ಫೇಸ್‌ಬುಕ್‌ ಬಳಕೆದಾರರಿಗೆ ಬಂಪರ್‌ ಕೊಡುಗೆ: ಅಚ್ಚರಿ ಹೊಸ ಟೂಲ್‌ಗಳು

By Suneel
|

ಫೇಸ್‌ಬುಕ್‌'ನ ವಾರ್ಷಿಕ "F8 ಅಭಿವೃದ್ದಿ ಕಾನ್ಫರೆನ್ಸ್‌" ಪ್ರಸ್ತುತದಲ್ಲಿ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಜರುಗಿದೆ. ಈ ಕಾನ್ಫರೆನ್ಸ್‌'ನ ವಿಶೇಷತೆ ಅಂದರೆ ಫೇಸ್‌ಬುಕ್‌ ಹಿಂದಿಗಿಂತಲೂ ಅಧಿಕವಾದ ಹೊಸ ಟೂಲ್‌ಗಳು ಮತ್ತು ಅಪ್‌ಡೇಟ್‌ಗಳನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಅಭಿವೃದ್ಧಿಪಡಿಸಿದೆ. ಫೇಸ್‌ಬುಕ್‌ ತನ್ನ ಬಳಕೆದಾರರ ಅನುಭವವನ್ನು ಇನ್ನಷ್ಟು ಹೆಚ್ಚಿಸಲು, ಅತ್ಯದ್ಭುತವಾದ ಟೂಲ್‌ಗಳು ಮತ್ತು ಫೀಚರ್‌ಗಳನ್ನು ಅಪ್‌ಡೇಟ್‌ ಮಾಡಿದೆ. ಅವುಗಳು ಯಾವುವು ಗೊತ್ತಾ? ಫೇಸ್‌ಬುಕ್‌ ಬಳಸುವವರು ಮೊದಲು ಈ ಫೀಚರ್‌ಗಳ ಬಗ್ಗೆ ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

1

1

ಕಳೆದ ವರ್ಷ ಪ್ರಕಟಿಸಿದಂತೆ ಫೇಸ್‌ಬುಕ್‌ ಪ್ರೋಫೈಲ್'ಗೆ, ವೀಡಿಯೋ ಪ್ರೊಫೈಲ್‌ ಇಮೇಜ್‌ ಸೇರಿಸುವ ಹೊಸ ಫೀಚರ್‌ ಅನ್ನು ಅಪ್‌ಡೇಟ್‌ ಮಾಡಿದೆ. ಈ ಹೊಸ ಟೂಲ್‌ ಮೂಲಕ ಯಾವುದೇ ವೀಡಿಯೋ ಟೂಲ್‌ಗಳಿಂದ ಅಂದರೆ ''ವೈನ್‌, ಇನ್‌ಸ್ಟಗ್ರಾಂ," ಇತರೆ ವೀಡಿಯೋ ಟೂಲ್‌ಗಳಿಂದ ಅಪ್‌ಲೋಡ್‌ ಮಾಡಬಹುದಾಗಿದೆ. ಈ ಹೊಸ ಟೂಲ್‌ ಕ್ಯಾಮೆರಾ ಆಪ್‌ ಅಭಿವೃದ್ದಿಗಾರರಿಗೆ ಲಭ್ಯವಿದೆ.

2

2

ಫೇಸ್‌ಬುಕ್‌ 2014 ರಿಂದಲೂ ಸಹ ವೆಬ್‌ ಸೇವಿಂಗ್‌ ಬಟನ್‌ ಹೊಂದಿದ್ದು, ಫೇಸ್‌ಬುಕ್ ಬಳಕೆದಾರರಿಗೆ ಪೋಸ್ಟ್‌ಗಳನ್ನು ಸೇವ್‌ ಮಾಡಿ ವಿರಾಮದ ಸಮಯದಲ್ಲಿ ಓದಲು ಅನುಕೂಲ ಮಾಡಿಕೊಡುತ್ತದೆ. ಈಗ ಈ ಫೀಚರ್‌ ಅನ್ನು ಇನ್ನಷ್ಟು ಅಭಿವೃದ್ದಿ ಪಡಿಸಿದ್ದು, ನೀವು ಇತರ ವೆಬ್‌ಸೈಟ್‌ನಲ್ಲಿ ಓದಬೇಕು ಏನಿಸಿದ ಲಿಂಕ್‌ ಅನ್ನು ಫೇಸ್‌ಬುಕ್‌ ಸೇವ್‌ ಪಟ್ಟಿಗೆ ಸೇವ್‌ ಮಾಡಬಹುದಾಗಿದೆ.

3

3

ಫೇಸ್‌ಬುಕ್‌ ಮೆಸೇಂಜರ್‌ಗೆ ಪ್ರಮುಖ ಹೊಸ ಟೂಲ್‌ ಅನ್ನು ಪ್ರಕಟಿಸಿದೆ. ಹೊಸ ಫೀಚರ್‌ "re-engagement messages"

4

4

ಹಲವು ಫೇಸ್‌ಬುಕ್‌ ಬಳಕೆದಾರರು ಫೇಸ್‌ಬುಕ್‌'ನಲ್ಲಿ ಇತರರು ಅಪ್‌ಲೋಡ್‌ ಮಾಡಿದ ವೀಡಿಯೋವನ್ನು ಡೌನ್‌ಲೋಡ್‌ ಮಾಡಿ ಪುನಃ ಇದು ತಮ್ಮದೇ ಸ್ವತಃ ವೀಡಿಯೋ, ನನ್ನದು ಎಂಬಂತೆ ಅಪ್‌ಲೋಡ್‌ ಮಾಡುತ್ತಾರೆ. ಇದರಿಂದ ವಾಸ್ತವವಾಗಿ ವೀಡಿಯೋ ಮೊದಲು ಅಪ್‌ಲೋಡ್‌ ಮಾಡಿದವರಿಗೆ ಮೋಸ ಮಾಡಿದಂತಾಗುತ್ತದೆ. ಆದರೆ ಫೇಸ್‌ಬುಕ್‌ ಈಗ ಅಂತಹವರಿಗೆ ವೀಡಿಯೋ ಕೃಪೆ ನೀಡಲು ಮತ್ತು ಹಕ್ಕು ಕಾಯ್ದುಕೊಳ್ಳಲು "Rights Manager" ಎಂಬ ಹೊಸ ಟೂಲ್‌ ಅಪ್‌ಡೇಟ್‌ ಮಾಡಿದೆ. ಇದರಿಂದ ವೀಡಿಯೋವನ್ನು ಯಾರೇ ಬಳಸಿದರು ಸಹ, ವಾಸ್ತವವಾಗಿ ಮೊದಲು ಅಪ್‌ಲೋಡ್‌ ಮಾಡಿದವರ ಹೆಸರು ಇರುತ್ತದೆ. ಅಲ್ಲದೇ ಎಷ್ಟು ಬಾರಿ ಅವರ ವೀಡಿಯೋ ನಕಲಿಸಲಾಗಿದೆ ಎಂದು ಸಹ ತಿಳಿಯಬಹುದಾಗಿದೆ.

5

5

ಫೇಸ್‌ಬುಕ್‌'ನ ಇನ್ನೊಂದು ಸಣ್ಣ ಅಭಿವೃದ್ದಿ, ಆದರೆ ಆಸಕ್ತದಾಯಕವಾದ ಹೊಸ ಟೂಲ್‌ ಎಂದರೆ "Text sharing feature". ನೀವು ಇತರ ಸೈಟ್‌ನಲ್ಲಿನ ಹೇಳಿಕೆಗಳನ್ನು ಫೇಸ್‌ಬುಕ್‌ನಲ್ಲಿ ನೇರವಾಗಿ ಪೋಸ್ಟ್‌ ಮಾಡಲು ಈ ಹೊಸ ಟೂಲ್‌ ಅನುವುಮಾಡಿಕೊಡುತ್ತದೆ. ಅಲ್ಲದೇ ವಾಸ್ತವ ಹೇಳಿಕೆಯ ಸೈಟ್‌ ಯುಆರ್‌ಎಲ್‌ ಅನ್ನು ನೀಡುತ್ತದೆ.

