ಈ 15 ವೆಬ್‌ಸೈಟ್‌ಗಳಿಂದ ನಿಮಗೆ ಜಾಸ್ತಿನೇ ಉಪಯೋಗ..!

By Avinash
|

ಆಧುನಿಕ ಯುಗದಲ್ಲಿ ಮನುಷ್ಯ ದಿನದಿಂದ ದಿನಕ್ಕೆ ಬದಲಾಗುತ್ತಿದ್ದಾನೆ. ಡಿಜಿಟಲ್‌ ಯುಗವಂತೂ ಕ್ಷಣಕ್ಕೊಂದು ಬಾರಿ ಬದಲಾಗುತ್ತಿದೆ. ಸ್ನೇಲ್‌ ಮೇಲ್‌ ಸ್ಥಳವನ್ನು ಇಮೇಲ್ ಆಕ್ರಮಿಸಿಕೊಂಡಿದ್ದಾಯಿತು. ಸಿಟಿಜನ್‌ಗಳು ನೆಟಿಜನ್ಸ್‌ ಆಗಿದ್ದೂ ಆಯ್ತು, ಎಲ್ಲವೂ ಸಾಮಾಜಿಕ ಜಾಲತಾಣದಲ್ಲಿ ಶೇಖರಿಸಲ್ಪಡುತ್ತಿದೆ. ಇಂಟರ್‌ನೆಟ್‌ ರಹಿತ ಜಗತ್ತನ್ನು ಊಹಿಸಲು ಅಸಾಧ್ಯ.
ಎಲ್ಲರೂ ದಿನದ ಬಹಳಷ್ಟು ಸಮಯವನ್ನು ಇಂಟರ್‌ನೆಟ್‌ನಲ್ಲಿ ಬ್ರೌಸ್‌ ಮಾಡುತ್ತಾ ಕಾಲ ಕಳೆಯುತ್ತಿವೆ. ಅನೇಕ ವೆಬ್‌ಸೈಟ್‌ಗಳನ್ನು ಔದ್ಯೋಗಿಕ ಅಥವಾ ವೈಯಕ್ತಿಕ ಕಾರಣಗಳಿಗಾಗಿ ಬಳಸುತ್ತೇವೆ. ಇಂಟರ್‌ನೆಟ್ ಅನೇಕ ರಹಸ್ಯಗಳನ್ನು ಹೊಂದಿರುವುದಂತು ನಿಜ. ಒಂದಿಷ್ಟು ವೆಬ್‌ಸೈಟ್‌ಗಳು ಎಷ್ಟು ಉಪಯುಕ್ತ ಎಂದರೆ ಅಷ್ಟು ಉಪಯುಕ್ತವಾಗುತ್ತವೆ.

ಈ 15 ವೆಬ್‌ಸೈಟ್‌ಗಳಿಂದ ನಿಮಗೆ ಜಾಸ್ತಿನೇ ಉಪಯೋಗ..!

ಕೆಲವು ವೆಬ್‌ಸೈಟ್‌ಗಳು ನಿಮಗೆ ಬಹಳಷ್ಟು ಹೊಸ ವಿಷಯಗಳನ್ನು ಕಲಿಸಿಕೊಡುತ್ತವೆ. ಒಂದಿಷ್ಟು ಇಂಗ್ಲಿಷ್ ಜ್ಞಾನವಿದ್ದರೆ ನೀವು ಆ ವೆಬ್‌ಸೈಟ್‌ಗಳಿಂದ ಬಹಳಷ್ಟು ಕಲಿಯಬಹುದು, ತಿಳಿದುಕೊಳ್ಳಬಹುದು. ಅಂತಹ 15 ಉಪಯುಕ್ತ ವೆಬ್‌ಸೈಟ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಒಂದ್ಸಲ ನೋಡಿ ನಿಮಗೂ ಯಾವಾಗಲಾದರೂ ಉಪಯೋಗಕ್ಕೆ ಬರುತ್ತವೆ.

