ಬೆಂಗಳೂರು ಹ್ಯಾಕರ್‌ನಿಂದ ಫೇಸ್‌ಬುಕ್‌ ದೋಷ ಪತ್ತೆ: 10 ಲಕ್ಷ ಬಹುಮಾನ

By Suneel
|

ಆನ್‌ಲೈನ್‌ ಬಳಕೆದಾರರೆಲ್ಲಾ ಪ್ರಸ್ತುತ ದಿನಗಳಲ್ಲಿ ಎಚ್ಚರ ವಹಿಸಲೇ ಬೇಕಾದ ಪರಿಸ್ಥಿತಿ ಬಂದಿದೆ. ಕಾರಣ ಕೆಲವೊಮ್ಮೆ ಎಲ್ಲರೂ ಬಳಕೆ ಮಾಡುವ ಸಾಮಾಜಿಕ ಜಾಲತಾಣಗಳ ದೋಷದಿಂದಲೇ ತಮ್ಮ ಖಾತೆಗಳ ವೈಯಕ್ತಿಕ ಮಾಹಿತಿಯನ್ನು ಇತರರು ಅಥವಾ ಹ್ಯಾಕರ್‌ಗಳು ದುರುಪಯೋಗ ಪಡಿಸಿಕೊಳ್ಳುವ ಸಂದರ್ಭಗಳು ದೂರವೇನಿಲ್ಲ. ಹಾಗೆ ನಿಮ್ಮ ಬ್ಯಾಂಕ್‌ ಖಾತೆಗಳ ಮಾಹಿತಿಯಂತು ಸರಾಗವಾಗಿ ಅವರ ನಿಯಂತ್ರಣಕ್ಕೆ ಬರುತ್ತವೆ.

ಅಂದಹಾಗೆ ಈ ಮಾಹಿತಿ ಹೇಳಲು ಕಾರಣ ಏನು ಅಂದ್ರೆ ಇತ್ತೀಚೆಗೆ ಬೆಂಗಳೂರಿನ ಆನಂದ್‌ ಪ್ರಕಾಶ್‌ ಎಂಬುವವರು ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್‌ನ ಲಾಗಿನ್‌ ದೋಷವನ್ನು ಪತ್ತೆ ಹಚ್ಚಿ ವರದಿ ಮಾಡಿ ನೀಡಿದ್ದಕ್ಕೆ 10 ಲಕ್ಷ ಬಹುಮಾನ ಸ್ವೀಕರಿಸಿದ್ದಾರೆ. ಅಲ್ಲದೇ ಇಂತಹ ಹಲವು ಸಮಾಜಿಕ ಜಾಲತಾಣ ದೋಷಗಳನ್ನು ಪತ್ತೆ ಹಚ್ಚಿ ಇವರು 1 ಕೋಟಿ ಹಣ ಗಳಿಸಿದ್ದಾರೆ. ಹಾಗಾದರೆ ಅಂತಹ ದೋಷ ಯಾವುದು, ಅದರಿಂದ ಬಳಕೆದಾರರಿಗೆ ಆಗುವ ಸಮಸ್ಯೆಯಾದರೂ ಏನು ಎಂಬಿತ್ಯಾದಿ ಮಾಹಿತಿ ತಿಳಿಯಲು ಲೇಖನದ ಸ್ಲೈಡರ್‌ಗಳನ್ನು ಓದಿರಿ.

ಬೆಂಗಳೂರು ಹ್ಯಾಕರ್‌ಗೆ 10 ಲಕ್ಷ ಬಹುಮಾನ

ಬೆಂಗಳೂರು ಹ್ಯಾಕರ್‌ಗೆ 10 ಲಕ್ಷ ಬಹುಮಾನ

ಬೆಂಗಳೂರು ಮೂಲದ ಹ್ಯಾಕರ್‌ 'ಆನಂದ್‌ ಪ್ರಕಾಶ್‌ ಎಂಬುವವರು ಫೇಸ್‌ಬುಕ್‌ ಲಾಗಿನ್‌ ವ್ಯವಸ್ಥೆಯ ದೋಷವನ್ನು ಪತ್ತೆ ಹಚ್ಚಿ 10 ಲಕ್ಷ ಬಹುಮಾನ ಪಡೆದಿದ್ದಾರೆ.

ಫೇಸ್‌ಬುಕ್‌

ಫೇಸ್‌ಬುಕ್‌

ಫೇಸ್‌ಬುಕ್‌ ಲಾಗಿನ್‌ ದೋಷವನ್ನು ಹ್ಯಾಕರ್‌ಗಳು ಬಳಸಿಕೊಂಡಿದ್ದರೆ, ಫೇಸ್‌ಬುಕ್‌ ಬಳಕೆದಾರರ ಮೆಸೇಜ್‌ಗಳು, ಫೋಟೋಗಳು, ಅಲ್ಲದೇ ಡಿಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಮಾಹಿತಿಯನ್ನು ತಮ್ಮ ಹಣಕಾಸು ವಿಭಾಗಕ್ಕೆ ಸ್ಟೋರ್‌ ಮಾಡಿಕೊಳ್ಳಬಹುದಿತ್ತು ಎನ್ನಲಾಗಿದೆ. ಇಂತಹ ದೋಷವನ್ನೆ ಬೆಂಗಳೂರು ಮೂಲದ ಆನಂದ್‌ ಪ್ರಕಾಶ್ ಪತ್ತೆ ಹಚ್ಚಿದ್ದಾರೆ.

ಫೇಸ್‌ಬುಕ್‌

ಫೇಸ್‌ಬುಕ್‌

ಅಂದಹಾಗೆ ಬೆಂಗಳೂರು ಮೂಲದ ಆನಂದ್‌ ಪ್ರಕಾಶ್‌ ಫ್ಲಿಪ್‌ಕಾರ್ಟ್‌ ನಲ್ಲಿ ಸೆಕ್ಯುರಿಟಿ ವಿಶ್ಲೇಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಫೇಸ್‌ಬುಕ್‌ನ ದೋಷ ಹೇಳಿದ ಆನಂದ್‌ ಪ್ರಕಾಶ್‌ ರವರ ಹೇಳಿಕೆಯನ್ನು ಫೇಸ್‌ಬುಕ್‌ ಒಪ್ಪಿಕೊಂಡು ಅದನ್ನು ಸರಿಪಡಿಸಲು ಮುಂದಾಗಿದೆ ಎಂದು ಆನಂದ್‌ ಪ್ರಕಾಶ್‌ ಹೇಳಿದ್ದಾರೆ.

ಫೇಸ್‌ಬುಕ್‌

ಫೇಸ್‌ಬುಕ್‌

ಆನಂದ್ ಪ್ರಕಾಶ್‌'ರವರು ಫೇಸ್‌ಬುಕ್‌ ದೋಷದ ವರದಿಯನ್ನು ಫೇಸ್‌ಬುಕ್‌ ಸೆಕ್ಯುರಿಟಿ ಟೀಮ್‌ಗೆ ಫೆಬ್ರವರಿ 22 ರಂದು ಕಳುಹಿಸಿದ್ದರು, ಇದಕ್ಕೆ ಮೆಚ್ಚಿದ ಫೇಸ್‌ಬುಕ್‌ ಮಾರ್ಚ್‌ 2 ರಂದು ಬಹುಮಾನ ಇಮೇಲ್‌ ಅನ್ನು ಸ್ವೀಕರಿಸಿದ್ದಾರೆ.

ಫೇಸ್‌ಬುಕ್‌  ಖಾತೆ ಹ್ಯಾಕ್‌

ಫೇಸ್‌ಬುಕ್‌ ಖಾತೆ ಹ್ಯಾಕ್‌

ಆನಂದ್‌ ಪ್ರಕಾಶ್‌ರವರು ಫೇಸ್‌ಬುಕ್‌ ಪಾಸ್‌ವರ್ಡ್ ರೀಸೆಟ್‌ ಮಾಡಲು ಪ್ರಯತ್ನಿಸಿದಾಗ www.facebook.com ನಲ್ಲಿಯೇ 12 ಭಾರಿ ಕೋಡ್‌ ನೀಡಿದರು ಸಹ ಸಾಧ್ಯವಾಗದೇ ಹ್ಯಾಕ್ ಆಗಿತ್ತು, ಆದರೆ ಒಬ್ಬ ಸೆಕ್ಯುರಿಟಿ ವಿಶ್ಲೇಷಕ ಆಗಿದ್ದು ಅವರು ಈ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಇನ್ನು ಸಾಮಾನ್ಯ ಫೇಸ್‌ಬುಕ್‌ ಬಳಕೆದಾರರು ಎಚ್ಚರ ವಹಿಸ ಬೇಕಾಗಿದೆ. ಸ್ವತಃ ಆನಂದ್‌ ಪ್ರಕಾಶ್‌'ರವರೇ ತಮ್ಮ ಫೇಸ್‌ಬುಕ್‌ ಪಾಸ್‌ವರ್ಡ್‌ ಬದಲಾಯಿಸಲು ಹೋದಾಗ ಈ ಸಮಸ್ಯೆ ಹೇಗೆ ಪರಿಹರಿಸಿಕೊಂಡರು ಎಂಬುದನ್ನು ಬ್ಲಾಗ್‌ ನಲ್ಲಿ ಬರೆದಿದ್ದಾರೆ.
ಆನಂದ್‌ ಪ್ರಕಾಶ್‌ ಬ್ಲಾಗ್‌ ನೋಡಿ

ಹ್ಯಾಕರ್‌

ಹ್ಯಾಕರ್‌

ಫೇಸ್‌ಬುಕ್‌ ಸೇರಿದಂತೆ ಹಲವು ಟೆಕ್ನಾಲಜಿ ಕಂಪನಿಗಳು ದೋಷ ಪೂರಿತ ಪ್ರೋಗ್ರಾಂಗಳನ್ನು ನೈತಿಕ ಹ್ಯಾಕರ್‌ಗಳನ್ನು ಪ್ರೊತ್ಸಾಹಿಸಲು ಚಾಲನೆಯಲ್ಲಿ ಇರಿಸಿವೆ. 2015 ರಲ್ಲಿ ಫೇಸ್‌ಬುಕ್‌ 63,151,873 ಹಣವನ್ನು 210 ಸಂಶೋಧಕರಿಗೆ ಬಹುಮಾನವಾಗಿ ನೀಡಿದೆ.

ಆನಂದ್‌ ಪ್ರಕಾಶ್‌

ಆನಂದ್‌ ಪ್ರಕಾಶ್‌

ಆನಂದ್‌ ಪ್ರಕಾಶ್‌'ರವರು ರಾಜಸ್ತಾನದ ಭಾದ್ರದಲ್ಲಿ ಜನಿಸಿದರು. ವೆಲೋರ್‌ ಟೆಕ್ನಾಲಜಿ ಸಂಸ್ಥೆಯಲ್ಲಿ ಬಿಟೆಕ್‌ ಕಂಪ್ಯೂಟರ್‌ ಸೈನ್ಸ್‌ ಇಂಜಿನಿಯರಿಂಗ್‌ ಪಡೆದರು ಎಂದು YourStory.com ವರದಿ ಪ್ರಕಾರ ಹೇಳಲಾಗಿದೆ. ಪ್ರಕಾಶ್‌ 1 ಕೋಟಿಯನ್ನು ಈ ರೀತಿಯ ದೋಷಗಳನ್ನು ಪತ್ತೆ ಹಚ್ಚುವ ಮೂಲಕ ಗಳಿಸಿದ್ದಾರೆ ಎನ್ನಲಾಗಿದೆ.

ದೋಷ ಪತ್ತೆಗೆ 10 ಲಕ್ಷ

ದೋಷ ಪತ್ತೆಗೆ 10 ಲಕ್ಷ

2015 ದೋಷಕ್ಕಾಗಿ ಅಧಿಕ ಬಹುಮಾನ 10 ಲಕ್ಷ ಪಡೆದವರು ಆನಂದ್ ಪ್ರಕಾಶ್‌'ರವರಾಗಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಎಚ್ಚರ! ನಿಮ್ಮ ಫೇಸ್‌ಬುಕ್‌ ಮೇಲು ಹದ್ದಿನ ಕಣ್ಣುಎಚ್ಚರ! ನಿಮ್ಮ ಫೇಸ್‌ಬುಕ್‌ ಮೇಲು ಹದ್ದಿನ ಕಣ್ಣು

ಫೇಸ್‌ಬುಕ್‌ ಬಹಿರಂಗಪಡಿಸಿದ 12 ಕುತೂಹಲಕಾರಿ ವಿಷಯಗಳುಫೇಸ್‌ಬುಕ್‌ ಬಹಿರಂಗಪಡಿಸಿದ 12 ಕುತೂಹಲಕಾರಿ ವಿಷಯಗಳು

ಉಚಿತ ವೀಡಿಯೋ ಕರೆಕಾಗಿ ಫೇಸ್‌ಬುಕ್‌ ಮೆಸೆಂಜರ್‌ಉಚಿತ ವೀಡಿಯೋ ಕರೆಕಾಗಿ ಫೇಸ್‌ಬುಕ್‌ ಮೆಸೆಂಜರ್‌

3 ದಶಲಕ್ಷ ಜಾಹೀರಾತುದಾರರನ್ನು ತಲುಪಿದ ಫೇಸ್‌ಬುಕ್‌: ರಹಸ್ಯವೇನು?3 ದಶಲಕ್ಷ ಜಾಹೀರಾತುದಾರರನ್ನು ತಲುಪಿದ ಫೇಸ್‌ಬುಕ್‌: ರಹಸ್ಯವೇನು?

ಗಿಜ್‌ಬಾಟ್‌

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Bengaluru hacker finds Facebook bug, awarded Rs 10 lakh. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X