ಫೇಸ್‌ಬುಕ್‌ಗೆ 34,280 ಕೋಟಿ ದಂಡ ಸಾಧ್ಯತೆ!..ಕಾರಣ ಏನು ಗೊತ್ತಾ?

|

ವಿಶ್ವದ ಅತಿದೊಡ್ಡ ಸೋ‍ಷಿಯಲ್ ನೆಟ್‌ವರ್ಕ್ ಫೇಸ್‌ಬುಕ್ ಸಂಸ್ಥೆಗೆ 34,280 ಕೋಟಿ ದಂಡ ವಿಧಿಸಲು ಅಮೆರಿಕದ ಫೆಡರಲ್ ಟ್ರೇಡ್ ಕಮಿಷನ್ ಮುಂದಾಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಖಾಸಗಿತನ ಹಾಗೂ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ ದಂಡ ವಿಧಿಸಲಾಗುತ್ತಿದೆ ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಫೇಸ್‌ಬುಕ್‌ಗೆ 34,280 ಕೋಟಿ ದಂಡ ಸಾಧ್ಯತೆ!..ಕಾರಣ ಏನು ಗೊತ್ತಾ?

ಹೌದು, ಕೇಂಬ್ರಿಡ್ಜ್ ಅನಲಿಟಿಕಾ ವಿವಾದದಲ್ಲಿ ಫೇಸ್​ಬುಕ್​ನ ದತ್ತಾಂಶಗಳನ್ನು ಬಳಸಿಕೊಳ್ಳಲಾಗಿದೆ ಎಂಬುದು ತನಿಖೆ ವೇಳೆ ಬಹಿರಂಗಗೊಂಡಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಫೆಡರಲ್ ಟ್ರೇಡ್ ಕಮಿಷನ್ ಫೇಸ್​ಬುಕ್​​ಗೆ ದಂಡ ವಿಧಿಸಲು ಮುಂದಾಗಿದೆ. ಕಳೆದ ಶುಕ್ರವಾರ ಇದಕ್ಕೆ ಯುಎಸ್​ ರೆಗ್ಯುಲೇಟರ್​ ಸಮ್ಮತಿ ಸೂಚಿಸಿದೆ ಎಂದು ವಾಲ್​ಸ್ಟ್ರೀಟ್​ ಜರ್ನಲ್ ವರದಿ ಮಾಡಿದೆ.

ಗೌಪ್ಯತೆ ಉಲ್ಲಂಘನೆಗಾಗಿ ಫೆಡರಲ್​ ಟ್ರೇಡ್​ ಕಮಿಷನ್ ಇಷ್ಟೊಂದು ಮೊತ್ತದ ದಂಡ ವಿಧಿಸಿದ್ದು ಇದೇ ಮೊದಲು ಎಂದು ಹೇಳಲಾಗಿದ್ದು, ಇದು ಅಂತಿಮಗೊಳ್ಳಲು ಜಸ್ಟೀಸ್​ ಡಿಪಾರ್ಟ್​ಮೆಂಟ್​ನ ಅನುಮೋದನೆ ಅಗತ್ಯವಿದೆ. ಒಂದು ವೇಳೆ ಇದಕ್ಕೆ ಅನುಮತಿ ದೊರಕಿದ್ದೇ ಆದಲ್ಲಿ, ಖಾಸಗಿತನ ಉಲ್ಲಂಘನೆಗೆ ಟ್ರೇಡ್ ಕಮಿಷನ್ ಈ ತನಕ ವಿಧಿಸಿದ ಅತಿ ಹೆಚ್ಚು ಮೊತ್ತದ ದಂಡ ಇದಾಗಲಿದೆ.

ಫೇಸ್‌ಬುಕ್‌ಗೆ 34,280 ಕೋಟಿ ದಂಡ ಸಾಧ್ಯತೆ!..ಕಾರಣ ಏನು ಗೊತ್ತಾ?

2016ರಲ್ಲಿ ಕೇಂಬ್ರಿಜ್ ಅನಲಿಟಿಕಾ ಸಂಸ್ಥೆ ಫೇಸ್‌ಬುಕ್‌ನ ‌ಲಕ್ಷಾಂತರ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಕಳವು ಮಾಡಿತ್ತು ಎನ್ನುವುದು ಬಹಿರಂಗಗೊಂಡಿತ್ತು. ಈ ಹಿನ್ನೆಲೆಯಲ್ಲಿ 2011ರಲ್ಲಿ ಫೇಸ್‌ಬುಕ್‌ ಜತೆ ಮಾಡಿಕೊಂಡಿದ್ದ ಒಪ್ಪಂದವನ್ನು ಪುನರ್‌ಪರಿಶೀಲನೆ ಮಾಡಲಾಗುತ್ತಿದೆ ಎಂದು ಎಫ್‌ಟಿಸಿ ಕಳೆದ ವರ್ಷ ಘೋಷಿಸಿತ್ತು. ಇದಾದ ನಂತರ ಈ ಸುದ್ದಿ ಫೇಸ್‌ಬುಕ್ ನಿದ್ದೆಗೆಡಿಸಿದೆ.

ಓದಿರಿ: ಇತ್ತೀಚಿಗಷ್ಟೇ ಬಿಡುಗಡೆಯಾಗಿದ್ದ 'ರೆಡ್‌ಮಿ ನೋಟ್ 7ಎಸ್' ಬೆಲೆ ಇಳಿಕೆ!

ಗೌಪ್ಯತೆ ಹಾಗೂ ದತ್ತಾಂಶ ಸಂರಕ್ಷಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕೆ ಫೇಸ್‌ಬುಕ್‌ಗೆ ಈ ದಂಡದ ಮೊತ್ತ ಸಾಲದು. ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕಿತ್ತು ಎಂದು ಫೇಸ್‌ಬುಕ್ ಟೀಕಾಕಾರರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ವೈಯಕ್ತಿಕ ಮಾಹಿತಿಗಳನ್ನು ಫೇಸ್‌ಬುಕ್‌ ಹೇಗೆ ಬಳಕೆ ಮಾಡಿಕೊಳ್ಳಬೇಕು ಎನ್ನುವ ಬಗ್ಗೆಯೂ ನಿರ್ಬಂಧ ಹೇರಲು ಎಫ್‌ಟಿಸಿ ಮುಂದಾಗಲಿದೆ ಎಂದು ಹೇಳಲಾಗಿದೆ.

Best Mobiles in India

English summary
Facebook is set to face a $5bn fine following an investigation into the Cambridge Analytica data-stealing scandal. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X