6

6

ಫೇಸ್‌ಬುಕ್‌ ಸಿಇಓ ಮಾರ್ಕ್‌ ಜುಕರ್‌ಬರ್ಗ್‌'ರವರು ವರ್ಚುವಲ್‌ ರಿಯಾಲಿಟಿ ಮತ್ತು ಸಾಂಪ್ರದಾಯಿಕ ಹೆಡ್‌ಸೆಟ್ ಜೊತೆಗಿನ ಅಭಿವೃದ್ದಿ ಬಗ್ಗೆ ಹೇಳಿದ್ದಾರೆ.

7

7

ಫೇಸ್‌ಬುಕ್‌ "F8 ಅಭಿವೃದ್ದಿ ಕಾನ್ಫರೆನ್ಸ್‌" ನಲ್ಲಿ ತನ್ನ ಮುಂದಿನ ಅಭಿವೃದ್ದಿ ಬಗ್ಗೆ ಹೇಳುವುದರ ಜೊತೆಗೆ " "10 ಯೋಜನೆ"ಯ ಅಂಶಗಳೇನು ಎಂಬುದನ್ನು ತಿಳಿಸಿದೆ. ಚಿತ್ರದಲ್ಲಿ ಫೇಸ್‌ಬುಕ್‌'ನ ಆಸಕ್ತದಾಯಕ ವಿಶಾಲ ಯೋಜನೆಗಳೇನು ಎಂಬುದು ತಿಳಿಯುತ್ತದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಇನ್ಮುಂದೆ ಫೇಸ್‌ಬುಕ್‌ ಮೆಸೇಂಜರ್‌ನಲ್ಲೂ ಹಣ ವರ್ಗಾಯಿಸಿ!!ಇನ್ಮುಂದೆ ಫೇಸ್‌ಬುಕ್‌ ಮೆಸೇಂಜರ್‌ನಲ್ಲೂ ಹಣ ವರ್ಗಾಯಿಸಿ!!

ಭಾರತ v/s ಪಾಕಿಸ್ತಾನ ಟಿ20: ಟಿವಿ ಶೋನಲ್ಲಿ ಅಖ್ತರ್‌ ಕೋಪಗೊಂಡದ್ದು ಏಕೆ?ಭಾರತ v/s ಪಾಕಿಸ್ತಾನ ಟಿ20: ಟಿವಿ ಶೋನಲ್ಲಿ ಅಖ್ತರ್‌ ಕೋಪಗೊಂಡದ್ದು ಏಕೆ?

ಉತ್ತರ ಕೊರಿಯಾದಲ್ಲಿ ಗುಟ್ಟಾಗಿ ಸೆರೆಹಿಡಿದ ಫೋಟೋ: ನೋಡುವಂತಿಲ್ಲಾ ಏಕೆ?ಉತ್ತರ ಕೊರಿಯಾದಲ್ಲಿ ಗುಟ್ಟಾಗಿ ಸೆರೆಹಿಡಿದ ಫೋಟೋ: ನೋಡುವಂತಿಲ್ಲಾ ಏಕೆ?

ಫೇಸ್‌ಬುಕ್‌ಗಿಂತ ಅಧಿಕ ಪ್ರಾಧಾನ್ಯತೆ ವಾಟ್ಸಾಪ್‌ಗೆ: ಏಕೆ ಗೊತ್ತಾ?ಫೇಸ್‌ಬುಕ್‌ಗಿಂತ ಅಧಿಕ ಪ್ರಾಧಾನ್ಯತೆ ವಾಟ್ಸಾಪ್‌ಗೆ: ಏಕೆ ಗೊತ್ತಾ?

ಗಿಜ್‌ಬಾಟ್‌

ಗಿಜ್‌ಬಾಟ್‌

ಕನ್ನಡ ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್.ಕಾಂ

Best Mobiles in India

English summary
FACEBOOK ANNOUNCES NEW TOOLS AND OPTIONS AT F8 – HERE’S WHAT YOU NEED TO KNOW. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X