ನಾಸಾ ವಿಜ್ಞಾನಿಗಳಿಂದ ಮಂಗಳ ಗ್ರಹದಲ್ಲಿ ಆಮ್ಲಜನಕ ವಾತಾವರಣ ಪತ್ತೆ

By Suneel
|

40 ವರ್ಷಗಳ ನಂತರ ಇದೇ ಮೊದಲ ಬಾರಿಗೆ ನಾಸಾ ಸಂಶೋಧಕರು ಮಂಗಳ ಗ್ರಹದ ವಾತಾವರಣದಲ್ಲಿ ಆಮ್ಲಜನಕ ಪತ್ತೆ ಹಚ್ಚಿದ್ದಾರೆ. ನಾಸಾ ಸಂಶೋಧಕರು ಮಂಗಳ ಗ್ರಹದ ಅತಿಗೆಂಪು ವಾತಾವರಣದಲ್ಲಿ ಅಟೋಮಿಕ್‌ ಆಮ್ಲಜನಕ ಪತ್ತೆಹಚ್ಚಲು SOFIA (Stratospheric Observatory for Infrared Astronomy ) ಬಳಸಿಕೊಂಡಿದ್ದಾರೆ. ಅಂದಹಾಗೆ ಮಂಗಳ ಗ್ರಹದಲ್ಲಿ ಪರಮಾಣು ಆಕ್ಸಿಜನ್‌ ಪತ್ತೆಯಾಗಿದ್ದು ಎಲ್ಲಿ ಹೇಗೆ ಎಂಬ ವಿಶೇಷ ಮಾಹಿತಿ ತಿಳಿಯಲು ಲೇಖನದ ಸ್ಲೈಡರ್‌ ಓದಿರಿ.

1

1

ಮಂಗಳ ಗ್ರಹದಲ್ಲಿ ಸಂಶೋಧಕರು ಪರಮಾಣು ಆಕ್ಸಿಜನ್‌ ಪತ್ತೆ ಮಾಡಿರುವುದು ಅಲ್ಲಿನ ಮೇಲಿನ ವಾತಾವರಣದಲ್ಲಿ. ಮಂಗಳ ಗ್ರಹದಲ್ಲಿನ ಮೇಲಿನ ವಾತಾವರಣವು "ಮಧ್ಯಗೋಲ(mesosphere)" ಎಂತಲೇ ಹೆಸರುವಾಸಿಯಾಗಿದೆ.

2

2

ಖಗೋಳಶಾಸ್ತ್ರಜ್ಞರು ಮಂಗಳ ಗ್ರಹದಲ್ಲಿ ಪರಮಾಣು ಆಮ್ಲಜನಕ ಕಂಡುಹಿಡಿಯಲು ಸಹಾಯ ಮಾಡಿದ್ದು "SOFIA" ಎಂಬ ವಾಯುಮಂಡಲ ಪರಿಶೀಲನೆಯ ತಂತ್ರಜ್ಞಾನವಾಗಿದೆ. ಅಂದಹಾಗೆ SOFIA ಇತರೆ ಅನಿಲಗಳನ್ನು ಪತ್ತೆ ಹಚ್ಚಲು ಮತ್ತು ಮಾನವರಿಗೆ ವಾಸಸ್ಥಾನ ಯೋಗ್ಯ ಪ್ರದೇಶ ಯಾವುದು ಎಂದು ತಿಳಿಸುತ್ತದಂತೆ.

3

3

ಮಂಗಳ ಗ್ರಹದಲ್ಲಿ ಪರಮಾಣು ಆಮ್ಲಜನಕ ಪತ್ತೆ ಹಚ್ಚುವುದು ಕಠಿಣ ಕಷ್ಟವಾಗಿದೆ ಎಂದು SOFIA ಯೋಜನೆಯ ವಿಜ್ಞಾನಿ 'ಪಮೇಲ ಮಾರ್ಕಮ್‌ ಹೇಳಿಕೆ ನೀಡಿದ್ದಾರೆ. " ಭೂಮಿಯ ವಾತಾವರಣ ಹೊರತು ಪಡಿಸಿ ದೂರದ ಅತಿಗೆಂಪಿನ ತರಂಗಾಂತರಗಳಲ್ಲಿ ಪರಮಾಣು ಆಮ್ಲಜನಕ ಪತ್ತೆಹಚ್ಚಲು ಅತಿ ಸೂಕ್ಷ್ಮ ಉಪಕರಣಗಳು ಬೇಕು. ಅಂತಹ ಸಾಮರ್ಥ್ಯವನ್ನು 'SOFIA' ಒದಗಿಸಿದೆ ಎಂದು ಹೇಳಿದ್ದಾರೆ.

