ಫೇಸ್‌ಬುಕ್ ಅಜ್ಞಾತ ಸ್ನೇಹಿತ ಕೋರಿಕೆ ನೀವು ಅಪಾಯದಲ್ಲಿ ಖಂಡಿತ

By Shwetha
|

ಫೇಸ್‌ಬುಕ್ ವಿಶ್ವದ ಅಗ್ರಗಣ್ಯ ಸಂಪರ್ಕ ಸಂಪನ್ಮೂಲವಾಗಿ ಖ್ಯಾತಿಯನ್ನು ಗಳಿಸಿದೆ. ಸ್ನೇಹಿತರೊಂದಿಗೆ ಉತ್ತಮ ಒಡನಾಟವನ್ನಿರಿಸಿಕೊಳ್ಳಲು, ಸಂದೇಶ ಕಳುಹಿಸಲು, ಪೋಸ್ಟ್ ಮಾಡಲು, ಈವೆಂಟ್‌ಗಳನ್ನು, ಫೋಟೋಗಳನ್ನು ಹಂಚಿಕೊಳ್ಳಲು ಹೀಗೆ ಹತ್ತಾರು ಬಗೆಯಲ್ಲಿ ಫೇಸ್‌ಬುಕ್ ಜಾಲತಾಣ ಇಂದು ಪ್ರಗತಿಯ ಪಥವನ್ನು ದಾಟುತ್ತಿದೆ. ಫೇಸ್‌ಬುಕ್ ಸಾಮಾಜಿಕ ದೈತ್ಯನಾಗಿ ಹೆಸರುವಾಸಿಯಾಗಲು ಅದು ನೀಡುವ ಸ್ವಾತಂತ್ರ್ಯ ಕಾರಣವಾಗಿದ್ದರೂ ಬಳಕೆದಾರರಿಗೆ ಈ ಸ್ವಾತಂತ್ರ್ಯ ಒಮ್ಮೊಮ್ಮೆ ಮಾರಕವಾಗಲಿದೆ.

ಫೇಸ್‌ಬುಕ್‌ನಲ್ಲಿ ಅಜ್ಞಾತ ಸ್ನೇಹಿತರ ಕೋರಿಕೆಯನ್ನು ನೀವು ಸ್ವೀಕರಿಸುತ್ತಿದ್ದೀರಿ ಎಂದಾದಲ್ಲಿ ಅಪಾಯಕ್ಕೆ ನಿಮ್ಮನ್ನು ನೀವೇ ಬಲಿಕೊಟ್ಟಂತೆ. ಫೇಸ್‌ಬುಕ್ ಖಾತೆಯ ಸದಸ್ಯರ ಸಂಖ್ಯೆ ಹೆಚ್ಚುಗೊಂಡು ಗುಂಪಿನಲ್ಲಿ ತಾವೂ ಮಿಂಚಬೇಕೆಂಬ ಉತ್ಸಾಹದಿಂದ ನಿಮಗೆ ಬಂದಿರುವ ಫ್ರೆಂಡ್ ರಿಕ್ವೆಸ್ಟ್ ಅನ್ನು ನೀವು ಸ್ವೀಕರಿಸುತ್ತೀರಿ ಅದೂ ಕೂಡ ಹಿಂದೆ ಮುಂದೆ ಯೋಚಿಸದೆ. ಇದರಿಂದ ನಿಮಗುಂಟಾಗುವ ಅಪಾಯಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ. ಹಾಗಿದ್ದರೆ ಫೇಸ್‌ಬುಕ್‌ನಲ್ಲಿ ಅಜ್ಞಾತ ಸ್ನೇಹಿತ ಕೋರಿಕೆಯನ್ನು ನೀವು ಸ್ವೀಕರಿಸುವ ಮುನ್ನ ಈ ಲೇಖನದತ್ತ ಗಮನ ನೀಡಿ.

#1

#1

ಫೇಸ್‌ಬುಕ್‌ನಲ್ಲಿ ಸ್ನೇಹಿತರಿಗೆ ಖಾತೆ ವಿವರಗಳನ್ನು ಅಂದರೆ ಪಾಸ್‌ವರ್ಡ್‌ಗಳನ್ನು ನೋಡಲಾಗುವುದಿಲ್ಲ, ಆದರೆ ನೀವು ಒದಗಿಸುವ ವೈಯಕ್ತಿಕ ಮಾಹಿತಿಯಿಂದ ನಿಮ್ಮ ಪಾಸ್‌ವರ್ಡ್ ಅನ್ನು ಅವರುಗಳು ಊಹಿಸುವ ಸಾಧ್ಯತೆ ಇರುತ್ತದೆ.

