ಭಾರತೀಯರ ವೈಯಕ್ತಿಕ ಮಾಹಿತಿ ದುರ್ಬಳಕೆ ಮಾಹಿತಿ ಬಿಚ್ಚಿಟ್ಟಿತು ಫೇಸ್‌ಬುಕ್!

ಇದೀಗ ಭಾರತದಲ್ಲಿ ಎಷ್ಟು ಜನರ ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿ ಕೇಂಬ್ರಿಜ್ ಅನಲಿಟಿಕಾದಿಂದ ಅಕ್ರಮ ಬಳಕೆಯಾಗಿದೆ ಎಂಬುದನ್ನು ಫೇಸ್‌ಬುಕ್‌ ಅಂದಾಜಿಸಿದೆ.

|

ಕೇಂಬ್ರಿಜ್ ಅನಲಿಟಿಕಾ ಕಂಪನಿಯು 8.7 ಕೋಟಿ ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಅಕ್ರಮವಾಗಿ ಹಂಚಿಕೊಂಡಿದೆ ಎಂದು ಫೇಸ್‌ಬುಕ್‌ ಒಪ್ಪಿಕೊಂಡ ನಂತರ ಇದೀಗ ಭಾರತದಲ್ಲಿ ಎಷ್ಟು ಜನರ ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿ ಕೇಂಬ್ರಿಜ್ ಅನಲಿಟಿಕಾದಿಂದ ಅಕ್ರಮ ಬಳಕೆಯಾಗಿದೆ ಎಂಬುದನ್ನು ಫೇಸ್‌ಬುಕ್‌ ಅಂದಾಜಿಸಿದೆ.

ಜಗತ್ತಿನಾದ್ಯಂತ ಮತ್ತು ಭಾರತದಲ್ಲಿ ತೊಂದರೆಯಾದ ಜನರ ನಿಖರ ಸಂಖ್ಯೆ ಎಷ್ಟು ಎಂಬುದನ್ನು ಕಂಡುಕೊಳ್ಳಲುಪ್ರಯತ್ನ ನಡೆಯುತ್ತಿದೆ ಎಂದು ಫೇಸ್‌ಬುಕ್‌ ವಕ್ತಾರರು ತಿಳಿಸಿದ್ದು, 5.62 ಲಕ್ಷ ಭಾರತೀಯ ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನೂ ಅನಲಿಟಿಕಾ ಕಂಪನಿಯು ದುರ್ಬಳಕೆ ಮಾಡಿಕೊಂಡಿರಬಹುದು ಎಂದು ಫೇಸ್‌ಬುಕ್‌ ಅಂದಾಜಿಸಿದೆ.

ಭಾರತೀಯರ ವೈಯಕ್ತಿಕ ಮಾಹಿತಿ ದುರ್ಬಳಕೆ ಮಾಹಿತಿ ಬಿಚ್ಚಿಟ್ಟಿತು ಫೇಸ್‌ಬುಕ್!

'ಮೈ ಡಿಜಿಟಲ್ ಲೈಫ್' ಎಂಬ ಆಪ್‌ ಅಳವಡಿಸಿಕೊಂಡ 335 ಬಳಕೆದಾರರ ಮಾಹಿತಿಯನ್ನು ಅನಲಿಟಿಕಾ ಕಂಪನಿಯು ನೇರವಾಗಿ ಬಳಸಿಕೊಂಡಿದೆ. ಹಾಗಾಗಿ, ಈ 335 ಜನರ ಜತೆ ಫೇಸ್‌ಬುಕ್‌ ಮೂಲಕ ಸಂಪರ್ಕದಲ್ಲಿದ್ದ ಸುಮಾರು 5.62 ಲಕ್ಷ ಭಾರತೀಯ ಫೇಸ್‌ಬುಕ್ ಬಳಕೆದಾರರ ಮಾಹಿತಿ ಅನಲಿಟಿಕಾ ಕಂಪನಿಯಿಂದ ದುರ್ಬಳಕೆಯಾಗಿರಬಹುದು ಎಂದು ಫೇಸ್‌ಬುಕ್ ತಿಳಿಸಿದೆ.

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?

ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿ ಕಳವಿಗೆ ಸಂಬಂಧಿಸಿ ಜಗತ್ತಿನ ವಿವಿಧ ಭಾಗಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದರಿಂದಾಗಿ ಫೇಸ್‌ಬುಕ್‌ ಕಂಪನಿಯು ತನ್ನ ಬಳಕೆದಾರರ ಕ್ಷಮೆ ಕೋರಿದೆ. ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿ ಕಳವು ಭಾರತದಲ್ಲಿಯೂ ಈ ಪ್ರಕರಣ ಸಂಚಲನ ಮೂಡಿಸಿದೆ.

ಭಾರತೀಯರ ವೈಯಕ್ತಿಕ ಮಾಹಿತಿ ದುರ್ಬಳಕೆ ಮಾಹಿತಿ ಬಿಚ್ಚಿಟ್ಟಿತು ಫೇಸ್‌ಬುಕ್!

ಕೇಂಬ್ರಿಜ್‌ ಅನಲಿಟಿಕಾ ಕಂಪನಿಯ ಮಾಹಿತಿ ಕಳವು ಪ್ರಕರಣ ಬಹಿರಂಗವಾದಗಲೇ ಫೇಸ್‌ಬುಕ್‌ಗೆ ಭಾರತ ಸರ್ಕಾರವು ನೋಟಿಸ್ ನೀಡಿತ್ತು. ಮಾಹಿತಿ ಕಳವಿನ ಮೂಲಕ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್‌ ಅವರು ಎಚ್ಚರಿಕೆ ನೀಡಿದ್ದರು.

ಓದಿರಿ: ಶಿಯೋಮಿಯನ್ನು ಮನೆಗೆ ಕಳುಹಿಸಲು ಬರುತ್ತಿದೆ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಜೆ7 ಡುಯೊ'!!

Best Mobiles in India

English summary
These half a million users were affected after 335 Indian users installed the now inactive app, thisisyourdigitallife. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X