1. ಇನ್‌ಸ್ಟ್ರಕ್ಟೆಬಲ್ಸ್‌ (Instructables)

1. ಇನ್‌ಸ್ಟ್ರಕ್ಟೆಬಲ್ಸ್‌ (Instructables)

ವೆಬ್‌ಸೈಟ್‌ನ ಅಬೌಟ್‌ ಅಸ್‌ ಪೇಜ್‌ನಲ್ಲಿ ಹೇಳುವಂತೆ ಅಡುಗೆ ಮಾಡುವುದರಿಂದ 3D ಪ್ರಿಂಟಿಂಗ್‌ವರೆಗೂ ಇಲ್ಲಿ ಸಲಹೆಗಳು ದೊರೆಯುತ್ತವೆ. ಲೆಕ್ಕವಿಲ್ಲದಷ್ಟು ಗಂಟೆಗಳನ್ನು ಇಲ್ಲಿ ಕಲಿಕೆಗಾಗಿ ವಿನಿಯೋಗಿಸಬಹುದು. ಬೆಸುಗೆ ಹಾಕುವುದು, ಹೊಲಿಗೆಯಂತಹ ಅನೇಕ ಕೌಶಲಗಳನ್ನು ಇಲ್ಲಿ ಮನರಂಜನೆಯೊಂಸಿಗೆ ಕಲಿಯಬಹುದು. ನೀವೇ ಫಿಜ್ಜಾ ಮಾಡುವುದು ಅಥವಾ ನಿಮ್ಮದೇ ಬ್ಲೂಟೂಥ್ ಸ್ಪೀಕರ್‌ ತಯಾರಿಸುವುದು ಎಲ್ಲಾ ನಿಮಗೆ ಈ ವೆಬ್‌ಸೈಟ್‌ನಲ್ಲಿ ಸಿಗುತ್ತದೆ.

2. ಡಿಕ್ಟೆಷನ್ (Dictation)

2. ಡಿಕ್ಟೆಷನ್ (Dictation)

ಹೆಸರೇ ಹೇಳುವಂತೆ dictation.io ನೀವು ನಿಮ್ಮ ಡಾಕ್ಯುಮೆಂಟ್ ಓದಿ ಹೇಳಿದರೆ ವೆಬ್‌ಸೈಟ್‌ ಟೈಪ್‌ ಮಾಡಿಕೊಡುತ್ತದೆ. ನೂರಕ್ಕೂ ಹೆಚ್ಚು ಭಾಷೆಗಳು ಅಳವಡಿಕೆಯಾಗಿವೆ. ಗೂಗಲ್‌ ಸ್ಪೀಚ್‌ ರೇಕಾಗ್ನೈಷನ್ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ಕನ್ನಡ ಭಾಷೆಯಲ್ಲಿಯೂ ಸಹ ಆಯ್ಕೆ ಲಭ್ಯವಿದ್ದು, ಯುನಿಕೋಡ್‌ನಲ್ಲಿ ಟೈಪ್‌ ಮಾಡಬಹುದಾಗಿದೆ.

3. ಪ್ರತಿ ಟೈಮ್‌ ಜೋನ್‌ (Every Time Zone)

3. ಪ್ರತಿ ಟೈಮ್‌ ಜೋನ್‌ (Every Time Zone)

ಈ ವೆಬ್‌ಸೈಟ್‌ನಲ್ಲಿ ನೀವು ಸಮಯವನ್ನು ನಮೂದಿಸಿದರೆ ಸಾಕು ಯಾವ ಟೈಮ್‌ ಜೋನ್‌ನಲ್ಲಿ ಎಷ್ಟು ಗಂಟೆ ಸಮಯವೆಂದು ಹೇಳುತ್ತದೆ. ನಿಮಗೆ ಸಮಯವನ್ನು ಲೆಕ್ಕ ಹಾಕಲು ಇದು ಗೂಗಲ್‌ಗಿಂತಲೂ ಉತ್ತಮವಾಗಿ ಸಹಾಯ ಮಾಡುತ್ತದೆ.

4. ಸ್ಪ್ರೀಡರ್ (Spreeder)

4. ಸ್ಪ್ರೀಡರ್ (Spreeder)

ನಿಮಗೆ ವೇಗವಾಗಿ ಇಂಗ್ಲಿಷ್ ಓದಲು ಕಷ್ಟವಾಗುತ್ತಿದೆಯೇ. ಅದಕ್ಕಾಗಿಯೇ ನಿಮಗೆ ಸಹಾಯ ಮಾಡಲು ಸ್ಪ್ರೀಡರ್ ಎಂಬ ವೆಬ್‌ಸೈಟ್‌ ಇದ್ದು, ನಿಮ್ಮ ಓದುವ ವೇಗವನ್ನು 3 ಪಟ್ಟು ಹೆಚ್ಚಿಸುತ್ತದೆ. ಇದರಿಂದ ನಿಮಗೆ ಅವಕಾಶಗಳು ಹೆಚ್ಚುತ್ತವೆ.

5. ಅಕೌಂಟ್‌ ಕಿಲ್ಲರ್ (Account Killer)

5. ಅಕೌಂಟ್‌ ಕಿಲ್ಲರ್ (Account Killer)

ನೀವು ನಿಮ್ಮ ಆನ್‌ಲೈನ್‌ ಅಕೌಂಟ್‌ಗಳನ್ನು ಡಿಲೀಟ್‌ ಮಾಡುವ ಯೋಚನೆ ಮಾಡುತ್ತಿದ್ದೀರಾ..? ಹಾಗಾದ್ರೇ, ನೆಟ್‌ಫ್ಲಿಕ್ಸ್‌, ಫೇಸ್‌ಬುಕ್‌ನಂತಹ ಆನ್‌ಲೈನ್‌ ಅಕೌಂಟ್‌ಗಳನ್ನು ಇಲ್ಲಿ ಡಿಲೀಟ್‌ ಮಾಡುವ ಅವಕಾಶವಿದೆ. ನೇರ ಲಿಂಕ್‌ಗಳಿದ್ದು, ನಿಮಗೆ ಸೂಚನೆಗಳನ್ನು ಮತ್ತು ಸಲಹೆಗಳನ್ನು ಡಿಲೀಟ್ ಮಾಡುವ ಕುರಿತು ಈ ವೆಬ್‌ಸೈಟ್‌ ನೀಡುತ್ತದೆ. ಒನ್‌ಕ್ಲಿಕ್‌ ಡಿಲೀಟ್‌ ಆಯ್ಕೆ ಕೂಡ ಲಭ್ಯವಿದೆ.

6. ಹ್ಯಾವ್‌ ಐ ಬೀನ್‌ ಪಾನಡ್‌ (Have I Been Pwned)

6. ಹ್ಯಾವ್‌ ಐ ಬೀನ್‌ ಪಾನಡ್‌ (Have I Been Pwned)

ಈ ವೆಬ್‌ಸೈಟ್‌ ನಿಮ್ಮ ಇಮೇಲ್‌ನ್ನು ಹ್ಯಾಕರ್‌ಗಳ ಟಾರ್ಗೇಟ್ ಮಾಡಿರುವ ಕುರಿತು ಮಾಹಿತಿಯನ್ನು ನೀಡುತ್ತದೆ. ಮಾಸ್‌ ಮಾಲ್‌ವೇರ್‌ನಿಂದ ನಿಮ್ಮ ಇಮೇಲ್‌ ಅಟ್ಯಾಕ್‌ ಆಗಿದ್ದರೆ, ನಿಮಗೆ ಈ ವೆಬ್‌ಸೈಟ್‌ ಎಚ್ಚರಿಕೆಯನ್ನು ನೀಡುತ್ತದೆ.

7. ಡೌನ್‌ ಫಾರ್‌ ಎವರಿಒನ್‌ ಆರ್ ಜಸ್ಟ್‌ ಮೀ (Down For everyone or JustMe)

7. ಡೌನ್‌ ಫಾರ್‌ ಎವರಿಒನ್‌ ಆರ್ ಜಸ್ಟ್‌ ಮೀ (Down For everyone or JustMe)

ನೀವು ಯಾವುದಾದರೂ ವೆಬ್‌ಸೈಟ್‌ ಬ್ರೌಸ್‌ ಮಾಡಲು ಪ್ರಯತ್ನಿಸುತ್ತಿರುವಾಗ ಸರ್ವರ್‌ ಡೌನ್‌ ಆಗಿದ್ದರೆ, ನೀವು ಈ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿಬಹುದು. ಎಲ್ಲಾ ಕಡೆಯೂ ಸರ್ವರ್ ಡೌನ್‌ ಇದೆಯಾ ಅಥವಾ ನಿಮ್ಮ ಕಂಪ್ಯೂಟರ್‌ನಲ್ಲಿ ಮಾತ್ರವೇ ಎಂಬುದನ್ನು ಈ ವೆಬ್‌ಸೈಟ್‌ ಮೂಲಕ ತಿಳಿಯಬಹುದು.

8. ಕಿಡ್ಡಲ್‌ (Kiddle)

8. ಕಿಡ್ಡಲ್‌ (Kiddle)

ಗೂಗಲ್‌ ರೀತಿ ಮಕ್ಕಳಿಗಾಗಿಯೇ ಕಿಡ್ಡಲ್‌ ಸರ್ಚ್‌ ಇಂಜಿನ್‌ ಇದ್ದು, ಮಕ್ಕಳನ್ನು ಗಮನದಲ್ಲಿಟ್ಟುಕೊಂಡೆ ಈ ಸರ್ಚ್‌ ಇಂಜಿನ್‌ ರೂಪಿಸಲಾಗಿದೆ. ಇಲ್ಲಿನ ಕಂಟೆಂಟ್‌ ಮಕ್ಕಳಿಗೆ ಹೇಳಿ ಮಾಡಿಸಿದಂತಿದೆ. ಇಮೇಜ್‌ಗಳು ಸಹ ದೊಡ್ಡದಾಗಿ ಕಾಣುತ್ತವೆ. ಅಕ್ಷರಗಳನ್ನು ಸಹ ಮಕ್ಕಳಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ.

9. ಹಾಸ್ಟೆಲ್‌ ಬುಕ್ಕರ್ಸ್‌ (Hostel Bookers)

9. ಹಾಸ್ಟೆಲ್‌ ಬುಕ್ಕರ್ಸ್‌ (Hostel Bookers)

ಇದು ಟ್ರಾವೆಲ್‌ ಮಾಡುವವರಿಗೆ ಹೇಳಿ ಮಾಡಿಸಿದಂತಹ ವೆಬ್‌ಸೈಟ್‌ ಆಗಿದೆ. ವಿಶ್ವದ ಯಾವುದೇ ನಗರದಲ್ಲಿರುವ ಹಾಸ್ಟೆಲ್‌ ರೂಂಗಳನ್ನು ಬುಕ್ ಮಾಡುವ ಅವಕಾಶವನ್ನು ಈ ವೆಬ್‌ಸೈಟ್‌ ನೀಡುತ್ತದೆ. ಅದಲ್ಲದೇ ಕೈಗೆಟಕುವ ದರದಲ್ಲಿ ನಿಮಗೆ ವಸತಿ ವ್ಯವಸ್ಥೆಯನ್ನು ಒದಗಿಸಿಕೊಡುತ್ತದೆ.

10. ಸೂಪರ್ ಲಾಗ್‌ಔಟ್‌ (Super log out)

10. ಸೂಪರ್ ಲಾಗ್‌ಔಟ್‌ (Super log out)

ನೀವು ನಿಮ್ಮ ಬ್ರೌಸರ್‌ನಲ್ಲಿ ಅನೇಕ ವೆಬ್‌ಸೈಟ್‌ಗಳನ್ನು ಒಪನ್ ಮಾಡಿ, ಅನೇಕ ಅಕೌಂಟ್‌ಗಳಲ್ಲಿ ಲಾಗಿನ್ ಆಗಿರುತ್ತಿರಿ. ಒಂದೊಂದೇ ವೆಬ್‌ಸೈಟ್‌ ಒಪನ್‌ ಮಾಡಿ ಲಾಗ್‌ಔಟ್‌ ಆಗುವ ಬದಲು ಸೂಪರ್ ಲಾಗ್‌ಔಟ್‌ ವೆಬ್‌ ಒಪನ್‌ ಮಾಡಿ, ಒಂದೇ ಬಾರಿಗೆ ಎಲ್ಲಾ ಅಕೌಂಟ್‌ನಿಂದಲೂ ಲಾಗ್‌ಔಟ್‌ ಆಗಿ. ಈ ವೆಬ್‌ಸೈಟ್‌ ಸಾರ್ವಜನಿಕ ಕಂಪ್ಯೂಟರ್ ಬಳಸುವಾಗ ಬಹಳಷ್ಟು ಉಪಯುಕ್ತವಾಗುತ್ತದೆ.

11. ನೇಮ್‌ಚೆಕ್‌ (Namechk)

11. ನೇಮ್‌ಚೆಕ್‌ (Namechk)

ಯಾವುದಾದರೂ ವೆಬ್‌ಸೈಟ್‌ನಲ್ಲಿ ಅಕೌಂಟ್‌ ಸೃಷ್ಟಿಸಲು ಯುಸರ್‌ನೇಮ್‌ ಬೇಕಾಗಿರುತ್ತದೆ. ನಿಮಗೆ ಬೇಕಿರುವ ಯೂಸರ್‌ನೇಮ್‌ ಲಭ್ಯವಿದೆಯಾ ಎಂಬುದನ್ನು ನೇಮ್‌ಚೆಕ್‌ನಲ್ಲಿ ಪರಿಶೀಲಿಸಬಹುದು. ಅದಲ್ಲದೇ ವೆಬ್‌ಸೈಟ್‌ ಡೋಮೈನ್‌ ನೇಮ್‌ಗಳನ್ನು ಪರಿಶೀಲಿಸಬಹುದು.

12. ಸೇವೆಯ ಷರತ್ತುಗಳು: ಡಿಡ್‌ನಾಟ್‌ ರೀಡ್‌ (Terms Of service: Didn't Read)

12. ಸೇವೆಯ ಷರತ್ತುಗಳು: ಡಿಡ್‌ನಾಟ್‌ ರೀಡ್‌ (Terms Of service: Didn't Read)

ಯಾವುದೇ ವೆಬ್‌ಸೈಟ್‌ಗಳಿಗೆ ಸೈನ್‌ಅಪ್ ಆಗುವ ಮುಂಚೆ ಷರತ್ತುಗಳು ಬರುತ್ತವೆ. ಆದರೆ, ಯಾರು ಆ ಷರತ್ತುಗಳನ್ನು ಓದುವ ಗೋಜಿಗೆ ಹೋಗುವುದಿಲ್ಲ. ಆದ್ದರಿಂದ ನೀವು ಈ ವೆಬ್‌ಸೈಟ್‌ನಲ್ಲಿ ಷರತ್ತುಗಳನ್ನು ಸಾರಾಂಶ ರೂಪದಲ್ಲಿ ನೀಡುತ್ತದೆ. ಇದರಲ್ಲಿ ಉತ್ತಮ ಮತ್ತು ಕೆಟ್ಟ ಅಂಶಗಳನ್ನು ನಿಮಗೆ ನೀಡುತ್ತದೆ. ಆದ್ದರಿಂದ ಯಾವುದೇ ಅಕೌಂಟ್‌ಗೂ ಸೈನ್‌ಅಪ್‌ ಆಗುವ ಮೊದಲು ಈ ವೆಬ್‌ಸೈಟ್‌ಗೆ ಭೇಟಿ ನೀಡುವುದು ಉತ್ತಮ.

13.  ಮೈ ಫ್ರೀಡ್ಜ್‌ ಫುಡ್‌ (My Fridge Food)

13. ಮೈ ಫ್ರೀಡ್ಜ್‌ ಫುಡ್‌ (My Fridge Food)

ನಿಮ್ಮ ಫ್ರಿಡ್ಜ್‌ನಲ್ಲಿ ಅಥವಾ ಮನೆಯಲ್ಲಿ ಏನೆಲ್ಲಾ ಸಾಮಗ್ರಿ ಇವೇ ಎಂಬುದನ್ನು ಈ ವೆಬ್‌ಸೈಟ್‌ಗೆ ಅಪ್‌ಡೇಟ್‌ ಮಾಡಿ. ನಂತರ ಅದು ಲಭ್ಯವಿರುವ ಸಾಮಗ್ರಿಗಳಲ್ಲಿ ಅಡುಗೆ ಮಾಡುವುದನ್ನು ಹೇಳಿಕೊಡುತ್ತದೆ.

14. ಸ್ಕೈ ಸ್ಕ್ಯಾನರ್ (Sky Scanner)

14. ಸ್ಕೈ ಸ್ಕ್ಯಾನರ್ (Sky Scanner)

ಇದು ಜನಪ್ರಿಯ ವೆಬ್‌ಸೈಟ್‌ ಆಗಿದ್ದು, ಸ್ಕೈ ಸ್ಕ್ಯಾನರ್ ನಿಮಗೆ ಅತಿ ಅಗ್ಗದ ದರದಲ್ಲಿ ವಿಮಾನ ಸೇವೆಗಳನ್ನು ಹುಡುಕಿ ಕೊಡುತ್ತದೆ. ಟ್ರಾವೆಲರ್ ಅಥವಾ ಪ್ರವಾಸಿಗರಿಗೆ ಉತ್ತಮ ಆಯ್ಕೆ.

15. ಪ್ರೋಜೆಕ್ಟ್ ಗುಟೇನ್‌ಬರ್ಗ್‌ (Project Gutenberg)

15. ಪ್ರೋಜೆಕ್ಟ್ ಗುಟೇನ್‌ಬರ್ಗ್‌ (Project Gutenberg)

ಮುದ್ರಣ ಯಂತ್ರ ಕಂಡು ಹಿಡಿದವರು ಯಾರು ಎಂದು ಎಲ್ಲರಿಗೂ ಗೊತ್ತು. ಪ್ರೊಜೆಕ್ಟ್‌ ಗುಟೆನ್‌ ಬರ್ಗ್‌ ವೆಬ್‌ಸೈಟ್‌ನಲ್ಲಿ ಅಸಂಖ್ಯಾತ ಉಚಿತ ಇ-ಬುಕ್‌ಗಳನ್ನು ಡೌನ್‌ಲೋಡ್‌ ಮಾಡಬಹುದು ಅಥವಾ ಓದಬಹುದಾಗಿದ್ದು, ಉಪಯುಕ್ತ ವೆಬ್‌ಸೈಟ್‌ ಆಗಿದೆ.

Best Mobiles in India

English summary
15 websites on Internet you must visit. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X