ಫೇಸ್‌ಬುಕ್‌ನಿಂದ ಹೊಸ ಲಾಗಿನ್‌ ಫೀಚರ್..!

By Gizbot Bureau
|

ಜಗತ್ತಿನ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಹೊಸ ಲಾಗಿನ್ ಫೀಚರ್‌ನ್ನು ಪರಿಚಯಿಸಿದೆ. ಇದು ಬಳಕೆದಾರರು ಥರ್ಡ್‌ ಪಾರ್ಟಿ ಆಪ್‌ ಅಥವಾ ವೆಬ್‌ಸೈಟ್‌ಗೆ ತಮ್ಮ ಎಫ್‌ಬಿ ಖಾತೆ ಬಳಸಿಕೊಂಡು ಲಾಗಿನ್ ಆದರೆ ತಿಳಿಸುತ್ತದೆ. ಈ ಲಾಗಿನ್ ನೊಟಿಫಿಕೇಷನ್‌ ಪ್ರತಿ ಬಾರಿ ಥರ್ಡ್‌ ಪಾರ್ಟಿ ಆಪ್‌ ಬಳಕೆದಾರರ ಡೇಟಾವನ್ನು ಪ್ರವೇಶಿಸಿದಾಗ ಬಳಕೆದಾರರನ್ನು ಎಚ್ಚರಿಸುತ್ತದೆ. ಹಾಗೂ ಇಮೇಲ್ ಮೂಲಕ ಕಳುಹಿಸಲಾಗುತ್ತದೆ ಎನ್ನಲಾಗಿದೆ.

ಲಾಗಿನ್ ನೊಟಿಫಿಕೇಷನ್‌

ಲಾಗಿನ್ ನೊಟಿಫಿಕೇಷನ್‌ಗಳ ವಿನ್ಯಾಸ ಮತ್ತು ವಿಷಯ ಬಳಕೆದಾರರಿಗೆ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳೊಂದಿಗೆ ಹಂಚಿಕೊಳ್ಳುವ ಮಾಹಿತಿಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುವುದನ್ನು ನೆನಪಿಸುತ್ತದೆ, ಆ ಸೆಟ್ಟಿಂಗ್ಸ್‌ನ್ನು ಸಂಪಾದಿಸಲು ಸ್ಪಷ್ಟ ಮಾರ್ಗವಿದೆ ಎಂದು ಫೇಸ್‌ಬುಕ್‌ನ ಸಾಫ್ಟ್‌ವೇರ್ ಎಂಜಿನಿಯರ್ ಪುಕ್ಸುವಾನ್ ಕಿ ಉಲ್ಲೇಖಿಸಿದೆ.

ನೊಟಿಫಿಕೇಷನ್‌ ಫೇಸ್‌ಬುಕ್

ಈ ನೊಟಿಫಿಕೇಷನ್‌ ಫೇಸ್‌ಬುಕ್ ಬಳಕೆದಾರರು ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ನೊಂದಿಗೆ ಯಾವ ರೀತಿಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ. ನೊಟಿಫಿಕೇಷನ್‌ ಸ್ವೀಕರಿಸಿದ ನಂತರ, ಬಳಕೆದಾರರು ವೈಯಕ್ತಿಕ ಮಾಹಿತಿಗೆ ಆಪ್‌ ಪ್ರವೇಶ ತೆಗೆದುಹಾಕಲು "ಎಡಿಟ್‌ ಸೆಟ್ಟಿಂಗ್ಸ್‌" ಬಟನ್ ಕ್ಲಿಕ್ ಮಾಡಬಹುದು.

ನೊಟಿಫಿಕೇಷನ್‌

ಬಳಕೆದಾರರು ತಮ್ಮ ಮಾಹಿತಿಗೆ ಅನುಮತಿ ಇಲ್ಲದ ಪ್ರವೇಶ ಅಥವಾ ಬಳಕೆಯನ್ನು ಕಂಡುಹಿಡಿಯಲು ಅಧಿಸೂಚನೆ ಸಹಾಯ ಮಾಡುತ್ತದೆ, ಇದಷ್ಟೇ ಅಲ್ಲದೇ, ಅಪ್ಲಿಕೇಶನ್‌ಗಳೊಂದಿಗೆ ಹಂಚಿಕೊಳ್ಳುತ್ತಿರುವ ಮಾಹಿತಿ ಬಗ್ಗೆ ಬಳಕೆದಾರರಿಗೆ ತಿಳಿಸಲು ನೊಟಿಫಿಕೇಷನ್‌ ಸಹಾಯ ಮಾಡುತ್ತದೆ. ಈ ವೈಶಿಷ್ಟ್ಯವು ಈಗಾಗಲೇ ಬಿಡುಗಡೆಯಾಗಿದ್ದು, ಫೇಸ್‌ಬುಕ್ ಇದನ್ನು ಸುಧಾರಿಸುವುದನ್ನು ಮುಂದುವರಿಸುತ್ತದೆ ಎಂದು ಕಿ ಹೇಳಿದರು.

Best Mobiles in India

English summary
Facebook Launches Login Notification Feature To Boost Security For Users

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X