ಈ ಮಾಹಿತಿ ತಂತ್ರಜ್ಞಾನದ ವಿಚಿತ್ರಗಳು ನಿಮಗೆ ಗೊತ್ತಿರಲಿಕ್ಕಿಲ್ಲ..!

By Avinash

  ಇಡೀ ಜಗತ್ತಿಗೆ ಮಾಹಿತಿ ತಂತ್ರಜ್ಞಾನ ಮತ್ತು ವಿಜ್ಞಾನದಿಂದ ಅನೇಕ ಅನುಕೂಲಗಳಾಗಿವೆ ಮತ್ತು ಅಷ್ಟೇ ಅನಾನುಕೂಲಗಳಾಗಿವೆ. ಅದರಂತೆ ಅನೇಕ ಅಚ್ಚರಿಗಳನ್ನು ನೀಡಿರುವ ಐಟಿ ಲೋಕದಲ್ಲೂ ಅನೇಕ ವಿಶಿಷ್ಟ ಅಂಶಗಳಿವೆ. ಈ ವಿಚಿತ್ರಗಳ ಬಗ್ಗೆ ಬಹಳಷ್ಟು ಜನಕ್ಕೆ ಗೊತ್ತೇ ಇಲ್ಲ.

  ಬಿಲ್ ಗೇಟ್ಸ್ ಕುರಿತ ಈ ಸಂಗತಿಗಳನ್ನು ತಿಳಿದುಕೊಂಡರೆ ಅಬ್ಬಾ ಎನ್ನುತ್ತಿರಿ..!

  ಈಗಿನ ಆಪಲ್ ಲೋಗೋ ಮೊದಲು ಈ ರೀತಿ ಇದ್ದಿಲ್ಲ, ಫೈರ್ ಫಾಕ್ಸ್ ಬ್ರೌಸರ್ ಲೋಗೋಗೆ ಅದರದ್ದೇ ಆದ ಒಂದು ಕಥೆ ಹಿಂದೆ ಇದೆ. ಪ್ರಥಮ ವಿಸಿಆರ್ ಹೇಗಿತ್ತು ಎಂಬುದು ಯಾರಿಗಾದರೂ ಗೊತ್ತಾ..? ಇಂತಹ ಅನೇಕ ವೈಶಿಷ್ಟ್ಯಗಳು ಮಾಹಿತಿ ತಂತ್ರಜ್ಞಾನ ಲೋಕವನ್ನು ಒಳಗೊಂಡಿದ್ದು, ಅವುಗಳನ್ನು ತಿಳಿದುಕೊಳ್ಳುವ ಕುತೂಹಲ ಇದ್ದರೇ ಮುಂದೆ ನೋಡಿ..

  ಈ ಮಾಹಿತಿ ತಂತ್ರಜ್ಞಾನದ ವಿಚಿತ್ರಗಳು ನಿಮಗೆ ಗೊತ್ತಿರಲಿಕ್ಕಿಲ್ಲ..!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  1. ಫೈರ್ ಫಾಕ್ಸ್ ಬ್ರೌಸರ್

  ಹಿಮಾಲಯ ಮತ್ತು ಪಶ್ಚಿಮ ಚೀನಾದಲ್ಲಿ ಕಾಣಬರುವ ಕೆಂಪು ಪಂಡಾ ಫೈರ್ ಫಾಕ್ಸ್ ಲೋಗೋದಲ್ಲಿದೆ. ಕೆಂಪು ಪಂಡಾಕ್ಕೆ ಇಂಗ್ಲೀಷ್ ನಲ್ಲಿ ಫೈರ್ ಫಾಕ್ಸ್ ಎಂದು ಕರೆಯುತ್ತಾರೆ. ಇದರಿಂದ ಫೈರ್ ಫಾಕ್ಸ್ ಬ್ರೌಸರ್ ತನ್ನ ಹೆಸರು ಪಡೆದಿದೆ. ಲೋಗೋದಲ್ಲಿರುವ ಪ್ರಾಣಿ ಕೆಂಪು ಪಂಡಾ ಹೊರತು ನರಿಯಲ್ಲ.

  2. ಆಪಲ್ ಲೋಗೋ

  ಆಪಲ್ ಕಂಪನಿ ಪ್ರಾರಂಭವಾದಾಗ ಲೋಗೋ ಕೇವಲ ಒಂದು ಸೇಬು ಹಣ್ಣಿನಿಂದ ಕೂಡಿದ್ದಿಲ್ಲ. ಬದಲಾಗಿ ಐಸಾಕ್ ನ್ಯೂಟನ್ ಮರದ ಕೆಳಗೆ ಕೂತಿರುವ ಮತ್ತು ನ್ಯೂಟನ್ ತಲೆಯ ಮೇಲೆ ಆಪಲ್ ನೇತು ಬಿದ್ದಿರುವ ಲೋಗೋ ತಯಾರಿಸಲಾಗಿತ್ತು.

  3. ಬಿಲ್ ಗೇಟ್ಸ್

  ವಿಶ್ವದ ಬೃಹತ್ ಸಾಫ್ಟ್ ವೇರ್ ಸಂಸ್ಥೆ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕಾಲೇಜಿನಿಂದ ಡ್ರಾಪ್ ಔಟ್ ಎಂದರೆ ನಂಬಲೇಬೇಕು.

  4. ಬಿಲ್ ಗೇಟ್ಸ್ ಮನೆ

  ಬಿಲ್ ಗೇಟ್ಸ್ ಮನೆ ವಿನ್ಯಾಸಕ್ಕಾಗಿ ಅವರದ್ದೇ ಆದ ವಿಂಡೋಸ್ ಕಂಪ್ಯೂಟರ್ ಬಳಸದೇ, ಮ್ಯಾಕಿಂತೋಶ್ ಕಂಪ್ಯೂಟರ್ ಬಳಸಿರುವುದು ವಿಚಿತ್ರವೇ ಸರಿ.

  5. ರೋಬೋ

  ರಜನಿಕಾಂತ ನಟನೆಯ ರೋಬೋ ಸಿನಿಮಾ ನೋಡಿದವರಿಗೆ ರೋಬೋ ಪರಿಚಯ ಚೆನ್ನಾಗಿ ಇರುತ್ತದೆ. ರೋಬೋಟ್ ಎಂಬ ಪದ ಸಿಜೆಕ್ ಭಾಷೆಯ ರೋಬೋಟಾ ಪದದಿಂದ ಬಂದಿದೆ. ರೋಬೋಟಾ ಎಂದರೆ ಒತ್ತಾಯಪೂರ್ವಕ ಕಾರ್ಮಿಕ ಅಥವಾ ಕೆಲಸ ಎಂದು ಅರ್ಥ.

  6. ಸಿಡಿ

  ಸಿಡಿ ಅಥವಾ ಕಾಂಪಾಕ್ಟ್ ಡಿಸ್ಕ್ ಗಳು ರೀಡ್ ಆಗಬೇಕೆಂದರೆ ಇನ್ ಸೈಡ್ ನಿಂದ ಔಟ್ ಸೈಡ್ ಎಡ್ಜ್ ವರೆಗೂ ಸಾಗುತ್ತದೆ. ಆದರೆ, ಅದೆ ನಾವೂ ಏನಾದರೂ ರೆಕಾರ್ಡ್ ಮಾಡಬೇಕಾದರೆ ಇದು ರೀವರ್ಸ್ ಆಗಿ ಹೋಗುತ್ತದೆ. ಅಂದರೆ ಔಟ್ ಸೈಡ್ ಎಡ್ಜ್ ನಿಂದ ನ್ ಸೈಡ್ ರೈಟ್ ಆಗುತ್ತದೆ.

