ಡಾಟಾ ಉಳಿಸುವ ಫೇಸ್ ಬುಕ್ ಮೆಸೆಂಜರ್ ಲೈಟ್: ನಿಮಗೆ ಗೊತ್ತಿರಬೇಕಾದ ಐದು ಸಂಗತಿಗಳು.

|

ಅಂತರ್ಜಾಲ ಪ್ರಪಂಚವು ಗೂಗಲ್ಲಿನ ಹೊಸ ಉತ್ಪನ್ನಗಳ ಬಗ್ಗೆ, ಕಡಿಮೆ ಡಾಟಾ ಉಳಿಸುವ ಅದರ ಹೊಸ ತಂತ್ರಾಂಶಗಳ ಬಗ್ಗೆ ಮಾತನಾಡುತ್ತಿರುವ ಸಮಯದಲ್ಲಿ ಸಾಮಾಜಿಕ ಜಾಲತಾಣದ ದೈತ್ಯ ಫೇಸ್ ಬುಕ್ ಕೂಡ ಹಿಂದೆ ಬಿದ್ದಿಲ್ಲ.

ಡಾಟಾ ಉಳಿಸುವ ಫೇಸ್ ಬುಕ್ ಮೆಸೆಂಜರ್ ಲೈಟ್: ನಿಮಗೆ ಗೊತ್ತಿರಬೇಕಾದ ಐದು ಸಂಗತಿಗಳು.

ಮತ್ತೊಂದು ಬಿಲಿಯನ್ ಜನರನ್ನು ತಲುಪುವ ನಿಟ್ಟಿನಲ್ಲಿ ಫೇಸ್ ಬುಕ್ ತನ್ನ ಮೆಸೆಂಜರ್ರಿನ ಲೈಟ್ ಆವೃತ್ತಿಯನ್ನು ಹೊರಬಿಟ್ಟಿದೆ.

ಓದಿರಿ: ಟೆಲಿಕಾಮ್ ಪೈಪೋಟಿ, ಜಿಯೋಗೆ ಸೋಲು ಕಟ್ಟಿಟ್ಟ ಬುತ್ತಿಯೇ?

ಈ ಲೈಟ್ ಆವೃತ್ತಿಯ ಗುರಿ ಕಡಿಮೆ ವೇಗದ ಅಂತರ್ಜಾಲ ಉಪಯೋಗಿಸುವ ಜನರು ಅಥವಾ ಹಳೆಯ ಫೋನನ್ನು ಉಪಯೋಗಿಸುತ್ತಿರುವವರು ಮೆಸೆಂಜರ್ ಅನ್ನು ಬಳಸುವಂತೆ ಮಾಡುವುದು. ಇದು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮೆರೆಯುವ ಉದ್ದೇಶದಿಂದ ತಯಾರಿಸಲಾದ ತಂತ್ರಾಂಶ.

ಓದಿರಿ: ನವರಾತ್ರಿ ಆಫರ್: ಏರ್‌ಟೆಲ್‌ ಗ್ರಾಹಕರು 60 GB 4G ಡಾಟಾ ಉಚಿತವಾಗಿ ಪಡೆಯುವುದು ಹೇಗೆ?

ಈ ಹೊಸ ಆವೃತ್ತಿಯ ಬಗ್ಗೆ ನಿಮಗೆ ತಿಳಿದಿರಬೇಕಾದ ಐದು ಸಂಗತಿಗಳನ್ನಿಲ್ಲಿ ಪಟ್ಟಿ ಮಾಡಿದ್ದೀವಿ.

ಕಂಟೆಂಟ್ ಹಂಚುವುದು.

ಫೇಸ್ ಬುಕ್ ಮೆಸೆಂಜರ್ರಿನ ಲೈಟ್ ಆವೃತ್ತಿಯಲ್ಲಿ ನೀವು ಚಿತ್ರ, ಸಂದೇಶ ಮತ್ತು ಲಿಂಕುಗಳನ್ನು ಮಾತ್ರ ಹಂಚಿಕೊಳ್ಳಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಾಟಾ ಉಳಿಸುವ ಫೇಸ್ ಬುಕ್ ಮೆಸೆಂಜರ್ ಲೈಟ್: ನಿಮಗೆ ಗೊತ್ತಿರಬೇಕಾದ ಐದು ಸಂಗತಿಗಳು.

