ವಾಟ್ಸ್‌ಆಪ್‌ನಂತೆ ಫೇಸ್‌ಬುಕ್‌ಗೂ ಬಂತು ಡಾರ್ಕ್‌ ಮೋಡ್‌..!

By Gizbot Bureau
|

ಇತ್ತೀಚೆಗಷ್ಟೇ, ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್‌ನಲ್ಲಿ ಡಾರ್ಕ್‌ಮೋಡ್‌ ಥೀಮ್‌ ಪರಿಚಯಿಸಲಾಗಿತ್ತು. ಆಂಡ್ರಾಯ್ಡ್‌ನ ಬೀಟಾ ಬಳಕೆದಾರರು ಡಾರ್ಕ್ ಮೋಡ್ ಥೀಮ್ ಬಳಸುತ್ತಿದ್ದಾರೆ. ಈಗ, ಫೇಸ್‌ಬುಕ್‌ ಕೂಡ ಆಂಡ್ರಾಯ್ಡ್ ಬಳಕೆದಾರರಿಗೆ ಡಾರ್ಕ್‌ ಮೋಡ್‌ ಫೀಚರ್‌ ತಂದಿದೆ. ವಿಶ್ವದ ಜನಪ್ರಿಯ ಸಾಮಾಜಿಕ ಜಾಲತಾಣ ಆಪ್‌ ಸ್ವಲ್ಪ ಸಮಯದಿಂದ ಡಾರ್ಕ್ ಮೋಡ್ ಥೀಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಆನ್‌ಲೈನ್

ಆನ್‌ಲೈನ್ ವರದಿಯಂತೆ ಬಹಳಷ್ಟು ಜನ ತಮ್ಮ ಫೇಸ್‌ಬುಕ್ ಆಪ್‌ನಲ್ಲಿ ಹೊಸ ಡಾರ್ಕ್ ಥೀಮ್ ಸ್ವೀಕರಿಸಿದ್ದಾರೆ. ಆಂಡ್ರಾಯ್ಡ್ ಪೋಲಿಸ್ ವರದಿಯಂತೆ, ಅಂತಿಮವಾಗಿ ಫೇಸ್‌ಬುಕ್ ಡಾರ್ಕ್ ಮೋಡ್ ಥೀಮ್ ಫೀಚರ್‌ ಪಡೆದುಕೊಂಡಿದ್ದು, ಎಲ್ಲಾ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗುತ್ತಿದೆ. ಆಗಸ್ಟ್ 2019ರಿಂದ ಕಂಪನಿಯು ಡಾರ್ಕ್ ಮೋಡ್‌ನ್ನು ಅಭಿವೃದ್ಧಿಪಡಿಸುತ್ತಿದೆ. ಒಂದಿಷ್ಟು ಸಮಸ್ಯೆಗಳಿಂದ ಎಲ್ಲರಿಗೂ ಈ ವೈಶಿಷ್ಟ್ಯವನ್ನು ಹೊರತಂದಿರಲಿಲ್ಲ.

ಫೇಸ್‌ಬುಕ್

ಫೇಸ್‌ಬುಕ್ ಸಂಪೂರ್ಣ ಡಾರ್ಕ್ ಥೀಮ್ ಆಯ್ಕೆ ಮಾಡಿಕೊಂಡಿಲ್ಲ. ಆದರೆ, ವಾಟ್ಸ್‌ಆಪ್‌ ಥೀಮ್‌ನಂತೆ ಗಾಡ ನೀಲಿ ಬಣ್ಣದ ಥೀಮ್‌ ಆಯ್ಕೆ ಮಾಡಿದೆ. ಡಾರ್ಕ್ ಮೋಡ್ ಥೀಮ್ ಪಡೆದ ಫೇಸ್‌ಬುಕ್‌ ಒಡೆತನದ ನಾಲ್ಕನೇ ಅಪ್ಲಿಕೇಶನ್ ಇದಾಗಿದೆ. ಈಗಾಗಲೇ ಕಂಪನಿಯ ಫೇಸ್‌ಬುಕ್ ಮೆಸೆಂಜರ್, ವಾಟ್ಸ್ಆಪ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಡಾರ್ಕ್ ಥೀಮ್ ಪರಿಚಯಿಸಲಾಗಿತ್ತು.

2019

2019ರಲ್ಲಿ ಚೀನಾದ ಟಿಕ್‌ಟಾಕ್ ಆಪ್‌ ಫೇಸ್‌ಬುಕ್ ಮತ್ತು ಫೇಸ್‌ಬುಕ್ ಮೆಸೆಂಜರ್‌ಗಳನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಡೌನ್‌ಲೋಡ್ ಮಾಡಲಾದ ಎರಡನೇ ಅಪ್ಲಿಕೇಶನ್ ಆಗಿದೆ ಎಂದು ವರದಿಯಾಗಿದೆ. ಸೆನ್ಸಾರ್ ಟವರ್ ಪ್ರಕಾರ, ಟಿಕ್‌ಟಾಕ್ ವಿಶ್ವದಾದ್ಯಂತ 700 ಮಿಲಿಯನ್ ಡೌನ್‌ಲೋಡ್‌ಗಳನ್ನು ದಾಟಿದೆ. ಫೇಸ್‌ಬುಕ್ ಮತ್ತು ಫೇಸ್‌ಬುಕ್ ಮೆಸೆಂಜರ್ ಎರಡೂ 700 ಮಿಲಿಯನ್‌ಗಿಂತ ಡೌನ್‌ಲೋಡ್‌ಗಳನ್ನು ಕಂಡಿವೆ.

Best Mobiles in India

English summary
Facebook Finally Rolls Out Dark Mode For Android Users With Beta Update.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X