ಮೋದಿ ಗೆಲುವಿನ ಹಿಂದೆ ಇದ್ದ ಫೇಸ್‌ಬುಕ್: ಇದಕ್ಕಾಗಿ ಈ ಬಾರಿ ಚುನಾವಣಾ ಆಯೋಗ ಮಾಡುತ್ತಿರುವುದೇನು..?

ಸಾಮಾಜಿಕ ಜಾಲತಾಣಗಳನ್ನು ಹೆಚ್ಚಿನ ಮಂದಿ ಪ್ರಚಾರ ಕಾರ್ಯಗಳಿಗಾಗಿ ಅವಲಂಬಿಸುತ್ತಿದ್ದಾರೆ. ಇದೇ ಹಾದಿಯಲ್ಲಿ ಸಾಗಿದೆ ಚುನಾವಣಾ ಆಯೋಗ.

|

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಬೇರೆಲ್ಲಾ ಮಾಧ್ಯಮಗಳಿಂತ ಜನ ಸಾಮಾನ್ಯರನ್ನು ತಲುಪುತ್ತಿದೆ. ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಹೆಚ್ಚಿನ ಮಂದಿ ಪ್ರಚಾರ ಕಾರ್ಯಗಳಿಗಾಗಿ ಅವಲಂಬಿಸುತ್ತಿದ್ದಾರೆ. ಇದೇ ಹಾದಿಯಲ್ಲಿ ಸಾಗಿದೆ ಚುನಾವಣಾ ಆಯೋಗ.

ಈ ಬಾರಿ ಚುನಾವಣಾ ಆಯೋಗ ಮಾಡುತ್ತಿರುವುದೇನು..?

ಓದಿರಿ: ಜಿಯೋ ಫೀಚರ್ ಫೋನ್ ಎದುರಾಗಿ ನೋಕಿಯಾದಿಂದ 1000ರೂ.ಗೆ ಮತ್ತೊಂದು ಫೀಚರ್ ಪೋನ್..!!

ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಸಮಯದಲ್ಲಿ ಅಭ್ಯರ್ಥಿಗಳು ಪ್ರಚಾರ ಮಾಡುವುದನ್ನು ನೋಡಿರುತ್ತೀರಾ, ಆದರೆ ಈ ಬಾರಿ ಮತದಾನದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಚುನಾವಣಾ ಆಯೋಗವೂ ಫೇಸ್‌ಬುಕ್‌ನೊಂದಿಗೆ ಕೈಜೋಡಿಸಿದೆ. ಅಲ್ಲದೇ ಎಲ್ಲರೂ ಮತದಾನ ಮಾಡಲು ನೋಂದಾಯಿಸಿಕೊಳ್ಳಿ ಎಂದು ಪ್ರಚಾರ ಮಾಡಲು ಮುಂದಾಗಿದೆ.

ಜುಲೈ 1 ರಿಂದ ಫೇಸ್‌ಬುಕ್ ಅಭಿಯಾನ:

ಜುಲೈ 1 ರಿಂದ ಫೇಸ್‌ಬುಕ್ ಅಭಿಯಾನ:

ಭಾರತೀಯ ಚುನಾವಣಾ ಆಯೋಗವು ಫೇಸ್‌ಬುಕ್ ನಲ್ಲಿ ಜುಲೈ 1 ರಿಂದ 'ರಿಜಿಸ್ಟರ್ ನೌ' ಎಂಬ ಬಟನ್ ಅನ್ನು ಫೇಸ್‌ಬುಕ್‌ನಲ್ಲಿ ಹಾಕಿಸುವ ಮೂಲಕ ಅಭಿಯಾನವನ್ನು ಆರಂಭಿಸಲಿದೆ. ಮತ ಹಾಕಲು ಫೇಸ್‌ಬುಕ್‌ನಲ್ಲೇ ರಿಜಿಸ್ಟರ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡುವ ಮೂಲಕ ಹೊಸ ಆಚಾರಕ್ಕೆ ನಾಂದಿ ಹಾಡಿದೆ.

13 ಭಾಷೆಗಳಲ್ಲಿ ಅಭಿಯಾನ:

13 ಭಾಷೆಗಳಲ್ಲಿ ಅಭಿಯಾನ:

ಜುಲೈ 1 ರಿಂದ 4 ವರೆಗೆ ಫೇಸ್‌ಬುಕ್‌ನಲ್ಲಿ ರಿಜಿಸ್ಟರ್ ನೌ' ಅಭಿಯಾನವು ನಡೆಯಲಿದ್ದು, ಒಟ್ಟು 13 ಭಾಷೆಗಳಲ್ಲಿ ಆರಂಭವಾಗಲಿದೆ. ಇಂಗ್ಲೀಷ್, ಹಿಂದಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಕನ್ನಡ, ಪಂಜಾಬಿ, ಬೆಂಗಾಲಿ, ಉರ್ದು, ಅಸ್ಸಾಮಿ, ಮರಾಠಿ ಮತ್ತು ಓರಿಯಾ ಭಾಷೆಗಳಲ್ಲಿ ನಡೆಯಲಿದೆ.

180 ಮಿಲಿಯನ್ ಭಾರತೀಯ ಬಳಕೆದಾರರು:

180 ಮಿಲಿಯನ್ ಭಾರತೀಯ ಬಳಕೆದಾರರು:

ಫೇಸ್‌ಬುಕ್ ಅನ್ನು ಬಳಸುತ್ತಿರುವ ಭಾರತೀಯ ಸಂಖ್ಯೆಯೂ 180 ಮಿಲಿಯನ್ ಇದ್ದು, ಇದನ್ನೇ ಲಾಭವಾಗಿ ಬಳಸಿಕೊಳ್ಳುತ್ತಿರುವ ಚುನಾವಣಾ ಆಯೋಗ ಒಂದೇ ಮಾಧ್ಯಮದಲ್ಲಿ ಅತೀ ಹೆಚ್ಚು ಮಂದಿಯನ್ನು ತಲುಪುವಂತಹ ಪ್ರಯತ್ನವನ್ನು ಮಾಡುತ್ತಿದೆ.

ಮತದಾನವನ್ನು ಪ್ರೋತ್ಸಾಹಿಸಲು:

ಮತದಾನವನ್ನು ಪ್ರೋತ್ಸಾಹಿಸಲು:

ಎಷ್ಟೋ ಮಂದಿ ಚುನಾವಣೆಯಲ್ಲಿ ಮತದಾನಕ್ಕೆ ನೋಂದಾಯಿಸಿಕೊಳ್ಳದೆ ತಮ್ಮ ಹಕ್ಕನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರತಿ ಮತವು ಪವಿತ್ರವಾಗಿರುವುದರಿಂದ ಜನರಲ್ಲಿ ಮತದಾನದ ಪಾವಿತ್ರತೆಯನ್ನು ತಿಳಿಸಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

Best Mobiles in India

Read more about:
English summary
The Election Commission will launch a special drive to enrol new electors, and has collaborated with Facebook to launch a ‘voter registration reminder’ on July 1. to know more visit kannad.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X