4

4

ಮಂಗಳ ಗ್ರಹದಲ್ಲಿ ಪರಮಾಣು ಆಮ್ಲಜನಕ ಪತ್ತೆಗಾಗಿ 'SOFIA' ವಿಮಾನವು 37,000 ದಿಂದ 45,000 ಅಡಿ ಎತ್ತರದಲ್ಲಿ ಹಾರಾಡಿ ಆಮ್ಲಜನಕ ಪತ್ತೆ ಮಾಡಿದೆ.

5

5

ಎರಡು ಪರಮಾಣು ಆಕ್ಸಿಜನ್‌ ಪರಸ್ಪರ ಸೇರಿದಾಗ 02 ಆಕ್ಸಿಜನ್ ನಿರ್ಮಿತವಾಗುತ್ತದೆ. ಅದು ನಾವು ಭೂಮಿ ಮೇಲೆ ಉಸಿರಾಡುವ ಆಕ್ಸಿಜನ್‌ ಪ್ರಮಾಣವಾಗಿದೆ. ಅಂದಹಾಗೆ ಪರಮಾಣು ಆಕ್ಸಿಜನ್‌ ಒಂದು ಆಕ್ಸಿಜನ್‌ ಪರಮಾಣು ಆಗಿದ್ದು ಇದು ಮಂಗಳ ಗ್ರಹದ ವಾತಾವರಣದಲ್ಲಿ ಪತ್ತೆಯಾಗಿದೆ. ಈ ಮೊದಲು ಮಂಗಳ ಗ್ರಹದಲ್ಲಿ ಪರಮಾಣು ಆಕ್ಸಿಜನ್‌ ಅನ್ನು ವೈಕಿಂಗ್ ಮತ್ತು ಮ್ಯಾರಿನರ್ ಮೆಷಿನ್‌ನಿಂದ ಪತ್ತೆಹಚ್ಚಲಾಗಿತ್ತು.

6

6

"ಪರಮಾಣು ಆಕ್ಸಿಜನ್, ಇತರ ಅನಿಲಗಳು ಮಾರ್ಸ್‌ ಅನ್ನು ಹೇಗೆ ಹೊರಹಾಕುತ್ತವೆ ಎಂಬುದರ ಮೇಲೆ ಪರಿಣಾಮ ಬೀರುತ್ತವೆ. ಇದು ಪ್ರಮುಖ ಪರಿಣಾಮವನ್ನು ಗ್ರಹದ ವಾತಾವರಣದ ಮೇಲೆ ಬೀರುತ್ತದೆ" ಎಂದು ನಾಸಾ ಹೇಳಿದೆ.

 ಗಿಜ್‌ಬಾಟ್‌

ಗಿಜ್‌ಬಾಟ್‌

ನಾಸಾ ಕ್ಯಾಮೆರಾದಲ್ಲಿ ಭೂಮಿ ನೋಡಿದಾಗನಾಸಾ ಕ್ಯಾಮೆರಾದಲ್ಲಿ ಭೂಮಿ ನೋಡಿದಾಗ

ಚಂದ್ರನ ಮೇಲ್ಮೈಯಲ್ಲಿರುವ ಮಚ್ಚೆಗಳ ರಹಸ್ಯ ಪತ್ತೆಹಚ್ಚಿದ ನಾಸಾಚಂದ್ರನ ಮೇಲ್ಮೈಯಲ್ಲಿರುವ ಮಚ್ಚೆಗಳ ರಹಸ್ಯ ಪತ್ತೆಹಚ್ಚಿದ ನಾಸಾ

ಮಂಗಳನಲ್ಲಿಗೆ ನಮ್ಮನ್ನು ಕರೆದೊಯ್ಯುವ ಬೃಹತ್ ರಾಕೆಟ್ಮಂಗಳನಲ್ಲಿಗೆ ನಮ್ಮನ್ನು ಕರೆದೊಯ್ಯುವ ಬೃಹತ್ ರಾಕೆಟ್

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
NASA Scientists Discovered Oxygen on Mars Atmosphere. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X