Subscribe to Gizbot

ಗೊತ್ತಿಲ್ಲದ ಹುಡುಗಿಯರಿಗೆ ಮೆಸೇಜ್ ಕಳುಹಿಸಿದರೆ ಫೇಸ್‌ಬುಕ್ ಖಾತೆ ಡಿಲೀಟ್!!

Written By:

ಸಾಮಾಜಿಕ ಜಾಲತಾಣ ಫೇಸ್‌ಬುಕ್ ಬಳಕೆಗೆ ಎಲ್ಲರೂ ಇಷ್ಟವಾದರೂ ಸಹ ಕೆಲವೊಮ್ಮೆ ಅದರಿಂದ ಉಂಟಾಗುವ ಕಿರಿಕಿರಿ ಫೇಸ್‌ಬುಕ್ ಬಳಕೆಯೇ ಬೇಡ ಎನ್ನುವಷ್ಟಾಗುತ್ತದೆ.! ಅನಗತ್ಯ ಸಂದೇಶ ಮನವಿ ಹಾಗೂ ಕಿರುಕುಳದಿಂದಾಗಿ ಎಷ್ಟೋ ಜನರು ಅದರಲ್ಲಿಯೂ ಮಹಿಳೆಯರು ಫೇಸ್‌ಬುಕ್ ಬಳಕೆಯನ್ನು ಬಿಟ್ಟಿರುತ್ತಾರೆ.!!

ಹಾಗಾಗಿ, ಅನಗತ್ಯ ಸಂದೇಶ, ಅಪರಿಚಿತರ ಮನವಿ ಹಾಗೂ ಕಿರುಕುಳ ತಡೆಯುವಂತಹ ನೂತನ ಫೀಚರ್ ಸೌಲಭ್ಯವನ್ನು ಫೇಸ್‌ಬುಕ್ ತಂದಿದೆ.! ಮುಖ್ಯವಾಗಿ ಮಹಿಳಾ ಬಳಕೆದಾರರಿಗೆ ಹೆಚ್ಚು ಅನುಕೂಲವಾಗಲೆಂದು ಫೇಸ್‌ಬುಕ್‌ನ ತಂತ್ರಜ್ಞಾನದ ತಂಡದೊಂದಿಗೆ ದೆಹಲಿ ಕಂಪೆನಿಯೊಂದು ಸೇರಿ ಈ ಸೌಲಭ್ಯ ಅಭಿವೃದ್ಧಿಪಡಿಸಿವೆ.!!

ಗೊತ್ತಿಲ್ಲದ ಹುಡುಗಿಯರಿಗೆ ಮೆಸೇಜ್ ಕಳುಹಿಸಿದರೆ ಫೇಸ್‌ಬುಕ್ ಖಾತೆ ಡಿಲೀಟ್!!
Facebook Messenger Tips and Tricks : ಫೇಸ್‌ಬುಕ್‌ನಲ್ಲೂ ಫುಟ್‌ಬಾಲ್ ಆಡಿ!!

ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿನ ನಕಲಿ ಖಾತೆಗಳನ್ನು ಪ್ರತಿ ನಿತ್ಯ ಪತ್ತೆ ಹಚ್ಚಿ ಅವುಗಳನ್ನು ಅಳಿಸಿ ಹಾಕುವ ಕೆಲಸವನ್ನು ಈ ಫೀಚರ್ ಮಾಡುತ್ತದೆ. ಅಪರಿಚಿತರು ಕಳುಹಿಸುವ ಸಂದೇಶಗಳು ಮತ್ತು ಅಪರಿಚಿತ ಗೆಳೆಯರ ಮನವಿಯನ್ನು ಯಶಸ್ವಿಯಾಗಿ ತಡೆಯಲು ನೆರವಾಗಿ ನಿಮಗೆ ಕಿರಿಕಿಯನ್ನು ತಪ್ಪಿಸಲಿದೆ.!!

ಗೊತ್ತಿಲ್ಲದ ಹುಡುಗಿಯರಿಗೆ ಮೆಸೇಜ್ ಕಳುಹಿಸಿದರೆ ಫೇಸ್‌ಬುಕ್ ಖಾತೆ ಡಿಲೀಟ್!!

ಐಪಿ ವಿಳಾಸ ಮತ್ತು ಗೋಪ್ಯ ಸಂಕೇತಗಳ ಮೂಲಕ ಈ ಕಿರುತಂತ್ರಾಂಶ ನಕಲಿ ಖಾತೆಗಳನ್ನು ಪತ್ತೆ ಹಚ್ಚುತ್ತದೆ ಎಂದು ಫೇಸ್‌ಬುಕ್ ಹೇಳಿಕೊಂಡಿದೆ.! ಪತ್ತೆಯಾದ ಖಾತೆ ಅಸಲಿಯಾಗಿದ್ದರೂ ಕೂಡ ಸುಮ್ಮನ್ಎ ಸಂದೇಶ ಕಳುಹಿಸಿ ಕಿರಿಕಿರಿ ನೂಡುವವರ ಖಾತೆ ಸ್ಥಗಿತವಾಗಲಿದೆ.!! ಅಂದರೆ, ಗೊತ್ತಿಲ್ಲದ ಹುಡುಗಿಯರಿಗೆ ಮೆಸೇಜ್ ಕಳುಹಿಸಿದರೆ ಎಚ್ಚರಿಕೆ ಎಂದರ್ಥ!!

ಓದಿರಿ: ಬೆಂಗಳೂರಿನಲ್ಲಿ ಗೂಗಲ್ ಕೆಲಸಗಳಿಗಾಗಿ ಈಗಲೇ ಅರ್ಜಿ ಸಲ್ಲಿಸಿ!!..ಎಲ್ಲಾ ಮಾಹಿತಿ ತಿಳಿಯಿರಿ!!

English summary
Facebook, like every social media platform, has issues with harassment and bullying.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot