50 ಸ್ನೇಹಿತರನ್ನು ಒಟ್ಟಿಗೆ ಸೇರಿಸಲು ಮುಂದಾದ ಫೇಸ್‌ಬುಕ್‌ ಮೆಸೇಂಜರ್‌

Written By:

"ಗೆಳೆಯರೆಲ್ಲಾ ಒಟ್ಟಿಗೆ ಸೇರಿ ಎಷ್ಟೊಂದು ದಿನವಾಗೋಯ್ತು. ಚೇ.. ಯಾವ್‌ ಟ್ರಿಪ್‌ನು ಮಾಡೋಕೆ ಆಗ್ತಿಲ್ಲಾ.. ಇತ್ತ ಒಮ್ಮೆ ಆದ್ರು ಎಲ್ಲರನ್ನು ಒಟ್ಟಿಗೆ ಭೇಟಿ ಮಾಡಿ ಮಾತಡೋಕು ಆಗ್ತಿಲ್ಲಾ". ಈ ರೀತಿ ಫೀಲ್‌ ಮಾಡೋ ಅತ್ಯುತ್ತಮ ಗೆಳೆಯರು ಅಸಂಖ್ಯಾತ. ಅಂದಹಾಗೆ ಕೆಲವರು ಸ್ನೇಹಿತರು ಫೀಲ್‌ ಮಾಡೋ ಈ ವಿಷಯ ಮಾರ್ಕ್‌ ಜುಕರ್‌ಬರ್ಗ್‌'ಗೆ ಹೇಗ್‌ ತಿಳಿಯಿತೊ ಗೊತ್ತಿಲ್ಲಾ. ಇಂತಹ ಸ್ನೇಹಿತರನ್ನು ಉಚಿತವಾಗಿ ಒಮ್ಮೆಯೇ ಸೇರಿಸಲು ಒಂದು ಯೋಜನೆ ಕೈಗೊಂಡಿದ್ದಾರೆ. ಆದ್ರೆ ನೀವು ಫೇಸ್‌ಬುಕ್‌, ಪೇಸ್‌ಬುಕ್‌ ಮೆಸೇಂಜರ್‌ ಬಳಕೆದಾರರರು ಆಗಿರಬೇಕಷ್ಟೆ. ಅದೆಂತ ಪ್ಲಾನ್‌ ಅದು ಎಲ್ಲರನ್ನು ಒಟ್ಟಿಗೆ ಸೇರಿಸುವ ಮಾರ್ಕ್‌ ಜುಕರ್‌ಬರ್ಗ್'ರವರ ಪ್ಲಾನ್ ಅಂತಿರಾ? ಈ ಲೇಖನ ಓದಿ ತಿಳಿಯುತ್ತೇ..

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್‌

ಫೇಸ್‌ಬುಕ್‌

ಫೇಸ್‌ಬುಕ್‌

ಸಾಮಾಜಿಕ ಜಾಲತಾಣ ದೈತ್ಯ ಕಂಪನಿ ಫೇಸ್‌ಬುಕ್ ತನ್ನ ಮೆಸೇಂಜರ್‌ ಆಪ್‌ನಲ್ಲಿ "ಗ್ರೂಪ್‌ ಕಾಲಿಂಗ್‌" ಫೀಚರ್‌ ಲಾಂಚ್‌ ಮಾಡಿದೆ. ಈ ಫೀಚರ್‌ನಿಂದ ಒಮ್ಮೆಲೇ 50 ಜನರು ಗ್ರೂಪ್‌ ಕಾಲಿಂಗ್‌ ಮಾಡಿ ಮಸೇಂಜರ್‌ ಮೂಲಕ ಸಂವಹನ ನೆಡೆಸಬಹುದಾಗಿದೆ.

ಫೇಸ್‌ಬುಕ್ ಮೆಸೇಂಜರ್‌

ಫೇಸ್‌ಬುಕ್ ಮೆಸೇಂಜರ್‌

ಫೇಸ್‌ಬುಕ್ ಮೆಸೇಂಜರ್‌

ಆಂಡ್ರಾಯ್ಡ್‌ ಮತ್ತು ಐಓಎಸ್‌ ಡಿವೈಸ್‌ಗಳಲ್ಲಿ "ಗ್ರೂಪ್‌ ಕಾಲಿಂಗ್‌" ಫೀಚರ್‌ ಅನ್ನು ಉಚಿತವಾಗಿ ನೀಡಲಾಗಿದೆ. ಮೆಸೇಂಜರ್‌ ಬಳಕೆದಾರರು ಇಂಟರ್ನೆಟ್‌ ಪ್ರೋಟೋಕಾಲ್‌ನಲ್ಲಿ ಯಾವುದೇ ಗ್ರೂಪ್‌ನಲ್ಲಿ ವಾಯ್ಸ್‌ ಕರೆಯನ್ನು ಮಾಡಬಹುದು ಎಂದು TechCrunch.com ವರದಿ ಮಾಡಿದೆ.

ವಾಯ್ಸ್‌ ಓವರ್‌ ಐಪಿ (VoIP)

ವಾಯ್ಸ್‌ ಓವರ್‌ ಐಪಿ (VoIP)

ವಾಯ್ಸ್‌ ಓವರ್‌ ಐಪಿ (VoIP)

ವಾಯ್ಸ್‌ ಓವರ್ ಐಪಿ ಒಂದು ವಿಧಾನ ಮತ್ತು ತಂತ್ರಜ್ಞಾನದ ಗುಂಪಾಗಿದೆ. ಇದು ಧ್ವನಿ ಸಂವಹನ ವಿತರಿಸುತ್ತದೆ ಮತ್ತು ಬಹುಮಾಧ್ಯಮ ಅವಧಿಗಳನ್ನು ಇಂಟರ್ನೆಟ್ ಪ್ರೋಟೋಕಾಲ್‌ ಆಧಾರದಲ್ಲಿ ಅಂದರೆ ಇಂಟರ್ನೆಟ್‌ ಮೂಲಕ ವಿತರಿಸುತ್ತದೆ.

ಗ್ರೂಪ್‌ ಕರೆ

ಗ್ರೂಪ್‌ ಕರೆ

ಗ್ರೂಪ್‌ ಕರೆ

ವಾಟ್ಸಾಪ್‌ನಲ್ಲಿ ಗ್ರೂಪ್‌ ಚಾಟ್‌ ಇರುವುದು ನಿಮಗೆಲ್ಲ ಗೊತ್ತೇಇದೆ. ಅಂತೆಯೇ ಫೇಸ್‌ಬುಕ್‌ ಮೆಸೇಂಜರ್‌ನಲ್ಲಿಯೂ ನಿಮಗೆ ಚಾಟ್‌ ಮಾಡುವ ಅವಕಾಶವಿದೆ. ಆದರೆ ಟೆಕ್ಸ್ಟ್‌ ಮೂಲಕ ಚಾಟ್‌ ಸಾಕು ಎನಿಸಿ, ಬೇಸರವು ಎನಿಸಿದರೆ ನೀವು ಗ್ರೂಪ್‌ ಕರೆ ಮಾಡಬಹುದಾಗಿದೆ. ಅದು ಹೇಗೆ ಎಂದು ತಿಳಿಯಲು ಮುಂದಿನ ಸ್ಲೈಡರ್ ಓದಿ.

ಗ್ರೂಪ್‌ ಕರೆ ಮಾಡುವುದು ಹೇಗೆ?

ಗ್ರೂಪ್‌ ಕರೆ ಮಾಡುವುದು ಹೇಗೆ?

ಗ್ರೂಪ್‌ ಕರೆ ಮಾಡುವುದು ಹೇಗೆ?

ಗ್ರೂಪ್‌ ಕರೆ ಮಾಡಲು, ಗ್ರೂಪ್‌ ಬಳಕೆದಾರರು ಒಬ್ಬರು ಮೆಸೇಂಜರ್‌ನಲ್ಲಿನ "Phone" ಐಕಾನ್‌ ಮೇಲೆ ಟ್ಯಾಪ್‌ ಮಾಡಬೇಕು. ನಂತರ ಗ್ರೂಪ್‌ನ ಯಾರು ಯಾರು ಕರೆಗೆ ಸೇರಬೇಕು ಎಂದು ಆಯ್ಕೆ ಮಾಡಬೇಕು. ನಂತರ ಗ್ರೂಪ್‌ನ ಆ ಎಲ್ಲಾ ಸದಸ್ಯರು ಮೆಸೇಂಜರ್‌ ಗ್ರೂಪ್‌ ಕರೆ ಸ್ವೀಕರಿಸುತ್ತಾರೆ.

 ಗ್ರೂಪ್‌ ಕರೆ

ಗ್ರೂಪ್‌ ಕರೆ

ಗ್ರೂಪ್‌ ಕರೆ

ಯಾರಾದರೂ ಗ್ರೂಪ್‌ ಕರೆಯಲ್ಲಿ ಮಿಸ್‌ ಆದರೆ ಅವರು ಗ್ರೂಪ್‌ ಚಾಟ್‌ನಲ್ಲಿ ಫೋನ್‌ ಐಕಾನ್‌ ಟ್ಯಾಪ್‌ ಮಾಡಿ ಗ್ರೂಪ್‌ ಕರೆಗೆ ಸೇರಬಹುದು. ಅಲ್ಲದೇ ಬಳಕೆದಾರರು ಯಾರೆಲ್ಲಾ ಗ್ರೂಪ್‌ ಕರೆಯಲ್ಲಿ ಇದ್ದಾರೆ ಎಂದು ಸಹ ನೋಡಬಹುದು. ಈ ಗ್ರೂಪ್‌ ಕರೆಯಲ್ಲಿ ಒಮ್ಮೆಯೇ 50 ಕ್ಕೂ ಹೆಚ್ಚು ಜನ ಸೇರಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Facebook Messenger now allows group calling with 50 people. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot