ಗೂಗಲ್ ಎಂಬ ಸ್ವಾರಸ್ಯಕರ ಹುಡುಕಾಟ..! ನಿಮಗೆ ಗೊತ್ತಿಲ್ಲ ಹಲವು ಅಂಶಗಳು..!

By Avinash
|

ನಮ್ಮ ಹುಡುಕಾಟದಲ್ಲಿ ಯಾವಾಗಲೂ ಜೊತೆಯಲ್ಲಿರುವ ಆಪ್ತ ಎಂದರೆ ಅದು ಗೂಗಲ್. ಮಾಹಿತಿ ತಂತ್ರಜ್ಞಾನ ಹಾಗೂ ಸರ್ಚ್ ಇಂಜಿನ್ ದೈತ್ಯ ಗೂಗಲ್ ಗೊತ್ತಿಲ್ಲದವರೂ ಯಾರು ಇಲ್ಲ. ಆನ್‌ಲೈನ್ ಲೋಕದಲ್ಲಿ ಗೂಗಲ್ ಹೆಸರು ಕೇಳದವರೆ ಇಲ್ಲ ಎನ್ನಬಹುದು.

ಗೂಗಲ್ ಎಂಬ ಸ್ವಾರಸ್ಯಕರ ಹುಡುಕಾಟ..! ನಿಮಗೆ ಗೊತ್ತಿಲ್ಲ ಹಲವು ಅಂಶಗಳು..!

ಒಂದು ಸಣ್ಣ ಕಂಪನಿಯಾಗಿ ಪ್ರಾರಂಬವಾಗಿದ್ದ ಗೂಗಲ್ ಇಂದು ಸರ್ಚ್ ಇಂಜಿನ್ ದೈತ್ಯನಾಗಿರುವುದು ನಿಮಗೆ ಗೊತ್ತೆ ಇದೆ. ಸರ್ಚ್ ಇಂಜಿನ್ ಅಲ್ಲದೇ ಸ್ಮಾರ್ಟ್‌ಪೋನ್, ಆಪ್ಸ್, ವಿಡಿಯೋ ಹೀಗೆ ಎಲ್ಲ ಕ್ಷೇತ್ರದಲ್ಲೂ ತನ್ನ ಸಾಧನೆಯನ್ನು ತೋರಿಸಿರುವ ಗೂಗಲ್ ಬಗೆಗಿನ ಅನೇಕ ವಿಚಿತ್ರ ಅಂಶಗಳು ನಮಗೆ ಗೊತ್ತೆ ಇಲ್ಲ. ಆ ಅಂಶಗಳು ಯಾವುವು ಎಂಬ ಕುತೂಹಲವಿದ್ದರೆ ಮುಂದೆ ಓದಿ.

1. ಹೆಸರಲ್ಲಿಯೇ ಇದೆ ಸ್ವಾರಸ್ಯ

1. ಹೆಸರಲ್ಲಿಯೇ ಇದೆ ಸ್ವಾರಸ್ಯ

ಗೂಗಲ್ ತನ್ನ ಹೆಸರಲ್ಲಿಯೇ ಒಂದು ಸ್ವಾರಸ್ಯಕರ ಅಂಶವನ್ನು ಒಳಗೊಂಡಿದೆ. ಗೂಗಲ್ ಎಂಬ ಹೆಸರು ಗಣಿತದ ಒಂದು ವಿಧವಾದ ಗೂಗೊಲ್‌ನಿಂದ ಬಂದಿದೆ. ಗೂಗೊಲ್ ಎಂದರೆ 1ರ ಜೊತೆ 100 ಸೊನ್ನೆಗಳು ಇವೆ ಎಂದು ಅರ್ಥ.

2. ನಿಜವಾದ ಹೆಸರು ಬ್ಯಾಕ್‌ರಬ್

2. ನಿಜವಾದ ಹೆಸರು ಬ್ಯಾಕ್‌ರಬ್

ಗೂಗಲ್‌ ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸರ್ಜಿ ಬ್ರಿನ್ ಗೂಗಲ್‌ಗೆ ಮೊದಲು ಬ್ಯಾಕ್‌ರಬ್ ಎಂದು ಹೆಸರಿಟ್ಟಿದ್ದರು.

3. ಕುರಿಗಳು ಮತ್ತು ಗೂಗಲ್

3. ಕುರಿಗಳು ಮತ್ತು ಗೂಗಲ್

ಗೂಗಲ್ ತನ್ನ ಕೇಂದ್ರ ಕಚೇರಿ ಮೌಂಟೇನ್‌ ವೀವ್‌ನ ಲಾನ್‌ನಲ್ಲಿ ಬೆಳೆದ ಹಸಿರು ಹುಲ್ಲನ್ನು ಕತ್ತರಿಸದೆ, ಕುರಿಗಳಿಗೆ ಮೇಯಿಸುವುದು ಗೂಗಲ್‌ನ ಪರಿಸರ ಸಂಬಂಧಿತ ಕಾರ್ಯವಾಗಿತ್ತು.

4. ಐ ಆಮ್ ಫೀಲಿಂಗ್ ಲಕ್ಕಿ

4. ಐ ಆಮ್ ಫೀಲಿಂಗ್ ಲಕ್ಕಿ

ಈ ರೀತಿ ನಾವೂ ಯಾವಾಗಲೂ ಹೇಳಿಕೊಳ್ಳುವಂಗೆ ಮಾಡಿದ್ದು ಗೂಗಲ್. ತನ್ನ ಸರ್ಚ್ ಇಂಜಿನ್ ಹೋಮ್ ಪೇಜ್‌ನಲ್ಲಿ ಐ ಆಮ್ ಫೀಲಿಂಗ್ ಲಕ್ಕಿ ಬಟನ್ ನೀಡಿದೆ.

5. ವಾರಕ್ಕೊಂದು ಕಂಪನಿ ತೆಕ್ಕೆಗೆ

5. ವಾರಕ್ಕೊಂದು ಕಂಪನಿ ತೆಕ್ಕೆಗೆ

2010ರಿಂದಿಚೆಗೆ ಗೂಗಲ್ ಬಹಳ ದೊಡ್ಡದಾಗಿ ಬೆಳೆಯುತ್ತಿದ್ದು, ಅಂದಾಜಿನ ಪ್ರಕಾರ ವಾರಕ್ಕೊಂದು ಕಂಪನಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಿದೆ. ಆಂಡ್ರಾಯ್ಡ್‌, ಯುಟ್ಯೂಬ್, ವೇಜ್ ಮುಂತಾದ ಕಂಪನಿಗಳನ್ನು ಖರೀದಿ ಮಾಡಿರುವುದೇ ಇದಕ್ಕೆ ಸಾಕ್ಷಿ.

6. ಮೊದಲ ಡೂಡಲ್ ಬರ್ನಿಂಗ್ ಮ್ಯಾನ್

6. ಮೊದಲ ಡೂಡಲ್ ಬರ್ನಿಂಗ್ ಮ್ಯಾನ್

ಗೂಗಲ್ ವಿಶೇಷ ದಿನಗಳಿಗೆ ಡೂಡಲ್ ಮಾಡುವುದು ಎಲ್ಲರಿಗೂ ಗೊತ್ತೆ ಇದೆ. ಅದರಂತೆ ಮೊದಲ ಡೂಡಲ್ ಬಂದಿದ್ದು ಆಗಸ್ಟ್ 30, 1998ರಲ್ಲಿ. ಬರ್ನಿಂಗ್ ಮ್ಯಾನ್ ಸ್ಟಿಕ್‌ ಹೊಂದಿರುವ ಗೂಗಲ್ ಚಿಹ್ನೆ ಮೊದಲ ಡೂಡಲ್ ಆಗಿತ್ತು.

7. ನಾಸಾದಲ್ಲಿತ್ತು ರನ್ ವೇ

7. ನಾಸಾದಲ್ಲಿತ್ತು ರನ್ ವೇ

ಗೂಗಲ್ ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸರ್ಜಿ ಬ್ರಿನ್ ಅವರ ಖಾಸಗಿ ಜೆಟ್‌ಗೆ ನಾಸಾದಲ್ಲಿ ರನ್ ವೇ ಸೌಲಭ್ಯ ಕಲ್ಪಿಸಲಾಗಿತ್ತು. ಈ ಸೌಲಭ್ಯ ಬೇರೆ ಯಾವ ಖಾಸಗಿ ವಿಮಾನಗಳಿಗೂ ಲಭ್ಯವಿಲ್ಲ ಎನ್ನುವುದು ಗಮನಕ್ಕೆ.

8. ಇನ್ನು 3 ಗೂಗಲ್ ಡೋಮೆನ್ ಇವೆ

8. ಇನ್ನು 3 ಗೂಗಲ್ ಡೋಮೆನ್ ಇವೆ

ಗೂಗಲ್ ತನ್ನ ಬಳಕೆದಾರರಿಗೆ ತೊಂದರೆಯಾಗಬಾರದೆಂದು ಗೂಗಲ್‌ನಂತೆ ಇರುವ www.gooogle.com, www.gogle.com ಮತ್ತು www.googlr.com ಎನ್ನುವ ಡೋಮೈನ್‌ಗಳನ್ನು ತನ್ನಲ್ಲೇ ಉಳಿಸಿಕೊಂಡಿದೆ.

9. ಮಾರಾಟದ ಯೋಚನೆ ಬಂದಿತ್ತು

9. ಮಾರಾಟದ ಯೋಚನೆ ಬಂದಿತ್ತು

1999ರಲ್ಲಿ ಗೂಗಲ್ ತನ್ನನ್ನು ತಾನ ಮಾರಾಟಕ್ಕೆ ಯತ್ನಿಸಿತ್ತು. 1 ಮಿಲಿಯನ್ ಡಾಲರ್‌ಗೆ Excite ಕಂಪನಿಗೆ ಮಾರಿಕೊಳ್ಳಲು ಪ್ರಯತ್ನಿಸಿತ್ತು. ಆದರೆ Excite ಸಿಇಒ ಈ ಆಫರ್ ನಿರಾಕರಿಸಿದ್ದರು.

10. ಕೆಲಸಕ್ಕೆ ತೆಗೆದುಕೊಳ್ಳಲು ಸಾಫ್ಟ್‌ವೇರ್

10. ಕೆಲಸಕ್ಕೆ ತೆಗೆದುಕೊಳ್ಳಲು ಸಾಫ್ಟ್‌ವೇರ್

ಗೂಗಲ್ ತನ್ನ ಕಂಪನಿಗೆ ಕೆಲಸಕ್ಕೆ ತೆಗೆದುಕೊಳ್ಳಲು foo.bar ಎಂಬ ಟೂಲ್ ಅಭಿವೃದ್ಧಿ ಪಡಿಸಿದ್ದು, ಪೈಥಾನ್ ಪ್ರೋಗ್ರಾಮಿಂಗ್ ಮೂಲಕ ತಯಾರಿಸಲಾಗಿದೆ. ಇಲ್ಲಿ ಕೆಲಸದ ಆಕಾಂಕ್ಷಿಗಳು ಯಾವುದನ್ನು ಆನ್‌ಲೈನ್‌ನಲ್ಲಿ ಸರ್ಚ್ ಮಾಡಿರುತ್ತಾರೆ, ಅದರ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುತ್ತದೆ.

Best Mobiles in India

English summary
10 Fascinating Facts About Google Most People Don’t Know. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X