರಾತತ್ತ್ವ ವಿಜ್ಞಾನದ ಕಾಲಾನುಕ್ರಮದೊಂದಿಗೆ ಸಮೀಕೃತಗೊಂಡಿದ್ದು, ದಕ್ಷಿಣ ನವಶಿಲಾಯುಗಕ್ಕೆ ಸಂಬಂಧಿತ ಪುರಾತತ್ತ್ವವಿಜ್ಞಾನದ ಶೋಧನೆಗಳ ಜೊತೆಗೂಡಿ ಸಾಕ್ಷ್ಯಾಧಾರವನ್ನು ಮತ್ತಷ್ಟು ಬಲಪಡಿಸಿದೆ.ದಕ್ಷಿಣ ಭಾರತದಲ್ಲಿ ಕ್ರಿಸ್ತಪೂರ್ವ 5000 ವರ್ಷಗಳಿಂದ 3400 ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ನವಶಿಲಾಯುಗದ ಕಾಲಾವಧಿಯು ಬೂದಿ ದಿಬ್ಬಗಳಂತಹ ಮಾನವ ನಿರ್ಮಿತ ಕಲಾಕೃತಿಗಳಿಂದ ನಿರೂಪಿಸಲ್ಪಟ್ಟಿದೆ.

  ಕನ್ನಡ ಭಾಷೆ ಹುಟ್ಟಿದ್ದು 4,500 ವರ್ಷಗಳ ಹಿಂದೆಯಂತೆ!..ಅಧ್ಯಯನ ವರದಿ!!

  ದ್ರಾವಿಡ ಭಾಷಾ ಕುಟುಂಬಗಳನ್ನು 'ದಕ್ಷಿಣ ದ್ರಾವಿಡ 1' 'ದಕ್ಷಿಣ ದ್ರಾವಿಡ 2' , ಮಧ್ಯ ದ್ರಾವಿಡ' ಮತ್ತು 'ಉತ್ತರ ದ್ರಾವಿಡ' ಎಂಬ ನಾಲ್ಕು ಪ್ರಮುಖ ಶಾಖೆಗಳನ್ನು ಗುರುತಿಸಿಸಲಾಗಿದೆ. ದಕ್ಷಿಣ ದ್ರಾವಿಡ 1' ಗುಂಪು ಕನ್ನಡ, ತಮಿಳು, ಮಲಯಾಳಂ, ಇರುಲಾ, ಕೊಡವ, ಕುರುಂಬ, ಕೋಟಾ, ತೋಡಾ, ಬಡಗಾ, ಕೋರಗಾ ಮತ್ತು ತುಳುಗಳನ್ನು ಒಳಗೊಂಡಿದೆ. ದಕ್ಷಿಣ 1 ದ್ರಾವಿಡ 1' ಉಪವಿಭಾಗಕ್ಕೂ ಇತರ ಮೂರು ಗುಂಪುಗಳಿಗೂ ನಡುವೆ ಒಂದು ವಿಭಜನೆಯಿದ್ದು, ದಕ್ಷಿಣ ದ್ರಾವಿಡ 1' ಗುಂಪು 2500 - 3000 ವರ್ಷಗಳ ಹಿಂದೆ ನಡೆದಿದೆ ಎಂದು ಅಂದಾಜಿಸಲಾಗಿದೆ.

  How to Check Your Voter ID Card Status (KANNADA)

  ದ್ರಾವಿಡ ಭಾಷಾ ಮೂಲದ ಅಂದಾಜು ಒದಗಿಸುವ ಕೆಲವೇ ಅಧ್ಯಯನಗಳಲ್ಲಿ, ಅತ್ಯುತ್ತಮ ಮಾಹಿತಿ ಬೆಂಬಲಿತ ವಿಶ್ಲೇಷಣೆಯ ಆಧಾರದ ಮೇಲೆ ನಡೆದ ಸಂಶೋಧನೆ ಇದಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಸಂಶೋಧಕರು ಐತಿಹಾಸಿಕ ಮತ್ತು ಭಾಷಾಶಾಸ್ತ್ರದ ದತ್ತಾಂಶವನ್ನು ಕ್ರೋಡೀಕರಿಸಿ, ಲಿಖಿತ ದ್ರಾವಿಡ ಭಾಷೆಗಳು ಮೊದಲ ಬಾರಿಗೆ ಶಾಸನಗಳಲ್ಲಿ ಯಾವಾಗ ದೃಢೀಕರಿಸಲ್ಪಟ್ಟಿವೆ ಎಂಬುದನ್ನೂ ಪರಿಶೀಲಿಸಿ, ದ್ರಾವಿಡ ಭಾಷಾ ಕುಟುಂಬದ ವಯಸ್ಸನ್ನು ಅಂದಾಜು ಮಾಡಿದ ಕೀರ್ತಿ ಆಧುನಿಕ ತಂತ್ರಜ್ಞಾನಕ್ಕೂ ಸಹ ಸಲ್ಲುತ್ತದೆ.

  source: Dravidian language family is approximately 4,500 years old

  ಓದಿರಿ: ಟೆಲಿಕಾಂ ಕ್ಷೇತ್ರಕ್ಕೂ ಪತಂಜಲಿ ಲಗ್ಗೆ!.. 144 ರೂ.ಗೆ ಅನ್‌ಲಿಮಿಟೆಡ್ ಆಫರ್!!

  English summary
  The Dravidian language family, varieties of which are spoken by 220 million people across South Asia. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more