  7. ಮೊದಲ ವಿಸಿಆರ್

  ಪ್ರಪಂಚದ ಫರ್ಸ್ಟ್ ವಿಸಿಆರ್ ಬಂದಿದ್ದು1956ರಲ್ಲಿ, ಮೊದಲ ವಿಸಿಆರ್ ಗಾತ್ರ ಪಿಯಾನೋದಷ್ಟು ಇತ್ತು ಎಂದರೇ ನಂಬಲೇ ಬೇಕು.

  8. ಟೈಪಿಸ್ಟ್ ಫಿಂಗರ್ಸ್

  ಸಾಮಾನ್ಯವಾದ ಕೆಲಸದ ದಿನ ಒಬ್ಬ ಬೆರಳಚ್ಚುದಾರರ ಗುರುಗಳು 12.6 ಮೈಲು ದೂರವನ್ನು ಕ್ರಮಿಸುತ್ತವಂತೆ.

  9. ಅಲಾರಾಂ ಗಡಿಯಾರ

  ವಿಶ್ವದ ಮೊದಲ ಅಲಾರಾಂ ಗಡಿಯಾರ ಕೇವಲ ಬೆಳಿಗ್ಗೆ 4 ಗಂಟೆಗೆ ಮಾತ್ರ ಅಲಾರಾಂ ಬಾರಿಸುತ್ತಿತ್ತು.

  10. ಕಂಪ್ಯೂಟರ್ ಭದ್ರತಾ ದಿನ

  ಯಾರಿಗ್ ಗೊತ್ತಿದಿಯೋ ಗೊತ್ತಿಲ್ವೋ ಕಂಪ್ಯೂಟರ್ ಸೆಕ್ಯೂರಿಟಿ ಡೇ ಅಂತಾನೂ ಒಂದು ದಿನ ಇದೆ. ನವೆಂಬರ್ 30ನ್ನು ಕಂಪ್ಯೂಟರ್ ಸೆಕ್ಯೂರಿಟಿ ಡೇ ಎಂದು ವಿಶ್ವದೆಲ್ಲೇಡೆ ಆಚರಿಸುತ್ತಾರೆ.

  11. ಏಪ್ರೀಲ್ 1, 2005

  ಈ ದಿನ ವಿಶೇಷವಾಗಿದೆ. ನಾಸಾ ಮಾರ್ಸ್ ನಲ್ಲಿ ನೀರಿನ ಲಭ್ಯತೆಯನ್ನು ಕಂಡು ಹಿಡಿದಿದೆ ಎಂದು ಏಪ್ರೀಲ್ 1, 2005ರಂದು ಘೋಷಿಸಿತು. ಆದರೆ, ಯಾರು ನಂಬಲೇ ಇಲ್ಲ. ಏಕೆಂದರೆ, ಏಪ್ರೀಲ್ 1ರ ದಿನದ ಮಹಿಮೆ.

  12. ರೇಡಿಯೋ

  ಭಾರತದಂತಹ ದೊಡ್ಡ ದೇಶದಲ್ಲಿ ಶೇ.95ಕ್ಕೂ ಹೆಚ್ಚು ಭೂಭಾಗದಲ್ಲಿ ಪ್ರಸಾರ ಸೇವೆ ಹೊಂದಿರುವ ರೇಡಿಯೋ ಮೊದಲ 50 ಮಿಲಿಯನ್ ಕೇಳುಗರನ್ನು ತಲುಪಲು ತೆಗೆದುಕೊಂಡ ಅವಧಿ ಬರೋಬ್ಬರಿ 38 ವರ್ಷ.

  13. ಟೆಲಿವಿಷನ್

  20ನೇ ಶತಮಾನದ ಟೆಕ್ನಾಲಜಿ ವಂಡರ್ ಎಂದು ಕರೆಸಿಕೊಳ್ಳುವ ಟೆಲಿವಿಷನ್ 50 ಮಿಲಿಯನ್ ವೀಕ್ಷಕರನ್ನು ತಲುಪಲು 13 ವರ್ಷ ತೆಗೆದುಕೊಂಡಿತು.