ವೀಡಿಯೋ ಕರೆಯ ಸೌಲಭ್ಯವಿಲ್ಲ.

ಕಡಿಮೆ ವೇಗದ ಅಂತರ್ಜಾಲವನ್ನು ಉಪಯೋಗಿಸುವವರು ಚಾಟ್ ಮಾಡುವಂತಾಗುವುದು ಈ ಲೈಟ್ ಆವೃತ್ತಿಯ ಗುರಿ, ಹೀಗಾಗಿ ವೀಡಿಯೋ ಕರೆ ಸೌಕರ್ಯ ಇದರಲ್ಲಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಾಟಾ ಉಳಿಸುವ ಫೇಸ್ ಬುಕ್ ಮೆಸೆಂಜರ್ ಲೈಟ್: ನಿಮಗೆ ಗೊತ್ತಿರಬೇಕಾದ ಐದು ಸಂಗತಿಗಳು.

ಬ್ಯುಸಿನೆಸ್ಸಿಗಿಲ್ಲ.

ಕಳೆದ ವರುಷ ಫೇಸ್ ಬುಕ್ ಬ್ಯುಸಿನೆಸ್ಸಿಗಾಗಿ ಮೆಸೆಂಜರ್ ಅನ್ನು ಪ್ರಾರಂಭಿಸಿತ್ತು, ಗ್ರಾಹಕರೊಡನೆ ಉದ್ದಿಮೆಗಳು ಸಂವಹಿಸಲು. ಹೊಸ ಲೈಟ್ ಆವೃತ್ತಿಯಲ್ಲಿ ಈ ಸೌಲಭ್ಯವಿಲ್ಲ.

ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಮಾತ್ರ.

ಆ್ಯಂಡ್ರಾಯ್ಡ್ ಆ್ಯಪ್ ಅಭಿವೃದ್ಧಿಪಡಿಸುವವರಿಗೆ ಉತ್ತಮ ವೇದಿಕೆಯನ್ನೊದಗಿಸಿಕೊಡುತ್ತದೆ ಮತ್ತು ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನುಗಳು ಕಡಿಮೆ ಬೆಲೆಗೆ ಲಭ್ಯವಿದೆ ಎನ್ನುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಹೀಗಾಗಿ ಇನ್ನೂ ಒಂದು ಬಿಲಿಯನ್ ಜನರನ್ನು ತಲುಪಲು ಫೇಸ್ ಬುಕ್ ಆ್ಯಂಡ್ರಾಯ್ಡ್ ಫೋನುಗಳಿಗೆ ಲೈಟ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ಸದ್ಯಕ್ಕೆ ಭಾರತದಲ್ಲಿ ಲಭ್ಯವಿಲ್ಲ.

ಪ್ರಾರಂಭದಲ್ಲಿ ಈ ಸೌಲಭ್ಯ 5 ದೇಶಗಳಲ್ಲಷ್ಟೇ ಲಭ್ಯವಿದೆ - ಕೀನ್ಯಾ, ಟುನಿಷಿಯಾ, ಮಲೇಷ್ಯಾ, ಶ್ರೀಲಂಕಾ ಮತ್ತು ವೆನೆಜುವೆಲಾ. ಭಾರತದಲ್ಲಿ ಬಿಡುಗಡೆಯಾಗುವ ದಿನಾಂಕದ ಬಗ್ಗೆ ಕಂಪನಿಯ ವಕ್ತಾರರು ಇನ್ನೂ ಅಧಿಕೃತವಾಗಿ ಏನನ್ನೂ ತಿಳಿಸಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Facebook is rolling out the 'Lite' version of Messenger targeting the people on slow connections or older phones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X