#2

#2

ನಿಮ್ಮ ಇಮೇಲ್ ವಿವರ, ಪ್ರೊಫೈಲ್ ನಿಮ್ಮ ಫೇಸ್‌ಬುಕ್ ಖಾತೆಯಲ್ಲಿರುತ್ತದೆ. ದೋಷಪೋರಿತ ಹ್ಯಾಕರ್‌ಗಳು ನಿಮ್ಮ ಖಾತೆಗಳನ್ನು ಪ್ರವೇಶಿಸಲು, ಇದನ್ನು ಬಳಸಿಕೊಳ್ಳಬಹುದು

#3

#3

ಸ್ವಯಂಚಾಲಿತ ಫೇಸ್‌ಬುಕ್ ಸೆಶನ್ ಅನ್ನು ಕಂಪೆನಿ ನಿಯಂತ್ರಿಸಲು ಮುಂದಾಗಿದೆ. ಹೆಚ್ಚಿನ ಬಳಕೆದಾರರು ಫೇಸ್‌ಬುಕ್‌ನಲ್ಲಿ ಕಂಪ್ಯೂಟರ್ ಮೂಲಕ ನಿಯಂತ್ರಣಕ್ಕೆ ಒಳಗಾಗಿರುತ್ತಾರೆ ಇವುಗಳು ಬಳಕೆದಾರರ ಪ್ರೊಫೈಲ್‌ಗಳನ್ನು ಸ್ಕ್ಯಾನ್ ಮಾಡಿ ಮಾಹಿತಿಗಳನ್ನು ದುಡ್ಡಿನಾಸೆಗಾಗಿ ಮಾರಾಟ ಮಾಡುತ್ತವೆ.

#4

#4

ನೀವು ಫೇಸ್‌ಬುಕ್‌ನಲ್ಲಿ ಸ್ನೇಹಿತರನ್ನಾಗಿ ಮಾಡಿಕೊಂಡಿರುವ ಅಜ್ಞಾತ ವ್ಯಕ್ತಿ ನಿಮ್ಮ ಇಮೇಲ್ ವಿಳಾಸ, ಫೋನ್ ಸಂಖ್ಯೆಗಳು ಮತ್ತು ನಿಮ್ಮ ಸ್ಥಾನವನ್ನು ಪತ್ತೆಹಚ್ಚಬಹುದಾಗಿದೆ ಅಂತೆಯೇ ಫಿಶ್ಶಿಂಗ್ ನಡೆಸಲು ಈ ಮಾಹಿತಿಗಳನ್ನು ಆತ ಕಲೆಹಾಕುತ್ತಾನೆ.

#5

#5

ನೀವು ಹೋಗುತ್ತಿರುವ ಈವೆಂಟ್‌ಗಳು, ವಿಳಾಸ ಮತ್ತು ಸ್ಥಳ ಮಾಹಿತಿಯನ್ನು ಫೇಸ್‌ಬುಕ್‌ನಲ್ಲಿ ನೀವು ಅಪ್‌ಡೇಟ್ ಮಾಡುವುದರಿಂದ ಅಪರಾಧಿಗಳನ್ನು ಇದನ್ನು ಸುಲಭವಾಗಿ ಬಳಸಿಕೊಂಡು ತಮ್ಮ ಕೆಲಸವನ್ನು ಸಾಧಿಸಿಕೊಳ್ಳುತ್ತಾರೆ. ನಿಮ್ಮ ಸ್ನೇಹಿತರ ಮಾಹಿತಿ ಕೂಡ ಅವರಿಗೆ ಇದರ ಮೂಲಕ ದೊರೆಯುತ್ತದೆ.

#6

#6

ನಿಮ್ಮ ಸ್ನೇಹಿತರ ವಲಯದಲ್ಲಿ ಕೂಡ ಇರದೇ ಇರುವ ವ್ಯಕ್ತಿಯನ್ನು ನೀವು ಫೇಸ್‌ಬುಕ್‌ನಲ್ಲಿ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಿದ್ದೀರಿ ಎನ್ನುವ ಸಂದರ್ಭದಲ್ಲಿ ನೀವು ಸಾಕಷ್ಟು ಬಾರಿ ಯೋಚಿಸಬೇಕಾಗುತ್ತದೆ. ಅವರುಗಳ ಮಾಹಿತಿಯನ್ನು ಕೂಲಂಕುಷವಾಗಿ ಪರಿಶೀಲಿಸಬೇಕಾಗುತ್ತದೆ.

#7

#7

ಈ ಬಳಕೆದಾರರ ಸಂದೇಶಗಳಲ್ಲಿರುವ ಯಾವುದೇ ಲಿಂಕ್‌ಗಳನ್ನು ಅಪ್ಲಿಕೇಶನ್ ಡೌನ್‌ಲೋಡ್‌ಗಳನ್ನು ಕ್ಲಿಕ್ ಮಾಡಬೇಡಿ.

#8

#8

vನಿಮ್ಮ ಖಾತೆಯನ್ನು ಕಾನ್ಫಿಗರ್ ಮಾಡಿಕೊಳ್ಳಿ ಅಂತೆಯೇ ಸ್ನೇಹಿತರ ಕೋರಿಕೆ ಸಂಖ್ಯೆಯನ್ನು ಮಿತಿಗೊಳಿಸಿ. ಅಂತೆಯೇ ಆದಷ್ಟು ನಿಮ್ಮ ವೈಯಕ್ತಿಕ ವಿವರಗಳನ್ನು ಗೌಪ್ಯವಾಗಿರಿಸುವಂತೆ ಫೇಸ್‌ಬುಕ್‌ನಲ್ಲಿ ಹೊಂದಿಸಿಕೊಳ್ಳಿ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಫೇಸ್‌ಬುಕ್‌ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ? </a></strong><br /><strong><a class=ಎಚ್ಚರ! ನಿಮ್ಮ ಫೇಸ್‌ಬುಕ್‌ ಮೇಲು ಹದ್ದಿನ ಕಣ್ಣು
ಫೇಸ್‌ಬುಕ್‌ನಲ್ಲಿ ಬದುಕಿರುವವರಿಗಿಂತ ಮೃತರ ಪ್ರೊಫೈಲ್‌ಗಳೇ ಹೆಚ್ಚಂತೆ!!!
ಮೊಬೈಲ್‌ನಲ್ಲಿ ಫೇಸ್‌ಬುಕ್‌ ಸ್ಪೀಡ್‌ಗಾಗಿ "ಫೇಸ್‌ಬುಕ್‌ ಲೈಟ್"‌ ಆಪ್‌ " title="ಫೇಸ್‌ಬುಕ್‌ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?
ಎಚ್ಚರ! ನಿಮ್ಮ ಫೇಸ್‌ಬುಕ್‌ ಮೇಲು ಹದ್ದಿನ ಕಣ್ಣು
ಫೇಸ್‌ಬುಕ್‌ನಲ್ಲಿ ಬದುಕಿರುವವರಿಗಿಂತ ಮೃತರ ಪ್ರೊಫೈಲ್‌ಗಳೇ ಹೆಚ್ಚಂತೆ!!!
ಮೊಬೈಲ್‌ನಲ್ಲಿ ಫೇಸ್‌ಬುಕ್‌ ಸ್ಪೀಡ್‌ಗಾಗಿ "ಫೇಸ್‌ಬುಕ್‌ ಲೈಟ್"‌ ಆಪ್‌ " loading="lazy" width="100" height="56" />ಫೇಸ್‌ಬುಕ್‌ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?
ಎಚ್ಚರ! ನಿಮ್ಮ ಫೇಸ್‌ಬುಕ್‌ ಮೇಲು ಹದ್ದಿನ ಕಣ್ಣು
ಫೇಸ್‌ಬುಕ್‌ನಲ್ಲಿ ಬದುಕಿರುವವರಿಗಿಂತ ಮೃತರ ಪ್ರೊಫೈಲ್‌ಗಳೇ ಹೆಚ್ಚಂತೆ!!!
ಮೊಬೈಲ್‌ನಲ್ಲಿ ಫೇಸ್‌ಬುಕ್‌ ಸ್ಪೀಡ್‌ಗಾಗಿ "ಫೇಸ್‌ಬುಕ್‌ ಲೈಟ್"‌ ಆಪ್‌

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಹೆಚ್ಚಿನ ಮಾಹಿತಿಗಳಿಗಾಗಿ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Best Mobiles in India

English summary
The practice of accepting unknown friends, for example, makes information like personal details, pictures and posts available to strangers, posing hacking and information phishing risks.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X