  14. ಐಪಾಡ್

  ಆಪಲ್ ಸಂಸ್ಥೆಯ ಐಪಾಡ್ 50 ಮಿಲಿಯನ್ ಆಡಿಯನ್ಸ್ ತಲುಪಲು ತೆಗೆದುಕೊಂಡಿದ್ದು 3 ವರ್ಷವಷ್ಟೇ.

  15. 8 ಗಂಟೆ ಮತ್ತು ಕ್ಯಾಮೆರಾ

  ಈಗಂತೂ ಕ್ಷಣಕ್ಕೊಂದು ಪೋಟೋ ತೆಗೆದು ಕೆಲವೇ ನಿಮಿಷಗಳಲ್ಲಿ ಅದನ್ನು ಹಾರ್ಡ್ ಕಾಪಿಯಾಗಿಯೂ ಪಡೆಯಬಹುದು. ಆದರೆ, ವಿಶ್ವದ ಮೊದಲ ಕ್ಯಾಮೆರಾದಲ್ಲಿ ಪೋಟೋ ಕ್ಲಿಕ್ಕಿಸುವುದಕ್ಕೆ ಬರೋಬ್ಬರಿ 8 ಗಂಟೆ ನೀವು ಕ್ಯಾಮೆರಾಕ್ಕೆ ಪೋಸ್ ಕೊಡಬೇಕಾಗಿತ್ತು.

  16. ಚೀನಾದಲ್ಲಿ ಸ್ಕೈಪ್ ಇಲ್ಲ

  ಚೀನಾ ಸರ್ಕಾರ ಅಲ್ಲಿನ ಸಾರ್ವಜನಿಕರಿಗೆ ಸ್ಕೈಪ್ ವಿಡಿಯೋ ಚಾಟಿಂಗ್ ಸಾಫ್ಟ್ ವೇರ್ ಬಳಸದಂತೆ ನಿಷೇಧ ಮಾಡಿದೆ.

  17. ಆಪಲ್ 2

  ಈಗಂತೂ ಟಿಬಿ ಲೆಕ್ಕದಲ್ಲಿ ಕಂಪ್ಯೂಟರ್ ಹಾರ್ಡ್ ಡ್ರೈವ ಸಿಗುತ್ತದೆ. ಆದರೆ, ಆಪಲ್ 2 ಬಿಡುಗಡೆಗೊಂಡಾಗ ಅದರ ಹಾರ್ಡ್ ಡ್ರೈವ್ ಕೇವಲ 5 ಎಂಬಿ ಇತ್ತು ಎಂದರೆ ನಂಬಲೆಬೇಕು.

  18. ನಿಧಾನಗತಿಯ ಓದು

  ಸಾಮಾನ್ಯವಾಗಿ ಜನ ಪತ್ರಿಕೆಗಿಂತ ಸ್ಕ್ರೀನ್ ಮೇಲೆ ಶೇ.10 ರಷ್ಟು ನಿಧಾನವಾಗಿ ಓದುತ್ತಾರೆ.

  19. ಉಬುಂಟು

  ಲಿನಕ್ಸ್ ನ ಪ್ರಸಿದ್ಧ ಒಎಸ್ ಆಗಿರುವ ಉಬುಂಟು ಪದ ಬಂದಿದ್ದು ಆಫ್ರಿಕಾದಿಂದ. ಉಬುಂಟು ಎಂದರೆ ಆಫ್ರಿಕಾದಲ್ಲಿ ಐ ಆಮ್ ಬಿಕಾಸ್ ಆಫ್ ಯು ಎಂದು ಅರ್ಥವಂತೆ.

  20. ಮೌಸ್

  1964ರಲ್ಲಿ ಡಂಗ್ ಎಂಗಲ್ ಬರ್ಟ್ ಎಂಬಾತ ಮೊದಲ ಕಂಪ್ಯೂಟರ್ ಮೌಸ್ ಅನ್ನು ಕಟ್ಟಿಗೆಯಲ್ಲಿ ತಯಾರಿಸಿದ್ದ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Top 20 Technology Facts you don’t know. to know more this visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more